Back
Home » ಇತ್ತೀಚಿನ
ಇಂದು ಬಿಡುಗಡೆಗೆ ಸಜ್ಜಾಗಿದೆ ಬಹುನಿರೀಕ್ಷಿತರ 'ರಿಯಲ್‌ ಮಿ 3 ಪ್ರೋ'!
Gizbot | 22nd Apr, 2019 10:22 AM
  • ಡಿಸ್‌ಪ್ಲೇ

    1,080 x 2,340 ಪಿಕ್ಸಲ್ ರೆಸಲ್ಯೂಶನ್‌ ನೊಂದಿಗೆ 6.3 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಡಿಸ್‌ಪ್ಲೇಯಿಂದ ಬಾಡಿಯ ರಚನೆಯ ನಡುವಿನ ಅನುಪಾತವು 19.5:9 ಆಗಿದ್ದು, ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 409 PPI ಆಗಿದೆ. ಸಂಪೂರ್ಣ ಅಂಚುರಹಿತ ಡಿಸ್‌ಪ್ಲೇಯ ಅನುಭವ ನೀಡಲಿದೆ ಎನ್ನಲಾಗಿದೆ.


  • ಪ್ರೊಸೆಸರ್

    ಕ್ಚಾಲ್ಕಮ್ ಚಿಪ್‌ ಸೆಟ್‌ನೊಂದಿಗೆ, ಸ್ನ್ಯಾಪ್‌ಡ್ರಾಗನ್ 710 SoC ಪ್ರೊಸೆಸರ್‌ ರಿಯಲ್ ಮಿ 3 ಪ್ರೋ ಸ್ಮಾರ್ಟ್‌ಫೋನ್ ಹೊಂದಿರಲಿದೆ. ಆಂಡ್ರಾಯ್ಡ್‌ 9.0 ಪೈ ಓಎಸ್‌ ಇದರಲ್ಲಿ ಕಾರ್ಯನಿರ್ವಹಿಸಲಿದೆ. 4GB + 32GB, 4GB + 64GB ಮತ್ತು 6GB + 64GB ಮೂರು ವೇರಿಯಂಟ್‌ಗಳಲ್ಲಿ ಲಾಂಚ್ ಆಗಲಿದೆ ಎನ್ನಲಾಗುತ್ತದೆ.


  • ಕ್ಯಾಮೆರಾ

    ರಿಯಲ್ ಮಿ 3 ಪ್ರೋ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಡ್ಯುಯಲ್ ರೇರ್ ಕ್ಯಾಮೆರಾವನ್ನು ಹೊಂದಿರಲಿದ್ದು, ಪ್ರಾಥಮಿಕ ಕ್ಯಾಮೆರಾವು 48 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿರಲಿದೆ ಮತ್ತು ಸೋನಿಯ IMX519 ಸೆನ್ಸಾರ್‌ ಅನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ. ಉಳಿದಂತೆ ಸೆಲ್ಫಿಗಾಗಿ 20 ಮೆಗಾಪಿಕ್ಸಲ್ ಕ್ಯಾಮೆರಾ ನೀಡಲಾಗುವುದು ಎಂದು ನಿರೀಕ್ಷಿಸಲಾಗುತ್ತಿದೆ.


  • ಬ್ಯಾಟರಿ

    ಸುಮಾರು 4500mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗುವುದು ಎನ್ನುತ್ತಿವೆ ಲೀಕ್ ಮಾಹಿತಿಗಳು. ಇದರೊಂದಿಗೆ ಸ್ಮಾರ್ಟ್‌ಫೋನ್ ವೇಗದ ಚಾರ್ಜಿಂಗ್‌ಗಾಗಿ VOOC 3.0, ಫಾಸ್ಟ್‌ ಚಾರ್ಜಿಂಗ್ ತಂತ್ರಜ್ಞಾನದ ಸೌಲಭ್ಯವನ್ನು ನೀಡಲಾಗಲಿದೆ.


  • ಬೆಲೆ

    ರಿಯಲ್‌ ಮಿ 3 ಪ್ರೋ ಸ್ಮಾರ್ಟ್‌ಫೋನ್ ಮೂರು ವೇರಿಯಂಟ್‌ಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆಗಳಿದ್ದು, ಹೀಗಾಗಿ ಭಿನ್ನ ಬೆಲೆಯ ಶ್ರೇಣಿಯನ್ನು ಹೊಂದಿರಲಿವೆ. ಬ್ಲ್ಯಾಕ್ ಮತ್ತು ಗೋಲ್ಡ್‌ ಬಣ್ಣಗಳ ಆಯ್ಕೆಗಳು ಇರಲಿವೆ. ಆದರೆ 6 GB RAM / 64 GB ವೇರಿಯಂಟ್ ಬೆಲೆಯು 18990ರೂ.ಗಳು ಇರಲಿದೆ ಎಂದು ಅಂದಾಜಿಸಲಾಗಿದೆ.




'ರಿಯಲ್‌ ಮಿ' ಕಂಪನಿಯ ಬಹುನಿರೀಕ್ಷಿತ 'ರಿಯಲ್‌ ಮಿ 3 ಪ್ರೋ' ಸ್ಮಾರ್ಟ್‌ಫೋನಿನ ಈಗಾಗಲೇ ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಹಾಗೇ ಇತ್ತೀಚಿಗೆ ಪ್ರೀ ಬುಕ್ಕಿಂಗ್ ಆಯ್ಕೆಯನ್ನು ಗ್ರಾಹಕರಿಗೆ ನೀಡಿ ಮತ್ತಷ್ಟು ಕುತೂಹಲ ಮೂಡಿಸಿದೆ. ಇದೀಗ ಗ್ರಾಹಕರ ನಿರೀಕ್ಷೆಗಳಿಗೆ ತೆರೆಬಿಳಲಿದ್ದು, ರಿಯಲ್‌ ಮಿ 3 ಪ್ರೋ ಸ್ಮಾರ್ಟ್‌ಫೋನ್ ಇಂದು ಮಧ್ಯಾಹ್ನ 12:30 ಗಂಟೆಗೆ ಲಾಂಚ್‌ ಆಗಲಿದೆ.

ಹೌದು, ಕಂಪನಿಯು 'ರಿಯಲ್‌ ಮಿ 3 ಪ್ರೋ' ಸ್ಮಾರ್ಟ್‌ಫೋನ್‌ ರಿಲೀಸ್‌ಗೆ ದೆಹಲಿಯಲ್ಲಿ ಬಿಡುಗಡೆಯ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಸಂಸ್ಥೆಯ ಸಾಮಾಜಿಕ ತಾಣಗಳ ಮೂಲಕ ಲೈವ್‌ ಸ್ಟ್ರೀಮಿಂಗ್ ಮಾಡಲು ಗ್ರಾಹಕರಿಗೆ ಅವಕಾಶ ನೀಡಲಾಗಿದೆ. ಕಂಪನಿಯ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ ಆಗಿದ್ದು, ಹೈ ಎಂಡ್‌ ಮಾದರಿಯ ಫೀಚರ್ಸ್‌ಗಳು ಇರಲಿವೆ ಎಂದು ನಿರೀಕ್ಷಿಸಲಾಗುತ್ತಿದೆ.

ಗ್ರಾಹಕರ ನಿರೀಕ್ಷೆಗಳನ್ನು ಹೆಚ್ಚಿಸಿರುವ ಈ ಸ್ಮಾರ್ಟ್‌ಫೋನಿನ ಪ್ರಮುಖ ಆಕರ್ಷಣೆಯೆಂದರೆ ಕ್ಯಾಮೆರಾ ಮತ್ತು ಬ್ಯಾಟರಿ ಆಗಿದ್ದು, 48ಎಂಪಿ ರೇರ್ ಕ್ಯಾಮೆರಾ ಇರಲಿದ್ದು, ಇದರೊಂದಿಗೆ 4500mAh ಸಾಮರ್ಥ್ಯದ ಬ್ಯಾಟರಿಯನ್ನು ಒದಗಿಸಲಾಗಿದೆ. ಹಾಗಾದರೇ 'ರಿಯಲ್‌ ಮಿ 3 ಪ್ರೋ' ಸ್ಮಾರ್ಟ್‌ಫೋನ್‌ ಇತರೆ ಏನೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

   
 
ಹೆಲ್ತ್