Back
Home » ಆರೋಗ್ಯ
ನೀವು ಈ ಚಿಹ್ನೆಗಳು-ರೋಗಲಕ್ಷಣಗಳನ್ನು ಹೊಂದಿದ್ದೀರಿ ಎಂದಾದರೆ ಸಕ್ಕರೆ ಕಾಯಿಲೆ ಬರುವ ಸಾಧ್ಯತೆಗಳಿರುತ್ತವೆ!
Boldsky | 22nd Apr, 2019 11:30 AM
 • ಯಾವುದಾದರೂ ಗಾಯಗಳಾದರೆ ಅಥವಾ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಎದುರಾದರೆ

  ನಮ್ಮೊಡನೆ ಇರುವ ವ್ಯಕ್ತಿಗಳು ಅಥವಾ ಕುಟುಂಬದ ಸದಸ್ಯರೆಲ್ಲರೂ ವಿವಿಧ ಊಟ-ತಿಂಡಿಯನ್ನು ತಿನ್ನುತ್ತಿರುವಾಗ ನಾವೊಬ್ಬರೇ ಅನಾರೋಗ್ಯದ ಕಾರಣಕ್ಕೆ ಆ ಊಟ-ತಿಂಡಿಗಳಿಂದ ದೂರ ಇರಬೇಕು ಎಂದಾಗ ಮನಸ್ಸಿಗೆ ಸಾಕಷ್ಟು ನೋವುಂಟಾಗುವುದು. ಅಂತಹ ನೋವನ್ನು ನೀಡುವ ಹಾಗೂ ನಿಧಾನವಾಗಿ ಸಾವಿಗೆ ಹತ್ತಿರ ಕರೆದೊಯ್ಯುವ ಆರೋಗ್ಯ ಸಮಸ್ಯೆ ಅಥವಾ ಕಾಯಿಲೆ ಎಂದರೆ ಡಯಾಬಿಟಿಸ್. ಡಯಾಬಿಟಿಸ್/ಸಕ್ಕರೆ ಕಾಯಿಲೆ ಎನ್ನುವುದು ಆಕ್ಷಣಕ್ಕೆ ಸಾವನ್ನು ತರದಿದ್ದರೂ ನಿಧಾನವಾಗಿ ನಮ್ಮ ಸಾವಿನ ಅವಧಿಗೆ ಸಮೀಪ ಕರೆದೊಯ್ಯುತ್ತದೆ. ಸಕ್ಕರೆ ಕಾಯಿಲೆ ಇರುವ ವ್ಯಕ್ತಿಗಳಿಗೆ ಯಾವುದಾದರೂ ಗಾಯಗಳಾದರೆ ಅಥವಾ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಎದುರಾದರೂ ಅಷ್ಟು ಸುಲಭವಾಗಿ ಅವು ಗುಣಮುಖವಾಗಲಾರವು.


 • ಯಾವುದಾದರೂ ಗಾಯಗಳಾದರೆ ಅಥವಾ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಎದುರಾದರೆ

  ಸಿಹಿ ತಿಂಡಿ, ಊಟ, ಉಪಹಾರ, ಹಣ್ಣು, ತರಕಾರಿ, ಕೆಲವು ಪೇಯಗಳನ್ನು ಕಟ್ಟು ನಿಟ್ಟಾಗಿ ನಿಷೇಧಿಸಬೇಕಾಗುವುದು. ಇದರೊಟ್ಟಿಗೆ ಮಧುಮೇಹದ ಪ್ರಮಾಣ ಅಥವಾ ಮಟ್ಟ ಆರೋಗ್ಯಕರ ಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ವ್ಯಕ್ತಿಗೆ ಮಧುಮೇಹದ ಅನಾರೋಗ್ಯದ ಜೊತೆಗೆ ವಿವಿಧ ಆರೋಗ್ಯ ಸಮಸ್ಯೆಗಳು ಸೇರಿಕೊಳ್ಳುತ್ತಾ ಹೋಗುತ್ತದೆ. ಮಧುಮೇಹದ ಪ್ರಮಾಣ ಒಂದು ಮಿತಿಯನ್ನು ಮೀರಿ ಹೆಚ್ಚಾಗಿದೆ ಎಂದಾದರೆ ಮೂತ್ರ ಪಿಂಡದ ವೈಫಲ್ಯತೆ, ದೃಷ್ಟಿ ಹೀನತೆ, ಹೃದಯ ಸಮಸ್ಯೆ ಹೀಗೇ ಒಳಾಂಗ ವ್ಯವಸ್ಥೆಯಲ್ಲಿ ಅನಾರೋಗ್ಯವು ಹೆಚ್ಚುವುದರ ಜೊತೆಗೆ ಸಾವನ್ನು ಸಹ ತರಬಹುದು. ಹಾಗಾಗಿ ವ್ಯಕ್ತಿ ಮಧುಮೇಹ ಬಂದ ಮೇಲೆ ಎಚ್ಚೆತ್ತುಕೊಳ್ಳುವ ಬದಲು, ಬರುವ ಮೊದಲೇ ಹೆಚ್ಚಿನ ಕಾಳಜಿ ವಹಿಸಿದರೆ ಆರೋಗ್ಯದ ಸ್ಥಿತಿಯು ಉತ್ತಮವಾಗಿರುತ್ತದೆ.


 • ಯಾವುದಾದರೂ ಗಾಯಗಳಾದರೆ ಅಥವಾ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಎದುರಾದರೆ

  ಆನುವಂಶಿಕವಾಗಿ ಹಾಗೂ ಜೀವನ ಶೈಲಿಯ ಕಾರಣದಿಂದಾಗಿ ಬರುವ ಈ ಆರೋಗ್ಯ ಸಮಸ್ಯೆಯು ಇಂದಿನ ದಿನದಲ್ಲಿ ಸಾಮಾನ್ಯವಾದ ಆರೋಗ್ಯ ಸಮಸ್ಯೆಗಳಲ್ಲಿ ಒಂದು ಎನ್ನುವ ರೀತಿಯಲ್ಲಿದೆ. ಇದರ ಪ್ರಮಾಣ ಎಷ್ಟರ ಮಟ್ಟಿಗೆ ಹೆಚ್ಚಿದೆ ಎಂದರೆ ಪ್ರಪಂಚದಾದ್ಯಂತೆ ಸುಮಾರು 200 ಮಿಲಿಯನ್ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಈ ಒಂದು ಅಂಕಿ ಸಂಶವನ್ನು ವಿಶ್ವ ಆರೋಗ್ಯ ಸಂಸ್ಥೆಯು ದೃಢೀಕರಿಸಿದೆ. ಅಂತಾರಾಷ್ಟ್ರೀಯ ಮಧುಮೇಹ ಒಕ್ಕೂಟದ ಅಂಕಿ ಅಂಶದ ಪ್ರಕಾರ ಅಥವಾ ಬಹಿರಂಗ ಪಡಿಸಿದ ಸಂಶೋಧನೆಯ ಪ್ರಕಾರ ಕೇವಲ ಭಾರತ ದೇಶವೊಂದರಲ್ಲಿಯೇ 50 ದಶಲಕ್ಷ ಮಧುಮೇಹಿಗಳು ಇದ್ದಾರೆ. ಹಾಗಾಗಿ ಭಾರತೀಯರಿಗೆ ಮಧುಮೇಹ ಆರೋಗ್ಯದ ಬಗ್ಗೆ ಅರಿವು ಹಾಗೂ ಚಿಕಿತ್ಸೆಯ ಬಗ್ಗೆ ಹೆಚ್ಚಿನ ಅರಿವು ಮತ್ತು ಜ್ಞಾನವನ್ನು ಹೊಂದಬೇಕಾದ ಅವಶ್ಯಕತೆ ಇದೆ ಎಂದು ಹೇಳಲಾಗುಗುವುದು.


 • ಯಾವುದಾದರೂ ಗಾಯಗಳಾದರೆ ಅಥವಾ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಎದುರಾದರೆ

  ದುರ್ಬಲವಾದ ಗ್ಲೂಕೋಸ್ ಪ್ರಮಾಣವು ವ್ಯಕ್ತಿಯಲ್ಲಿ ಖಿನ್ನತೆಯನ್ನು ಮೂಡಿಸುವುದು. ಜೊತೆಗೆ ಹೃದಯದ ರಕ್ತನಾಳದ ಕಾಯಿಲೆಯನ್ನು ಅಭಿವೃದ್ಧಿ ಪಡಿಸುತ್ತದೆ. ಹಾಗಾಗಿ ಮಧುಮೇಹ ಮರುವ ಮುನ್ನ ದೇಹದಲ್ಲಿ ಉಂಟಾಗುವ ಕೆಲವು ಬದಲಾವಣೆ ಯನ್ನು ಪರಿಗಣಿಸಬೇಕು. ಕೆಲವು ಅನಾರೋಗ್ಯದ ಚಿಹ್ನೆಗಳು ನಮ್ಮ ಗಮನಕ್ಕೆ ಮರುತ್ತವೆ. ಅವುಗಳಲ್ಲಿ ಕೆಲವು ಭವಿಷ್ಯದಲ್ಲಿ ಮಧುಮೇಹ ಬರುವುದು ಎನ್ನುವುದನ್ನು ಸೂಚಿಸುವುದು. ಹಾಗಾದರೆ ಆ ಚಿಹ್ನೆಗಳು ಯಾವವು? ಅವು ನಮಗೆ ಮಧುಮೇಹದ ಚಿಹ್ನೆಯಾಗಿ ಏಕೆ ತೋರುತ್ತವೆ? ನಮ್ಮ ಅನಾರೋಗ್ಯ ಸ್ಥಿತಿಗೆ ಕಾರಣ ಏನು ಎನ್ನುವ ಸಂಗತಿಯನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.


 • ಮಧುಮೇಹದ ಅಪಾಯ

  ಕುಟುಂಬದಲ್ಲಿ ಪೂರ್ವಜರು ಅಥವಾ ಆನುವಂಶಿಕ ಹಿನ್ನೆಲೆಯಲ್ಲಿ ಮಧುಮೇಹೊಗಳು ಇದ್ದಾರೆ ಎಂದಾದರೆ ನಿಮ್ಮ ಭವಿಷ್ಯದಲ್ಲೂ ಮಧುಮೇಹ ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಮಹಿಳೆಯರು ಗರ್ಭಾವಸ್ಥೆಯಲ್ಲಿ ಇರುವಾಗಲೂ ಕೆಲವೊಮ್ಮೆ ಮಧುಮೇಹ ಬರುತ್ತದೆ. ಆದರೆ ನಂತರದ ಸಮಯದಲ್ಲಿ ಗುಣಮುಖವಾಗ ಬಹುದು. ಕೆಲವರಿಗೆ ಅಲ್ಲಿಂದಲೇ ಜೀವನ ಪೂರ್ತಿ ಅನುಭವಿಸ ಬೇಕಾದ ಸ್ಥಿತಿ ಎದುರಾಗುವ ಸ್ಥಿತಿಗಳು ಇರುತ್ತವೆ. ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ಮಧುಮೇಹವು ಮಗುವಿನ ಆರೋಗ್ಯ ಹಾಗೂ ಬೆಳವಣಿಗೆಯ ಮೇಲೆ ಗಂಭೀರ ಪ್ರಭಾವವನ್ನು ಬೀರುವುದು. 45ಕ್ಕೂ ಹೆಚ್ಚು ವಯಸ್ಸಾದವರಲ್ಲಿ ಮಧುಮೇಹ ಹೆಚ್ಚಾಗಿ ಕಾಣಿಸಿಕೊಳ್ಳುವುದು. ಮಧು ಮೇಹದಲ್ಲಿ ಎರಡು ವಿಧಗಳನ್ನು ಕಾಣಬಹುದು. ಒಂದು ಮಧುಮೇಹ ಟೈಪ್-1 ಮತ್ತು ಮಧುಮೇಹ ಟೈಪ್-2. ಮಧುಮೇಹ ಟೈಪ್-2 ಅತ್ಯಂತ ಅಪಾಯಕಾರಿ ಎಂದು ಹೇಳಲಾಗುವುದು.


 • ಇವು ಮಧುಮೇಹದ ಲಕ್ಷಣಗಳಾಗಿರುತ್ತವೆ

  ಬಹುತೇಕ ಜನರು ಮಧುಮೇಹ ಹೊಂದುವ ಮೊದಲು ಸಾಕಷ್ಟು ದೈಹಿಕ ಬದಲಾವಣೆ ಹಾಗೂ ಮಾನಸಿಕ ಚಿಂತನೆಗಳಲ್ಲಿ ವ್ಯತ್ಯಾಸವನ್ನು ಹೊಂದಿರುತ್ತಾರೆ. ಅದರಲ್ಲಿ ಕೆಲವರು ಯಾವುದೇ ಪೂರ್ವ ಆರೋಗ್ಯ ಸಮಸ್ಯೆಯ ಚಿಂತನೆಯನ್ನು ಹೊಂದಿರು ವುದಿಲ್ಲ. ಮಧುಮೇಹ ಬರುವ ಮೊದಲು ಸಾಮಾನ್ಯವಾಗಿ ಕಾಡುವ ಚಿಹ್ನೆಗಳು ಎಂದರೆ, ಅತಿಯಾಗಿ ಬಾಯಾರಿಕೆ ಉಂಟಾಗುವುದು, ಪೇ ಪದೇ ನೀರನ್ನು ಕುಡಿಯಲು ಮನಸ್ಸು ಪ್ರೇರೇಪಿಸುವುದು, ಪದೇ ಪದೇ ಮೂತ್ರ ವಿಸರ್ಜನಕ್ಕೆ ಉತ್ತೇಜಿಸುವುದು, ತಲೆ ಸುತ್ತುವುದು, ಆಯಾಸದ ಮಟ್ಟ ಹೆಚ್ಚುವುದು, ಚರ್ಮದ ಮೇಲೆ ಕೆಲವು ಹಿಹ್ನೆಗಳು ಕಾಣಿಸಿಕೊಳ್ಳುವುದು. ಹೀಗೆ ವಿವಿಧ ಚಿಹ್ನೆಗಳು ಭವಿಷ್ಯದಲ್ಲಿ ಮಧುಮೇಹ ಸಮೀಪಿಸುತ್ತಿದೆ ಎನ್ನುವುದನ್ನು ತೋರಿಸುವುದು.


 • ನಿದ್ರಾಹೀನತೆ ಅನುಭವಿಸುವವರು

  ಯಾರು ನಿತ್ಯ 6 ಗಂಟೆಗಿಂತಲೂ ಕಡಿಮೆ ನಿದ್ರೆಯನ್ನು ಹೊಂದುತ್ತಾರೆ ಅಂತಹವರು ಮಧುಮೇಹ ರೋಗವನ್ನು ಅನುಭವಿಸಬೇಕಾಗುವುದು. ಅನುಚಿತ ನಿದ್ರಾ ಕ್ರಮ ಅಥವಾ ನಿದ್ರಾ ಹೀನತೆ ಹೊಂದಿದ್ದರೆ ವ್ಯಕ್ತಿಯ ಆರೋಗ್ಯದಲ್ಲಿ ಬಹುಬೇಗ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ನಿದ್ರಾ ಹೀನತೆಯ ಕಾರಣದಿಂದಾಗಿ ಹಾರ್ಮೋನ್‍ಗಳಲ್ಲಿ ವ್ಯತ್ಯಾಸ ಉಂಟಾಗುವುದು. ಜೊತೆಗೆ ಗ್ಲುಕೋಸ್ ಹೆಚ್ಚಳದಿಂದ ರಕ್ತದಲ್ಲಿಯೂ ಸಕ್ಕರೆ ಪ್ರಮಾಣ ಹೆಚ್ಚುವುದು. ಇವು ಮಧುಮೇಹ ರೋಗಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗುವುದು.


 • ಕೆಲವು ಆರೋಗ್ಯ ಸಮಸ್ಯೆಯು ಮಧುಮೇಹಕ್ಕೆ ಕಾರಣವಾಗುತ್ತವೆ

  ನಿಮ್ಮ ರಕ್ತದಲ್ಲಿ ನಿಯಮಿತವಾದ ಅಥವಾ ಆರೋಗ್ಯಕರವಾದ ಸಕ್ಕರೆ ಮಟ್ಟವನ್ನು ಹೊಂದಿರಬೇಕು. ಅದರ ಪ್ರಮಾಣವು ಹೆಚ್ಚುತ್ತಾ ಹೋದರೆ ಅಥವಾ ತನ್ನ ಮಿತಿಯನ್ನು ಮೀರಿದರೆ ಮಧುಮೇಹ ಕಾಯಿಲೆ ಅಥವಾ ಆರೋಗ್ಯ ಸಮಸ್ಯೆ ಉಂಟಾಗುವುದು. ನಿಮ್ಮ ದೇಹದ ತೂಕವು ನಿಮ್ಮ ಎತ್ತರಕ್ಕೆ ಅನುಗುಣವಾಗಿ ಇರಬೇಕು. ನಿಮ್ಮ ಎತ್ತರಕ್ಕೆ ಅನುಗುಣವಾಗಿ ತೂಕವಿಲ್ಲ, ಅಧಿಕ ಪ್ರಮಾಣವನ್ನು ಪಡೆದುಕೊಂಡಿದೆ ಅಥವಾ ನೀವು ಬೊಜ್ಜುತನವನ್ನು ಅನುಭವಿಸುತ್ತಿದ್ದೀರಿ ಎಂದಾದರೆ ಮಧುಮೇಹ ಸಮಸ್ಯೆಯನ್ನು ಸೂಚಿಸುವುದು. ಅತಿಯಾದ ಕೊಲೆಸ್ಟ್ರಾಲ್ ಪ್ರಮಾಣ, ಹೃದಯ ಸಂಬಂಧಿ ಆರೋಗ್ಯ ಸಮಸ್ಯೆ, ಪಾಲಿಸಿಸ್ಟಿಕ್ ಓವೆರೆಸಿಯಂತಹ ಆರೋಗ್ಯ ಸಮಸ್ಯೆಗಳು ಸಹ ಭವಿಷ್ಯದಲ್ಲಿ ಮಧುಮೇಹದ ಆಗಮನವನ್ನು ಸೂಚಿಸುತ್ತವೆ.


 • ಚರ್ಮ ರೋಗದ ಸಮಸ್ಯೆ

  ಅಕಂತೋಸಿಸ್ ನಿಗ್ರಿಸಿಸ್ ಎನ್ನುವ ಚರ್ಮದ ಅಸ್ವಸ್ಥತೆಯು ಸಹ ಮಧುಮೇಹ ಬರುವಿಕೆಯನ್ನು ತೋರುವುದು. ಈ ಸಮಸ್ಯೆಯು ಸಾಮಾನ್ಯವಾಗಿ ಚರ್ಮದ ಮೇಲೆ ಗಾಢವಾದ ಕಪ್ಪು ಕಲೆಯಂತೆ ಹಾಗೂ ತೇಪೆಯಂತೆ ಕಾಣಿಸಿಕೊಳ್ಳುತ್ತವೆ. ಕತ್ತಿನ ಸುತ್ತ, ಸಂಧುಗಳಲ್ಲಿ, ಗಂಟುಗಳಲ್ಲಿ ಹೀಗೆ ವಿವಿಧೆಡೆ ಕಾಣಿಸಿಕೊಳ್ಳುವುದು. ಅವು ಸಾಮಾನ್ಯವಾಗಿ ಚರ್ಮವು ಮಡಿಕೆಯಾಗುವಂತಹ ಸ್ಥಳಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದು. ಚರ್ಮವು ಸಹ ಬಹಬೇಗ ಸುಕ್ಕುಗಟ್ಟಿದಂತೆ ಅಥವಾ ಮಡಿಕೆ ಹೊಂದಿದಂತಹ ಸ್ಥಿತಿಯನ್ನು ಪಡೆದುಕೊಂಡರೆ ಸಕ್ಕರೆ ರೋಗವನ್ನು ಪ್ರತಿಬಿಂಬಿಸುತ್ತದೆ.


 • ಮನ್ನೆಚ್ಚರಿಕೆ ಕ್ರಮ ಏನು?

  ಮಧುಮೇಹ ಬಂದ ಮೇಲೆ ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಪ್ರಯತ್ನವನ್ನು ಮಾಡಬಹುದೇ ಹೊರತು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಹಾಗಾಗಿ ಆರೋಗ್ಯ ಸಮಸ್ಯೆ ಎದುರಾಗುವ ಮುನ್ನವೇ ತಡೆಯುವ ಕೆಲವು ಕ್ರಮ ಅಥವಾ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ. ಕುಟುಂಬದಲ್ಲಿ ಮಧುಮೇಹ ಹೊಂದಿರುವ ವ್ಯಕ್ತಿಗಳು ಇದ್ದರೆ ಅಥವಾ ಹಿನ್ನೆಲೆಯನ್ನು ಹೊಂದಿದ್ದೀರಿ ಎಂದಾದರೆ ನಿಮ್ಮ ಆರೋಗ್ಯ ಹಾಗೂ ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ಹಾಗೂ ಆರೈಕೆಯನ್ನು ಹೊಂದಬೇಕು. ದೈಹಿಕವಾಗಿ ವ್ಯಾಯಾಮ ಮಾಡುವುದು, ದೇಹದ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು, ಆರೋಗ್ಯಕರ ಆಹಾರವನ್ನು ಹೊಂದುವುದು, ಉತ್ತಮ ಜೀವನ ಶೈಲಿಯನ್ನು ಪರಿಪಾಲಿಸುವುದರಿಂದಲೂ ಮಧುಮೇಹ ಆರೋಗ್ಯ ಸಮಸ್ಯೆಯನ್ನು ಸಾಕಷ್ಟು ದೂರ ಇಡಬಹುದು.
ಉತ್ತಮ ಆರೋಗ್ಯ ಯಾರಿಗೆ ಬೇಡ? ಎಲ್ಲರೂ ಒಳ್ಳೆಯ ಆರೋಗ್ಯ ಸ್ಥಿತಿಯನ್ನು ಹೊಂದಿರಬೇಕು ಎಂದು ಬಯಸುವುದು ಸಹಜ. ಆದರೆ ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯದಲ್ಲಿ ಕೆಲವೊಂದು ಅಡೆತಡೆಗಳು ಅಥವಾ ನ್ಯೂನತೆಗಳು ಇದ್ದೇ ಇರುತ್ತವೆ. ಪರಿಪೂರ್ಣವಾದ ಆರೋಗ್ಯ ಹೊಂದಿರುವ ವ್ಯಕ್ತಿಗಳು ಬೆರಳೆಣಿಕೆಯಷ್ಟು ವ್ಯಕ್ತಿಗಳು ಸಿಗಬಹುದು. ಅಂತಹ ಪರಿಪೂರ್ಣ ಅಥವಾ ಆರೋಗ್ಯಕರವಾದ ಆರೋಗ್ಯ ಸ್ಥಿತಿಯನ್ನು ಹೊಂದಿರುವ ವ್ಯಕ್ತಿಗಳು ಪ್ರಪಂಚದಲ್ಲಿಯೇ ಅತ್ಯಂತ ಅದೃಷ್ಟವಂತರು ಎಂದು ಹೇಳಬಹುದು. ಏಕೆಂದರೆ ಆರೋಗ್ಯ ಸಮಸ್ಯೆ ಇಲ್ಲದ ವ್ಯಕ್ತಿಗಳು ಎಂತಹ ಕೆಲಸವನ್ನಾದರೂ ಮಾಡಲು ಸಿದ್ಧರಾಗಿರುತ್ತಾರೆ. ಜೊತೆಗೆ ತಮ್ಮ ಆರೋಗ್ಯದ ಬಗ್ಗೆ ಯಾವುದೇ ಚಿಂತೆಯನ್ನು ಮಾಡದೆ, ಎಂತಹ ಆಹಾರವನ್ನಾದರೂ ಸೇವಿಸಬಹುದು.

ವ್ಯಕ್ತಿಗೆ ಅತ್ಯಂತ ಕಷ್ಟದ ಸಂಗತಿ ಎಂದರೆ ಕೆಲವು ತಿಂಡಿ ಹಾಗೂ ಊಟವನ್ನು ಸೇವಿಸದೆ ಇರುವುದು. ಮನಸ್ಸು ಬಯಸುತ್ತಿದ್ದರೂ ತಿನ್ನಲಾಗದ ಪರಿಸ್ಥಿತಿಯನ್ನು ಹೊಂದುವುದು. ಕೆಲವು ಆರೋಗ್ಯ ಸಮಸ್ಯೆಗಳು ಇಂತಹ ಇಕ್ಕಟ್ಟಿನ ಅಥವಾ ಕಷ್ಟದ ಸ್ಥಿತಿಯನ್ನು ತಂದೊಡ್ಡುತ್ತವೆ. ಹೌದು, ಪರಿಸರದಲ್ಲಿ ಇರುವ ಮಾಲಿನ್ಯ, ಆಹಾರ ವಸ್ತುಗಳಲ್ಲಿ ಕಲಬೆರಿಕೆ, ಅನುಚಿತವಾದ ಆಹಾರ ಪದ್ಧತಿ, ಅನಾರೋಗ್ಯಕರವಾದ ಜೀವನ ಶೈಲಿಗಳು ಸಾಕಷ್ಟು ಅನಾರೋಗ್ಯವನ್ನು ತಂದೊಡ್ಡುತ್ತವೆ. ಅನಾರೋಗ್ಯದ ಕಾರಣದಿಂದಾಗಿ ಆಹಾರ ಪದ್ಧತಿಯಲ್ಲಿ ಪತ್ಯವನ್ನು ಅನುಸರಿಸಬಬೇಕಾಗುವುದು...

   
 
ಹೆಲ್ತ್