Back
Home » ಇತ್ತೀಚಿನ
ನೀವು ಖರೀದಿಸಿದ ಆಲ್ಕೋಹಾಲ್‌ ಅಸಲಿಯಾ?.ಆನ್‌ಲೈನ್‌ನಲ್ಲಿ ಚೆಕ್‌ ಮಾಡಿ!
Gizbot | 20th Apr, 2019 09:00 AM
 • ಆಪ್‌ ಮೂಲಕ ಚೆಕ್‌ ಮಾಡಿ

  * ಆಪ್‌ ಇನ್‌ಸ್ಟಾಲ್‌ ಮಾಡಿಕೊಳ್ಳಿ-"mLiquorSaleCheck"
  * ಬಾರ್‌ಕೋಡ್‌ ಸ್ಕ್ಯಾನರ್‌ ಆಯ್ಕೆ ಕ್ಲಿಕ್ಕ್ ಮಾಡಿ
  * ಕ್ಯಾಮೆರಾ ತೆರೆದು ಕೊಳ್ಳುತ್ತದೆ ಆಗ ಬಾಟಲ್‌ QR ಕೋಡ್‌ ಸ್ಕ್ಯಾನ್‌ ಮಾಡಿ
  * ಸ್ಕ್ಯಾನ್‌ ಆಗದಿದ್ದರೇ, ಬಾಟಲ್‌ ಸ್ಟಿಕ್ಕರ್‌ನಲ್ಲಿರುವ ಸಿರೀಯಲ್ ನಂಬರ್‌ ಎಂಟ್ರಿ ಮಾಡಿರಿ.
  * ಸರಿಯಾಗಿ ಎಂಟ್ರಿ ಮಾಡಿದ ನಂತರ ಸಬ್‌ಮಿಟ್‌ ಒತ್ತಿರಿ
  * ಆಗ ಆಲ್ಕೋಕಾಲ್‌ ತಯಾರಿಸಿದ ಕಂಪನಿಯ ಮಾಹಿತಿ ಲಭ್ಯವಾಗುತ್ತದೆ.


 • ವೆಬ್‌ಸೈಟ್‌ ಮೂಲಕ ಚೆಕ್‌ ಮಾಡಿ

  * https://delhiexcise.gov.in/Portal/liquorsalecheck ಸೈಟ್‌ಗೆ ಭೇಟಿ ನೀಡಿ
  * ಸ್ಕ್ಯಾನ್‌ ಆಯ್ಕೆ ಬಳಸಿ ಸ್ಕ್ಯಾನ್‌ ಮಾಡಬಹುದು
  * ಬಾಟಲ್‌ ಸ್ಟಿಕ್ಕರ್‌ನಲ್ಲಿರುವ ಸಿರೀಯಲ್ ನಂಬರ್‌ ಎಂಟ್ರಿ ಮಾಡಿರಿ.
  * ಸರಿಯಾಗಿ ಎಂಟ್ರಿ ಮಾಡಿದ ನಂತರ ಸಬ್‌ಮಿಟ್‌ ಒತ್ತಿರಿ
  * ಆಗ ಆಲ್ಕೋಕಾಲ್‌ ತಯಾರಿಸಿದ ಕಂಪನಿಯ ಮಾಹಿತಿ ಲಭ್ಯವಾಗುತ್ತದೆ.


 • ದೆಹಲಿಯಲ್ಲಿ ಖರೀದಿಸಿದ್ದರೆ ಮಾತ್ರ

  ದೆಹಲಿಯಲ್ಲಿ ಖರೀದಿಸಲಾದ ಆಲ್ಕೋಹಾಲ್‌ ಬಾಟಲ್‌ಗಳನ್ನು ಮಾತ್ರ ಚೆಕ್‌ ಈ ಆಪ್‌ನಲ್ಲಿ ಚೆಕ್‌ ಮಾಡಬಹುದಾಗಿದ್ದು, ಮತ್ತು ಚೆಕ್‌ ಮಾಡಬೇಕೆಂದಿರುವ ಆಲ್ಕೋಹಾಲ್‌ ಬಾಟಲ್‌ ಅನ್ನು ಕಳೆದ ಒಂದು ತಿಂಗಳಿಂದಿಚೆಗೆ ಖರೀದಿಸಿರಬೇಕು.


 • ಸ್ಕ್ಯಾನ್‌ ಆಗದಿದ್ದರೇ

  ನೀವು ದೆಹಲಿಯಲ್ಲಿ ಬಾಟಲ್‌ ಖರೀದಿಸಿದ್ದು, ಆಪ್‌ ಮತ್ತು ವೆಬ್‌ಸೈಟ್‌ಗಳಲ್ಲಿ ಸ್ಕ್ಯಾನ್‌ ಮಾಡಿದಾಗ ಯಾವುದೇ ಮಾಹಿತಿ ನೀಡದಿದ್ದರೆ ಅದು ದೆಹಲಿಯಲ್ಲಿ ಖರೀದಿಸಿದ ಬಾಟಲ್‌ ಆಗಿರುವುದುಲ್ಲ. ಹೊರ ರಾಜ್ಯದ ಬಾಟಲ್‌ ಆಗಿರುತ್ತದೆ ಅಥವಾ ಡಿಸ್ಟ್ರಿಬ್ಯೂಟರ್‌ ಸರಿಯಾಗಿ ಟ್ಯಾಕ್ಸ್‌ ಕಟ್ಟಿರುವುದಿಲ್ಲ.
ತಿನ್ನುವ ಆಹಾರ ಸೇರಿದಂತೆ ಕುಡಿಯುವ ಹಾಲಿನಿಂದ ಹಿಡಿದು ಆಲ್ಕೋಹಾಲ್‌ವರೆಗೂ ಈ ಕಲಬೇರಿಕೆ ಹಾವಳಿ ತಪ್ಪಿದ್ದಲ್ಲ. ಆದರೆ ಕಲಬೇರಕೆಯನ್ನು ಪತ್ತೆ ಮಾಡಲು ಅಥವಾ ಪರೀಕ್ಷಿಸಲು ಟೆಸ್ಟ್‌ಗಳಿದ್ದು, ಆ ಮೂಲಕ ಕಲಬೇರಿಕೆ ಪತ್ತೆಮಾಡಬಹುದಾಗಿದೆ. ಹಾಗೇ ಇದೀಗ ಆಲ್ಕೋಹಾಲ್‌ನ ಅಸಲಿಯಾಗಿದೆಯಾ ಎಂಬುದನ್ನು ಪತ್ತೆಹಚ್ಚಬಹುದಾಗಿದ್ದು, ಆನ್‌ಲೈನ್‌ನಲ್ಲಿ ಕುಡಿಯುವ ಎಣ್ಣೆ ಅಸಲಿನಾ ಮತ್ತು ನಿಖರ ಬೆಲೆ ಚೆಕ್‌ ಮಾಡಬಹುದಾಗಿದೆ.

ಹೌದು, ದೆಹಲಿ ಅಬಕಾರಿ ಇಲಾಖೆಯು ಗ್ರಾಹಕರಿಗೆ ಆನ್‌ಲೈನ್‌ನಲ್ಲಿಯೇ ಲಿಕ್ಕರ್ ಓರಿಜಿನಲ್‌ ಆಗಿದೆಯಾ ಎಂಬುದನ್ನು ಚೆಕ್‌ ಮಾಡುವ ಅವಕಾಶವನ್ನು ನೀಡಿದೆ. ದುಬಾರಿ ಬೆಲೆಯ ಆಲ್ಕೋಹಾಲ್‌ಗಳನ್ನು ನಕಲು ಮಾಡುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದ್ದು, ಅದಕ್ಕಾಗಿ "mLiquorSaleCheck" ಆಪ್‌ ಸಹ ಬಿಡುಗಡೆ ಮಾಡಲಾಗಿದೆ. ಕಳೆದು ಒಂದು ತಿಂಗಳಿಂದಿಚೆಗೆ ಖರೀದಿಸಿದ ಬಾಟಲ್‌ ಮಾತ್ರ ಚೆಕ್‌ ಮಾಡಬಹುದಾಗಿದೆ.

ಈ ಆಪ್‌ ಮೂಲಕ ಗ್ರಾಹಕರು ತಾವು ಖರೀದಿಸಿದ ಲಿಕ್ಕರ್‌ ಬಾಟಲ್ ಬಾರ್‌ಕೋಡ್‌ ಸ್ಕ್ಯಾನ್‌ ಮಾಡುವ ಮೂಲಕ ಅಸಲಿಯಾಗಿದೆಯಾ ಅಥವಾ ನಕಲಿಯಾಗಿದೆಯಾ ಎಂಬುದನ್ನು ಸರಳವಾಗಿ ಪತ್ತೆ ಮಾಡಬಹುದಾಗಿದೆ. ಹಾಗೇ ವೆಬ್‌ಸೈಟ್‌ನಲ್ಲಿಯೂ ಚೆಕ್‌ ಮಾಡಬಹುದಾಗಿದ್ದು, ಕೇವಲ ದೆಹಲಿ ಗ್ರಾಹಕರಿಗೆ ಮಾತ್ರ ಈ ಅವಕಾಶ ಲಭ್ಯವಿದೆ. ಹಾಗಾದರೇ ಲಿಕ್ಕರ್‌ ಅಸಲಿಯತ್ತನ್ನು ಚೆಕ್‌ ಮಾಡುವುದು ಹೇಗೆ ಎಂಬುದನ್ನು ನೋಡೋಣ ಬನ್ನಿರಿ.

   
 
ಹೆಲ್ತ್