Back
Home » ಇತ್ತೀಚಿನ
ಸದ್ಯ ಹತ್ತು ಸಾವಿರದ ಪ್ರೈಸ್‌ ಟ್ಯಾಗ್‌ನಲ್ಲಿ ಲಭ್ಯವಿರುವ ಬೆಸ್ಟ್‌ ಕ್ಯಾಮೆರಾ ಫೋನ್‌ಗಳು!
Gizbot | 19th Apr, 2019 11:21 AM
 • ಶಿಯೋಮಿ ರೆಡ್ಮಿ ನೋಟ್‌ 7

  ಶಿಯೋಮಿ ಕಂಪನಿಯ ರೆಡ್ಮಿ ನೋಟ್‌ 7 ಸ್ಮಾರ್ಟ್‌ಫೋನ್‌ ಡ್ಯುಯಲ್‌ ಕ್ಯಾಮೆರಾ ಆಯ್ಕೆಯನ್ನು ಹೊಂದಿದ್ದು, ರೇರ್‌ ಕ್ಯಾಮೆರಾವು 48ಎಂಪಿ ಸಾಮರ್ಥ್ಯದಲ್ಲಿದ್ದು, ಸೆಕೆಂಡರಿ ಕ್ಯಾಮೆರಾವು 2ಎಂಪಿ ಸಾಮರ್ಥ್ಯದ ಡೆಪ್ತ್ ಸೆನ್ಸಾರ್‌ ಅನ್ನು ಹೊಂದಿದೆ. ಸೆಲ್ಫಿಗಾಗಿ 13ಎಂಪಿ ಸಾಮರ್ಥ್ಯದ ಕ್ಯಾಮೆರಾವನ್ನು ಒದಗಿಸಲಾಗಿದೆ. ಇನ್ನು ಇದರ ಡಿಸ್‌ಪ್ಲೇಯು 6.3 ಇಂಚಿನ ಆಗಿದ್ದು, 4000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಫೋನಿನ್ ಆರಂಭಿಕ ಬೆಲೆ. 9,999ರೂ.ಗಳು ಆಗಿದೆ.


 • ರಿಯಲ್‌ ಮಿ ಯು 1

  ರಿಯಲ್‌ ಮಿ ಯು 1 ಸ್ಮಾರ್ಟ್‌ಫೋನ್‌ ಸಹ ಡ್ಯುಯಲ್‌ ಕ್ಯಾಮೆರಾವನ್ನು ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾವು 13ಎಂಪಿ ಆಗಿದ್ದು, ಸೆಕೆಂಡರಿ ಕ್ಯಾಮೆರಾವು 2ಎಂಪಿ ಸಾಮರ್ಥ್ಯದಲ್ಲಿದೆ. ಪಿಕ್ಸಲ್ ಬಿನ್ನಿಂಗ್ ತಂತ್ರಜ್ಞಾನವಿದ್ದು, ಫೋಟೊಗಳು ಉತ್ತಮವಾಗಿ ಮೂಡಿಬರುತ್ತವೆ. ಜೊತೆಗೆ 25ಎಂಪಿ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಇದ್ದು, ಸೋನಿಯ IMX576 ಸೆನ್ಸಾರ್‌ ಹೊಂದಿದೆ. ಇನ್ನು ಇದರ ಡಿಸ್‌ಪ್ಲೇಯು 6.3 ಇಂಚಿನ ಆಗಿದ್ದು, ಈ ಫೋನಿನ್ ಆರಂಭಿಕ ಬೆಲೆ. 9,999ರೂ.ಗಳು ಆಗಿದೆ.


 • ನೋಕಿಯಾ 5.1 ಪ್ಲಸ್‌

  ಜನಪ್ರಿಯ ನೋಕಿಯಾ 5.1 ಪ್ಲಸ್‌ ಸ್ಮಾರ್ಟ್‌ಫೋನ್‌ ಸಹ ಡ್ಯುಯಲ್ ಕ್ಯಾಮೆರಾ ಆಯ್ಕೆಯನ್ನು ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾವು 13ಎಂಪಿ ಮತ್ತು ಸೆಕೆಂಡರಿ ಕ್ಯಾಮೆರಾವು 5ಎಂಪಿ ಸಾಮರ್ಥ್ಯದಲ್ಲಿವೆ. ಇದರೊಂದಿಗೆ 8ಎಂಪಿ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದ್ದು, 80.4ಡಿಗ್ರಿ ವೈಲ್ಡ್‌ ಆಂಗಲ್‌ ಲೆನ್ಸ್‌ ಅನ್ನು ಒಳಗೊಂಡಿದೆ. 5.8 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದ್ದು, ಈ ಸ್ಮಾರ್ಟ್‌ಫೋನ್‌ ಬೆಲೆಯು 10,599ರೂ.ಗಳು ಆಗಿದೆ.


 • ಶಿಯೋಮಿ ರೆಡ್ಮಿ 6 ಪ್ರೋ

  ರೆಡ್ಮಿ 6 ಪ್ರೋ ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ಎರಡು ಕ್ಯಾಮೆರಾವನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾವು 12ಎಂಪಿ ಸಾಮರ್ಥ್ಯದನ್ನು ಮತ್ತು ಸೆಕೆಂಡರಿ ಕ್ಯಾಮೆರಾವು 5ಎಂಪಿ ಸಾಮರ್ಥ್ಯವನ್ನು ಹೊಂದಿವೆ. ಹಾಗೇ ಸೆಲ್ಫಿಗಾಗಿ ಸಹ 5 ಎಂಪಿಯ ಕ್ಯಾಮೆರಾ ಒದಗಿಸಲಾಗಿದ್ದು, 5.84 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. 4000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರುವ ಈ ಫೋನಿನ್ ಆರಂಭಿಕ ಬೆಲೆ. 8,999ರೂ.ಗಳು ಆಗಿದೆ.


 • ಆಸೂಸ್‌ ಝೆನ್‌ಫೋನ್ ಮ್ಯಾಕ್ಸ್‌ ಪ್ರೋ ಎಂ 2

  ಆಸೂಸ್‌ನ ಈ ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಹೊಂದಿದ್ದು, ಪ್ರಥಮ ಕ್ಯಾಮೆರಾವು 12ಎಂಪಿ ಸಾಮರ್ಥ್ಯದೊಂದಿಗೆ ಸೋನಿಯ IMX486 ಸೆನ್ಸಾರ್‌ ಹೊಂದಿದೆ. ಹಾಗೇ ಸೆಕೆಂಡಿರಿ ಕ್ಯಾಮೆರಾವು 5ಎಂಪಿ ಸಾಮರ್ಥ್ಯದಲ್ಲಿದೆ. ಇನ್ನು ಸೆಲ್ಫಿಗಾಗಿ 13ಎಂಪಿ ಕ್ಯಾಮೆರಾವನ್ನು ಒದಗಿಸಲಾಗಿದ್ದು, 6.26 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರುವ ಈ ಫೋನ್‌ ಆರಂಭಿಕ ದರವು 9,999ರೂ.ಗಳು ಆಗಿದೆ.
ಹೊಸ ಸ್ಮಾರ್ಟ್‌ಫೋನ್‌ ಖರೀದಿಸುವಾಗ ಗ್ರಾಹಕರು ಫೋನಿನ್‌ ಪ್ರೊಸೆಸರ್, ಬೆಲೆ ಎಷ್ಟಿದೆ ಎಂಬುದನ್ನು ನೋಡುವುದರ ಜೊತೆಗೆ ಕ್ಯಾಮೆರಾ ಆಯ್ಕೆ ಹೇಗಿದೆ ಎಂಬುದನ್ನು ನೋಡುವುದನ್ನು ಮರೆಯುವುದಿಲ್ಲ. ಏಕೆಂದರೇ ಸ್ಮಾರ್ಟ್‌ಫೋನ್‌ಗಳಲ್ಲಿ ಫೋಟೊ ಕ್ಲಿಕ್‌ ಮಾಡಲು ಕ್ಯಾಮೆರಾ ಆಯ್ಕೆ ಅತೀ ಮುಖ್ಯ. ಬಜೆಟ್ ದರದಲ್ಲಿ ಅತ್ಯುತ್ತಮ ಕ್ಯಾಮೆರಾ ಫೀಚರ್‌ ಹೊಂದಿರುವ ಸ್ಮಾರ್ಟ್‌ಫೋನ್‌ಗಳಿಗೆನೆ ಮೊದಲ ಆದ್ಯತೆ.

ಹೌದು, ಸ್ಮಾರ್ಟ್‌ಫೋನ್‌ ಖರೀದಿಸುವ ಬಹುತೇಕ ಗ್ರಾಹಕರು ಮಿಡ್‌ರೇಂಜ್‌ ಅಥವಾ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವುದು ಹೆಚ್ಚು. ಹೀಗಾಗಿ ದೇಶಿಯ ಗ್ರಾಹಕರ ಮನಸ್ಥಿತಿ ಅರಿತಿರುವ ಹಲವು ಮೊಬೈಲ್‌ ಕಂಪನಿಗಳು ಈಗಾಗಲೇ ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ ಹೈ ಎಂಡ್‌ ಮಾದರಿಯ ಕ್ಯಾಮೆರಾವನ್ನು ಪರಿಚಯಿಸಿದ್ದು, ಸ್ಪರ್ಧಾತ್ಮಕ ಬೆಲೆಯಲ್ಲಿ ಲಾಂಚ್‌ ಸಹ ಮಾಡಿವೆ.

ಪ್ರಸ್ತುತ ಸ್ಮಾರ್ಟ್‌ಫೋನ್‌ಗಳಲ್ಲಿ ಕ್ಯಾಮೆರಾ ಆಯ್ಕೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದ್ದು, ಅಗ್ಗದ ಫೋನ್‌ಗಳಲ್ಲಿಯು ಡ್ಯುಯಲ್ ಕ್ಯಾಮೆರಾ, ಎಚ್‌ಆರ್‌ಡಿ ಮೋಡ್‌ ಆಯ್ಕೆ ಮತ್ತು ಆಟೋಫೋಕಸ್‌, ಒಳಗೊಂಡಂತೆ AI ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಸಹ ಒದಗಿಸಲಾಗುತ್ತಿದೆ. ಹಾಗಾದರೇ ಹತ್ತು ಸಾವಿರ ರೂಪಾಯಿ ಪ್ರೈಸ್‌ ಟ್ಯಾಗ್‌ನೊಳಗೆ ಸದ್ಯ ಲಭ್ಯವಿರುವ ಐದು ಬೆಸ್ಟ್‌ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ತಿಳಿಯಲು ಮುಂದೆ ಓದಿರಿ.

   
 
ಹೆಲ್ತ್