Back
Home » ಇತ್ತೀಚಿನ
32MP ಸೆಲ್ಫಿ ಕ್ಯಾಮೆರಾದ 'ರೆಡ್ಮಿ Y3' ಫೋನ್ ಇಂದು ರಿಲೀಸ್!
Gizbot | 24th Apr, 2019 03:42 PM
 • ಡಿಸ್‌ಪ್ಲೇ ಹೇಗಿದೆ?

  720 x 1520 ಪಿಕ್ಸಲ್‌ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 6 ಇಂಚಿನ ಎಚ್‌ಡಿ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಅಂಚುರಹಿತ ಡಿಸ್‌ಪ್ಲೇಯನ್ನು ಹೊಂದಿರಲಿದ್ದು, ವಾಟರ್‌ಡ್ರಾಪ್‌ ನಾಚ್‌ ಸಹ ಇರಲಿದೆ. ಡಿಸ್‌ಪ್ಲೇ ಮತ್ತು ಬಾಹ್ಯ ಬಾಡಿಯ ನಡುವಿನ ಅನುಪಾತವು 19:9 ಆಗಿದೆ. ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆ 280 ppi ಆಗಿದೆ.


 • ಪ್ರೊಸೆಸರ್ ಯಾವುದು?

  'ರೆಡ್ಮಿ Y3' ಸ್ಮಾರ್ಟ್‌ಫೋನ್ ಕ್ವಾಲ್ಕಂ ಚಿಪ್‌ ಸೆಟ್ಟಿನೊಂದಿಗೆ, ಆಕ್ಟಾಕೋರ್ ಸ್ನ್ಯಾಪ್‌ಡ್ರಾಗನ್ 660 ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದ್ದು, ಅಂಡ್ರಿನೊ 512 ಗ್ರಾಫಿಕ್ಸ್ ಇರಲಿರುವ ಈ ಸ್ಮಾರ್ಟ್‌ಪೋನ್ 3 GB RAM ಮತ್ತು 32GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಒಳಗೊಂಡಿರುವ ಮಾದರಿಯಾಗಿದ್ದು, ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿಯನ್ನು ವಿಸ್ತರಿಸಬಹುದು.


 • ಕ್ಯಾಮೆರಾ ಸಾಮರ್ಥ್ಯ

  'ರೆಡ್ಮಿ Y3' ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ಇದ್ದು, ಪ್ರಾಥಮಿಕ ಕ್ಯಾಮೆರಾವು 12 ಎಂಪಿ ಮತ್ತು ಸೆಕೆಂಡರಿ ಕ್ಯಾಮೆರಾವು 5 ಎಂಪಿ ಸಾಮರ್ಥ್ಯದಲ್ಲಿ ಇರಲಿವೆ ಎಂದು ತಿಳಿದುಬಂದಿದೆ. ಎಲ್‌ಇಡಿ ಫ್ಲ್ಯಾಶ್ ಸಹ ಒದಗಿಸಲಾಗಿದ್ದು, ಇಮೇಜ್ ಪಿಕ್ಸಲ್ ರೆಸಲ್ಯೂಶನ್ 4000 x 3000 ಆಗಿರಲಿದೆ. ಆದರೆ, ಇದಕ್ಕಿಂತಲೂ ಸೆಲ್ಫೀ ಕ್ಯಾಮೆರಾ ಉತ್ತಮವಾಗಿದೆ.


 • 32 ಎಂಪಿ ಸೆಲ್ಫಿ

  ಶಿಯೋಮಿ ತನ್ನ 'Y' ಸರಣಿಯಲ್ಲಿ ಹೊರತರುವ ಸ್ಮಾರ್ಟ್‌ಫೋನ್‌ಗಳಲ್ಲಿ ಸೆಲ್ಫಿಗೆ ಹೆಚ್ಚಿನ ಒತ್ತು ನೀಡುತ್ತದೆ. ಶಿಯೋಮಿ ಕಂಪನಿಯು ಇದೀಗ ಸೆಲ್ಫಿ ಕ್ಯಾಮೆರಾದತ್ತ ಹೆಚ್ಚಿನ ಒಲವು ಹರಿಸಿರುವುದರಿಂದ ಈ ಸ್ಮಾರ್ಟ್‌ಫೋನಿನ ಮುಖ್ಯ ಆಕರ್ಷಣೆ ಸೆಲ್ಫಿ ಕ್ಯಾಮೆರಾ ಆಗಿದೆ. 32 ಎಂಪಿ ಸಾಮರ್ಥ್ಯದಲ್ಲಿ ಸೆಲ್ಫಿ ಫೋಟೊಗಳು ಮೂಡಿಬರಲು ಈ ಫೋನ್ ಬೆಂಬಲಿಸಲಿದೆ.


 • ಬ್ಯಾಟರಿ ಶಕ್ತಿ

  ಶಿಯೋಮಿ Y3 ಸ್ಮಾರ್ಟ್‌ಫೋನ್ 3300mAh ಸಾಮರ್ಥ್ಯದ ಬ್ಯಾಟರಿಯನ್ನು ಒದಗಿಸಲಾಗಿದ್ದು, ಸುಮಾರು ಒಂದು ದಿನದವರೆಗೂ ಬಾಳಿಕೆ ಬರುವ ಶಕ್ತಿಯನ್ನು ಬ್ಯಾಟರಿಯು ಹೊಂದಿರಲಿದೆ. ಇನ್ನು ಫಾಸ್ಟ್ ಚಾರ್ಜರ್‌ ತಂತ್ರಜ್ಞಾನ ಸೌಲಭ್ಯವನ್ನು ನೀಡಿರುವ ಬಗ್ಗೆ ಮಾಹಿತಿ ಇಲ್ಲವಾದರೂ, ಶಿಯೋಮಿ Y3 ಸ್ಮಾರ್ಟ್‌ಫೋನ್ ಉತ್ತಮ ಬ್ಯಾಟರಿ ಶಕ್ತಿಯನ್ನು ಹೊಂದಿರುವುದನ್ನು ನೋಡಬಹುದು.


 • ಬೆಲೆ ಎಷ್ಟಿರಬಹುದು?

  ಶಿಯೋಮಿ ಕಂಪೆನಿ ಇಂದು 12 ಗಂಟೆಗೆ ರೆಡ್‌ಮಿ Y3 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಿದ್ದು, ಮಿ ವೆಬ್‌ಸೈಟ್‌ನಲ್ಲಿ ನೀವು 'ನೋಟಿಫ್ ಮಿ' ಗುಂಡಿಯನ್ನು ಒತ್ತಿ ಈ ಬಗ್ಗೆ ಮಾಹಿತಿ ತಿಳಿಯಬಹುದು. ಮಿಡ್.ಕಾಂ, ಮಿ ಹೋಮ್ ಮತ್ತು ಅಮೆಜಾನ್ ಇಂಡಿಯಾದಲ್ಲಿ ಲಭ್ಯವಾಗುವ ಈ ಸ್ಮಾರ್ಟ್‌ಫೋನ್ 8,000ಕ್ಕಿಂತ ಕಡಿಮೆ ಬೆಲೆಯನ್ನು ಹೊಂದಬಹುದು ಎಂದು ಹೇಳಲಾಗಿದೆ.
ಸೆಲ್ಫೀ ಪ್ರಿಯರಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿರುವ ಶಿಯೋಮಿಯ ಮತ್ತೊಂದು ಬಜೆಟ್ ಸ್ಮಾರ್ಟ್‌ಫೋನ್ 'ರೆಡ್ಮಿ Y3' ಇಂದು ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ಇತ್ತೀಚಿಗೆ ಬಿಡುಗಡೆ ಕಂಡಿರುವ 'ರೆಡ್ಮಿ ನೋಟ್ 7' ಮತ್ತು ' ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನ್‌ಗಳು ಭರ್ಜರಿ ಯಶಸ್ಸನ್ನು ಕಂಡ ನಂತರ, ಇದೀಗ ಶಿಯೋಮಿ ಕಂಪನಿ ಮತ್ತೊಂದು ಅಗ್ಗದ ಹೊಸ ಸ್ಮಾರ್ಟ್‌ಫೋನ್‌ ರಿಲೀಸ್‌ಗೆ ಸಜ್ಜಾಗಿದೆ. ಹಾಗಾಗಿ, 'ರೆಡ್ಮಿ Y3' ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಭಾರಿ ನಿರೀಕ್ಷೆಗಳನ್ನು ಹುಟ್ಟಿಸಿದೆ.

ಹೌದು, ಶಿಯೋಮಿ ಕಂಪನಿಯ ಹೊಸ ಸುದ್ದಿ ಬಂದರೆ ಅದರಲ್ಲೆನೋ ಅಚ್ಚರಿ ಕಾದಿದೆ ಎನ್ನುವಷ್ಟು ಕುತೂಹಲವನ್ನು ಕಂಪನಿಯು ಗ್ರಾಹಕರಲ್ಲಿ ಮೂಡಿಸಿಸುತ್ತದೆ. ಅದರಲ್ಲೂ ಶಿಯೋಮಿ ತನ್ನ 'Y' ಸರಣಿಯಲ್ಲಿ ಹೊರತರುವ ಸ್ಮಾರ್ಟ್‌ಫೋನ್‌ಗಳಲ್ಲಿ ಸೆಲ್ಫಿಗೆ ಹೆಚ್ಚಿನ ಒತ್ತು ನೀಡುವುದರಿಂದ ಈ ಬಾರಿ ಸೆಲ್ಫೀ ಪ್ರಿಯರಲ್ಲಿ ಭಾರೀ ನಿರೀಕ್ಷೆ ಹೆಚ್ಚಾಗಿದೆ. ಇನ್ನು ಈ ಕುರಿತು ಶಿಯೋಮಿ ಕಂಪನಿಯ ಭಾರತದ ಮುಖ್ಯಸ್ಥ 'ಮನು ಕುಮಾರ ಜೈನ್' ಅವರು ಕ್ಲಿಕ್ಕಿಸಿ ಟ್ವಿಟ್ಟ್ ಮಾಡಿರುವ ಸೆಲ್ಫೀಯಂತೂ ಎಲ್ಲರ ಗಮನಸೆಳೆದಿದೆ.

ಹಾಗಾಗಿ, ಶಿಯೋಮಿ ಕಂಪನಿಯು ಆಫೀಶಿಯಲ್ ಆಗಿ ಇಂದು ಲಾಂಚ್ ಮಾಡುತ್ತಿರುವ 'ರೆಡ್ಮಿ Y3' ಸ್ಮಾರ್ಟ್‌ಫೋನ್ ಹೆಚ್ಚು ಗಮನಸೆಳೆಯುತ್ತಿದೆ ಎಂದು ಹೇಳಬಹುದು. ಹಾಗಾದರೆ, ಮಾರುಕಟ್ಟೆಗೆ ಬಿಡುಗಡೆ ಮಾಡಲುತುದಿಗಾಲಿನಲ್ಲಿ ನಿಂತಿರುವ 32ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮೆರಾ ಸಾಮರ್ಥ್ಯದ 'ರೆಡ್ಮಿ Y3' ಸ್ಮಾರ್ಟ್‌ಫೋನ್‌ ಹೇಗಿದೆ? ಸ್ಮಾರ್ಟ್‌ಫೋನ್ ಇತರೆ ಏನೆಲ್ಲಾ ಫೀಚರ್ಸ್‌ಗಳನ್ನು ಹೊಂದಿರಲಿದೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

   
 
ಹೆಲ್ತ್