Back
Home » ಸುದ್ದಿ
ಸಾವಿರಾರು ಜನರ ಎದುರು ವೇದಿಕೆಯಲ್ಲಿ ಸಿದ್ದರಾಮಯ್ಯ ಕೆನ್ನೆಗೆ ಮುತ್ತಿಟ್ಟ ಯುವಕ
Oneindia | 18th Apr, 2019 07:40 PM

ಮೈಸೂರು, ಏಪ್ರಿಲ್ 18 : ಕಲಬುರಗಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಕಾರ್ಯಕರ್ತ ವೇದಿಕೆಯಲ್ಲೇ ಮುತ್ತು ಕೊಟ್ಟ ಘಟನೆ ನಡೆದಿದೆ. ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕಲಬುರಗಿಯ ಜೇವರ್ಗಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಸನ್ಮಾನ ಮಾಡುವ ವೇಳೆ ಈ ಘಟನೆ ನಡೆದಿದೆ. ಮುತ್ತು ಕೊಡುವ ವೇಳೆ ಯುವಕನ ವರ್ತನೆ ಕಂಡು, ಕ್ಷಣ ಕಾಲ ವಿಚಲಿತರಾದ ಸಿದ್ದರಾಮಯ್ಯ ಕಕ್ಕಾಬಿಕ್ಕಿಯಾಗಿದ್ದಾರೆ. ಅಲ್ಲದೇ ಆತನಿಗೆ ವೇದಿಕೆಯಲ್ಲೇ ಕ್ಲಾಸ್ ತೆಗೆದುಕೊಂಡಿದ್ದಾರೆ.

ರಾಜಕಾರಣಿಗಳೆಂದರೆ ಸೆಲ್ಫಿ ತೆಗೆದುಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ. ಆದರೆ ಈ ಯುವಕ ಮುತ್ತು ಕೊಡಲೆಂದೇ ವೇದಿಕೆ ಮೇಲೆ ಏರಿದ್ದನೇನೋ ಎಂಬಂತೆ ಇದೆ ಆತನ ನಡವಳಿಕೆ. ಆ ವೇಳೆ ಸಿದ್ದರಾಮಯ್ಯ ಅವರ ಸುತ್ತಲೂ ಇದ್ದ ಮುಖಂಡರು ತಕ್ಷಣ ಎಚ್ಚೆತ್ತು ಯುವಕನನ್ನು ಅಲ್ಲಿಂದ ತೆರಳುವಂತೆ ಸೂಚಿಸಿದ್ದಾರೆ.

ಸಿದ್ದರಾಮಯ್ಯ ಅವರ ಪರ ಘೋಷಣೆ ಕೂಗುತ್ತಾ ಯುವಕ ಅಲ್ಲಿಂದ ತೆರಳುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇನ್ನು ಈ ಥರದ ಅನುಭವ ಸಿದ್ದರಾಮಯ್ಯ ಅವರಿಗೆ ಇದು ಎರಡನೇ ಬಾರಿ ಆಗಿದೆ. ಈ ಹಿಂದೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕುರುಬ ಸಮಾಜದ ಜನಪ್ರತಿನಿಧಿಗಳ ಅಭಿನಂದನಾ ಸಮಾರಂಭದಲ್ಲಿ ವೇದಿಕೆ ಮೇಲೆ ಮಹಿಳೆಯೊಬ್ಬರು ಏಕಾಏಕಿ ಸಿದ್ದರಾಮಯ್ಯ ಅವರಿಗೆ ಮುತ್ತು ನೀಡಿದ್ದರು.

   
 
ಹೆಲ್ತ್