Back
Home » ಇತ್ತೀಚಿನ
'ಒಪ್ಪೊ A5s'; ಸದ್ಯ ಮಾರುಕಟ್ಟೆಯಲ್ಲಿ ಬೆಸ್ಟ್‌ ಬಜೆಟ್‌ ಸ್ಮಾರ್ಟ್‌ಫೋನ್!
Gizbot | 25th Apr, 2019 02:30 PM
 • ವಾಟರ್‌ಡ್ರಾಪ್‌ ಡಿಸ್‌ಪ್ಲೇ

  ಒಪ್ಪೊ ಸ್ಮಾರ್ಟ್‌ಫೋನ್ 6.2 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದ್ದು, ಇದರೊಂದಿಗೆ ವಾಟರ್‌ಡ್ರಾಪ್ ಸ್ಕ್ರೀನ್‌ ಸಹ ಇದೆ. ವಿಶಾಲವಾದ ಡಿಸ್‌ಪ್ಲೇಯು ವಿಡಿಯೊ ವೀಕ್ಷಣೆ ಮತ್ತು ಗೇಮ್ಸ್‌ ಆಡಲು ಅತ್ಯುತ್ತಮವಾಗಿದ ಎನಿಸಲಿದೆ. ಇನ್ನು ಡಿಸ್‌ಪ್ಲೆಯು 1520x720 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿರುವ ಡಿಸ್‌ಪ್ಲೇಯು ಶೇ. 89.35%ರಷ್ಟು ಅನುಪಾತವನ್ನು ಹೊಂದಿದೆ. ಹೀಗಾಗಿ ಹೆಚ್‌ಡಿ ಮಾದರಿಯ ವಿಡಿಯೊ ವೀಕ್ಷಣೆ ಮತ್ತು ಗೇಮ್ಸ್‌ಗಳನ್ನು ಆಡುವುದು ರೋಚಕತೆ ಎನಿಸಲಿದ್ದು, ವೆಬ್‌ಬ್ರೌಸ್‌ ಮೂಲಕ ಇ ಬುಕ್ಸ್‌ಗಳನ್ನು ಓದಲು ಹಿತವೆನಿಸಲಿದೆ.


 • ಪವರ್‌ಫುಲ್ ಬ್ಯಾಟರಿ

  ಮೊದಲಿನಿಂದಲೂ ಉತ್ತಮ ಬಾಳಿಕೆಯ ಬ್ಯಾಟರಿಗಳನ್ನು ಒದಗಿಸುತ್ತಾ ಬಂದಿರುವ ಒಪ್ಪೊ ಈ ಸ್ಮಾರ್ಟ್‌ಫೋನಿನಲ್ಲಿ 4,230mAh ಸಾಮರ್ಥ್ಯದ ಬಲಶಾಲಿಯಾದ ಬ್ಯಾಟರಿಯನ್ನು ನೀಡಿದ್ದು, ಸುಮಾರು ಎರಡು ದಿನಗಳ ಮಟ್ಟಿಗೆ ಸ್ಮಾರ್ಟ್‌ಫೋನಿಗೆ ದೀರ್ಘಬಾಳಿಕೆ ಒದಗಿಸಲಿದೆ. MTK6765 ಪ್ರೊಸೆಸರ್ ಇದ್ದು, ಈ ಪ್ರೊಸೆಸರ್ ಕಡಿಮೆ ಬ್ಯಾಟರಿಯನ್ನು ಕನ್ಸೂಮ್‌ ಮಾಡಿಕೊಳ್ಳಲಿದೆ. 13.5 ಗಂಟೆಗಳ ವಿಡಿಯೊ ಪ್ಲೇಬ್ಯಾಕ್ ಶಕ್ತಿ ಹೊಂದಿದ್ದು, ಇದು ವಿವೋ ವೈ91 ಸ್ಮಾರ್ಟ್‌ಫೋನ್‌ಗಿಂತ ಅಧಿಕವಾಗಿದೆ. ಬ್ಯಾಟರಿ ಗೇಮಿಂಗ್‌ಗೆ ಆಟಕ್ಕೆ ಪೂರಕವಾಗಿರಲಿದೆ.


 • ಬಲವಾದ ಪ್ರೊಸೆಸರ್

  'ಒಪ್ಪೊ A5ಎಸ್' ಸ್ಮಾರ್ಟ್‌ಫೋನ್ 'ಮೀಡಿಯಾ ಟೆಕ್‌ ಹಿಲಿಯೊ ಪಿ35' ಚಿಪ್‌ಸೆಟ್‌ ಬಲವಾದ ಪ್ರೊಸೆಸರ್‌ ಅನ್ನು ಹೊಂದಿದ್ದು, ಫೋನಿನ ಕಾರ್ಯವೈಖರಿಯು ಸಹ ಅಷ್ಟೇ ವೇಗವಾಗಿ ನಿರ್ವಹಿಸಬಲ್ಲದು. ಈ ಪ್ರೊಸೆಸರ್ TSMCಯ 12nm FinFET ತಂತ್ರಜ್ಞಾನದಲ್ಲಿ ರಚಿತವಾಗಿದ್ದು, ಕೋರ್‌ಟೆಕ್ಸ್-A53 CPU ಸ್ಮಾರ್ಟ್‌ಫೋನಿಗೆ ಮತ್ತಷ್ಟು ಶಕ್ತಿ ಒದಗಿಸಿದೆ. 680MHz ವೇಗದಲ್ಲಿ ಅಡೆತಡೆ ಇಲ್ಲದೇ ಗೇಮಿಂಗ್ ಆಡಬಹುದಾಗಿದ್ದು, ಹೈ ಎಂಡ್ ಗ್ರಾಫಿಕ್ಸ್‌ಗಳು ಗೇಮ್ಸ್‌ಗೆ ಮೆರಗು ತರುತ್ತವೆ.


 • ಬೆಸ್ಟ್ ಕಾರ್ಯವೈಖರಿ

  ಜನಪ್ರಿಯ ಸ್ಯಾಮ್‌ಸಂಗ್‌ ಗ್ಯಾಲ್ಯಾಕ್ಸಿ J6 ಸ್ಮಾರ್ಟ್‌ಫೋನ್‌ 'Exynos 7870' ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅದೇ ರೀತಿ ವಿವೋ ವೈ91 ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಹಿಲಿಯೊ P22 ಸಾಮರ್ಥ್ಯದ ಪ್ರೊಸೆಸರ್ ಕೆಲಸಮಾಡಲಿದೆ. ಆದರೆ ಈ ಎರಡು ಸ್ಮಾರ್ಟ್‌ಫೋನ್‌ಗಳಿಗಿಂತ ಅತ್ಯುತ್ತಮ ಪ್ರೊಸೆಸರ್ ಅನ್ನು ಹೊಂದಿರುವ ಒಪ್ಪೊ ಸಂಸ್ಥೆಯ 'ಒಪ್ಪೊ A5ಎಸ್' ಸ್ಮಾರ್ಟ್‌ಫೋನ್ ವೇಗದ ಕೆಲಸ ನಿರ್ವಹಣೆಯಲ್ಲಿ ಅವುಗಳಿಗಿಂತ ಮುಂದಿದೆ. ಮಲ್ಟಿಟಾಸ್ಕ ಕೆಲಸಗಳನ್ನು ಸುಲಭವಾಗಿ ನಿರ್ವಹಿಸುವ ಶಕ್ತಿಯನ್ನು ಸಹ ಪಡೆದಿದೆ.


 • ಸೂಪರ್‌ ಕ್ಯಾಮೆರಾ

  ಒಪ್ಪೊ ಕ್ಯಾಮೆರಾಗೆ ಮೊದಲ ಪ್ರಾಶಸ್ತ್ಯ ನೀಡುತ್ತಲೇ ಇದ್ದು, ಇದನ್ನು ಈ ಸ್ಮಾರ್ಟ್‌ಫೋನಿನಲ್ಲಿಯೂ ಮುಂದುವರೆಸಿದೆ. ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾಗಳನ್ನು ಹೊಂದಿದ್ದು, 13ಮೆಗಾಪಿಕ್ಸಲ್‌ನಲ್ಲಿ ಮೊದಲ ಕ್ಯಾಮೆರಾ ಇದ್ದು, ಹಾಗೇ ಎರಡನೇ ಕ್ಯಾಮೆರಾವು ಡೆಪ್ತ್ ಸೆನ್ಸರ್‌ನೊಂದಿಗೆ 2 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದೆ. ಹಾಗೆಯೇ ಮುಂಭಾಗದಲ್ಲಿ ಸೆಲ್ಫಿಗಾಗಿ 8ಮೆಗಾಪಿಕ್ಸಲ್ ಕ್ಯಾಮೆರಾವನ್ನು ನೀಡಲಾಗಿದ್ದು, ಕಡಿಮೆ ದರದಲ್ಲಿ ಇದು ಬೆಸ್ಟ್ ಕ್ಯಾಮೆರಾ ಆಗಿದೆ. ಸೆರೆಹಿಡಿದ ಫೋಟೊಗಳು ಅತ್ಯುತ್ತಮವಾಗಿ ಮೂಡಿಬರುತ್ತವೆ. ಮಲ್ಟಿಪ್ರೇಮ್‌ ಮತ್ತು ವಿಡಿಯೊಗಳು ಸಹ ಉತ್ತಮವಾಗಿ ಸೆರೆಯಾಗಲಿವೆ.


 • ಆಂಡ್ರಾಯ್ಡ್‌ ಓಎಸ್‌

  ಒಪ್ಪೊ ಕಂಪನಿಯ ಹೊಸ 'ಒಪ್ಪೊ A5ಎಸ್' ಸ್ಮಾರ್ಟ್‌ಫೋನಿನಲ್ಲಿ ಆಂಡ್ರಾಯ್ಡ್‌ ಓರಿಯೊ v8.1 ಜೊತೆಗೆ colorOS5.2.1 ಸಹ ಇರಲಿದೆ. ಈ ಆಪರೇಟಿಂಗ್‌ ಸಿಸ್ಟಮ್‌ನಲ್ಲಿ ವಿಡಿಯೊ ಎಡಿಟರ್, ಡಿಸ್‌ಪ್ಲೇಯಲ್ಲಿ ಮ್ಯೂಸಿಕ್, ಸ್ಮಾರ್ಟ್‌ ಸ್ಕ್ಯಾನ್, ಸ್ಮಾರ್ಟ್‌ಬಾರ್‌ನಂತಹ ಹಲವು ಫೀಚರ್ಸ್‌ಗಳ ಆಯ್ಕೆಗಳು ಇನ್‌ಬಿಲ್ಟ್‌ ಆಗಿ ಲಭ್ಯವಾಗಲಿವೆ. ಗೇಮ್ಸ್‌ ಆಡುತ್ತಿದ್ದರು, ಟೆಕ್ಸ್ಟ್ ಮೆಸೆಜ್‌ಗೆ ರಿಪ್ಲೇ ಮಾಡಬಹುದಾದ ಆಯ್ಕೆಯು ಸಹ ಇರಲಿದೆ. ಸ್ಮಾರ್ಟ್‌ ಸ್ಕ್ಯಾನ್‌ ಮೂಲಕ ಬಿಸಿನೆಸ್‌ ಕಾರ್ಡ್‌ ಅನ್ನು ಡಿಜಿಟಲ್ ಕಾರ್ಡ್‌ ಆಗಿ ಮಾಡಬಹುದಾಗಿದೆ.


 • ಬೆಲೆ ಮತ್ತು ಲಭ್ಯತೆ

  ಎರಡು ವೇರಿಯಂಟ್‌ ಮಾದರಿಗಳಲ್ಲಿ ದೊರೆಯಲಿದ್ದು, 2GB RAM ಮತ್ತು 32GB ROM ಆಂತರಿಕ ಸಂಗ್ರಹದ ವೇರಿಯಂಟ್ ಬೆಲೆಯು 9,990ರೂ.ಗಳ ಆಗಿದ್ದು, ಬ್ಲ್ಯಾಕ್‌ ಮತ್ತು ರೆಡ್‌ ಬಣ್ಣಗಳಲ್ಲಿ ಗ್ರಾಹಕರಿಗೆ ಲಭ್ಯವಾಗಲಿವೆ. ಹಾಗೇ 4GB ಮತ್ತು 64GB ROM ಸಾಮರ್ಥ್ಯ ವೇರಿಯಂಟ್ ಇದೇ ಮೇ ತಿಂಗಳಲ್ಲಿ ದೊರೆಯಲಿದ್ದು, ಗ್ರೀನ್‌ ಮತ್ತು ಗೋಲ್ಡ್‌ ಬಣ್ಣಗಳ ಆಯ್ಕೆಗಳನ್ನು ಹೊಂದಿರಲಿದೆ. ಈ ಸ್ಮಾರ್ಟ್‌ಫೋನ್ ಇ ಕಾಮರ್ಸ್‌ ಜಾಲತಾಣಗಳಾದ ಫ್ಲಿಪ್‌ಕಾರ್ಟ್‌, ಅಮೆಜಾನ್, ಸ್ನ್ಯಾಪ್‌ಡಿಲ್, ಟಾಟಾ ಕ್ಲಿಕ್, ಪೇಟಿಮ್ ಮಾಲ್ ಮತ್ತು ಆಫ್‌ಲೈನ್‌ ಮಾರುಕಟ್ಟೆಯಲ್ಲಿಯೂ ದೊರೆಯಲಿದೆ.
ಭಾರತೀಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಬಜೆಟ್‌ ದರದ ಫೋನುಗಳಿಗೆನೆ ಹೆಚ್ಚು ಡಿಮ್ಯಾಂಡ್‌ ಇದ್ದು, ಬಹುತೇಕ ಗ್ರಾಹಕರು ಹತ್ತುಸಾವಿರ ಪ್ರೈಸ್‌ಟ್ಯಾಗ್‌ನಲ್ಲಿ ಬೆಲೆಯಲ್ಲಿರುವ ಸ್ಮಾರ್ಟ್‌ಪೋನ್‌ ಖರೀದಿಸಲು ಮುಂದಾಗುತ್ತಾರೆ. ಹಾಗೇನಾದರೂ ನೀವು ಹತ್ತುಸಾವಿರದ ಬೆಲೆಯಲ್ಲಿ ಹೈ ಎಂಡ್‌ ಪ್ರೀಮಿಯಮ್ ಮಾದರಿಯ ಫೀಚರ್ಸ್‌ಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್‌ ಖರೀದಿಸಬೇಕೆಂದಿದ್ದರೇ 'ಒಪ್ಪೊ A5ಎಸ್‌' ಬೆಸ್ಟ್.

ಹೌದು, ಒಪ್ಪೊ ಸ್ಮಾರ್ಟ್‌ಫೋನ್ ಕಂಪನಿಯು 'ಒಪ್ಪೊ A5ಎಸ್‌' ಹೆಸರಿನ ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ ಮಾಡಿದೆ. ಇತ್ತೀಚಿನ ಹೊಸ ಫೀಚರ್ಸ್‌ಗಳಲ್ಲಿ ಒಂದಾದ ಬಿಗ್ ಸ್ಕ್ರೀನ್ ಡಿಸ್‌ಪ್ಲೇ ಸೇರಿದಂತೆ, ಅತ್ಯುತ್ತಮ ಬ್ಯಾಟರಿ ಬಾಳಿಕೆ, ಹೈ ಎಂಡ್‌ ಗೇಮಿಂಗ್‌ಗೆ ಬೆಂಬಲ, ಟಾಪ್‌ ಎಂಡ್ ಮಾದರಿಯ ಕ್ಯಾಮೆರಾ ಫೀಚರ್ಸ್‌ಗಳನ್ನು ಒಳಗೊಂಡಿರುವ ಈ ಸ್ಮಾರ್ಟ್‌ಫೋನ್ 9,990ರೂ.ಗಳ ಬೆಲೆಯನ್ನು ಹೊಂದಿದೆ.

ದೇಶಿಯ ಮೊಬೈಲ್ ಮಾರುಕಟ್ಟೆಯಲ್ಲಿ ಈಗಾಗಲೇ ತನ್ನ ಛಾಪನ್ನು ಮೂಡಿಸಿರುವ 'ಒಪ್ಪೊ', ಇದೀಗ ಈ ಹೊಸ ಸ್ಮಾರ್ಟ್‌ಫೋನಿನಲ್ಲಿಯೂ ವೇಗದ ಪ್ರೊಸೆಸೆರ್ ಒದಗಿಸಲಾಗಿದ್ದು, ಸ್ಮಾರ್ಟ್‌ಪೋನ್ ಸರಾಗವಾಗಿ ಕಾರ್ಯನಿರ್ವಹಿಸುವ ಶಕ್ತಿ ಪಡೆದಿದ್ದು, ಕ್ಯಾಮೆರಾದಲ್ಲಿಯೂ ನೂತನ ಆಯ್ಕೆಗಳನ್ನು ಪರಿಚಯಿಸಿದೆ. ಹಾಗಾದರೇ 'ಒಪ್ಪೊ A5ಎಸ್‌' ಸ್ಮಾರ್ಟ್‌ಫೋನ್ ಇತರೆ ಏನೆಲ್ಲಾ ಸ್ಪೆಷಲ್ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

   
 
ಹೆಲ್ತ್