Back
Home » ಇತ್ತೀಚಿನ
ವಿಶ್ವದಲ್ಲೇ ಮೊದಲ ಬಾರಿಗೆ ನಗರವೊಂದರಲ್ಲಿ 'ಮುಖಚಹರೆ ಪತ್ತೆ' ನಿಷೇಧ!?..ಏಕೆ ಗೊತ್ತಾ?
Gizbot | 23rd Apr, 2019 09:00 AM

ಆಧುನಿಕ ತಂತ್ರಜ್ಞಾನದ ತವರೂರಾಗಿರುವ ಅಮೆರಿಕಾದ ಪ್ರಖ್ಯಾತ ನಗರ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಮುಖಚಹರೆ ಪತ್ತೆ ತಂತ್ರಜ್ಞಾನವನ್ನು ನಿಷೇಧಿಸುವ ಸಾಧ್ಯತೆ ಹೆಚ್ಚಿದೆ. ಅನುಮಾನಾಸ್ಪದ ಎನಿಸಿದ ವ್ಯಕ್ತಿಗಳ ಮುಖಚಹರೆ ಹಾಗೂ ಚಟುವಟಿಕೆಗಳನ್ನು ಟ್ರಾಕಿಂಗ್ ಮಾಡುತ್ತಿದ್ದ ಮುಖಚಹರೆ ಪತ್ತೆ ತಂತ್ರಜ್ಞಾನವು ಇದೀಗ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದ್ದು, ಇದೇ ಮೊದಲ ಬಾರಿಗೆ ವಿಶ್ವದ ನಗರವೊಂದರಲ್ಲಿ ಮುಖಚಹರೆ ಪತ್ತೆ ತಂತ್ರಜ್ಞಾನ ನಿಷೇಧವಾಗುವ ಸಾಧ್ಯತೆಯನ್ನು ಮುಂದಿಡಲಾಗಿದೆ.

ಹೌದು, ಸ್ಯಾನ್‌ ಫ್ರಾನ್ಸಿಸ್ಕೋ ನಗರದ ಹಲವು ಬೀದಿಗಳು ಸೇರಿದಂತೆ ಅಲ್ಲಿನ ಮೆಟ್ರೋ ನಿಲ್ದಾಣಗಳಲ್ಲಿ ಮುಖ ಚಹರೆ ಪತ್ತೆ ಹಾಗೂ ರೆಕಾರ್ಡಿಂಗ್‌ ತಂತ್ರಜ್ಞಾನ ಈಗಾಗಲೇ ಬಳಕೆಯಲ್ಲಿದೆ. ಎಲ್ಲರನ್ನೂ ಟ್ರ್ಯಾಕಿಂಗ್‌ ಮಾಡುವ ಈ ತಂತ್ರಜ್ಞಾನದಲ್ಲಿ ಸೆರೆಹಿಡಿದ ಸಿಸಿಟಿವಿ ಚಿತ್ರಗಳನ್ನು ನಿಲ್ದಾಣದ ದೊಡ್ಡ ಸ್ಕ್ರೀನ್‌ಗಳನ್ನು ಪ್ರದರ್ಶಿಸಲಾಗುತ್ತಿದ್ದು, ಇದರಿಂದ ಸಭ್ಯರು ಕೂಡ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಹಾಗಾಗಿ, ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಮುಖಚಹರೆ ಪತ್ತೆ ತಂತ್ರಜ್ಞಾನವು ನಿಷೇಧವಾಗುತ್ತಿದೆ ಎಂದು ತಿಳಿದುಬಂದಿದೆ.

ನಗರದಲ್ಲಿ ಅಳವಡಿಸಿರುವ ಮುಖಚಹರೆ ಪತ್ತೆ ತಂತ್ರಜ್ಞಾನ ಸಭ್ಯ ಶ್ರೀಸಾಮಾನ್ಯರನ್ನೂ ಸಹ ಕಳ್ಳನಂತೆ ಬಿಂಬಿಸುತ್ತಿರುವುದು ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದೆ. ಸಾಮಾನ್ಯನನ್ನೂ ಕಳ್ಳರಂತೆ ತೋರಿಸುತ್ತಿರುವ ಅದರಲ್ಲೂ ಕಪ್ಪು ಬಣ್ಣದ ಅಮೆರಿಕನ್ ಜನಾಂಗವು ಇದರಿಂದ ಸಮಸ್ಯೆಯನ್ನು ಎದುರಿಸಲ್ಪಟ್ಟಿರುವುದರಿಂದ ಮುಖಚಹರೆ ಪತ್ತೆ ತಂತ್ರಜ್ಞಾನವನ್ನು ನಿಷೇಧಿಸಬೇಕು ಎಂದು ಕೇಳಿಬಂದಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಸ್ಯಾನ್‌ಫ್ರಾನ್ಸಿಸ್ಕೋ ನಗರ ಆಡಳಿತ ಇಲಾಖೆ ಮುಂದಿನ ಕ್ರಮ ಕೈಗೊಳ್ಳಲು ಮುಂದಾಗಿದೆ.

'ನಗರದಲ್ಲಿ ಬಳಸಲಾಗುತ್ತಿದ್ದ ಮುಖಚಹರೆ ಪತ್ತೆ ತಂತ್ರಜ್ಞಾನ ಕ್ರಿಮಿನಲ್‌ಗಳನ್ನು ಹೆದರಿಸಲು ಮಾತ್ರ ಇದ್ದದ್ದು' ಎಂದು ಹೋರಾಟಗಾರರಿಗೆ ಸಮಜಾಯಿಷಿ ನೀಡಿರುವ ಸ್ಯಾನ್‌ಫ್ರಾನ್ಸಿಸ್ಕೋ ಆಡಳಿತ ಇಲಾಖೆ, ಮುಖಚಹರೆ ಪತ್ತೆ ತಂತ್ರಜ್ಞಾನವನ್ನು ಶೀಘ್ರವೇ ಹಿಂತೆಗೆದುಕೊಳ್ಳುವುದಾಗಿ ತಿಳಿಸಿದೆ. ಹಾಗೇನಾದರೂ ಆದಲ್ಲಿ ಅಮೆರಿಕದ ಸ್ಯಾನ್‌ ಫ್ರಾನ್ಸಿಸ್ಕೋ ಪಟ್ಟಣ, ಮುಖಚಹರೆ ಪತ್ತೆ ತಂತ್ರಜ್ಞಾನವನ್ನು ನಿಷೇಧಿಸುವ ವಿಶ್ವದ ಮೊದಲ ಪಟ್ಟಣ ಎನಿಸಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇನ್ನು ಇತ್ತೀಚಿಗಷ್ಟೇ ಚೀನಾದ ನಿಂಗ್​ಬೋನ ನಗರದಲ್ಲಿ ಒಂದೇ ರೂಮ್​ನಲ್ಲಿ ವಾಸವಿದ್ದ ರೂಮ್​ ಮೇಟ್ ಓರ್ವನ ಸ್ಕ್ರೀನ್ ಅನ್​ಲಾಕ್​ ಮಾಡಿ ಆತನ ವಿ ಚಾಟ್​ ಅಕೌಂಟ್​ನಿಂದ ತಮ್ಮ ಅಕೌಂಟ್​ಗೆ 10 ಸಾವಿರ ಯಾನ್​​ (ಸುಮಾರು 1 ಲಕ್ಷ ರೂಪಾಯಿ) ಟ್ರಾನ್ಸ್​ಫರ್ ಮಾಡಿಕೊಂಡ ಘಟನೆ ನಡೆದಿತ್ತು. ಈ ಪ್ರಕರಣದಲ್ಲಿ ಆತ ಕಣ್ಣು ಮಚ್ಚಿದ್ದರು ಸಹ ಸ್ಕ್ರೀನ್ ಲಾಕ್ ಓಪನ್ ಆಗಿದೆ ಎಂದು ಪೊಲೀಸರು ಹೇಳಿದ್ದರು. ಇದು ಇತ್ತೀಚಿನ ಮುಖಚಹರೆ ಪತ್ತೆ ತಂತ್ರಜ್ಞಾನದ ವೈಪಲ್ಯಗಳಲ್ಲಿ ಒಂದೆಂದು ಹೇಳಲಾಗಿತ್ತು.

ಓದಿರಿ: 'ಟಿಕ್ ಟಾಕ್' ಬಳಕೆದಾರರಿಗೆ ಮತ್ತೊಂದು ಬಿಗ್ ಶಾಕ್!!

   
 
ಹೆಲ್ತ್