Back
Home » ಸಿನಿ ಸಮಾಚಾರ
ಎನ್.ಟಿ.ಆರ್ ನಂತರ ಮತ್ತೊಬ್ಬ ರಾಜಕಾರಣಿ ಬಗ್ಗೆ ವರ್ಮಾ ಸಿನಿಮಾ
Oneindia | 18th Apr, 2019 04:59 PM

ಲಕ್ಷ್ಮೀಸ್ ಎನ್.ಟಿ.ಆರ್ ಚಿತ್ರದ ನಂತರ ಹೊಸ ಸಿನಿಮಾ ಘೋಷಣೆ ಮಾಡಿದ್ದು, ಈಗ ಮತ್ತೊಬ್ಬ ರಾಜಕಾರಣಿಯ ಬಯೋಪಿಕ್ ಸಿನಿಮಾ ಮಾಡಲು ಹೊರಟಿದ್ದಾರೆ ರಾಮ್ ಗೋಪಾಲ್ ವರ್ಮಾ.

ಹೌದು, ಮುಂದಿನ ಸಿನಿಮಾದ ಟೈಟಲ್ ಕೂಡ ಬಹಿರಂಗಪಡಿಸಿದ್ದು, 'ಟೈಗರ್ ಕೆಸಿಆರ್' ಎಂಬ ಚಿತ್ರ ಮಾಡುತ್ತಿದ್ದಾರೆ. ಈಗಾಗಲೇ ಶೀರ್ಷಿಕೆಯಲ್ಲಿ ನಿಮಗೆ ಗೊತ್ತಾಗಿರಬೇಕು. ಇದು ಯಾವ ರಾಜಕಾರಣಿ ಬಯೋಪಿಕ್ ಅಂತ.

ಅಖಂಡ ಆಂಧ್ರ ಪ್ರದೇಶದಿಂದ ಹೊರಬಂದು ಪ್ರತ್ಯೇಕವಾಗಿ ತೆಲಂಗಾಣ ರಾಜ್ಯ ಹುಟ್ಟುಹಾಕುವಲ್ಲಿ ಕೆಸಿ ಚಂದ್ರಶೇಖರ್ ರಾವ್ ಅವರ ಹೋರಾಟದ ಬಗ್ಗೆ ವರ್ಮಾ ಸಿನಿಮಾ ಮಾಡ್ತಿದ್ದಾರೆ. ಸದ್ಯ ಕೆಸಿಆರ್ ತೆಲಂಗಾಣ ಮುಖ್ಯಮಂತ್ರಿಯಾಗಿದ್ದಾರೆ. ಟೈಗರ್ ಕೆಸಿಆರ್ ಎಂದು ಚಿತ್ರಕ್ಕೆ ಹೆಸರಿಟ್ಟಿದ್ದು, ದಿ ಅಗ್ರೆಸ್ಸೀವ್ ಗಾಂಧಿ ಎಂದು ಸಬ್ ಟೈಟಲ್ ಇಡಲಾಗಿದೆ.

ಬೆಳ್ಳಿತೆರೆಗೆ ಆರ್.ಜಿ.ವಿ ಎಂಟ್ರಿ: ಸ್ವಾಗತಿಸಿದ ಸುದೀಪ್, ಅಮಿತಾಬ್

ಕೆಸಿಆರ್ ಅವರ ಚಿತ್ರ ಎಂದಾಕ್ಷಣ ಈ ಚಿತ್ರದಲ್ಲೂ ಚಂದ್ರ ಬಾಬು ನಾಯ್ಡು ಅವರ ಪಾತ್ರ ಇರಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಲಕ್ಷ್ಮೀಸ್ ಎನ್.ಟಿ.ಆರ್ ಚಿತ್ರದಲ್ಲಿ ಬಾಬು ಅವರನ್ನ ವಿಲನ್ ರೀತಿ ತೋರಿಸಲಾಗಿತ್ತು. ಇದೀಗ, ಕೆಸಿಆರ್ ಚಿತ್ರದಲ್ಲೂ ಅಂತಹದ್ದೇ ಪಾತ್ರದಲ್ಲಿ ಬಾಬು ಇರಲಿದ್ದಾರೆ ಎನ್ನಲಾಗುತ್ತಿದೆ.

Lakshmis ntr review: ಸಾಮಾನ್ಯ ಜನ ಕಾಣದ ಎನ್.ಟಿ.ಆರ್ ಜೀವನ ದರ್ಶನ

ಸದ್ಯಕ್ಕೆ ಸಿನಿಮಾ ಹೆಸರು ಮಾತ್ರ ಹೇಳಿದ್ದು, ಈ ಚಿತ್ರದಲ್ಲಿ ಯಾರು ನಟಿಸಲಿದ್ದಾರೆ ಎಂಬುದರ ಬಗ್ಗೆ ಮುಂದಿನ ದಿನದಲ್ಲಿ ಹೇಳಲಿದ್ದಾರೆ. ಅಷ್ಟೇ ಅಲ್ಲದೇ ಕೆಸಿಆರ್, ಕೆಟಿಆರ್, ಟಿಆರ್ಎಸ್ ಪಕ್ಷಗಳು ಈ ಚಿತ್ರವನ್ನ ಹೇಗೆ ತೆಗೆದುಕೊಳ್ಳಲಿದೆ ಎಂಬುದನ್ನ ಕೂಡ ಕಾದುನೋಡಬೇಕಿದೆ.

   
 
ಹೆಲ್ತ್