Back
Home » ಆರೋಗ್ಯ
ಇಂತಹ ಆಯುರ್ವೇದ ಗಿಡಮೂಲಿಕೆಗಳನ್ನು ಬಳಸಿ ಬೇಸಿಗೆಯ ಬಿಸಿಯನ್ನು ತಣಿಸಿ
Boldsky | 24th Apr, 2019 03:45 PM
 • ಸೂರ್ಯನ ಬಿಸಿ

  ಸೂರ್ಯನ ಬಿಸಿ ಹೆಚ್ಚಾಗಿರುವುದರಿಂದ ಜೀವಿಗಳಿಗೆ ವಿವಿಧ ಆರೋಗ್ಯ ಸಮಸ್ಯೆ ಉಂಟಾಗುವುದು. ಅದರಲ್ಲೂ ನವಜಾತ ಶಿಶುಗಳಿಗೆ, ವೃದ್ಧರಿಗೆ ಅತಿಯಾದ ಆಯಾಸ, ಅನಾರೋಗ್ಯ ಮತ್ತು ಕಿರಿಕಿರಿ ಉಂಟಾಗುವುದು. ಇಂತಹ ಸಮಸ್ಯೆಗಳ ನಿವಾರಣೆಗಾಗಿಯೇ ಪ್ರಕೃತಿಯಲ್ಲಿ ವಿವಿಧ ಬಗೆಯ ಆರೋಗ್ಯಕರವಾದ ಗಿಡಮೂಲಿಕೆಗಳಿರುತ್ತವೆ. ಅವು ಬೇಸಿಗಯಲ್ಲಿ ಉಂಟಾಗುವ ಅನೇಕ ಸಮಸ್ಯೆಗಳನ್ನು ಬಲು ಸುಲಭವಾಗಿ ನಿವಾರಿಸುತ್ತವೆ. ಯಾವ ಆಯುರ್ವೇದದ ಉತ್ಪನ್ನ ಅಥವಾ ಗಿಡಮೂಲಿಕೆಯು ಹೆಚ್ಚು ಉಪಶಮನ ನೀಡುತ್ತದೆ ಎನ್ನುವುದರ ಕುರಿತು ಮಾಹಿತಿಯನ್ನು ಹೊಂದಿರಬೇಕಾಗುತ್ತದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಸೂರ್ಯನ ಕಿರಣ ಪ್ರಕಾಶಮಾನವಾಗಿರುತ್ತದೆ. ತೀಕ್ಷ್ಣವಾದ ಪರಿಸರವನ್ನು ಹೊಂದಿರುವುದರಿಂದ ಮಕ್ಕಳಿಂದ ಹಿಡಿದು ವಸೃದ್ಧರ ವರೆಗೂ ಸಾಕಷ್ಟು ಬಳಲಿಕೆ ಉಂಟಾಗುವುದು. ಅದರಲ್ಲಿ ಅತಿಯಾಗಿ ಬೆವರುವುದು, ದೇಹದಲ್ಲಿ ನಿರ್ಜಲೀಕರಣ ಉಂಟಾಗುವುದು, ಅತಿಸಾರ, ಉಷ್ಣತೆ, ಉರಿಯೂತ, ತಲೆ ಸುತ್ತು, ಚರ್ಮದ ಮೇಲೆ ನೀರಿನ ಗುಳ್ಳೆ, ಮೂತ್ರದ ಸಮಸ್ಯೆ, ಅಜೀರ್ಣ, ವಾಂತಿ, ಪಿತ್ತ ಸೇರಿದಂತೆ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಅವುಗಳನ್ನು ನಿಯಂತ್ರಿಸುವ ಹಾಗೂ ಆರೈಕೆಯ ಕ್ರಮ ಕೈಗೊಳ್ಳುವುದರ ಮೂಲಕ ಒಂದಿಷ್ಟು ಅಮೂಲ್ಯ ಸಮಯಗಳು ಅನಿವಾರ್ಯ ರೂಪದಲ್ಲಿ ಹಾಳಾಗುತ್ತವೆ.


 • ಅದ್ಭುತ ಶಕ್ತಿಯ ಗಿಡಮೂಲಿಕೆಗಳು

  ನಿಜ, ಕೆಲವು ಅದ್ಭುತ ಶಕ್ತಿಯನ್ನು ಹೊಂದಿರುವ ಗಿಡಮೂಲಿಕೆಗಳು ಬಹು ಆರೈಕೆ ಹಾಗೂ ಆರಾಮದಾಯಕ ಅನುಭವವನ್ನು ನೀಡುತ್ತವೆ. ಅಂತಹ ಆಯುರ್ವೇದ ಉತ್ಪನ್ನಗಳಲ್ಲಿ ಒಂದೆಲಗ, ಮಂಜಿಷ್ಟ, ತುಳಸಿ, ನೆಲ್ಲಿ ಮತ್ತು ಅಶ್ವಗಂಧವೂ ಒಂದು. ಇವುಗಳ ಸೂಕ್ತ ಬಳಕೆಯಿಂದ ಬೇಸಿಗೆಯ ಉರಿಯನ್ನು ನಿಯಂತ್ರಿಸಬಹುದು. ನೀವು ಸಹ ಈ ಬೇಸಿಗೆಯಲ್ಲಿ ದಗೆಯಿಂದ ಬಳಲಿದ್ದೀರಿ, ಅದರಿಂದ ಪಾರಾಗಬೇಕು ಮತ್ತು ಒಂದಿಷ್ಟು ಆರೈಕೆಗೆ ಒಳಗಾಗಬೇಕು ಎನ್ನುವ ಆತುರ ಹಾಗೂ ಆಶಯವನ್ನು ಹೊಂದಿದ್ದರೆ ಗಿಡಮೂಲಿಕೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಪರಿಶೀಲಿಸಿ. ಅವು ಈ ಬೇಸಿಗೆಯಲ್ಲಿ ನಿಮಗೆ ಒಂದಿಷ್ಟು ಉತ್ತಮ ಅನುಭವಗಳನ್ನು ನೀಡುವುದರ ಮೂಲಕ ಹೆಚ್ಚಿನ ಆರೈಕೆ ಮಾಡುವುದು


 • ಒಂದೆಲಗ ಅಥವಾ ಬ್ರಾಹ್ಮಿ

  ಸಾಮಾನ್ಯವಾಗಿ ಒಂದೆಲಗ ಅಥವಾ ಬ್ರಾಹ್ಮಿ ಎಂದು ಕರೆಯುವ ಈ ಗಿಡಮೂಲಿಕೆಯು ಆಯುರ್ವೇದದಲ್ಲಿ ಮಹತ್ತರವಾದ ಪಾತ್ರವನ್ನು ಪಡೆದುಕೊಂಡಿದೆ. ದಿವ್ಯ ಔಷಧ ಎಂದು ಕರೆಸಿಕೊಳ್ಳುವ ಈ ಉತ್ಪನ್ನವು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಸಸ್ಯ. ಇದನ್ನು ಬ್ರಾಕೋಮಿ, ಮನ್ನಿರಿ ಎಂದು ಸಹ ಕರೆಯುತ್ತಾರೆ. ಇದು ಭಾರತಕ್ಕೆ ಸಾಂಪ್ರದಾಯಿಕ ಚಿಕಿತ್ಸಕ ಮೂಲಿಕೆಯಾಗಿದೆ. ಈ ಮೂಲಿಕೆಗಳನ್ನು ಸಾಮಾನ್ಯವಾಗಿ ಮೆಮೊರಿ ವರ್ಧಕ, ಕಾಮೋತ್ತೇಜಕ ಮತ್ತು ಆಯುರ್ವೇದದಲ್ಲಿ ಸಾಮಾನ್ಯ ಟಾನಿಕ್ ಆಗಿ ಬಳಸಲಾಗುತ್ತದೆ. ಇದು ಮನಸ್ಸನ್ನು ಶಾಂತಗೊಳಿಸಲು ಮತ್ತು ಆತಂಕವನ್ನು ಉಂಟುಮಾಡುವ ಪ್ರವೃತ್ತಿಯನ್ನು ಹೊಂದಿದೆ. ಇದು ಅರಿವಿನ ಕಾರ್ಯಕ್ಷಮತೆಯನ್ನು ಪರಿಣಾಮ ಬೀರುತ್ತದೆ ಮತ್ತು ಕಲಿಕೆ ಹೆಚ್ಚಿಸುತ್ತದೆ. ಹೊಸ ನರ ಸಂಪರ್ಕಗಳನ್ನು ರೂಪಿಸುತ್ತದೆ ಮತ್ತು ಅವಶ್ಯಕ ನರಸಂವಾಹಕ ಮಟ್ಟವನ್ನು ಸಮತೋಲನಗೊಳಿಸುತ್ತದೆ.


 • ಒಂದೆಲಗ ಅಥವಾ ಬ್ರಾಹ್ಮಿ

  ಕೆಮ್ಮು, ಉಸಿರಾಟದ ತೊಂದರೆ ಇರುವವರಿಗೆ ಇದರ ರಸವನ್ನು ಜೇನು ತುಪ್ಪದೊಂದಿಗೆ ಬೆರೆಸಿ ಸೇವಿಸುತ್ತಾರೆ.ಒಂದೆಲಗ ಸೇವನೆ ದೇಹಕ್ಕೆ, ಮನಸ್ಸಿಗೆ ತಂಪು ತರುವುದು ಮಾತ್ರವಲ್ಲದೆ ಸ್ಮರಣಶಕ್ತಿಯನ್ನೂ ವರ್ಧಿಸುತ್ತದೆ ಎಂಬ ನಂಬಿಕೆಯಿದೆ.ಇದು ನಿತ್ಯ ತಿಂದರೆ ಬುದ್ಧಿ ಚುರುಕಾಗುತ್ತದೆ. ಮಕ್ಕಳಿಗೆ ಬೆಳಗ್ಗೆ ಇದರ ಎರಡೆರಡು ಎಲೆಗಳನ್ನು ತಿನ್ನಲು ಕೊಡುವುದರಿಂದ ಮಕ್ಕಳ ಜ್ಞಾಪಕಶಕ್ತಿ ಹೆಚ್ಚುತ್ತದೆ. ದಿನಕ್ಕೆ 4 -5 ಎಲೆ ಸೇವಿಸುವುದರಿಂದ ಮಾತಿನ ಉಗ್ಗುವಿಕೆ ಇಲ್ಲವಾಗುವುದು.ಮಲ ಬದ್ದತೆಯಿಂದ ಬಳಲುವವರು ಒಂದೆಲಗದ ಸೊಪ್ಪಿನಿಂದ ತಯಾರಿಸಿದ ಪಲ್ಯ ಅಥವಾ ಚಟ್ನಿ ಸೇವಿಸುತ್ತಾರೆ. ಆಯುರ್ವೇದದಲ್ಲಿ ಬ್ರಾಹ್ಮಿಯನ್ನು ಮಕ್ಕಳು ಮತ್ತು ವೃದ್ಧರು ಹೀಗೆ ಎರಡೂ ವರ್ಗದವರ ಚಿಕಿತ್ಸೆಗೆ ಬಳಸುತ್ತಾರೆ. ಮಕ್ಕಳಲ್ಲಿ ಸ್ಮರಣಶಕ್ತಿಯ ವೃದ್ಧಿ ಮತ್ತು ಮಗುವಿನ ನರತಂತು ದೋಷಗಳ ನಿವಾರಣೆಗೆ ಬ್ರಾಹ್ಮಿಯನ್ನು ಬಳಸುತ್ತಾರೆ. ಹಿರಿಯರಲ್ಲಿ ನರ ಮತ್ತು ಮೆದುಳಿನ ವಿಶೀರ್ಣ ರೋಗಗಳಾದ ಡೀಮೆನ್ಷಿಯ, ಪಾರ್ಕಿನ್ಸನ್ಸ್, ಅಲ್ಜೈಮರ್ ಇತ್ಯಾದಿ ಕಾಯಿಲೆಗಳಿಗೆ ಬ್ರಾಹ್ಮಿಯನ್ನು ಉಪಯೋಗಿಸುತ್ತಾರೆ. ವೈದ್ಯರು ಬ್ರಾಹ್ಮಿಯನ್ನು ಹಲವಾರು ರೂಪದಲ್ಲಿ ಬಳಸುತ್ತಾರೆ: ಬ್ರಾಹ್ಮಿ ಸ್ವರದ, ಬ್ರಾಹ್ಮಿ ಚೂರ್ಣ, ಬ್ರಾಹ್ಮಿ ವಟಿ, ಬ್ರಾಹ್ಮಿ ಘೃತ ಇತ್ಯಾದಿ. ದಿನನಿತ್ಯದ ಆಹಾರದಲ್ಲಿ ಬ್ರಾಹ್ಮಿಯನ್ನು ಹಲವು ಬಗೆಯ ತಿನಿಸುಗಳ ರೂಪದಲ್ಲಿ ಬಳಸಬಹುದು

  Most Read: ಬೇಸಿಗೆಯಲ್ಲಿ ದೇಹದ ಅಧಿಕ ಉಷ್ಣತೆಯನ್ನು ತಗ್ಗಿಸಿಕೊಳ್ಳುವುದು ಹೇಗೆ?


 • ಮಂಜಿಸ್ತಾ

  ರೂಬಿಯಾ ಕಾರ್ಡಿಫೋಲಿಯಾ ಎಂದೂ ಕರೆಯಲ್ಪಡುವ ಮಂಜಿಸ್ಥಾವು, ರಕ್ತದ ಮೇಲೆ ಅದರ ತಂಪಾಗಿಸುವ ಪರಿಣಾಮ ಮತ್ತು ದೇಹದಿಂದ ಜೀವಾಣು ವಿಷವನ್ನು ತೆಗೆದುಹಾಕುವಲ್ಲಿ ಪರಿಚಿತವಾಗಿರುವ ಅತ್ಯಂತ ಅಮೂಲ್ಯವಾದ ಆಯುರ್ವೇದ ಮೂಲಿಕೆಯಾಗಿದೆ. ಈ ಮೂಲಿಕೆಯು ಕಹಿಯಾದ ಸಂಕೋಚಕವಾಗಿದ್ದರೂ ಅದರ ಸುದೀರ್ಘ ಪ್ರಯೋಜನಗಳ ಮತ್ತು ಉಪಯೋಗಗಳಿಗೆ ಹೆಸರುವಾಸಿಯಾಗಿದೆ. ಇದು ಪ್ರಬಲ ಉತ್ಕರ್ಷಣ ನಿರೋಧಕ, ವಿರೋಧಿ ಉರಿಯೂತ ಮತ್ತು ಸೂಕ್ಷ್ಮಜೀವಿ ವಿರೋಧಿಯಾಗಿದೆ.


 • ತುಳಸಿ

  ಹೋಲಿ ಬೆಸಿಲ್ ಎಂದೂ ಕರೆಯಲ್ಪಡುವ ತುಳಸಿ, ಮಾನವ ದೇಹದಲ್ಲಿ ನಿರ್ವಿಷೀಕರಣ ಮತ್ತು ಶುದ್ಧೀಕರಣ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು 3000 ವರ್ಷಗಳ ಹಿಂದಿನದು ಮತ್ತು ಐತಿಹಾಸಿಕವಾಗಿ ಅದರ ವ್ಯಾಪಕವಾದ ಚಿಕಿತ್ಸಕ ಶಕ್ತಿಯಿಂದ ಔಷಧವಾಗಿ ಬಳಸಲ್ಪಡುತ್ತದೆ. ತೀವ್ರ ಶಾಖದ ಸಮಯದಲ್ಲಿ ಇದು ದೇಹವನ್ನು ತಣ್ಣಗಾಗಿಸುತ್ತದೆ ಮತ್ತು ನಿಯಮಿತವಾಗಿ ಗಿಡಮೂಲಿಕೆ ಚಹಾವಾಗಿ ಹೆಚ್ಚಾಗಿ ಬಳಸಲಾಗುತ್ತದೆ. ವಿಶ್ವಾದ್ಯಂತ ಅದರ ಒತ್ತಡ-ವಿರೋಧಿ ಗುಣಲಕ್ಷಣಗಳಿಗೂ ಇದು ಹೆಸರುವಾಸಿಯಾಗಿದೆ. ತುಳಸಿಯ ಬಳಕೆಯಿಂದ ಅನೇಕ ಆಯುರ್ವೇದ ಔಷಧವನ್ನು ತಯಾರಿಸಲಾಗುವುದು. ಇದು ಧಾರ್ಮಿಕವಾಗಿ ಹಾಗೂ ವೈದ್ಯಕೀಯವಾಗಿ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಶಾಂತ ಹಾಗೂ ತಂಪಾದ ಅನುಭ ನೀಡುವುದರ ಮೂಲಕ ಬೇಸಿಗೆ ಬಿಸಿಯನ್ನು ನಿಯಂತ್ರಿಸಲು ತುಳಸಿಯ ಬಳಕೆಯನ್ನು ಮಾಡಬಹುದು. ಇದು ನಿಮಗೆ ಉತ್ತಮ ಪರಿಣಾಮವನ್ನು ನೀಡುತ್ತದೆ. ತುಳಸಿಯು ಹಲವಾರು ಸಸ್ಯ ರೋಗಕಾರಕಗಳಿಂದ ನರಳುತ್ತದೆ; ಕೆಲವು ರೋಗಕಾರಕ ಕೀಟಗಳು ಸಸ್ಯವನ್ನು ಹಾಳುಮಾಡುವುದರ ಜೊತೆಗೆ ಇಳುವರಿಯನ್ನು ಕಡಿಮೆ ಮಾಡುತ್ತವೆ. ಫುಸರಿಯಂ ವಿಲ್ಟ್ ಎಂಬುದು ಮಣ್ಣಿನಿಂದ ಉಂಟಾಗುವ ಒಂದು ಶಿಲೀಂಧ್ರ ರೋಗವಾಗಿದೆ, ಇದು ಎಳೆ ತುಳಸಿ ಸಸಿಗಳನ್ನು ಶೀಘ್ರವೇ ನಾಶಮಾಡುತ್ತದೆ. ಎಳೆ ಸಸಿಗಳು ಪೈಥಿಯಂ ನ ನಿರಾರ್ದ್ರತೆ ಯಿಂದಲೂ ಸಾಯಬಹುದು. ನೀರಿನಲ್ಲಿ ನೆನೆಸಿಟ್ಟಾಗ, ತುಳಸಿ ಜಾತಿಯ ಹಲವಾರು ಬೀಜಗಳು ಜೆಲಟಿನ್ ಪೂರಿತವಾಗುತ್ತವೆ, ಹಾಗು ಇವುಗಳನ್ನು ಫಾಲೂಡ ಅಥವಾ ಶರಬತ್ ನಂತಹ ಏಶಿಯನ್ ಪೇಯಗಳಲ್ಲಿ ಹಾಗು ಸಿಹಿತಿಂಡಿಗಳಲ್ಲಿ ಬಳಸಲಾಗುತ್ತದೆ. ಇಂತಹ ಬೀಜಗಳನ್ನು ವಿವಿಧವಾಗಿ ಸಬ್ಜ , ಸುಬ್ಜ , ಟಕ್ಮರಿಯಾ , ಟುಕ್ಮರಿಯಾ , ತುಖಮರಿಯಾ , ಫಾಲೂಡ , ಸೆಲಸಿಹ್ (ಮಲಯ್/ಇಂಡೋನೆಶಿಯನ್) ಅಥವಾ ಹಾಟ್ ಎ (ವಿಯೆಟ್ನಾಮೀಸ್) ಎಂದು ಕರೆಯಲಾಗುತ್ತದೆ.


 • ನೆಲ್ಲಿಕಾಯಿ / ಆಮ್ಲಾ

  ಇಂಡಿಯನ್ ಗೂಸ್ ಬೆರ್ರಿ ಎಂದೂ ಕರೆಯಲ್ಪಡುವ ಆಮ್ಲಾ ತನ್ನ ವಿಟಮಿನ್ ಸಿ ವಿಷಯಕ್ಕೆ ಜನಪ್ರಿಯವಾಗಿದೆ. ಇದು ಮೂತ್ರವರ್ಧಕ ಮತ್ತು ಜೀರ್ಣಾಂಗದಿಂದ ಹೆಚ್ಚಿನ ಶಾಖವನ್ನು ತೆಗೆದುಹಾಕುತ್ತದೆ. ಆಹಾರದ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ ಮತ್ತು ದೇಹವನ್ನು ನಿರ್ವಿಷಿಸುತ್ತದೆ. ರೋಗನಿರೋಧಕ ವ್ಯವಸ್ಥೆಯನ್ನು ಉತ್ತೇಜಿಸುವಲ್ಲಿ ಅಮ್ಲಾ ಸಹಾಯ ಮಾಡುತ್ತದೆ. ವಯಸ್ಸಾದ ನಿಧಾನಗೊಳಿಸುತ್ತದೆ. ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಗಂಟಲು ಸೋಂಕುಗಳು, ಫಲವತ್ತತೆಯನ್ನು ಹೆಚ್ಚಿಸುತ್ತದೆ, ಹೃದಯವನ್ನು ಪೋಷಿಸುತ್ತದೆ ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.
  ತಲೆ ಸುತ್ತು ನಿವಾರಣೆಗೆ
  ನೆಲ್ಲಿಕಾಯಿ ಚೂರ್ಣ ಮತ್ತು ಕೊತ್ತಂಬರಿ ಸಮ ತೂಕ ರಾತ್ರಿ ನೀರಿನಲ್ಲಿ ನೆನೆ ಹಾಕುವುದು. ಬೆಳಗ್ಗೆ ಚೆನ್ನಾಗಿ ಕಿವುಚಿ ಶೋಧಿಸಿ, ಕಲ್ಲು ಸಕ್ಕರೆ ಪುಡಿ ಸೇರಿಸಿ ಸೇವಿಸುವುದು.
  ನಿದ್ರೆ ಬಾರದಿರುವಿಕೆಗೆ
  ಅಜೀರ್ಣವಾಗಿದ್ದರೆ ತಕ್ಕ ಉಪಚಾರ ಮಾಡುವುದು. ಒಂದು ಟೀ ಚಮಚ ನೆಲ್ಲಿಕಾಯಿ ರಸ ಅರ್ಧ ನೆಲ್ಲಿಚೆಟ್ಟಿನ ಚೂರ್ಣಕ್ಕೆ ಸ್ವಲ್ಪ ಜೇನು ಸೇರಿಸಿ ಸೇವಿಸುವುದು ಮತ್ತು ಕೆಂಪು ಕಲ್ಲು ಸಕ್ಕರೆ ಪುಡಿ ಸೇರಿಸಿದ ಹಸುವಿನ ಹಾಲನ್ನು ಕುಡಿಯಬಹುದು.ಮೂತ್ರದಲ್ಲಿ ಉರಿ ಮತ್ತು ಮೂತ್ರದ ತಡೆಯ ನಿವಾರಣೆಗೆ ದಪ್ಪವಾಗಿರುವ ೫-೬ ಹಸೀ ನೆಲ್ಲಿಕಾಯಿಗಳನ್ನು ತಂದು ಬೀಜಗಳನ್ನು ಬೇರ್ಪಡಿಸಿ ಸ್ವಲ್ಪ ಬೆಚ್ಚಗೆ ಮಾಡಿ, ರಸವನ್ನು ಹಿಂಡಿಕೊಳ್ಳುವುದು. ನಂತರ ರಸವನ್ನು ಬಟ್ಟೆಯಲ್ಲಿ ಸೋಸಿ, ಕಬ್ಬಿನ ಹಾಲಿನಲ್ಲಿ ಹಾಕಿ ಕುಡಿಯಬಹುದು. ಅಸಾಧ್ಯ ಹೊಟ್ಟೆನೋವು ನಿವಾರಣೆಗೆ ಬೀಜಗಳನ್ನು ಬೇರ್ಪಡಿಸಿದ ಹಸಿ ನೆಲ್ಲಿಕಾಯಿಗಳನ್ನು ನೀರಿನೊಂದಿಗೆ ನುಣ್ಣಗೆ ಅರೆದು ಕಿಬ್ಬೊಟ್ಟೆ ಮತ್ತು ಹೊಕ್ಕಳ ಸುತ್ತ ಲೇಪಿಸುವುದು. ನೆಲ್ಲಿಕಾಯಿ ರಸವನ್ನು ಸಕ್ಕರೆ ಸೇರಿಸಿ ಕುಡಿಯಬಹುದು.

  Most Read: ಬಾಡಿ ಹೀಟ್ ಕಡಿಮೆ ಮಾಡಲು ಮನೆ ಮದ್ದು


 • ಅಶ್ವಗಂಧ

  ಭಾರತೀಯ ಜಿನ್ಸೆಂಗ್ ಅಥವಾ ವಿಥಾನಿಯ ಸೋಮ್ನಿಫೆರಾ ಎಂದೂ ಸಹ ಕರೆಯಲ್ಪಡುವ ಅಶ್ವಗಂಧ, ಮಾನವ ದೇಹದಲ್ಲಿ ಶಕ್ತಿ ಮತ್ತು ಶಕ್ತಿಯನ್ನು ಹೆಚ್ಚಿಸಲು ಹೆಚ್ಚಾಗಿ ಬಳಸಲಾಗುತ್ತದೆ. ಇದು ನಂಬಲಾಗದ ಔಷಧೀಯ ಮೂಲಿಕೆಯಾಗಿದೆ ಮತ್ತು ಅಡಾಪ್ಟೋಜೆನ್ ಎಂದು ವರ್ಗೀಕರಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟಗಳು, ನಿಯಂತ್ರಿತ ಕೊರ್ಟಿಸೋಲ್ ಮಟ್ಟಗಳು ಮತ್ತು ಇನ್ನೂ ಹೆಚ್ಚಿನದನ್ನು ಒಳಗೊಂಡಿರುವ ಒಂದು ಸುದೀರ್ಘ ಪ್ರಯೋಜನಗಳನ್ನು ಹೊಂದಿದೆ. ಆತಂಕ ಮತ್ತು ಖಿನ್ನತೆಗೆ ಹೋರಾಡಲು ಇದು ನಿಮಗೆ ಸಹಾಯ ಮಾಡುತ್ತದೆ. ಅದು ಮೆದುಳಿನ ಕಾರ್ಯಗಳನ್ನು ಹೆಚ್ಚಿಸುತ್ತದೆ. ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಮತ್ತು ವಿವಿಧ ಅಧ್ಯಯನಗಳ ಪ್ರಕಾರ, ಗೆಡ್ಡೆಯ ಬೆಳವಣಿಗೆಯನ್ನು ಹೋರಾಡಲು ಇದು ನಿಮಗೆ ಸಹಾಯ ಮಾಡುತ್ತದೆ. ನೀವು ಅಶ್ವಗಂಧದೊಂದಿಗೆ ಉರಿಯೂತವನ್ನು ಸಹ ಮಾಡಬಹುದು. ಎಲೆ ಹಣ್ಣು ಮತ್ತು ಬೇರು ಚಿಕಿತ್ಸೆಗಳಲ್ಲಿ ಉಪಯೋಗಿಸುವರು. ಬಹು ಹಿಂದಿನ ಕಾಲದಿಂದಲೂ ಬಳಕೆಯಲ್ಲಿರುವ ಔಷಧಿ. ಬೇರಿನಲ್ಲಿ ಸೋಮ್ನಿಫೆರಸ್ ಅನ್ನುವ ಕ್ಷಾರವಿರುವುದು. ಈ ಕ್ಷಾರವು ನಿದ್ದೆ ಬರಿಸುವ ಸಾಮರ್ಥ್ಯ ಹೊಂದಿದೆ. ಸರ್ವ ರೋಗಕ್ಕೆ ಮದ್ದು ಹಿರೇಮದ್ದು ಎಂದು ನಾಣ್ಣುಡಿ. ಸತ್ಯವೂ ಹೌದು. ಇದು ರಕ್ತ ಶುದ್ಧಿ ಮಾಡಿ, ರಕ್ತ ವೃದ್ಧಿ ಮಾಡಿ ದೇಹಕ್ಕೆ ಕಾಂತಿ ಮತ್ತು ಪುಷ್ಟಿಯನ್ನು ಕೊಡುವುದು. ನಿಶ್ಶಕ್ತಿಯನ್ನು ನೀಗುವುದು ಹಾಗೂ ಗೆಲ್ಲುವ ಶಕ್ತಿಯಿದೆ. ಈ ವನೌಷಧಿ ಸೇವನೆಯಿಂದ ಸಂವೋಹಕಾರಿ ಚಿತ್ತ ಚಂಚಲತೆ, ಗಾಬರಿ ದೂರವಾಗುವುವು. ಮಕ್ಕಳಿಗೆ ಪುಷ್ಟಿ ನೀಡಿವುದು, ವೃದ್ಧಾಪ್ಯದ ದೌರ್ಬಲ್ಯಗಳನ್ನು ನೀಗಿ ಶಕ್ತಿ, ಸ್ಫೂರ್ತಿ ಮತ್ತು ಯೌವನವನ್ನು ಕೊಡುವುದು.


 • ಪುಷ್ಟಿ ಮತ್ತು ಶಕ್ತಿಗಾಗಿ

  100 ಗ್ರಾಂ ಅಶ್ವಗಂಧ ಬೇರನ್ನು ತಂದು ಹಾಲಿನಲ್ಲಿ ಬೇಯಿಸಿ ಶುದ್ಧ ಮಾಡಿ, ಒಣಗಿಸಿ, ಚೂರ್ಣಿಸಿ, ಗಾಜಿನ ಭರಣಿಯಲ್ಲಿಡುವುದು. ಸಮ ಪ್ರಮಾಣ ಸಕ್ಕರೆ ಸೇರಿಸಿ ಹೊತ್ತಿಗೆ 5 ಗ್ರಾಂನಷ್ಟು ಚೂರ್ಣವನ್ನು ತಿಂದ ಮೇಲೆ ಸಕ್ಕರೆ ಬೆರೆಸಿದ ಹಾಲನ್ನು ಪಾನ ಮಾಡುವುದು. ನೋವು ಮತ್ತು ಬಾವುಗಳು ಈ ವನೌಷಧವು ಎಲ್ಲಾ ರೀತಿಯ ಬಾವು ಮತ್ತು ನೋವುಗಳನ್ನು ನಿವಾರಿಸುವುದು. ಕೀಲುಗಳಲ್ಲಿ ನೋವು ಮತ್ತು ಊತವಿದ್ದರೆ ಇದರ ಎಲೆಗಳಿಗೆ ಎಣ್ಣೆ ಸವರಿ ಬಿಸಿ ಮಾಡಿ ನೋವಿರುವ ಜಾಗದಲ್ಲಿ ಕಟ್ಟುವುದು. ಪ್ರಜ್ವಲ ದೃಷ್ಟಿಗೆ ಅಶ್ವಗಂಧ ಚೂರ್ಣವನ್ನು ನೆಲ್ಲಿಕಾಯಿ ರಸದಲ್ಲಿ ಕಲಸಿ, ತುಪ್ಪ ಮತ್ತು ಜೇನುತುಪ್ಪವನ್ನು ಅಸಮ ಪ್ರಮಾಣದಲ್ಲಿ ಬೆರೆಸಿ ಸೇವಿಸಬೇಕು. ದೃಷ್ಟಿದೋಷಗಳು ನಿವಾರಣೆ ಆಗಿ ಕಣ್ಣು ದೃಷ್ಟಿ ಪ್ರಜ್ವಲವಾಗುವುದು. ಕಣ್ಣುಗಳನ್ನು ತ್ರಿಫಲ ಚೂರ್ಣದ ನೀರಿನಲ್ಲಿ ತೊಳೆಯುವುದು. ಈ ಗಿಡಮೂಲಿಕೆಗಳ ಪ್ರಯೋಜನಗಳು ಅಂತ್ಯವಿಲ್ಲದ ಕಾರಣ ಆದ್ದರಿಂದ ನೀವು ನಿಮ್ಮ ದೈನಂದಿನ ಜೀವನದಲ್ಲಿ ಅವುಗಳನ್ನು ಸೇರಿಸಿಕೊಳ್ಳಬಹುದು. ಯಾವುದೇ ಗಿಡಮೂಲಿಕೆಗಳು ನಿಮ್ಮ ದೇಹಕ್ಕೆ ಸರಿಹೊಂದುವುದಿಲ್ಲವಾದರೆ ನೀವು ಅದರ ಬಳಕೆಯನ್ನು ನಿಲ್ಲಿಸ ಬಹುದು.
ಬೇಸಿಗೆಯ ಉರಿ ಎಲ್ಲರಿಗೂ ಒಂದು ರೀತಿಯ ಕಿರಿಕಿರಿಯನ್ನು ಉಂಟುಮಾಡುತ್ತದೆ. ದೈಹಿಕವಾಗಿ ಉಂಟಾಗುವ ಉರಿಯ ಬೇನೆಯು ಮಾನಸಿಕವಾಗಿಯೂ ಒಂದು ಬಗೆಯ ಗೊಂದಲ ಹಾಗೂ ಆಯಾಸದ ಅನುಭವವನ್ನು ಉಂಟುಮಾಡುತ್ತದೆ. ಮನಸ್ಸು ದಣಿದ ಅನುಭವವನ್ನು ಅನುಭವಿಸಿದರೆ ದೈಹಿಕವಾಗಿಯೂ ಬಹುಬೇಗ ಆಯಾಸವನ್ನು ಅನುಭವಿಸುತ್ತಾರೆ. ಪ್ರಕೃತಿಯಲ್ಲಿ ಉಂಟಾಗುವ ಬದಲಾವಣೆಯು ಎಲ್ಲಾ ಜೀವ ಸಂಕುಲಗಳ ಮೇಲೂ ಗಂಭೀರವಾದ ಪ್ರಭಾವ ಉಂಟುಮಾಡುವುದು. ಪ್ರತಿ ವರ್ಷವೂ ಗಣನೀಯವಾಗಿ ಪ್ರಕೃತಿಯಲ್ಲಿ ತೋರುವ ಹವಾಮಾನದ ಬದಲಾವಣೆಯನ್ನು ಮಳೆಗಾಲ,ಚಳಿಗಾಲ ಹಾಗೂ ಬೇಸಿಗೆ ಕಾಲ ಎಂದು ವಿಭಜಿಸಲಾಗುತ್ತದೆ. ಮಳೆಗಾಲದಲ್ಲಿ ಅತಿಯಾದ ಮಳೆ ಗಾಳಿಯಿಂದ ಋತುವಿನ ಬದಲಾವಣೆಯನ್ನು ತೋರುವುದು. ಇದರಿಂದ ಪ್ರಕೃತಿಯಲ್ಲಿ ಹಸಿರು ಸಿರಿಯ ಹುಟ್ಟು ಹಾಗೂ ತಂಪಾದ ಅನುಭವವನ್ನು ಜೀವ ಸಂಕುಲಕ್ಕೆ ನೀಡುವುದು. ಇದು ಪ್ರಕೃತಿಯಲ್ಲಿ ತೋರುವ ಉತ್ಸಾಹ ಹಾಗೂ ಸಂತೋಷದ ಬದಲಾವಣೆ ಎಂದು ಹೇಳುತ್ತಾರೆ.

ಅದೇ ರೀತಿ ಚಳಿಗಾಲದಲ್ಲಿ ತಣ್ಣನೆಯ ಗಾಳಿ ಹಾಗೂ ತಂಪಾದ ಅನುಭವವನ್ನುನೀಡುತ್ತದೆ. ನಂತರ ತೋರುವ ಬೇಸಿಗೆಯ ಕಾಲವು ವಾತಾವರಣದಲ್ಲಿ ಶುಷ್ಕತೆಯನ್ನು ಉಂಟುಮಾಡುತ್ತದೆ. ಬೇಸಿಗೆಯಲ್ಲಿ ಸೂರ್ಯನ ಕಿರಣದ ದಗೆ ಹೆಚ್ಚಾಗಿರುತ್ತದೆ. ಇದರ ಪರಿಣಾಮದಿಂದ ಜೀವನ ಸಂಕುಲಗಳಿಗೆ ನೀರಿನ ಅಭಾವ ಉಂಟಾಗುವುದು. ದೇಹದಲ್ಲಿಯೂ ಅತಿಯಾದ ಬೆವರುವಿಕೆ, ಶುಷ್ಕತೆ ಉಂಟಾಗುವುದು. ಜೊತೆಗೆ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಕೊಂಚ ಆಲಸ್ಯ ಹಾಗೂ ತಾತ್ಸಾರದ ಭಾವನೆಯನ್ನು ಉಂಟುಮಾಡುವುದು.

   
 
ಹೆಲ್ತ್