Back
Home » ಆರೋಗ್ಯ
ಇದಕ್ಕೇ ಹೇಳುವುದು ಜೇನು ತುಪ್ಪ ಮತ್ತು ದಾಲ್ಚಿನ್ನಿ ಒಳ್ಳೆಯ ಸಂಯೋಜನೆ ಎಂದು
Boldsky | 9th May, 2019 05:08 PM
 • ಚರ್ಮದ ಮೇಲಿನ ಮೊಡವೆಗೆ ಒಳ್ಳೆ ಆಯಿಂಟ್ಮೆಂಟ್

  ಸಾಮಾನ್ಯವಾಗಿ ವಯಸ್ಕರಲ್ಲಿ ಕಾಡುವ ಸಮಸ್ಯೆ ಈ ಮುಖದ ಮೇಲಿನ ಮೊಡವೆಗಳು . ಇದರಿಂದ ಕೆಟ್ಟದ್ದೇನೂ ಆಗದಿದ್ದರೂ ನೋಡಲು ಮಾತ್ರ ಮುಜುಗರ ಹುಟ್ಟಿಸುತ್ತದೆ . ಇವುಗಳಿಂದ ಯಾವಾಗ ನಮಗೆ ಬಿಡುಗಡೆ ಎಂದು ಯುವಕ ಯುವತಿಯರು ಮೂಗು ಮುರಿಯುತ್ತಾರೆ . ಮೆಡಿಕಲ್ ಶಾಪ್ ಗಳಲ್ಲಿ ಅನೇಕ ರೀತಿಯ ಮುಲಾಮುಗಳಿಗೆ ಹಣ ವೆಚ್ಚ ಮಾಡುತ್ತಾರೆ . ಆದರೂ ಪ್ರಯೋಜನ ಅಷ್ಟಕ್ಕಷ್ಟೇ . ಆದ್ದರಿಂದ ಮನೆಯಲ್ಲೇ ಸಿಗುವ ಈ ವಸ್ತುಗಳಿಂದ ತಯಾರು ಮಾಡಿದ ಔಷಧಿಯನ್ನು ಒಮ್ಮೆ ಟ್ರೈ ಮಾಡಿ . ಒಂದು ಟೀ ಸ್ಪೂನ್ ದಾಲ್ಚಿನ್ನಿಯ ಪುಡಿಗೆ ಮೂರು ಚಮಚ ಜೇನು ತುಪ್ಪ ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ . ನಂತರ ಮುಖವನ್ನು ತೊಳೆದು ರಾತ್ರಿ ಮಲಗುವ ಸಮಯದಲ್ಲಿ ಈ ಪೇಸ್ಟ್ ಅನ್ನು ಮೋಡವೆಗಳ ಮೇಲೆ ಹಚ್ಚಿ ಬೆಳಗಿನವರೆಗೂ ಹಾಗೆ ಬಿಡಿ . ಹೀಗೆ ಎರಡು ಮೂರು ದಿನ ಮಾಡಿ . ಕ್ರಮೇಣ ಮೊಡವೆಗಳು ಮಾಯವಾಗುತ್ತಾ ಬರುತ್ತವೆ . ಈ ರೀತಿ ತಯಾರು ಮಾಡಿದ ಮುಲಾಮು ಕೇವಲ ಮೊಡವೆಗಳಿಗಷ್ಟೇ ಅಲ್ಲದೆ ಎಕ್ಸೀಮ , ಹುಳುಕಡ್ಡಿ ಮತ್ತು ಇನ್ನಿತರೇ ಚರ್ಮ ರೋಗಗಳಿಗೂ ದಿವ್ಯ ಔಷಧಿ .


 • ಯಥೇಚ್ಛವಾದ ರೋಗ ನಿರೋಧಕ ಶಕ್ತಿ

  ಹೌದು ಜೇನು ತುಪ್ಪ ಮತ್ತು ದಾಲ್ಚಿನ್ನಿಯಲ್ಲಿ ಅಡಕವಾಗಿರುವ ಗುಣಗಳಲ್ಲಿ ರೋಗ ನಿರೋಧಕ ಶಕ್ತಿಯೂ ಕೂಡ ಇದೆ . ಪ್ರತಿದಿನ ಈ ಮಿಶ್ರಣವನ್ನು ಸೇವಿಸುತ್ತಾ ಬಂದಿದ್ದೆ ಆದರೆ ನಮ್ಮ ದೇಹಕ್ಕೆ ನಾವೇ ಸೈನಿಕರಿದ್ದಂತೆ . ಹೊರಗಿನ ಬೇರೆ ಯಾವ ಬ್ಯಾಕ್ಟೀರಿಯಾ ಮತ್ತು ವೈರಸ್ ನಮ್ಮ ಮೇಲೆ ದಾಳಿ ಮಾಡಲು ಸಾಧ್ಯವಾಗುವುದಿಲ್ಲ . ಏಕೆಂದರೆ ಇವುಗಳಲ್ಲಿರುವ ಆಂಟಿ ಆಕ್ಸಿಡಂಟ್ ಮತ್ತು ಆಂಟಿ ಬ್ಯಾಕ್ಟೀರಿಯಾ ಗುಣಗಳು ಬ್ಯಾಕ್ಟೀರಿಯಾ ವೈರಸ್ ಗಳನ್ನು ತಡೆದು ನಮ್ಮ ದೇಹಕ್ಕೆ ಕಿಂಚಿತ್ತೂ ಹಾನಿಯಾಗದಂತೆ ನೋಡಿಕೊಳ್ಳುತ್ತದೆ . ಜೊತೆಗೆ ನಮ್ಮ ದೇಹದ ಜೀರ್ಣ ವ್ಯವಸ್ಥೆಯನ್ನು ವೃದ್ಧಿಗೊಳಿಸಿ ಹೊಟ್ಟೆಯಲ್ಲಿ ಏನಾದರೂ ಸಮಸ್ಯೆ ಇದ್ದರೆ ಅದನ್ನೂ ಸರಿಪಡಿಸುತ್ತದೆ . ಜೇನು ತುಪ್ಪ ಮತ್ತು ದಾಲ್ಚಿನ್ನಿಯ ಮಿಶ್ರಣ ಕರುಳಿನ ಭಾಧೆಗೂ ರಾಮಬಾಣ ಎಂಬ ಮಾತಿದೆ .


 • ಮೂಳೆಗಳ ನೋವಿಗೆ ಈ ಮುಲಾಮು ರಾಮಬಾಣ

  ವಯಸ್ಸಾದವರಲ್ಲಿ ಕಾಡುವ ಸಾಮಾನ್ಯ ಖಾಯಿಲೆ ಈ ಕೀಲು ನೋವು , ಮಂಡಿ ನೋವು . ರಾತ್ರಿಯಾದರೆ ಸಾಕು ನೋವಿಗೆ ನಿದ್ದೆಯೇ ಬರುವುದಿಲ್ಲ. ನೋವು ನಿವಾರಕ ಔಷಧಿಗಳನ್ನು ತೆಗೆದುಕೊಂಡು ಸಾಕಾಗಿ ಹೋಗಿರುತ್ತದೆ . ಆದರೂ ನೋವು ಮಾತ್ರ ಕಡಿಮೆ ಆಗಿರುವುದಿಲ್ಲ. ಅಂತಹವರು ಈ ಸುಲಭ ವಿಧಾನವನ್ನು ಅನುಸರಿಸಬಹುದು . ಉಗುರು ಬೆಚ್ಚಿಗಿನ ನೀರಿಗೆ ಒಂದು ಟೀ ಚಮಚ ಜೇನು ತುಪ್ಪ ಮತ್ತು ಅಷ್ಟೇ ಪ್ರಮಾಣದ ದಾಲ್ಚಿನ್ನಿ ಪುಡಿಯನ್ನು ಹಾಕಿ ಪೇಸ್ಟ್ ತಯಾರಿಸಿಕೊಂಡು ನೋವಿರುವ ಜಾಗಕ್ಕೆ ಮೆತ್ತಗೆ ಮಸಾಜ್ ಮಾಡಿ.ಈ ತರಹದ ಸಂಧಿವಾತಕ್ಕೆ ೨:೧ ಪ್ರಮಾಣದಲ್ಲಿ ಜೇನು ತುಪ್ಪ ಮತ್ತು ದಾಲ್ಚಿನ್ನಿ ಪುಡಿಯನ್ನು ಸೇರಿಸಿ ಬಿಸಿನೀರಿನಲ್ಲಿ ಬೆರಸಿ ಕುಡಿಯಬಹುದು .


 • ಹೃದಯದ ತೊಂದರೆ ತೀರಾ ಕಡಿಮೆ :

  ನಿಮಗೆ ಗೊತ್ತಿರುವ ಹಾಗೆ ಹೃದಯದ ಕಾಯಿಲೆ ಒಮ್ಮೆ ಬಂದರೆ ಜೀವನ ಪೂರ್ತಿ ಭಯದಲ್ಲೇ ಬದುಕಬೇಕು . ಇನ್ನು ಆ ಭಯ ಬೇಡ . ಏಕೆಂದರೆ ದಾಲ್ಚಿನ್ನಿ ಮತ್ತು ಜೇನು ತುಪ್ಪ ಇದೆಯಲ್ಲಾ . ಮೂರು ಟೀ ಸ್ಪೂನ್ ದಾಲ್ಚಿನ್ನಿ ಪುಡಿ ಗೆ ಎರಡು ಟೀ ಚಮಚ ಜೇನು ತುಪ್ಪ ಬೆರೆಸಿ ಚೆನ್ನಾಗಿ ಕಲಸಿ ಅದನ್ನು ನೀವು ಬೆಳಗ್ಗೆ ಸಂಜೆ ಕುಡಿಯುವ ಟೀ ಜೊತೆಗೆ ಮಿಶ್ರ ಮಾಡಿ ಪ್ರತಿದಿನ ಕುಡಿಯುತ್ತಾ ಬನ್ನಿ . ನಿಮ್ಮ ರಕ್ತದಲ್ಲಿನ ಕೊಬ್ಬಿನ ಅಂಶ ತಾನಾಗಿಯೇ ಕಡಿಮೆ ಆಗುತ್ತದೆ . ಹೃದಯದ ಆರ್ಟರಿ ಯಲ್ಲಿ ಅಧಿಕ ಕೊಬ್ಬಿನ ಅಂಶದಿಂದ ಪ್ಲೇಕ್ ಎನ್ನುವ ಪದರ ಉಂಟಾಗಿ ರಕ್ತ ಸರಾಗವಾಗಿ ಹರಿಯಲು ತೊಂದರೆ ಉಂಟಾಗುತ್ತಿರುತ್ತವೆ . ಇದರಿಂದಲೇ ಹೃದಯಾಘಾತ ಸಂಭವಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ . ಆದರೆ ಇನ್ನು ಮುಂದೆ ಆ ಸಮಸ್ಯೆ ಇರುವುದಿಲ್ಲ ಬಿಡಿ .


 • ಮೂತ್ರಕೋಶದ ಇನ್ಫೆಕ್ಷನ್ ದೂರ

  ಬಹಳ ಜನಕ್ಕೆ ಮೂತ್ರ ಕೋಶದಲ್ಲಿ ಇನ್ಫೆಕ್ಷನ್ ಕಂಡು ಬಂದು ಹೇಳಲಿಕ್ಕಾಗದೆ ಒದ್ದಾಡುತ್ತಿರುತ್ತಾರೆ . ಇದಕ್ಕೆ ಕಾರಣ ಮೂತ್ರಕೋಶದ ಸೂಕ್ಶ್ಮಾಣು ಜೀವಿಗಳು . ಇವುಗಳನ್ನು ನಾಶಪಡಿಸಬೇಕಾದರೆ ಇರುವ ಸುಲಭ ಮದ್ದೆಂದರೆ ಉಗುರು ಬೆಚ್ಚಗಿನ ನೀರಿಗೆ ಒಂದು ಟೀ ಚಮಚದಷ್ಟು ದಾಲ್ಚಿನ್ನಿ ಪುಡಿ ಮತ್ತು ಅರ್ಧ ಟೀ ಚಮಚದಷ್ಟು ಜೇನು ತುಪ್ಪವನ್ನು ಹಾಕಿ ಕುಡಿದರೆ ಸಾಕು.

  Most Read: ದಾಲ್ಚಿನ್ನಿ ಬೆರೆಸಿದ ಹಾಲು ಕುಡಿಯಿರಿ-ಆರೋಗ್ಯ ಪಡೆಯಿರಿ


 • ತೂಕ ಕಡಿಮೆ ಮಾಡಿಕೊಳ್ಳಲು ಇನ್ನು ಮುಂದೆ ಕಷ್ಟ ಪಡಬೇಕಿಲ್ಲ

  ತುಂಬಾ ದಪ್ಪವಿರುವವರಿಗೆ ನಾವು ಯಾವಾಗ ಸಣ್ಣಗಾಗುತ್ತೇವೆ ಎಂಬ ಚಿಂತೆ ಸದಾ ಕಾಡುತ್ತಿರುತ್ತದೆ . ಏಕೆಂದರೆ ದಪ್ಪವಾಗುವುದು ಸುಲಭ. ಅದೇ ಮತ್ತೆ ಸಣ್ಣ ಆಗಬೇಕೆಂದರೆ ಬಹಳ ಕಷ್ಟ ಪಡಬೇಕು . ಈಗಾಗಲೇ ತುಂಬಾ ದುಡ್ಡು ಖರ್ಚು ಮಾಡಿ ಸುಸ್ತಾಗಿದ್ದರೆ , ಈ ಸುಲಭ ಉಪಾಯ ನಿಮಗೆ ಸಹಾಯಕ್ಕೆ ಬರಬಹುದು. ಜೇನುತುಪ್ಪಕ್ಕೆ ದಾಲ್ಚಿನ್ನಿ ಪುಡಿಯನ್ನು ಬೆರೆಸಿ ಬಿಸಿನೀರಿನಲ್ಲಿ ದಿನಕ್ಕೆ ಮೂರು ಬಾರಿ ಕುಡಿದರೆ ತ್ವರಿತ ಗತಿಯಲ್ಲಿ ಫಲಿತಾಂಶ ಕಂಡು ಬರುತ್ತದೆ .


 • ಬಾಯಿಯ ದುರ್ವಾಸನೆ ದೂರವಾಗುತ್ತದೆ

  ಬಾಯಿಯ ದುರ್ವಾಸನೆ ಎಲ್ಲರಿಗೂ ಕಿರಿಕಿರಿಯೇ . ಮಾತನಾಡಲು ಆಗುವುದಿಲ್ಲ , ಜೊತೆಯಲ್ಲಿ ಕುಳಿತು ತಿನ್ನುವುದಕ್ಕಾಗುವುದಿಲ್ಲ . ಆದರೆ ಇದಕ್ಕೆ ಕೇವಲ ಹಲ್ಲುಜ್ಜದಿರುವುದೇ ಕಾರಣವಲ್ಲ . ಕೀಟಾಣುಗಳೂ ಇದರಲ್ಲಿ ಮಹತ್ತರ ಪಾತ್ರ ವಹಿಸುತ್ತವೆ . ಹಾಗಿದ್ದರೆ ಮೊದಲು ಆ ಕೀಟಾಣುಗಳನ್ನು ಕೊಲ್ಲಬೇಕಲ್ಲವೇ . ಅದಕ್ಕಿದೆ ಸರಳ ಉಪಾಯ . ಜೇನು ತುಪ್ಪ ಮತ್ತು ದಾಲ್ಚಿನ್ನಿಯ ಪೇಸ್ಟ್ ಅನ್ನು ಹಲ್ಲು ವಸಡು ಮತ್ತು ಬಾಯಿಯ ಒಳಗಡೆ ರಾತ್ರಿ ಮಲಗುವ ಮುಂಚೆ ಸವರಿ ಮಲಗಿಕೊಳ್ಳಿ . ಇದರಿಂದ ಬಹು ಬೇಗನೆ ಇದಕ್ಕೆ ಪರಿಹಾರ ಕಂಡು ಕೊಳ್ಳಬಹುದು .


 • ಶೀತ , ನೆಗಡಿ ಮತ್ತು ಕೆಮ್ಮು ಎಲ್ಲವೂ ದೂರ

  ಆಂಟಿ ಬ್ಯಾಕ್ಟೇರಿಯಾಲ್ , ಆಂಟಿ ವೈರಲ್ ಮತ್ತು ಆಂಟಿ ಮೈಕ್ರೋಬಿಯಲ್ ಈ ಎಲ್ಲಾ ಔಷಧೀಯ ಗುಣಗಳು ಯಾವುದಾದರೂ ಒಂದರಲ್ಲಿ ಒಟ್ಟಿಗೆ ಸಿಗುತ್ತದೆ ಎಂದರೆ ಅದು ಜೇನು ತುಪ್ಪ ಮತ್ತು ದಾಲ್ಚಿನ್ನಿಯಲ್ಲಿ ಮಾತ್ರ . ಶೀತಕ್ಕೆ ಸಂಭಂದ ಪಟ್ಟಿರುವ ಕೀಟಾಣುಗಳನ್ನು ಹೊಡೆದೋಡಿಸಲು ಇಷ್ಟು ಸಾಲದೇ . ಶೀತ ಆದ ತಕ್ಷಣ ಈ ಮಿಶ್ರಣವನ್ನು ತೆಗೆದುಕೊಂಡರೆ ಖಂಡಿತ ಪರಿಹಾರ ಕಂಡು ಕೊಳ್ಳಬಹುದು .
ನಮ್ಮ ನಿಮ್ಮ ಅಡುಗೆ ಮನೆಯಲ್ಲಿರುವ ಮಸಾಲೆ ಪದಾರ್ಥಗಳಲ್ಲಿ ದಾಲ್ಚಿನ್ನಿ ಕೂಡ ಒಂದು . ಕೇವಲ ಪಲಾವ್ ಮಾಡಲಿಕ್ಕೆ ಅಥವಾ ಇನ್ನಾವುದೋ ರುಚಿಕರ ತಿಂಡಿ ಮಾಡುವುದಕ್ಕೆ ಮಾತ್ರ ದಾಲ್ಚಿನ್ನಿ ಉಪಯೋಗವಾಗದೆ ನಮ್ಮ ಅರೋಗ್ಯ ರಕ್ಷಣೆಗೂ ಸಹ ಉಪಯೋಗಕ್ಕೆ ಬರುತ್ತದೆ . ಅದರಲ್ಲಿ ಅನೇಕ ಔಷಧೀಯ ಗುಣಗಳು ಅಡಗಿವೆ . ಪ್ರಾಚೀನ ಪದ್ಧತಿಯಲ್ಲೂ ಖಾಯಿಲೆ ವಾಸಿ ಮಾಡಲು ಅರೋಗ್ಯ ಪಂಡಿತರು ದಾಲ್ಚಿನ್ನಿಯನ್ನು ಇತರ ಸಾಮಗ್ರಿಗಳೊಡನೆ ಬಳಸುತ್ತಿದ್ದರು ಎಂಬ ಉಲ್ಲೇಖವಿದೆ . ಹಾಗೆ ಜೇನು ತುಪ್ಪ . ನೆನೆಸಿಕೊಂಡರೆ ಬಾಯಿ ಚಪ್ಪರಿಸಿಕೊಳ್ಳುತ್ತೇವೆ . ಅಷ್ಟೊಂದು ಸಿಹಿ .

ಅಷ್ಟೊಂದು ಇಷ್ಟ ಕೂಡ . ಜೇನು ತುಪ್ಪ ತಿನ್ನಲು ಮಾತ್ರ ರುಚಿ ಅಲ್ಲದೆ ಇದರಲ್ಲೂ ಅನೇಕ ಔಷಧೀಯ ಪ್ರಯೋಜನಗಳಿವೆ . ಕೆಮ್ಮಿಗೆ ಕಫಕ್ಕೆ ನೆಗಡಿಗೆ ಜ್ವರಕ್ಕೆ ಹೀಗೆ ಮನುಷ್ಯನಿಗೆ ಬರುವ ಸಾಮಾನ್ಯ ಖಾಯಿಲೆಗಳಿಗೆ ಜೇನು ತುಪ್ಪ ಒಂದು ರೀತಿಯ ಮನೆ ಮದ್ದು ಎಂದರೆ ನೀವು ನಂಬಲೇಬೇಕು . ಹಾಗಾದರೆ ಜೇನು ತುಪ್ಪ ಮತ್ತು ದಾಲ್ಚಿನ್ನಿ ಎರಡನ್ನೂ ಒಟ್ಟಿಗೆ ಸೇರಿಸಿದರೆ ಏನೆಲ್ಲಾ ಉಪಯೋಗವಿದೆ ಮತ್ತು ಯಾವ ಯಾವ ಕಾಯಿಲೆಗಳಿಗೆ ಭದ್ರ ಕೋಟೆಯಂತೆ ಕೆಲಸ ಮಾಡುತ್ತದೆ ಎಂಬುದನ್ನು ಈಗ ನೋಡೋಣ

   
 
ಹೆಲ್ತ್