Back
Home » ಇತ್ತೀಚಿನ
'ಮೊಬೈಲ್ ಡೇಟಾ' ಬಳಕೆಯಲ್ಲಿ ಚೀನಾದವರನ್ನು ಸಹ ಮೀರಿಸಿದ ಭಾರತೀಯರರು!!
Gizbot | 26th Apr, 2019 12:59 PM
 • ಭಾರತದಲ್ಲಿ ಶೇ. 40 ಜನರು ಅಂತರ್ಜಾಲ ಬಳಸುತ್ತಿದ್ದಾರೆ.

  ಭಾರತದ ಜನಸಂಖ್ಯೆಯ 40 ಪ್ರತಿಶತದಷ್ಟು ಜನರು ಅಂತರ್ಜಾಲ ಚಂದಾದಾರಿಕೆಯನ್ನು ಹೊಂದಿದ್ದಾರೆ.ಭಾರತವು ಈಗಾಗಲೇ ಡಿಜಿಟಲ್ ಗ್ರಾಹಕರ ವಿಶ್ವದ ಅತಿ ದೊಡ್ಡ ಮತ್ತು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನೆಲೆಗಳಲ್ಲಿ ಒಂದಾಗಿದೆ. ಇದು ಉದಯೋನ್ಮುಖ ಆರ್ಥಿಕತೆಗಳಿಗಿಂತ ವೇಗವಾಗಿ ಚಟುವಟಿಕೆಗಳನ್ನು ಡಿಜಿಟೈಸ್ ಮಾಡುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.


 • ಭಾರತದಲ್ಲಿ ಸರಾಸರಿ ಡೇಟಾ ಬಳಕೆ ಚೀನಾಗಿಂತ ಹೆಚ್ಚು!

  ಭಾರತದಲ್ಲಿ 2018ರ ವೇಳಗೆ 56 ಕೋಟಿ ಅಂತರ್ಜಾಲ ಬಳಕೆದಾರರರಿದ್ದು, ಪ್ರಸ್ತುತ ಈ ಸಂಖ್ಯೆ 50 ಕೋಟಿ ದಾಟಿರುವ ಸಾಧ್ಯತೆ ಇದೆ. ಭಾರತದ ಮೊಬೈಲ್‌ ಬಳಕೆದಾರರು ತಿಂಗಳಿಗೆ ಸರಾಸರಿ 8.3 ಜಿಬಿ ಡೇಟಾವನ್ನು ಬಳಸುತ್ತಿದ್ದಾರೆ. ಚೀನಾದಲ್ಲಿ ಸರಾಸರಿ ಡೇಟಾ ಬಳಕೆ 5.5 ಜಿಬಿ ಇದ್ದರೆ, ದಕ್ಷಿಣ ಕೊರಿಯಾದಲ್ಲಿ ಸರಾಸರಿ 8 ರಿಂದ 8.5 ಜಿಬಿ ಡೇಟಾ ಬಳಸುತ್ತಿದ್ದಾರೆ.


 • ಭಾರತೀಯರ ಸರಾಸರಿ ಸಾಮಾಜಿಕ ಜಾಲತಾಣ ಬಳಕೆ!

  ಸರಾಸರಿ ಭಾರತೀಯನ ಸಾಮಾಜಿಕ ಮಾಧ್ಯಮ ಬಳಕೆಯು ಚೀನಾ ಮತ್ತು ಅಮೆರಿಕಾ ಸಾಮಾಜಿಕ ಮಾಧ್ಯಮ ಬಳಕೆದಾರರಿಗಿಂತ ಹೆಚ್ಚಿದೆ. ಸರಾಸರಿ ಭಾರತೀಯ ಪ್ರತಿ ವಾರ ಸಾಮಾಜಿಕ ವೇದಿಕೆಗಳಲ್ಲಿ 17 ಗಂಟೆಗಳ ಕಾಲ ಕಳೆಯುತ್ತಿದ್ದಾನೆ. ಡಿಜಿಟಲ್‌ ಗುಣಲಕ್ಷಣಗಳ ಬೆಳವಣಿಗೆಯ ಮಟ್ಟ ಇತರೆ ಎಲ್ಲ ದೇಶಗಳಿಗಿಂತಲೂ ಭಾರತದಲ್ಲಿ ಹೆಚ್ಚಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.


 • ಭಾರತದಲ್ಲಿ ಡಾಟಾ ವೆಚ್ಚ ಶೇ.95 ಕ್ಕಿಂತ ಹೆಚ್ಚು ಇಳಿಕೆ!

  ಸರಕಾರವು ಡಿಜಿಟಲ್‌ ಎಕಾನಮಿಗೆ ಪ್ರೋತ್ಸಾಹ ನೀಡುತ್ತಿದ್ದು, ರಿಲಯನ್ಸ್ ಜಿಯೊದಂಥ ಖಾಸಗಿ ಕಂಪನಿಗಳಿಂದ ಡೇಟಾ ದರ ಗಣನೀಯವಾಗಿ ಇಳಿಕೆಯಾಗಿದೆ. ಖಾಸಗಿ ವಲಯಗಳು 2013 ರಿಂದ ಶೇಕಡಾ 95 ಕ್ಕಿಂತಲೂ ಹೆಚ್ಚು ಡಾಟಾ ವೆಚ್ಚವನ್ನು ತಗ್ಗಿಸಲು ಸಹಾಯ ಮಾಡಿದೆ. ಒಂದು ಗಿಗಾಬೈಟ್ ದರವು 12.45 ಡಾಲರ್‌ನಿಂದ 0.37 ಸೆಂಟ್ಸ್‌ಗೆ ಸಮಾನವಾಗಿದೆ ಎಂದು ಹೇಳಿದೆ.


 • ಭಾರತೀಯರ ಡಿಜಿಟಲ್ ಹಣಕಾಸಿನ ವ್ಯವಹಾರ ಹೆಚ್ಚಳ!

  ಕನಿಷ್ಠ ಒಂದು ಡಿಜಿಟಲ್ ಹಣಕಾಸಿನ ಖಾತೆಯೊಂದಿಗೆ ಭಾರತೀಯ ವಯಸ್ಕರ ಪಾಲು ಶೇ. 80 ರಷ್ಟಕ್ಕೆ ಏರಿಕೆಯಾಗಿದೆ. 2011 ರಿಂದ ಇದರ ಪ್ರಮಾಣ ದ್ವಿಗುಣವಾಗಿದೆ. ಸರಕಾರದ ಜನ-ಧನ್ ಯೋಜನೆ ಅಡಿಯಲ್ಲಿ 332 ಮಿಲಿಯನ್‌ ಹೆಚ್ಚಿನ ಜನ ಮೊಬೈಲ್ ಫೋನ್ ಆಧರಿತ ಖಾತೆಗಳನ್ನು ತೆರೆದಿದ್ದಾರೆ. ಇದು ಮತ್ತಷ್ಟು ಬೆಳವಣಿಗೆ ಕಾಣುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.


 • ವಿಶ್ವದ ತ್ವರಿತ ಮತ್ತು ಬೃಹತ್‌ ಮಾರುಕಟ್ಟೆಯಾಗಿ ಭಾರತ!

  ಡಿಜಿಟಲ್‌ ಬಳಕೆಗೆ ಸಂಬಂಧಿಸಿದಂತೆ ವಿಶ್ವದ ತ್ವರಿತ ಮತ್ತು ಬೃಹತ್‌ ಮಾರುಕಟ್ಟೆಯಲ್ಲಿ ಭಾರತವೂ ಒಂದಾಗಲಿದೆ. ಡಿಜಿಟಲ್‌ ಬೆಳವಣಿಗೆಯ ಮಟ್ಟ ಇತರೆ ಎಲ್ಲ ದೇಶಗಳಿಗಿಂತ ಭಾರತದಲ್ಲಿ ಹೆಚ್ಚಿದೆ. ಭಾರತದ ಇಂಟರ್ನೆಟ್ ಬಳಕೆದಾರರ ಸಾಮರ್ಥ್ಯ 2023ರ ವೇಳೆಗೆ 835 ದಶಲಕ್ಷಕ್ಕೆ ಏರಲಿದೆ ಮತ್ತು ಫೋನ್‌ಗಳ ಸಂಖ್ಯೆ ದ್ವಿಗುಣವಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಕೆಲವೇ ವರ್ಷಗಳ ಹಿಂದಷ್ಟೇ ಡಿಜಿಟಲ್‌ ಎಂಬುದು ಭಾರತದಲ್ಲಿ ಗಗನಕುಸುಮವಾಗಿತ್ತು. ಆದರೆ, ಪ್ರಸ್ತುತ ಡಿಜಿಟಲ್‌ ಬೆಳವಣಿಗೆಯ ಮಟ್ಟ ಇತರೆ ಎಲ್ಲ ದೇಶಗಳಿಗಿಂತಲೂ ಭಾರತದಲ್ಲಿ ಹೆಚ್ಚಿದೆ. ಮೊಬೈಲ್‌ ಡೇಟಾ ಬಳಕೆಯು ವಾರ್ಷಿಕವಾಗಿ ಶೇ.152ರಷ್ಟು ಏರಿಕೆಯಾಗಿದೆ. 2013ರಿಂದ ಈಚೆಗೆ ಡೇಟಾ ದರ ಶೇ.95ರಷ್ಟು ಇಳಿಕೆಯಾಗಿದ್ದು, ''ನಮ್ಮ ವಿಶ್ಲೇಷಣೆಗಳ ಪ್ರಕಾರ, 2023ಕ್ಕೆ ದೇಶದಲ್ಲಿ ಅಂತರ್ಜಾಲ ಬಳಕೆದಾರರ ಸಂಖ್ಯೆ ಶೇ. 40ರಷ್ಟು ಏರಿಕೆಯಾಗಲಿದೆ ಎಂದು ಇತ್ತೀಚಿನ ವರದಿಯೊಂದು ಹೇಳಿದೆ.

ಹೌದು, ಜಾಗತಿಕ ಮಟ್ಟದ ಸಲಹಾ ಕಂಪನಿ ಮೆಕಿನ್ಸೆಯ 'ಡಿಜಿಟಲ್‌ ಇಂಡಿಯಾ-ಟೆಕ್ನಾಲಜಿ ಟು ಟ್ರಾನ್ಸ್‌ಫಾರ್ಮ್‌ ಎ ಕನೆಕ್ಷನ್‌ ನೇಷನ್' ವರದಿಯಲ್ಲಿ ಭಾರತದ ಡಿಜಿಟಲ್‌ ಕ್ರಾಂತಿಯನ್ನು ವಿವರಿಸಲಾಗಿದೆ. ಈ ವರದಿಯಲ್ಲಿ ಭಾರತದಲ್ಲಿ ಇಂಟರ್‌ನೆಟ್‌ ಬಳಕೆ ವೇಗವಾಗಿ ವೃದ್ಧಿಯಾಗುತ್ತಿರುವುದನ್ನು ವಿವರಿಸಲಾಗಿದ್ದು, ಡಿಜಿಟಲ್‌ ಬಳಕೆಗೆ ಸಂಬಂಧಿಸಿದಂತೆ ಭವಿಷ್ಯದಲ್ಲಿ ವಿಶ್ವದ ತ್ವರಿತ ಮತ್ತು ಬೃಹತ್‌ ಮಾರುಕಟ್ಟೆಯಲ್ಲಿ ಭಾರತವೂ ಒಂದಾಗಲಿದೆ ಎಂದು ಹೇಳಲಾಗಿದೆ.

ಇನ್ನು 2023ಕ್ಕೆ ದೇಶದಲ್ಲಿ ಅಂತರ್ಜಾಲ ಬಳಕೆದಾರರ ಸಂಖ್ಯೆ ಶೇ. 40ರಷ್ಟು ಏರಿಕೆಯಾಗಲಿದೆ ಎಂದು ಭವಿಷ್ಯ ನುಡಿದಿರುವ ಮೆಕಿನ್ಸೆ ವರದಿಯು ವರದಿಯಲ್ಲಿ ಹಲವು ಕುತೋಹಲದ ಮಾಹಿತಿಗಳನ್ನು ಸಹ ಹಂಚಿಕೊಂಡಿದೆ. ಹಾಗಾದರೆ, ಭಾರತದ ಮೊಬೈಲ್‌ ಡೇಟಾ ಬಳಕೆದಾರರು ತಿಂಗಳಿಗೆ ಸರಾಸರಿ ಬಳಸುವ ಡೇಟಾ, ವಾರ್ಷಿಕವಾಗಿ ಮೊಬೈಲ್‌ ಡೇಟಾ ಬಳಕೆಯ ಬಳೆವಣಿಗೆ ಸೇರಿದಂತೆ ವರದಿಯಲ್ಲಿ ಹೇಳಲಾಗಿರವ ಕುತೋಹಲದ ಮಾಹಿತಿಗಳನ್ನು ನಾವು ತಿಳಿದುಕೊಳ್ಳೋಣ ಬನ್ನಿ.

   
 
ಹೆಲ್ತ್