Back
Home » ಆರೋಗ್ಯ
ಮಧುಮೇಹಿಗಳು ಮಾವಿನಹಣ್ಣು ತಿನ್ನಬಹುದೇ? ಇದರಿಂದ ಏನಾದರೂ ಸಮಸ್ಯೆ ಇದೆಯೇ?
Boldsky | 11th May, 2019 03:00 PM

ನಮ್ಮ ದೇಹಕ್ಕೆ ಒಂದು ಬಾರಿ ಸಕ್ಕರೆ ಕಾಯಿಲೆ ಇದೆ ಎಂದು ತಿಳಿದರೆ ಸಾಕು , ಅದು ತಿನ್ನಬೇಡ , ಇದು ತಿನ್ನಬೇಡ . ಸರಿಯಾದ ಸಮಯಕ್ಕೆ ಮಾತ್ರೆ ತೆಗೆದುಕೋ , ಇನ್ಸುಲಿನ್ ತೆಗೆದುಕೊಳ್ಳುವುದನ್ನು ಮರೆಯಬೇಡ . ಹೀಗೆ ಮನೆಯವರಿಂದ ಸಲಹೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ . ಅದರಲ್ಲಿ ಯಾವುದು ಸತ್ಯವೋ ಇಲ್ಲ ಸುಳ್ಳೋ ಅವರಿಗೆ ಗೊತ್ತಿರುವುದಿಲ್ಲ . ಸುಮ್ಮನೆ ಅಲ್ಲಿ ಇಲ್ಲಿ ಕೇಳಿ ತಿಳಿದುಕೊಂಡಿದ್ದನ್ನು ನಮ್ಮ ಮುಂದೆ ಹೇಳುತ್ತಾ ಇರುತ್ತಾರೆ . ಆದರೆ ನಾವಾದರೂ ಅದರ ಬಗ್ಗೆ ಯೋಚಿಸಬೇಕಲ್ಲವೇ ? ಮಧುಮೇಹ ಶುರುವಾದ ಹೊಸದರಲ್ಲಿ ಯಾವುದು ತಿನ್ನಬೇಕು ಯಾವುದು ತಿನ್ನಬಾರದು ಎಂಬ ಹೊಸ ಆಹಾರಗಳ ಪಟ್ಟಿಗೆ ಸರಿ ಹೊಂದಿಕೊಳ್ಳಲು ನಮಗೆ ಸ್ವಲ್ಪ ಜಾಸ್ತಿ ಸಮಯವೇ ಹಿಡಿಯುತ್ತದೆ .

ಇದರ ಪಟ್ಟಿಗೆ ಬೇರೆ ಆಹಾರಗಳ ಜೊತೆಗೆ ಹಣ್ಣುಗಳ ರಾಜ ಎಂದೇ ಕರೆಸಿಕೊಳ್ಳುವ ಮಾವಿನ ಹಣ್ಣು ಕೂಡ ಸೇರುತ್ತದೆ . ಆದರೆ ಹಣ್ಣುಗಳ ವಿಷಯದಲ್ಲಿ ಅಷ್ಟು ಭಯ ಪಡುವ ಅಗತ್ಯವಿಲ್ಲ . ಏಕೆಂದರೆ ಹಣ್ಣುಗಳು ತಿನ್ನಲು ಸಿಹಿಯಾಗಿದ್ದರೂ ಅದರಲ್ಲಿರುವ ಕೆಲವೊಂದು ಪೋಷಕಾಂಶಗಳು ಮಧುಮೇಹಿಗಳಿಗೂ ಉಪಯೋಗವಾಗುತ್ತವೆ . ಆದ್ದರಿಂದ ಮಾವಿನ ಹಣ್ಣು ಸೇರಿದಂತೆ ಇತರೆ ಹಣ್ಣುಗಳನ್ನು ಮಿತ ಪ್ರಮಾಣದಲ್ಲಿ ತಿಂದರೆ ಆರೋಗ್ಯಕ್ಕೆ ಯಾವುದೇ ತೊಂದರೆ ಇರುವುದಿಲ್ಲ .

ಗ್ಲೈಸೆಮಿಕ್ ಇಂಡೆಕ್ಸ್

ಏನಿದು ಗ್ಲೈಸೆಮಿಕ್ ಇಂಡೆಕ್ಸ್ ಎಂದು ಚಿಂತಿಸುತ್ತಿದ್ದೀರಾ ? ಇದು ಮಧುಮೇಹಿಗಳಿಗೆ ಯಾವ ಆಹಾರ ಸೂಕ್ತ ಮತ್ತು ಯಾವುದು ಸೂಕ್ತ ಅಲ್ಲ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿ ಅಂಕಿ ಅಂಶಗಳಲ್ಲಿ ತಿಳಿಸುತ್ತದೆ . ಅಂದರೆ ಯಾವ ಆಹಾರ ಎಷ್ಟು ತಿಂದರೆ ಬ್ಲಡ್ ಶುಗರ್ ಲೆವೆಲ್ ಯಾವ ಮಟ್ಟಕ್ಕೆ ಹೋಗುತ್ತದೆ ಎಂದು ಅಳೆಯುವ ಒಂದು ವಿಧಾನ . ಇದನ್ನು ಶುದ್ಧ ಗ್ಲುಕೋಸ್ , ಮನುಷ್ಯನ ಮೈ ಸೇರಿದರೆ ಬ್ಲಡ್ ಶುಗರ್ ಲೆವೆಲ್ ಯಾವ ಮಟ್ಟಕ್ಕೆ ಹೋಗುತ್ತದೆ ಎಂಬುದರ ಜೊತೆ ತಾಳೆ ಹಾಕಲಾಗುತ್ತದೆ . ಯಾವ ಆಹಾರ ದ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಸಂಖ್ಯೆಯಲ್ಲಿ ಬರುತ್ತದೆಯೋ ಅಂತಹ ಆಹಾರ ತಿಂದರೆ ಯಾವ ಭಯವೂ ಇರುವುದಿಲ್ಲ . ಅದೇ ಯಾವುದರ ಗ್ಲೈಸೆಮಿಕ್ ಇಂಡೆಕ್ಸ್ ನ ಸಂಖ್ಯೆ ಜಾಸ್ತಿ ಬರುತ್ತದೋ ಅಂತಹ ಆಹಾರವನ್ನು ಮುಟ್ಟಲೇ ಬಾರದು . ಹೀಗೆ ಅಳೆದು ನೋಡಿದಾಗ ಮಾವಿನ ಹಣ್ಣಿನ ಗ್ಲೈಸೆಮಿಕ್ ಇಂಡೆಕ್ಸ್ ಕೇವಲ ೫೧ ಬರುತ್ತದೆ ಅದೂ ಪರಂಗಿಹಣ್ಣು ಮತ್ತು ಪೈನ್ ಆಪಲ್ ನ ಸಂಖ್ಯೆಗೆ ಹೋಲಿಸಿದರೆ ಕಡಿಮೆಯೇ . ಆದರಿಂದ ಯಾವುದೇ ಭಯ ಪಡದೆ ಸುಮಾರು ಅರ್ಧಕ್ಕಿಂತ ಕಡಿಮೆ ಮಾವಿನ ಹಣ್ಣನ್ನು ತಿಂದರೆ ಆರೋಗ್ಯ ಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ.

Most Read: ಡಯಾಬಿಟೀಸ್ ಇರುವವರ ಆರೋಗ್ಯಕ್ಕೆ ಬಹಳ ಒಳ್ಳೆಯದು ಈ ಹಣ್ಣುಗಳು

ಅಮೆರಿಕನ್ ಡಯಾಬಿಟಿಸ್ ಅಸೋಸಿಯೇಷನ್ ಸಂಸ್ಥೆಯು ನಾವು ತಿನ್ನುವ ಒಂದೊಂದು ಆಹಾರದ ಗ್ಲೈಸೆಮಿಕ್ ಇಂಡೆಕ್ಸ್ ಅನ್ನು ಕಂಡು ಹಿಡಿದಿದೆ . ಆದರೆ ಅದರಿಂದ ಮಧುಮೇಹ ಕ್ಕೆ ಯೋಗ್ಯವಾದ ಆಹಾರದ ಪ್ರಮಾಣ ಎಷ್ಟು ಎಂಬುದು ಗೊತ್ತಾಗುವುದಿಲ್ಲ . ನಾವು ಪ್ರತಿದಿನ ತಿನ್ನುವ ಆಹಾರದ ಪ್ರಮಾಣದ ಕಾರ್ಬೋಹೈಡ್ರೇಟ್ ಅನ್ನು ಅಳೆದರೆ ಸುಲಭವಾಗಿ ತಿಳಿಯುತ್ತದೆ . ಇಲ್ಲೂ ಸಹ ಮಾವಿನ ಹಣ್ಣು ಉತ್ತೀರ್ಣವಾಗಿದೆ . ಏಕೆಂದರೆ ಅರ್ಧ ಕಪ್ ಮಾವಿನ ಹಣ್ಣಿನಲ್ಲಿ ಕೇವಲ ೧೨ ಗ್ರಾಂ ನಷ್ಟು ಮಾತ್ರ ಕಾರ್ಬೋಹೈಡ್ರೇಟ್ ಅಂಶ ಪತ್ತೆಯಾಗಿದೆ . ಇದು ಕೆಂಪು ದ್ರಾಕ್ಷಿ , ಹಸಿರು ದ್ರಾಕ್ಷಿ ಮತ್ತು ಬಾಳೆ ಹಣ್ಣಿನಲ್ಲಿ ಕಂಡು ಬರುವ ೨೭ ಗ್ರಾಂ ಗಿಂತ ಕಡಿಮೆ ಇದೆ ಎಂದು ಯಾರು ಬೇಕಾದರೂ ಖುಷಿ ಪಡಬಹುದು .

ಮಾವಿನ ಹಣ್ಣಿನಿಂದ ಸಿಗುವ ಪೋಷಕಾಂಶಗಳು

ನಮ್ಮ ಬ್ಲಡ್ ಶುಗರ್ ಲೆವೆಲ್ ಅನ್ನು ನಿಯಂತ್ರಿಸುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ನಾವು ತಿನ್ನುವ ಆಹಾರದಲ್ಲಿ ಎಷ್ಟು ಪ್ರಮಾಣದ ಪೋಷಕಾಂಶ , ಫೈಬರ್ ಅಂಶ ಮತ್ತು ಕ್ಯಾಲೊರಿ ಅಂಶ ಇದೆ ಎಂದು ತಿಳಿದುಕೊಂಡು ನಂತರ ನಮಗೆ ಬೇಕಾದಷ್ಟು ಬಳಸಿ ಆರೋಗ್ಯಕರ ಡಯಟ್ ಮಾಡಬಹುದು .

ಮಾವಿನ ಹಣ್ಣಿನಲ್ಲಿ ವಿಟಮಿನ್ ' ಸಿ ' ಮತ್ತು ವಿಟಮಿನ್ ' ಏ ' ಪೋಷಕಾಂಶ ಹೇರಳವಾಗಿದೆ . ಇನ್ನು ಫೈಬರ್ ಅಂಶಕ್ಕೆ ಬಂದರೆ ಬೀನ್ಸ್ ಮತ್ತು ಓಟ್ಸ್ ನಲ್ಲಿ ಯಾವ ರೀತಿ ಕರಗುವಂತಹ ಫೈಬರ್ ಅಂಶ ಇದೆಯೋ ಅದೇ ಥರ ಮಾವಿನ ಹಣ್ಣಿನಲ್ಲೂ ಇದೆ .ಜೊತೆಗೆ ಪೊಟ್ಯಾಸಿಯಂ ಅಂಶ ಕೂಡ ಇದೆ . ಯು ಎಸ್ ಡಿ ಏ ನ ೨೦೧೫ ನೇ ಪೋಷಕಾಂಶಗಳ ನಿಯಮಗಳ ಪ್ರಕಾರ , ಯಾವ ಆಹಾರಗಳು ಪೋಷಕಾಂಶಗಳನ್ನು ಅಧಿಕವಾಗಿ ಹೊಂದಿರುತ್ತವೆಯೋ ಅಂತಹ ಆಹಾರವನ್ನು ನಿಯಮಿತವಾಗಿ ಬಳಸಬಹುದು . ಮತ್ತುಇದರಲ್ಲಿ ಮಾವಿನ ಹಣ್ಣೂ ಕೂಡ ಸೇರಿದೆ . ಆದ್ದರಿಂದ ಮಾವಿನ ಹಣ್ಣನ್ನು ನಿಯಮಿತವಾಗಿ ತಿಂದರೆ ಯಾವ ತೊಂದರೆ ಆಗುವುದಿಲ್ಲ .

ಮಾವಿನ ಹಣ್ಣನ್ನು ನಮ್ಮ ಡಯಟ್ಗೆ ಹೇಗೆಲ್ಲ ಸೇರಿಸಿಕೊಳ್ಳಬಹುದು?

ಮಾವಿನಹಣ್ಣು ಒಮ್ಮೆ ತಿಂದರೆ ಮತ್ತೆ ತಿನ್ನಬೇಕು ಆನಿಸುವುದರಲ್ಲಿ ಯಾವುದೇ ಸಂದೇಹವಿಲ್ಲ . ಹಣ್ಣು ಸಿಗದಿದ್ದರೂ ಮಾವಿನ ಹಣ್ಣಿನ ಜ್ಯೂಸು ಆದರೂ ಕುಡಿಯಬೇಕು ಎನ್ನುವ ತವಕ ಉಂಟಾಗುತ್ತದೆ . ಆದರೆ ಶೇಖರಿಸಿಟ್ಟ ಹಣ್ಣಿನ ರಸದಲ್ಲಿ ಸಕ್ಕರೆ ಅಂಶ ಯಥೇಚ್ಛವಾಗಿರುತ್ತದೆ . ಆದ್ದರಿಂದ ದಯಮಾಡಿ ಈ ತರಹದ ಹಣ್ಣಿನ ಜ್ಯೂಸು ಅನ್ನುಯಾವುದೇ ಕಾರಣಕ್ಕೂ ಮಧುಮೇಹಿಗಳು ಸೇವಿಸಬೇಡಿ.

Most Read: ಡಯಾಬಿಟಿಸ್ ಸಮಸ್ಯೆ ಇದ್ದವರು ಮೊಟ್ಟೆ ತಿನ್ನಬಹುದೇ? ಇದರಿಂದ ಏನಾದರೂ ಸಮಸ್ಯೆಗಳಿವೆಯೇ?

ಮಾವಿನಹಣ್ಣನ್ನು ಸಿಪ್ಪೆಯ ಸಮೇತ ತಿನ್ನಬೇಡಿ . ಸಿಪ್ಪೆ ತೆಗೆದು ಒಳಗಿರುವ ಹಣ್ಣಿನ ಅಂಶವನ್ನು ಚಾಕುವಿನಿಂದ ಕಟ್ ಮಾಡಿ ಅದನ್ನು ಹಾಗೆ ಯಾವುದೇ ಸಕ್ಕರೆ ಬೆರೆಸದೆ ತಿನ್ನಿ . ಮೀನು , ಮಾಂಸ ಮತ್ತು ಚಿಕನ್ ಗೆ ಮಾವಿನ ಹಣ್ಣಿನ ಗಾರ್ನಿಶ್ ಮಾಡಿ ಕೂಡ ತಿನ್ನಬಹುದು

ಒಟ್ಟಿನಲ್ಲಿ ಮಾವಿನ ಹಣ್ಣು ವರ್ಷವಿಡೀ ಏನೂ ಇರುವುದಿಲ್ಲ . ಅದು ಬಂದಾಗ ಪಕ್ಕದವರು ತಿನ್ನುವುದನ್ನು ನೋಡಿ ಮೂಗು ಮುರಿಯದೆ ನೀವೂ ತಿಂದು ಸಂತೋಷ ಪಡಿ . ಆದರೆ ನಿಯಮಿತವಾಗಿ ನೆನಪಿರಲಿ .

   
 
ಹೆಲ್ತ್