Back
Home » ಆರೋಗ್ಯ
ಸೆನ್ಸಿಟಿವ್ ಹಲ್ಲುಗಳ ಸಮಸ್ಯೆ ಇದೆಯೇ? ಈ ಮನೆಮದ್ದುಗಳನ್ನು ಪ್ರಯತ್ನಿಸಿ
Boldsky | 11th May, 2019 10:14 AM
 • ಎಣ್ಣೆಯನ್ನು ಮುಕ್ಕಳಿಸುವುದು

  ಇದೊಂದು ಪುರಾತನ ಆಯುರ್ವೇದೀಯ ಚಿಕಿತ್ಸಾ ಪದ್ದತಿ ಯಾಗಿದ್ದು ಭಾರತದಲ್ಲಿ ಸಾವಿರಾರು ವರ್ಷಗಳಿಂದ ಬಳಕೆಯಲ್ಲಿದೆ. ಈ ವಿಧಾನದಲ್ಲಿ ಕೊಂಚ ಎಣ್ಣೆಯನ್ನು ಬಾಯಿಗೆ ಹಾಕಿಕೊಂಡು ಸಾಕಷ್ಟು ಹೊತ್ತು ಮುಕ್ಕಳಿಸುತ್ತಾ ಇದ್ದು ಬಳಿಕ ಉಗುಳಬೇಕು. ಇದಕ್ಕಾಗಿ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆ ಸೂಕ್ತವಾಗಿವೆ ಹಾಗೂ ತಕ್ಷಣವೇ ಹಲ್ಲಿನ ಸಂವೇದನೆಯನ್ನು ಕಡಿಮೆ ಮಾಡುತ್ತವೆ. 2009 ರಲ್ಲಿ ನಡೆಸಿದ ಅಧ್ಯಯ್ನವೊಂದರಲ್ಲಿ ಎಳ್ಳೆಣ್ಣೆ ಬಳಸಿ ನಿರ್ವಹಿಸದ ವಿಧಾನದ ಮೂಲಕ ಒಸಡಿನ ತೊಂದರೆಗಳು ಸಮರ್ಥವಾಗಿ ಗುಣವಾದರೆ ಹಲ್ಲಿನ ಮತ್ತು ಹಲ್ಲುಗಳ ಸಂಧುಗಳಲ್ಲಿ ಸಂಗ್ರಹವಾಗುವ ಕೂಳೆಯನ್ನು ಇಲ್ಲವಾಗಿಸಲು ಕೊಬ್ಬರಿ ಎಣ್ಣೆ ಅತ್ಯುತ್ತಮ ಎಂದು ಕಂದುಬಂದಿದೆ.


 • ಪೇರಳೆ ಅಥವಾ ಸೀಬೆ ಹಣ್ಣಿನ ಮರದ ಎಲೆಗಳು

  ಸುಮಾರು ಎರಡರಿಂದ ಮೂರು ಹಸಿ ಪೇರಳೆ ಎಲೆಗಳನ್ನು ಜಗಿದು ನೀರಾಗಿಸಿ ಉಗುಳುವುದರಿಂದಲೂ ಹಲ್ಲುಗಳ ನೋವು ಮತ್ತು ಸೂಕ್ಷ್ಮಸಂವೇದನೆ ಇಲ್ಲವಾಗುತ್ತದೆ. 2017ರಲ್ಲ್ಲಿ ನಡೆಸಿದ ಅಧ್ಯಯನವೊಂದರ ಪ್ರಕಾರ, ಪೇರಳೆ ಎಲೆಗಳಲ್ಲಿ ನೋವು ನಿವಾರಕ, ಉರಿಯೂತ ನಿವಾರಕ ಹಾಗೂ ಸೂಕ್ಷ್ಮಜೀವಿ ನಿವಾರಕ ಗುಣಗಳಿವೆ. ಅಲ್ಲದೇ ಪೇರಳೆ ಎಲೆಗಳ ರಸದಲ್ಲಿರುವ ಫ್ಲೇವನಾಯ್ಡುಗಳು ಹೆಚ್ಚಿರುವ ಉತ್ಪನ್ನಗಳನ್ನು ಬಳಸಿದಾಗ ಹಲ್ಲು ನೋವು ಸಹಾ ಕಡಿಮೆಯಾಗುತ್ತದೆ.


 • ಬೆಳ್ಳುಳ್ಳಿ

  ಬೆಳ್ಳುಳ್ಳಿಯಲ್ಲಿ ಉತ್ತಮ ಪ್ರಮಾಣದ ಮ್ಯಾಂಗನೀಸ್, ವಿಟಮಿನ್ ಬಿ6, ವಿಟಮಿನ್ ಸಿ ಹಾಗೂ ತಾಮ್ರಗಳಿವೆ. ಸುಮಾರು ಎರಡು ಅಥವಾ ಮೂರು ಎಸಳು ಹಸಿ ಬೆಳ್ಳುಳ್ಳಿಗಳನ್ನು ಜಗಿಯುವ ಮೂಲಕ ಲಾಲಾರಸದಲ್ಲಿ ಆಲಿಸಿನ್ ಎಂಬ ರಾಸಾಯನಿಕ ಉತ್ಪನ್ನಗೊಳ್ಳುತ್ತದೆ. ಈ ರಾಸಾಯನಿಕ ಅತ್ಯುತ್ತಮ ಅತಿಸೂಕ್ಷ್ಮಜೀವಿ ನಿವಾರಕವಾಗಿದ್ದು ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ಕೊಂದು ಬಾಯಿಯ ಕಾಯಿಲೆಗಳನ್ನು ವಾಸಿಯಾಗಿಸಲು (ಉದಾಹರಣೆಗೆ Streptococcus mutans) ನೆರವಾಗುತ್ತದೆ. Streptococcus mutans ಎದುರಾದರೆ ಹಲ್ಲು ತೀವ್ರವಾಗಿ ಸವೆಯುತ್ತದೆ ಹಾಗೂ ಸೂಕ್ಷ್ಮ ಸಂವೇದಿ ಗುಣವನ್ನು ಇನ್ನಷ್ಟುಉಲ್ಬಣಗೊಳಿಸುತ್ತದೆ.


 • ಉಪ್ಪುನೀರಿನ ಗಳಗಳ

  ಉಪ್ಪುನೀರು ಸಹಾ ಅತ್ಯುತ್ತಮ ಬ್ಯಾಕ್ಟೀರಿಯಾ ನಿವಾರಕವಾಗಿದ್ದು ಬಾಯಿಯನ್ನು ಸ್ವಚ್ಛಗೊಳಿಸಿ ಆರೋಗ್ಯಕರವಾಗಿಸಲು ನೆರವಾಗುತ್ತದೆ. 2017 ರಲ್ಲಿ ನಡೆಸಿದ ಅಧ್ಯಯನವೊಂದರ ಪ್ರಕಾರ ಉಪ್ಪುನೀರಿನಿಂದ ಕೊಂಚಹೊತ್ತು ಬಾಯಿಯನ್ನು ಮುಕ್ಕಳಿಸಿ ಗಳಗಳ ಮಾಡುವ ಮೂಲಕ ಹಲ್ಲುಗಳ ನಡುವಣ ಕೂಳೆ ಇಲ್ಲವಾಗುತ್ತದೆ. ಉಪ್ಪುನೀರನ್ನು ತಯಾರಿಸುವ ವಿಧಾನ: ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಅರ್ಧ ಚಿಕ್ಕಚಮಚ ಉಪ್ಪು ಹಾಕಿ ಚೆನ್ನಾಗಿ ಕಲಕಿ. ಈ ನೀರಿನಿಂದ ಬಾಯಿಯನ್ನು ಚೆನ್ನಾಗಿ ಮುಕ್ಕಳಿಸಿ ಕೆಲವಾರು ಬಾರಿ ಗಳಗಳಿಸಿ ಈ ನೀರನ್ನು ಉಗುಳಬೇಕು.


 • ಅರಿಶಿನ

  ಎಲ್ಲಾ ಅಡುಗೆಮನೆಗಳಲ್ಲಿ ಸಾಮಾನ್ಯವಾಗಿರುವ ಅರಿಶಿನ ಹಲವಾರು ಅಡುಗೆಗಳ ರುಚಿಯನ್ನು ಹೆಚ್ಚಿಸುವ ಜೊತೆಗೇ ಹಲವಾರು ಕಾಯಿಲೆಗಳಿಗೆ ಔಷಧಿಯೂ ಆಗಿದೆ. ಅರಿಶಿನದಲ್ಲಿರುವ ಕುರ್ಕುಮಿನ್ ಎಂಬ ಪೋಷಕಾಂಶ ಅತ್ಯುತ್ತಮ ಔಷಧೀಯ ಗುಣಗಳನ್ನು ಹೊಂದಿದ್ದು ಹಲ್ಲುನೋವನ್ನು ಗುಣಪಡಿಸಲೂ ನೆರವಾಗುತ್ತದೆ. ಅರಿಶಿನವನ್ನು ಬಳಸುವ ವಿಧಾನ: ಅರಿಶಿನ ಪುಡಿ ಮತ್ತು ಕೊಂಚ ನೀರನ್ನು ಬೆರೆಸಿ ನಯವಾದ ಲೇಪವಾಗಿಸಿ. ನಿಮ್ಮ ಹಲ್ಲುಜ್ಜುವ ಬ್ರಶ್ ಮೇಲೆ ಈ ಲೇಪವನ್ನು ಹಚ್ಚಿ ಹಲ್ಲು ಮತ್ತು ಒಸಡುಗಳ ಮೇಲೆ ತೆಳುವಾಗಿ ಲೇಪಿಸಿಕೊಳ್ಳಿ. ಕೊಂಚ ಹೊತ್ತು ಹಾಗೇ ಇರುವಂತೆ ಮಾಡಿ ಬಳಿಕ ಮುಕ್ಕಳಿಸಿ ಸ್ವಚ್ಛಗೊಳಿಸಿ. ಈ ವಿಧಾನದಿಂದ ಹಲ್ಲು ನೋವು ಮತ್ತು ಸೂಕ್ಷ್ಮಸಂವೇದಿ ತೊಂದರೆಗಳು ಶೀಘ್ರವಾಗಿ ಗುಣವಾಗುತ್ತವೆ.
ಬೇಸಿಗೆಯ ದಿನಗಳು ಬಂದಿವೆ ಹಾಗೂ ಎಲ್ಲರ ನೆಚ್ಚಿನ ಐಸ್ ಕ್ರೀಮ್ ಸವಿಯಲು ಸರಿಯಾದ ಸಮಯವಾಗಿದೆ. ಆದರೆ ಈಸ್ ಕ್ರೀಂ ನ ತಣಪು ಹಲ್ಲಿಗೆ ತಗುಲಿದಾಕ್ಷಣ ಎಲ್ಲಿಲ್ಲದ ಜುಂ ಎನ್ನುವ ಅನುಭವ ಐಸ್ ಕ್ರೀಂ ಸವಿಯುವ ಉತ್ಸಾಹವನ್ನೇ ಉಡುಗಿಸಬಲ್ಲುದು. ಅಲ್ಲದೇ ಆ ಹೊತ್ತಿನ ಸಂತೋಷವನ್ನೂ ಕಸಿದುಕೊಳ್ಳಬಹುದು, ಅಲ್ಲವೇ?

ಸೂಕ್ಷ್ಮಸಂವೇದಿ ಹಲ್ಲುಗಳನ್ನು (ಸೆನ್ಸಿಟೀವ್ ಹಲ್ಲು) ಹೊಂದಿರುವುದು ಸದಾ ಮುಜುಗರಕ್ಕೀಡು ಮಾಡುವ ಸಂಗತಿಯಾಗಿದೆ. ಈ ಸ್ಥಿತಿಗೆ ಕಾರಣ ಹಲ್ಲುಗಳ ನಿಧಾನವದ ಸವೆತ ಅಥವಾ ಒಸಡುಗಳು ಸವೆದು ಹಲ್ಲುಗಳ ಬುಡ ಪ್ರಕಟಗೊಳ್ಳುವುದು. ಅರಿವಿಲ್ಲದೇ ಗಡಸು ರೋಮಗಳ ಹಲ್ಲುಜ್ಜುವ ಬ್ರಶ್ ನಿಂದ ವರ್ಷಗಟ್ಟಲೇ ಒತ್ತಡದಿಂದ ಹಲ್ಲುಗಳನ್ನು ಸ್ವಚ್ಛಗೊಳಿಸುವ ಭರದಲ್ಲಿ ತಿಕ್ಕುತ್ತಾ ಹೋಗುವ ಮೂಲಕ ಹಲ್ಲು ಮತ್ತು ಒಸಡುಗಳು ಸವೆದಿರುತ್ತವೆ.

ಸವೆತದ ಮೂಲಕ ಹಲ್ಲಿನ ಹೊರಕವಚ ಅತಿ ತೆಳುವಾಗಿ ಅಥವಾ ಇಲ್ಲವಾಗಿ ಹಲ್ಲುಗಳ ಒಳಭಾಗದ ಸಂವೇದಿ ಭಾಗ ಈಗ ಪ್ರಕಟವಾಗುತ್ತದೆ. ಈಗ ಹಲ್ಲಿನ ಮೇಲೆ ಕೊಂಚವೂ ತಣಪು ಅಥವಾ ಬಿಸಿ ಇರುವ ಆಹಾರ ತಗುಲಿದರೆ ಸೂಕ್ಷ್ಮನರತಂತುಗಳು ನೋವಿನ ಸೂಚನೆಗಳನ್ನು ಮೆದುಳಿಗೆ ರವಾನಿಸುತ್ತವೆ. ಈ ಸ್ಥಿತಿಯನ್ನು ನಿವಾರಿಸಲು ವೈದ್ಯಲು ಕೆಲವಾರು ಔಷಧಿಗಳನ್ನು ಸಲಹೆ ಮಾಡುತ್ತಾರೆ. ವಾಸ್ತವವಾಗಿ ಬಿಸಿ ಅಥವಾ ತಣಪಿನ ಸೂಚನೆಗಳನ್ನು ಪಡೆಯುವ ಹಲ್ಲಿನ ಸೂಕ್ಷ್ಮಭಾಗವನ್ನು ಮುಚ್ಚಿ ಈ ಸಂವೇದನೆಯನ್ನು ಕಳುಹಿಸದಿರುವುದು ಈ ಚಿಕಿತ್ಸೆಯ ತಂತ್ರವಾಗಿದೆ. ಆದರೆ ಇದೇ ಕೆಲಸವನ್ನು ಕೆಲವು ಮನೆಮದ್ದುಗಳು ಸಹಾ ಸಮರ್ಥವಾಗಿ ನಿರ್ವಹಿಸಿ ಮುಜುಗರಕ್ಕೀಡಾಗುವುದನ್ನು ತಪ್ಪಿಸಲು ನೆರವಾಗುತ್ತವೆ.

   
 
ಹೆಲ್ತ್