Back
Home » ಸುದ್ದಿ
ಒಡಿಶಾ: ಮತದಾನ ಮಾಡಲು ಸರತಿ ಸಾಲಲ್ಲಿ ನಿಂತಿದ್ದ ಅಜ್ಜ ಮೃತ
Oneindia | 18th Apr, 2019 07:09 PM

ಬೆರ್ಹಂಪುರ್(ಒಡಿಶಾ), ಏಪ್ರಿಲ್ 18: ಲೋಕಸಭೆ ಚುನಾವಣೆಯ ಎರಡನೇ ಹಂತದಾನದ ಮತದಾನ(ಏಪ್ರಿಲ್ 18) ಪ್ರಕ್ರಿಯೆ ಮುಕ್ತಾಯವಾಗಿದೆ. ಒಡಿಶಾದಲ್ಲಿ ಲೋಕಸಭೆ ಜೊತೆಗೆ ವಿಧಾನಸಭೆಗೂ ಚುನಾವಣೆ ನಡೆದಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಲೋಕಸಭೆಯ ಚುನಾವಣೆಯ ಎರಡನೇ ಹಂತದಲ್ಲಿ 12 ರಾಜ್ಯಗಳ 95 ಕ್ಷೇತ್ರಗಳಲ್ಲಿ ಮತದಾನ ನಡೆಸಲಾಗಿದೆ. ಇದೇ ವೇಳೆ ಒಡಿಶಾದ ಆಸ್ಕಾ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಸನಖೆಮುಂಡಿ ವಿಧಾನಸಭಾ ಕ್ಷೇತ್ರದ ಕಾನ್ಸಮಾರಿ ಮತಗಟ್ಟೆಯಲ್ಲಿ ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತಿದ್ದ 95 ವರ್ಷ ವಯಸ್ಸಿನ ವೃದ್ಧರೊಬ್ಬರು ಸ್ಥಳದಲ್ಲೇ ಕುಸಿದಿದ್ದಾರೆ. ನಂತರ ಆಟೋರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಪರೀಕ್ಷಿಸಿ,ಮಾರ್ಗಮಧ್ಯದಲ್ಲೆ ಅಜ್ಜ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

ನಿಮ್ಮ ರಾಜಕೀಯ ಜ್ಞಾನವನ್ನು ಒರೆಗೆ ಹಚ್ಚುವ ರಸಪ್ರಶ್ನೆ

ಮೃತರನ್ನು ಕಾನ್ಸಮಾರಿ ನಿವಾಸಿ ನಟಬಾರ ಬೆಹೆರಾ ಎಂದು ಗುರುತಿಸಲಾಗಿದೆ. ಮೃತಪಡುವುದಕ್ಕೂ ಮುನ್ನ 183ನೇ ಮತಗಟ್ಟೆಯ ಸಾಲಿನಲ್ಲಿ ಕುಟುಂಬ ಸದಸ್ಯರ ಜೊತೆ ನಿಂತಿದ್ದರು. ಒಡಿಶಾದಲ್ಲಿ 5 ಲೋಕಸಭಾ ಕ್ಷೇತ್ರಗಳಿದ್ದು(ಬರ್ ಗರ್ಹ್, ಸುಂದರ್ ಗರ್, ಬೊಲನ್ ಗಿರ್, ಕಂಧಾಮಾಲ್ ಹಾಗು ಆಸ್ಕಾ) ಹಾಗೂ 35 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಸಲಾಗುತ್ತಿದೆ. 5 ಗಂಟೆ ವೇಳೆಗೆ ಶೇ 64ರಷ್ಟು ಮತದಾನ ದಾಖಲಾಗಿತ್ತು.

   
 
ಹೆಲ್ತ್