Back
Home » ಆರೋಗ್ಯ
ನೋವು ನಿವಾರಣೆಗೆ ಗ್ರಾಸ್ಟನ್ ತಂತ್ರಜ್ಞಾನ ಬಳಸುವುದು ಹೇಗೆ ಗೊತ್ತೇ?
Boldsky | 23rd Apr, 2019 04:45 PM

ದೇಹದ ಯಾವುದೇ ಭಾಗದಲ್ಲಿಯಾದರೂ ನೋವು ಕಾಣಿಸಿಕೊಂಡರೆ ಅದನ್ನು ನಿವಾರಣೆ ಆಗುವ ತನಕ ತುಂಬಾ ಕಷ್ಟ ಸಹಿಸಬೇಕಾಗುತ್ತದೆ. ಆದರೆ ಕೆಲವೊಂದು ಸಲ ಸ್ನಾಯು ಹಾಗೂ ಗಂಟುಗಳಲ್ಲಿ ಕಾಣಿಸಿಕೊಳ್ಳುವ ನೋವು ತೀವ್ರ ರೀತಿಯಲ್ಲಿ ಕಾಡುವುದು. ಇದು ಒಂದು ಸಲ ನಿವಾರಣೆ ಆಗಿದೆ ಎಂದು ನಮಗನಿಸಿದರೂ ಮತ್ತೆ ಮತ್ತೆ ಅದು ನಮ್ಮನ್ನು ಕಾಡುತ್ತಲೇ ಇರುತ್ತದೆ.

ಯಾವುದೇ ಕೆಲಸ ಮಾಡುವಾಗ, ವ್ಯಾಯಾಮ ಮಾಡುವಾಗ ನೋವು ಮರಳಿ ಬರಬಹುದು. ಇಂತಹ ನೋವು ನಿವಾರಣೆ ಮಾಡಲು ಹಲವಾರು ರೀತಿಯ ಔಷಧಿಗಳನ್ನು ಬಳಸಿಕೊಂಡಿರ ಬಹುದು. ಆದರೆ ಈ ಲೇಖನದಲ್ಲಿ ನಾವು ನಿಮಗೆ ಹೇಳಲು ಹೊರಟಿರುವುದು ಗ್ರಾಸ್ಟನ್ ತಂತ್ರಜ್ಞಾನದ ಬಗ್ಗೆ. ಇದು ನೋವು ನಿವಾರಣೆಗೆ ತುಂಬಾ ಪರಿಣಾಮಕಾರಿಯಾಗಿರಲಿದೆ. ಈ ತಂತ್ರಜ್ಞಾನವು ಒಂದು ಸಾಧನವನ್ನು ಬಳಸಿಕೊಂಡು ನೋವಿಗೀಡಾಗಿ ರುವಂತಹ ಅಂಗಾಂಶಗಳನ್ನು ಪತ್ತೆ ಹಚ್ಚಲಿದೆ. ಇದನ್ನು ಥೆರಪಿಸ್ಟ್ ಗಳು ಚಿಕಿತ್ಸೆ ಮೂಲಕ ಸರಿಪಡಿಸ ಲಿರುವರು.

ಗಾಯಗಳು ಸಮಯ ಕಳೆದಂತೆ ತನ್ನಷ್ಟಕ್ಕೆ ಗುಣ ಹೊಂದುವುದು. ಅದಾಗ್ಯೂ, ಗುಣಮುಖವಾಗುವಂತಹ ಪ್ರಕ್ರಿಯೆಯು ಸರಿಯಾಗಿ ಆಗದೆ ಇರುವ ಪರಿಣಾಮವಾಗಿ ಕೆಲವೊಂದು ಅಂಗಾಂಶಗಳಲ್ಲಿ ಗಾಯಗಳು ಹಾಗೆ ಉಳಿದುಬಿಡುವುದು. ಇದರಿಂದಾಗಿ ಸ್ನಾಯುಗಳು ಸರಿಯಾಗಿ ಕಾರ್ಯನಿರ್ವಹಣೆ ಮಾಡಲು ಸಾಧ್ಯವಾಗದು. ಸ್ನಾಯುಗಳ ಚಲನಶೀಲತೆಯು ತುಂಬಾ ಕಡಿಮೆ ಇರುವ ಪರಿಣಾಮವಾಗಿ ಹೀಗೆ ಆಗಬಹುದು. ನೋವಿಗೆ ಮೂಲ ಕಾರಣ ಹುಡುಕದೆ ಇದ್ದರೆ ಆಗ ನೋವು ದ್ವಿಗುಣವಾಗಬಹುದು. ನೋವು ನಿವಾರಣೆ ಮಾಡಲು ಗ್ರಾಸ್ಟನ್ ತಂತ್ರಜ್ಞಾನವು ಯಾವ ರೀತಿಯಲ್ಲಿ ನೆರವಾಗಲಿದೆ ಎಂದು ತಿಳಿಯುವ....

ಗ್ರಾಸ್ಟನ್ ತಂತ್ರಜ್ಞಾನ

ಗ್ರಾಸ್ಟನ್ ತಂತ್ರವು ಪೆಟೆಂಟ್ ಮಾನದಂಡದ ರೂಪವಾಗಿದೆ. ಸ್ನಾಯುಗಳ ಅಂಟಿಕೊಳ್ಳುವಿಕೆ ಕಡಿಮೆ ಮಾಡಲು ಇಲ್ಲಿ ಸ್ಟೈನ್ ಲೆಸ್ ಸ್ಟೀಲ್ ನ ಸಾಧನಗಳನ್ನು ಬಲಸಿಕೊಳ್ಳಲಾಗುತ್ತದೆ. ಇದು ಗಾಯಗೊಂಡಿರುವ ಅಂಗಾಂಶ ಮತ್ತು ಬಿಗಿಯಾದ ಗಂಟನ್ನು ಗುರುತಿಸುವುದು. ತರಬೇತು ಪಡೆದ ಮತ್ತು ಕೌಶಲ್ಯವಿರುವಂತಹ ವೃತ್ತಪರರು ರೋಗಿಯ ಚರ್ಮದ ಮೇಲೆ ಈ ಸಾಧನಗಳನ್ನು ಬಳಸಿಕೊಂಡು ಗಂಟುಗಳು ಇರುವುದನ್ನು ಪತ್ತೆ ಮಾಡುವರು. ಇದರ ಬಳಿಕ ಈ ಸಾಧನಗಳನ್ನು ಬಲಸಿಕೊಂಡು ಸ್ನಾಯುಗಳ ಸೆಳೆತ ಕಡಿಮೆ ಮಾಡಬಹುದು ಮತ್ತು ನೋವನ್ನು ಕೂಡ ಕಡಿಮೆ ಮಾಡಬಹುದು ಮತ್ತು ಸಂಪೂರ್ಣ ಚಲನಶೀಲತೆ ಹಾಗೂ ಕಾರ್ಯಚಟುವಟಿಕೆಗೆ ಇದು ನೆರವಾಗುವುದು.

ಗ್ರಾಸ್ಟನ್ ತಂತ್ರವನ್ನು ಸಾಧನ ಸಂಬಂಧಿ ಮೃಧು ಅಂಗಾಂಶಗಳ ಚಲನಶೀಲತೆ ಎಂದು ಕೂಡ ಹೇಳಲಾಗುತ್ತದೆ. ಈ ತಂತ್ರವನ್ನು ಎಲ್ಲಾ ರೀತಿಯ ಮೃಧು ಅಂಗಾಂಶದ ಪರಿಸ್ಥಿತಿಗೆ ಬಳಸಿಕೊಳ್ಳಲಾಗುತ್ತದೆ(ದೀರ್ಘ, ತೀವ್ರ ಅಥವಾ ಶಸ್ತ್ರಚಿಕಿತ್ಸೆ ಬಳಿಕದ್ದು). ಈ ತಂತ್ರದಲ್ಲಿ ಸಾಧನವನ್ನು ಬಳಸಿಕೊಂಡು ತುಂಬಾ ಗಾಯವಾಗಿರುವ ಅಂಗಾಂಶಗಳ ಮೇಲೆ ಪ್ರಯೋಗ ಮಾಡಲಾಗುತ್ತದೆ. ಇದರಿಂದಾಗಿ ಅಲ್ಲಿ ಉರಿಯೂತವು ಸ್ಪಂದನೆ ನೀಡುವುದು.

ಜರ್ನಲ್ ಆಫ್ ಎಕ್ಸಸೈಸ್ ರಿಹ್ಯಾಬಿಲೇಷನ್ ನಲ್ಲಿ ಪ್ರಕಟಗೊಂಡಿರುಂತಹ ಒಂದು ವರದಿಯ ಪ್ರಕಾರ ಉರಿಯೂತವು ಶಮನಗೊಳಿಸುವ ಪ್ರಕ್ರಿಯೆಯನ್ನನು ಮರುಸ್ಥಾಪಿಸುವುದು ಮತ್ತು ಇದರಿಂದ ಗಾಯಗೊಂಡಿರುವಂತಹ ಅಂಗಾಂಶಗಳನ್ನು ಇದು ತೆಗೆಯುವುದು ಮತ್ತು ಸ್ನಾಯುಗಳು ತುಂಬಾ ಆರಾಮ ಪಡೆಯುವುದು. ಈ ತಂತ್ರಜ್ಞಾನವು ರಕ್ತ ಸಂಚಾರವನ್ನು ಹೆಚ್ಚಿಸುವುದು ಮತ್ತು ಗಾಯಗೊಂಡಿರುವ ಭಾಗಕ್ಕೆ ಪೋಷಕಾಂಶಗಳನ್ನು ತಲುಪಿಸುವುದು.

ಆದರೆ ಇದರಲ್ಲಿ ಗುಣಮುಖವಾಗುವ ಫಲಿತಾಂಶವು ರೋಗಿಯಿಂದ ರೋಗಿಗೆ ಭಿನ್ನವಾಗಿರುವುದು. ವಾರದಲ್ಲಿ ಎರಡು ಸಲ ಈ ತಂತ್ರವನ್ನು ಸುಮಾರು ನಾಲ್ಕರಿಂದ ಐದು ವಾರಗಳ ತನಕ ನೀಡಬೇಕು. ಅದಾಗ್ಯೂ, ದೀರ್ಘಕಾಲದ ನೋವಿದ್ದರೆ ಆಗ ಸಮಯದ ಮಿತಿ ಮತ್ತು ಚಿಕಿತ್ಸಾ ಅವಧಿ ಕೂಡ ಹೆಚ್ಚಾಗುವುದು. ಗ್ರಾಸ್ಟನ್ ತಂತ್ರದಲ್ಲಿ ಆರಂಭದಲ್ಲಿ ಕೆಲವೊಂದು ವ್ಯಾಯಾಮಗಳನ್ನು ಕೂಡ ಮಾಡಬೇಕಾಗುತ್ತದೆ. ತಂತ್ರಜ್ಞಾನದಲ್ಲಿ ಕೂಡ ಎಳೆಯುವ ಮತ್ತು ಬಲಗೊಳಿಸುವ ವ್ಯಾಯಮಗಳು ಇದೆ.

ಗ್ರಾಸ್ಟನ್ ತಂತ್ರಜ್ಞಾನದಿಂದ ಯಾವುದಕ್ಕೆ ಚಿಕಿತ್ಸೆ ನೀಡಬಹುದು

*ಗ್ರಾಸ್ಟನ್ ತಂತ್ರಜ್ಞಾನವಿಂದ ಈ ಎಲ್ಲಾ ಸಮಸ್ಯೆಗಳಿಗೆ ಚಿಕಿತ್ಸೆ ನೀಡಬಹುದು ಎಂದು ಸಾಬೀತು ಆಗಿದೆ.

*ಫೈಬ್ರೊಮ್ಯಾಲ್ಗಿಯ

*ಗರ್ಭಕಂಠದ ಉಳುಕು

*ಕಾರ್ಪಲ್ ಟನಲ್ ಸಿಂಡ್ರೋಮ್

*ಅಕಿಲ್ಸ್ ಟ್ರೆನೋನೋಸಿಸ್ / ಟೆಂಡೊನಿಟಿಸ್

*ಕೋಸ್ಟೊಕೊಂಡ್ರಿಟಿಸ್

*ಹಿಪ್ ಫ್ಲೆಕ್ಟರ್ ಸ್ಟ್ರೈನ್

*ಟೆನಿಸ್ ಮೊಣಕೈ

*ಸೊಂಟ ಉಳುಕು (ಬೆನ್ನುನೋವಿಗೆ)

*ಗಾಲ್ಫ್ ಮೊಣಕೈ

*ಪ್ಲಾಂಟರ್ ಫ್ಯಾಸಿಟಿಸ್ (ಕಾಲು ನೋವು)

*ಗಾಯದ ಅಂಗಾಂಶ

*ಶಿನ್ ಸ್ಪ್ಲಿಂಟ್

*ಟ್ರಿಗರ್ ಫಿಂಗರ್

*ಮಂಡಿ ನೋವು

*ಪೊಸ್ಟೆರಿಯರ್ ಟಿಬಿಯಾಲಿಸ್ ಟೆಂಡೊನಿಟಿಸ್

*ಭುಜದ ನೋವು

*ಸ್ತನಛೇದನ ಮತ್ತು ಸಿಸೇರಿಯನ್ ಗುರುತು

*ಗ್ರಾಸ್ಟನ್ ತಂತ್ರಜ್ಞಾನದ ಕೆಲವು ಆರೋಗ್ಯ ಲಾಭಗಳು

ಕಡಿಮೆ ಚಿಕಿತ್ಸೆ ಮತ್ತು ಬೇಗನೆ ಚೇತರಿಕೆ

ಗ್ರಾಸ್ಟನ್ ತಂತ್ರಜ್ಞಾನವಿಂದಾಗಿ ಚಿಕಿತ್ಸೆಯು ತುಂಬಾ ಕಡಿಮೆ ಇರುವುದು ಮತ್ತು ಪರಿಹಾರ ಕಂಡುಕೊಳ್ಳುವ ತನಕ ಇದನ್ನು ಬಳಸುವವರಿಗೆ ಇದು ಬೇಗನೆ ಶಮನ ನೀಡುವುದು. ನೋವು ಹಠಾತ್ ಆಗಿ ನಿವಾರಣೆ ಮಾಡುವ ಬದಲು ಈ ತಂತ್ರಜ್ಞಾನವು ನೋವಿನ ಮೂಲವನ್ನು ಹುಡುಕಿ ಅದಕ್ಕೆ ಚಿಕಿತ್ಸೆ ನೀಡುವುದು. 6-12 ಸಲ ನೀವು ಈ ಚಿಕಿತ್ಸೆಗೆ ಒಳಗಾದರೆ ಆಗ ನಿಮಗೆ ಪರಿಹಾರ ಕಂಡುಬರುವುದು. ಇಷ್ಟು ಚಿಕಿತ್ಸಾ ಅವಧಿಯಲ್ಲಿ ನಿಮಗೆ ಪರಿಹಾರ ಸಿಗದೆ ಇದ್ದರೆ ಆಗ ನಿಮ್ಮ ದೇಹವು ಇದಕ್ಕೆ ಹೊಂದಿಕೊಳ್ಳುವುದಿಲ್ಲವೆಂದು ಹೇಳಬಹುದು.

ನೋವು ನಿವಾರಕ ಬಳಕೆ ಮಾಡುವುದು ಕಡಿಮೆ ಆಗುವುದು

ಇದು ನೋವಿಗೆ ಮೂಲವನ್ನು ಕಂಡು ಹಿಡಿಯುವ ಕಾರಣದಿಂದಾಗಿ ಅದು ಹೆಚ್ಚು ನೋವು ನಿವಾರಕ ತೆಗೆದುಕೊಳ್ಳುವುದನ್ನು ಕಡಿಮೆ ಮಾಡಲಿದೆ. ನೋವು ನಿವಾರಕ ತೆಗೆದುಕೊಳ್ಳುವುದು ಇದಕ್ಕೆ ಪರಿಹಾರವಲ್ಲ ಮತ್ತು ಇದು ಕೇವಲ ತಾತ್ಕಾಲಿಕ ಪರಿಹಾರ ಮಾತ್ರ ನೀಡುವುದು ಮತ್ತು ಇದರಿಂದ ಹಲವಾರು ರೀತಿಯ ಅಡ್ಡಪರಿಣಾಮಗಳು ಕೂಡ ಇದೆ. ಗ್ರಾಸ್ಟನ್ ತಂತ್ರಜ್ಞಾನದಿಂದಾಗಿ ನೈಸರ್ಗಿಕವಾಗಿ ನೋವು ನಿವಾರಣೆ ಮಾಡಬಹುದು. ಈ ತಂತ್ರಜ್ಞಾನವು ಬಾಧಿತ ಜಾಗಕ್ಕೆ ರಕ್ತ ಸಂಚಾರವನ್ನು ಹೆಚ್ಚು ಮಾಡುವುದು ಮತ್ತು ಇದರಿಂದಾಗಿ ನೋವಿರುವ ಜಾಗದ ವಿಷ ಹಾಗೂ ಸತ್ತ ಕೋಶಗಳನ್ನು ತೆಗೆಯಲು ನೆರವಾಗುವುದು.

ದೀರ್ಘಕಾಲದ ನೋವಿನಿಂದ ನಿವಾರಣೆ ನೀಡುವುದು

ದೀರ್ಘಕಾಲದ ನೋವಿನ ಸಮಸ್ಯೆಗೆ ಇದು ಒಳ್ಳೆಯ ಪರಿಹಾರವಾಗಿದೆ. ನಯವಾದ ಅಂಗಾಂಶಗಳಿಗೆ ಆಗಿರುವ ಗಾಯದಿಂದಾಗಿ ದೀರ್ಘಾಕಾಲದ ಅಂಗಾಂಶದ ಚಲನಶೀಲತೆಗೆ ಸಮಸ್ಯೆ ಮತ್ತು ನೋವು ಕಾಣಿಸುವುದು. ಜರ್ನಲ್ ಆಫ್ ಸ್ಪೋರ್ಟ್ಸ್ ರಿಹ್ಯಾಬಿಲೇಷನ್ ನಲ್ಲಿ ಪ್ರಕಟಗೊಂಡಿರುವಂತಹ ಅಧ್ಯಯನ ವರದಿಯ ಪ್ರಕಾರ, ದೀರ್ಘಾಕಾಲ ಹಿಂಗಾಲಿನ ಚಲನಶೀಲತೆ ಸಮಸ್ಯೆ ಎದುರಿಸುತ್ತಿದ್ದ ಜನರಲ್ಲಿ ಚಲನಶೀಲತೆ ಮತ್ತು ನೋವಿನಲ್ಲಿ ದೊಡ್ಡ ಮಟ್ಟದಲ್ಲಿ ಸುಧಾರಣೆ ಕಂಡುಬಂದಿದೆ ಎಂದು ಹೇಳಿದೆ.

ಟ್ರಿಗರ್ ಫಿಂಗರ್ ನಿಂದ ಶಮನ

ಟ್ರಿಗರ್ ಫಿಂಗರ್ ಸಮಸ್ಯೆ ಎಂದರೆ ಬೆರಳುಗಳು ಅಥವಾ ಹೆಬ್ಬೆರಳನ್ನು ಬಗ್ಗಿಸಿದ ವೇಳೆ ಅದು ಅಲ್ಲೇ ಲಾಕ್ ಆಗುವುದು. ಇದು ಹೆಬ್ಬೆರಳಿನಲ್ಲಿ ಕಾಣಿಸಿಕೊಂಡರೆ, ಆಗ ಇದನ್ನು ಟ್ರಿಗರ್ ಥಮ್ ಎಂದು ಕರೆಯುವರು. ಇದು ತುಂಬಾ ನೋವಿನಿಂದ ಕೂಡಿರುವುದು ಮತ್ತು ಪದೇ ಪದೇ ಇದು ಕಂಡುಬರುವುದು ಅಥವಾ ಬಲವಂತವಾಗಿ ಬೆರಳನ್ನು ಉಪಯೋಗಿಸಿದ ವೇಳೆ, ಸಂಧಿವಾತ, ಮಧುಮೇಹದಿಂದ ಇದು ಬರುವುದು. ಅಧ್ಯಯನ ವರದಿಯೊಂದು ಹೇಳಿರುವ ಪ್ರಕಾರ ಈ ರೀತಿಯ ಸಮಸ್ಯೆ ಇರುವಂತಹ ರೋಗಿಗಳು ಗ್ರಾಸ್ಟನ್ ತಂತ್ರವನ್ನು ಬಳಸಿಕೊಂಡ ವೇಳೆ ಶಮನ ಕಂಡುಬಂದಿದೆ. ಇಲ್ಲಿ ಯಾವುದೇ ಸ್ಟಿರಾಯ್ಡ್ ಇಂಜೆಕ್ಷನ್ ಅಥವಾ ಶಸ್ತ್ರಚಿಕಿತ್ಸೆ ಬಳಸಲಾಗಿಲ್ಲ. ಗ್ರಾಸ್ಟನ್ ತಂತ್ರಜ್ಞಾನದಿಂಧಾಗಿ ಇದು ತುಂಬಾ ಸುಲಭ ಹಾಗೂ ವೇಗವಾಗಿ ಚೇತರಿಕೆಯಾಗಿದೆ.

ಸೊಂಟ ನೋವಿನಿಂದ ಪರಿಹಾರ

ಫಿಸಿಕಲ್ ಥೆರಪಿ ಸೈನ್ಸ್ ನಲ್ಲಿ ಪ್ರಕಟಗೊಂಡಿರುವಂತ ವರದಿಯ ಪ್ರಕಾರ, ಯಾವುದೇ ಕಾರಣವಿಲ್ಲದೆ ಕಾಣಿಸಿಕೊಳ್ಳುವ ಸೊಂಟ ನೋವಿನಿಂದ ಗ್ರಾಸ್ಟನ್ ತಂತ್ರವು ಪರಿಹಾರ ನೀಡಿದೆ. ಇದರಲ್ಲಿ ಭಾಗಿಯಾದ ಜನರಲ್ಲಿ ಈ ತಂತ್ರಜ್ಞಾನವನ್ನು ಬಳಸಿಕೊಂಡ ವೇಳೆ ಗಣನೀಯವಾಗಿ ನೋವಿನಲ್ಲಿ ನಿವಾರಣೆ ಕಂಡುಬಂದಿದೆ.

ಗ್ರಾಸ್ಟನ್ ತಂತ್ರಜ್ಞಾನ ಬಳಸಿಕೊಳ್ಳುವುದು ಹೇಗೆ

ಗ್ರಾಸ್ಟನ್ ತಂತ್ರಜ್ಞಾನದಲ್ಲಿ ಸ್ಟೈನ್ ಲೆಸ್ ಸ್ಟೀಲ್ ನಿಂದ ಮಾಡಿರುವಂತಹ ಸಾಧನವನ್ನು ತಜ್ಞರು ರೋಗಿಯ ದೇಹದಲ್ಲಿ ಚಲಾಯಿಸುವರು. ಇದರಿಂದ ಅವರಿಗೆ ಗಾಯಗೊಂಡಿರುವ ಭಾಗದ ಅಂಗಾಂಶಗಳು ಪತ್ತೆ ಆಗುವುದು. ದೇಹದ ಯಾವ ಭಾಗದಲ್ಲಿ ಸಮಸ್ಯೆ ಇದೆ ಎಂದು ಇದು ತಕ್ಷಣವೇ ಪತ್ತೆ ಮಾಡುವುದು. ಅಂಗಾಂಶವು ಕಾರ್ಯಚಟುವಟಿಕೆ ಮಾಡುವುದಿಲ್ಲ ಎಂದು ಅರಿತುಕೊಂಡ ಬಳಿಕ ಅದು ಗಾಯ ಗೊಂಡಿರುವಂತಹ ಅಂಗಾಂಶವನ್ನು ವಿಘಟಿಸುವುದು. ಆಗ ದೇಹವು ಅದನ್ನು ಹೀರಿಕೊಳ್ಳಲು ನೆರವಾಗುವುದು. ಈ ಪ್ರಕ್ರಿಯೆಯಲ್ಲಿ ಸಮಸ್ಯೆ ಇರುವಂತಹ ಅಂಗಾಂಶಗಳನ್ನು ಅದು ವಿಘಟಿಸುವುದು. ಇದರಿಂದಾಗಿ ಸರಿಯಾಗಿ ಸ್ನಾಯುಗಳನ್ನು ಎಳೆಯಲು ಮತ್ತು ಬಲಪಡಿಸಲು ಅದು ನೆರವಾಗುವುದು. ಕೆಲವೊಂದು ಸಲ ಗ್ರಾಸ್ಟನ್ ತಂತ್ರಜ್ಞಾನದೊಂದಿಗೆ ಬೇರೆ ರೀತಿಯ ಪರ್ಯಾಯ ಶಮನಕಾರಿ ತಂತ್ರಗಳಾಗಿರುವಂತಹ ಅಕ್ಯೂಪಂಕ್ಚರ್, ಡ್ರೈ ನೀಡಲಿಂಗ್ ಮತ್ತು ಸಕ್ರಿಯ ಬಿಡುಗಡೆ ತಂತ್ರವನ್ನು ಬಳಸಿಕೊಳ್ಳಲಾಗುತ್ತದೆ.

ಆಕ್ಟಿವ್ ರಿಲೀಸ್ ಟೆಕ್ನಿಕ್(ಎಆರ್ ಟಿ)

ಗ್ರಾಸ್ಟನ್ ತಂತ್ರಜ್ಞಾನವು ಹೆಚ್ಚಾಗಿ ಎಆರ್ ಟಿ ಯೊಂದಿಗೆ ಸಂಯೋಜಿಸಲಾಗುತ್ತದೆ. ಈ ವೇಳೆ ಎಆರ್ ಟಿಯು ಗಾಯಗೊಂಡಿರುವ ಅಂಗಾಂಶವನ್ನು ಪತ್ತೆ ಮಾಡಿ ಅದನ್ನು ವಿಘಟಿಸುವುದು ಮತ್ತು ಮೃಧು ಅಂಗಾಂಶಗಳಿಗೆ ಆಗಿರುವಂತಹ ಹಾನಿಯನ್ನು ತಡೆಯುವುದು. ಎಆರ್ ಟಿ ತಜ್ಞರು ಸಾಧನಗಳಿಗೆ ಬದಲಿಗೆ ತಮ್ಮ ಕೈಯನ್ನು ಬಳಸಿಕೊಳ್ಳುವರು. ರೋಗಿಯ ಕೆಲವೊಂದು ಚಲನೆಗಳ ಮೇಲೆ ಒತ್ತಡವನ್ನು ಹಾಕುವ ಮೂಲಕವಾಗಿ ಈ ಅಂಗಾಂಶಗಳಿಗೆ ಚಿಕಿತ್ಸೆ ನೀಡಲಾಗುತ್ತದೆ.

ಡ್ರೈ ನೀಡ್ಲಿಂಗ್

ಇದು ತುಂಬಾ ತೆಳು ಸೂಜಿಯಾಗಿದ್ದು, ಅದನ್ನು ಚರ್ಮದೊಳಗೆ ಚುಚ್ಚಲಾಗುತ್ತದೆ. ಇದು ಟ್ರಿಗರ್ ಪಾಯಿಂಟ್ ನ್ನು ಉತ್ತೇಜಿಸಲು ಮಾಡಲಾಗುತ್ತದೆ. ಡ್ರೈ ನೀಡ್ಲಿಂಗ್ ಸ್ನಾಯುಗಳು ಬಿಗಿಯಾಗಿರುವುದನ್ನು ಬಿಡುಗಡೆ ಮಾಡುವುದು.

ಅಕ್ಯುಪಂಕ್ಚರ್

ಇದಕ್ಕೆ ಸೂಜಿ ಮತ್ತು ಕೆಲವೊಂದು ಸಾಧನಗಳು ಬೇಕಾಗುತ್ತದೆ. ಇದರಲ್ಲಿ ಪರಿಣತಿ ಪಡೆದಿರುವಂತಹ ತಂತ್ರಜ್ಞರು ದೇಹದ ನೋವಿನ ಭಾಗಕ್ಕೆ ಅನುಗುಣವಾಗಿ ಒಂದು ಕೇಂದ್ರದಲ್ಲಿ ಸೂಜಿಯನ್ನು ಚುಚ್ಚಿ ನೋವು ಕಡಿಮೆ ಮಾಡುವರು.

ಮುನ್ನೆಚ್ಚರಿಕೆಗಳು

ಪ್ರಮಾಣೀಕೃತ ವೃತ್ತಿಪರರಿಂದಲೇ ನೀವು ಇದಕ್ಕೆ ಚಿಕಿತ್ಸೆ ಪಡೆದುಕೊಳ್ಳಬೇಕು. ಪರಿಣತ ತಂತ್ರಜ್ಞರಿಂದ ಚಿಕಿತ್ಸೆ ಪಡೆದರೆ ಆಗ ನೀವು ತುಂಬಾ ಸುರಕ್ಷಿತವಾಗಿ ಇರುವಿರಿ. ಚಿಕಿತ್ಸೆ ವೇಳೆ ನಿಮಗೆ ಸ್ವಲ್ಪ ಮಟ್ಟಿನ ಅಸ್ವಸ್ಥತೆ ಕಾಣಿಸಬಹುದು. ಕೆಲವೊಂದು ಸಲ ಚಿಕಿತ್ಸೆ ಬಳಿಕ ಊತವು ಕಾಣಿಸಿಕೊಳ್ಳುವ ಸಾಧ್ಯತೆಗಳು ಇರುವುದು.ನಿಮಗೆ ಚಿಕಿತ್ಸೆ ವೇಳೆ ತೀವ್ರ ರೀತಿಯ ನೋವು ಕಾಣಿಸಿಕೊಂಡರೆ ಆಗ ನೀವು ತಕ್ಷಣವೇ ಹೇಳಿಬಿಡಿ. ಯಾಕೆಂದರೆ ಗ್ರಾಸ್ಟನ್ ತಂತ್ರಜ್ಞಾನವನ್ನು ಬಳಸಿಕೊಳ್ಳುವಾಗ ತೀವ್ರ ನೋವು ಕಾಣಿಸುವುದಿಲ್ಲ. ನಿಮ್ಮ ಸಹನೆಗೆ ಅನುಗುಣವಾಗಿ ಪರಿಣತ ತಂತ್ರಜ್ಞರು ಗ್ರಾಸ್ಟನ್ ತಂತ್ರವನ್ನು ತುಂಬಾ ನಿಧಾನವಾಗಿ ಬಳಿಕ ವೇಗವನ್ನು ಹೆಚ್ಚಿಸಿಕೊಳ್ಳಬಹುದು.

 
ಹೆಲ್ತ್