Back
Home » ಆರೋಗ್ಯ
ಮೈ ಮೇಲಿನ ಗುಳ್ಳೆಗಳ ನಿವಾರಣೆಗೆ ಮನೆಯಲ್ಲಿ ಸುಲಭ ಪರಿಹಾರಗಳು
Boldsky | 12th May, 2019 08:00 AM
 • ಐಸ್ ತೆರಪಿ

  ಸಾಮಾನ್ಯವಾಗಿ ದೇಹದ ಮೇಲೆ ಗಾಯವಾದರೆ ಅದರ ಮೇಲೆ ಐಸ್ ಇಡುತ್ತಾರೆ . ಏಕೆಂದರೆ ರಕ್ತ ಸುರಿಯುವುದು ನಿಲ್ಲಲಿ ಮತ್ತು ಅಕ್ಕ ಪಕ್ಕ ರಕ್ತ ಲೀಕ್ ಆಗದಿರಲಿ ಎಂದು . ಇದರಿಂದ ಗಾಯ ದೊಡ್ಡದಾಗುವುದು ಇಲ್ಲ ಮತ್ತು ಊದಿಕೊಳ್ಳುವುದು ಇಲ್ಲ . ಆದರೆ ಇದನ್ನು ಮಾಡುವ ವಿಧಾನ ಕೆಲವರಿಗೆ ಗೊತ್ತಿರುವುದಿಲ್ಲ. ಗಾಯದ ಮೇಲೆ ಐಸ್ ಗಡ್ಡೆಯನ್ನು ಕೇವಲ 10 ನಿಮಿಷ ಮಾತ್ರ ಇಡಬೇಕು . ಮತ್ತು ಪ್ರತಿ 20 ನಿಮಿಷಕ್ಕೊಮ್ಮೆ ಈ ರೀತಿ ಮಾಡಬೇಕು.


 • ಅಲೋವೆರಾ

  ಅಲೋವೆರಾ ಸಸ್ಯಕ್ಕೆ ಆಂಟಿ ಇಂಪ್ಲಾಮ್ಯಾಟೋರಿ ಗುಣವಿದೆ . ಅಂದರೆ ಗಾಯ ಊದಿಕೊಳ್ಳುವುದನ್ನು ತಡೆದು ಅದರಿಂದ ಉಂಟಾಗುವ ನೋವನ್ನು ಶಮನ ಮಾಡುತ್ತದೆ . ಅಲೋವೆರಾ ಜೆಲ್ ಆಗಿರುವ ಗಾಯದ ಮೇಲೆ ನೇರವಾಗಿ ಹಾಕಿದಾಗ ಗಾಯ ಮಾಡುವ ಪ್ರಕ್ರಿಯೆಯನ್ನು ಚುರುಕುಗೊಳಿಸುತ್ತದೆ . ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ . ಗಾಯ ಊದಿಕೊಂಡಿರುವ ಜಾಗಕ್ಕೆ ಶುದ್ಧವಾದ ಅಲೋವೆರ ಜೆಲ್ ಅನ್ನು ಉಪಯೋಗಿಸುವುದು ಒಳ್ಳೆಯದು .


 • ಪೈನ್ ಆಪಲ್

  ಇದರಲ್ಲಿ ಬ್ರೊಮೆಲೈನ್ ಎಂಬ ಎಂಜೈಮ್ ಮಿಶ್ರಿತ ಅಂಶವಿದ್ದು ಆಂಟಿ ಇಂಪ್ಲಾಮ್ಮೆಟರಿ ಗುಣ ಲಕ್ಷಣ ಹೊಂದಿದೆ . ಪೈನ್ ಆಪಲ್ ರಸವನ್ನು ಆಗಿರುವ ಗುಳ್ಳೆಗಳ ಮೇಲೆ ಹಚ್ಚಿದರೆ ಚರ್ಮ ಊತ ಬರುವುದನ್ನು ತಡೆಯುತ್ತದೆ ಮತ್ತು ಗುಳ್ಳೆಗಳು ಬೇಗ ಗುಣವಾಗುವಂತೆ ಮಾಡುತ್ತದೆ . ಇದರ ಜೊತೆಗೆ ಪೈನ್ ಆಪಲ್ ಜ್ಯೂಸು ಕುಡಿಯುವುದರಿಂದಲೂ ಗಾಯದಿಂದ ಬಹು ಬೇಗನೆ ಮುಕ್ತಿ ಪಡೆಯಬಹುದು . ಕೆಲವರಿಗೆ ಮಾತ್ರ ಪೈನ್ ಆಪಲ್ ಅಂದರೆ ಅಲರ್ಜಿ . ಅಂತಹವರು ಇದರಿಂದ ದೂರವಿರಬಹುದು .


 • ಆಪಲ್ ಸೈಡರ್ ವಿನೆಗರ್

  ಆಪಲ್ ಸೈಡರ್ ವಿನೆಗರ್ ಎಲ್ಲರ ಮನೆಯಲ್ಲೂ ಇರುತ್ತದೆ . ಇದರಲ್ಲೂ ಸಹ ಆಂಟಿ ಇಂಪ್ಲಾಮೇಟರಿ ಗುಣವಿದ್ದು ಗಾಯವನ್ನಾಗಲೀ ಅಥವಾ ಗುಳ್ಳೆಯನ್ನಾಗಲೀ ವೇಗವಾಗಿ ವಾಸಿ ಮಾಡುತ್ತದೆ . 2 : 1 ಪ್ರಮಾಣದಲ್ಲಿ ನೀರಿನ ಜೊತೆಗೆ ಆಪಲ್ ಸೈಡರ್ ವಿನೆಗರ್ ಅನ್ನು ಬೆರೆಸಿ ಒಂದು ಹತ್ತಿಯನ್ನು ಅದರಲ್ಲಿ ಅದ್ದಿ ಅದನ್ನು ಗಾಯದ ಮೇಲೆ ಇಟ್ಟುಕೊಂಡರೆ ನೋವು ನಿಧಾನವಾಗಿ ಮಾಯವಾಗಿ ಗಾಯವೂ ಸಹ ಬೇಗನೆ ಮಾಗುತ್ತದೆ .

  Most Read: ಮಧುಮೇಹಿಗಳು ಮಾವಿನಹಣ್ಣು ತಿನ್ನಬಹುದೇ? ಇದರಿಂದ ಏನಾದರೂ ಸಮಸ್ಯೆ ಇದೆಯೇ?


 • ಲ್ಯಾವೆಂಡರ್ ಆಯಿಲ್

  ಇದು ಎಲ್ಲ ರೀತಿಯ ಚರ್ಮದವರಿಗೂ ಹೊಂದುವಂತಹ ಮತ್ತು ಗಾಯ ವನ್ನು ವಾಸಿ ಮಾಡುವುದರಲ್ಲಿ ಎಲ್ಲರೂ ಇದಕ್ಕೆ ಪ್ರಥಮ ಆದ್ಯತೆ ಕೊಡುತ್ತಾರೆ . ಇದನ್ನು ಡೈಲ್ಯೂಟ್ ಮಾಡದೆ ಉಪಯೋಗಿಸಿದರೆ ಬಹಳ ಉತ್ತಮ . ತಣ್ಣನೆಯ ನೀರಿಗೆ 2 - 3 ತೊಟ್ಟು ಲ್ಯಾವೆಂಡರ್ ಆಯಿಲ್ ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು . ನಂತರ ಒಂದು ಶುದ್ಧ ಬಟ್ಟೆಯನ್ನು ಅದರಲ್ಲಿ ಅದ್ದಿ ಅದನ್ನು ಗುಳ್ಳೆಯ ಮೇಲಿಟ್ಟು ಚೆನ್ನಾಗಿ ಒರೆಸಬೇಕು . ಹೀಗೆ ದಿನಕ್ಕೆ ಮೂರು ಬಾರಿ ಮಾಡಿದರೆ ಖಂಡಿತ ಗಾಯ ವಾಸಿಯಾಗುತ್ತದೆ .


 • ಬೇಯಿಸಿದ ಮೊಟ್ಟೆಯನ್ನು ಗುಳ್ಳೆಯ ಮೇಲೆ ಉರುಳಿಸಿ!

  ಇದು ಕೇಳಲು ವಿಚಿತ್ರ ಎನಿಸಿದರೂ ಸತ್ಯ . ಹೀಗೆ ಗಾಯದ ಮೇಲೆ ಬೇಯಿಸಿದ ಮೊಟ್ಟೆಯನ್ನು ಉರುಳಿಸಿದರೆ ಊತ ಮತ್ತು ನೋವು ಶಮನವಾಗುತ್ತದೆ . ನೀವು ಮಾಡಬೇಕಾಗಿರುವುದು ಇಷ್ಟೇ . ಮೊಟ್ಟೆಯನ್ನು ಬೇಯಿಸಿ ಅದರ ಸಿಪ್ಪೆ ತೆಗೆದು ಒಳಗಿನ ಭಾಗವನ್ನು ಗಾಯದ ಮೇಲಿಟ್ಟು ಉರುಳಿಸಿ.

  Most Read: ಬಾಯಿಹುಣ್ಣಿಗೆ ಸರಳ ಮನೆಮದ್ದುಗಳು-ಒಂದೇ ದಿನದಲ್ಲಿ ಪರಿಹಾರ


 • ಗಾಯಗಳಿಗೆ ಮತ್ತು ಗುಳ್ಳೆಗಳಿಗೆ ತಕ್ಕಂತೆ ಆಹಾರ ಪದ್ಧತಿ

  ಗಾಯಗಳು ಬೇಗನೆ ವಾಸಿಯಾಗಲು ನಾವು ತಿನ್ನುವ ಆಹಾರಗಳು ಸಹ ಕಾರಣ . ಕೆಲವು ಆಹಾರಗಳು ಗಾಯ ಬೇಗನೆ ಮಾಗುವಂತೆ ಮಾಡುತ್ತವೆ . ಇನ್ನೂ ಕೆಲವು ಆಹಾರಗಳು ಗಾಯ ಅಲ್ಲೆರ್ಜಿಯಾಗುವಂತೆ ಮಾಡಿ ಬಹಳ ಸಮಯ ಉಳಿಯುವಂತೆ ಮಾಡುತ್ತವೆ . ಗಾಯ ವಾಸಿ ಮಾಡುವ ಆಹಾರಗಳು ಗಾಯಕ್ಕೆ ಸಂಪರ್ಕಿಸುವ ರಕ್ತನಾಳಗಳನ್ನು ಬಲಪಡಿಸಿ ಗಾಯದ ಗುರುತು ಕಾಣದಂತೆ ಮಾಡುತ್ತವೆ . ಅವು ಯಾವುವೆಂದರೆ ,
  * ಸಿಟ್ರಸ್ ಹಣ್ಣುಗಳು : ಕಿತ್ತಳೆ ಹಣ್ಣು , ನಿಂಬೆ ಹಣ್ಣು , ಮೂಸಂಬಿ ಹಣ್ಣು , ಕಿರಲೇ ಕಾಯಿ .
  * ವಿಟಮಿನ್ ' ಕೆ ' ಹೊಂದಿರುವ ಆಹಾರಗಳು : ದಂಟು , ಪಾಲಕ್ , ಬ್ರೊಕೋಲಿ , ಸ್ಟ್ರಾ ಬೆರಿ , ಬ್ಲೂ ಬೆರಿ ಮತ್ತು ಸೋಯಾ ಅವರೆ .
  * ಹಣ್ಣುಗಳು : ಆಪಲ್ , ಈರುಳ್ಳಿ , ಚೆರ್ರಿ ಹಣ್ಣುಗಳು ಮತ್ತು ಹಸಿರು ಎಲೆ ತರಕಾರಿಗಳು .
  * ಪ್ರೋಟೀನ್ ಅಂಶದ ಪದಾರ್ಥಗಳು : ಮೀನು , ಕೋಳಿ ಮತ್ತು ಮಾಂಸ .
  * ಜಿಂಕ್ ಹೊಂದಿರುವ ಆಹಾರಗಳು : ಪಾಲಕ್ ಸೊಪ್ಪು , ಕುಂಬಳ ಕಾಯಿ ಬೀಜ , ಮತ್ತು ದ್ವಿದಳ ಧಾನ್ಯಗಳು .
ದೇಹದ ಮೇಲಿನ ಗುಳ್ಳೆಗಳು ಒಂದು ರೀತಿಯ ಅಂಟು ವ್ಯಾಧಿ ಇದ್ದಂತೆ . ಒಂದು ಗುಳ್ಳೆ ಯಿಂದ ಬರುವ ರಸ ಅಕ್ಕಪಕ್ಕದ ಚರ್ಮಕ್ಕೆ ಸೋಕಿದರೆ ಅಲ್ಲಿಯೂ ಮತ್ತೊಂದು ಗುಳ್ಳೆ ಉತ್ಪತ್ತಿಯಾಗುತ್ತದೆ . ಸಾಮಾನ್ಯವಾಗಿ ಗುಳ್ಳೆಗಳನ್ನು ಗಾಯಗಳಿಗೆ ಹೋಲಿಸಲಾಗಿದೆ . ಏಕೆಂದರೆ ಅಕಸ್ಮಾತ್ ಆಗಿ ನಮಗೆ ಬಿದ್ದು ಏಟಾಗಿ ಗಾಯವಾದರೆ ಚರ್ಮದ ಹಿಂದಿರುವ ಸಣ್ಣರಕ್ತನಾಳಗಳು ಒಡೆದು ಅದರಿಂದ ಬರುವ ರಕ್ತ ಚರ್ಮದ ಕೆಳಗೆ ಮಡುಗಟ್ಟಿರುತ್ತದೆ .

ಆದರೆ ಯಾವಾಗಲೂ ರಕ್ತ ಸಂಚಾರವಿರುವುದರಿಂದ ರಕ್ತ ಅಲ್ಲಿಂದ ಲೀಕ್ ಆಗುವ ಸಂಭವ ಹೆಚ್ಚಿರುತ್ತದೆ ಮತ್ತು ಚರ್ಮವನ್ನು ಕರಿ ನೇರಳೆ ಬಣ್ಣಕ್ಕೆ ತಿರುಗಿಸುತ್ತದೆ ಮತ್ತು ಅದನ್ನೇ ಗುಳ್ಳೆ ಎಂದು ಕರೆಯುತ್ತಾರೆ . ಗುಳ್ಳೆಗಳಿಗೆ ಚಿಕಿತ್ಸೆ ಕೊಡಲು ಸ್ವಲ್ಪ ಕಷ್ಟ ಆಗಬಹುದು . ಏಕೆಂದರೆ ಚರ್ಮದ ಕೆಳಗೆ ಗಾಯ ಆಗಿರುತ್ತದೆ . ಅಲ್ಲದೆ ಗಾಯ ಮಾಗಲು ಎಷ್ಟು ಸಮಯ ಹಿಡಿಯುತ್ತದೆ ಎಂಬುದು ಅವರವರ ಚರ್ಮದ ಸೂಕ್ಷ್ಮತೆಗೆ ಬಿಟ್ಟ ವಿಚಾರವಾಗಿದೆ . ನಾವು ಕೆಳಗೆ ಕೊಟ್ಟಿರುವ ವಿಧಾನಗಳು ಸರಳ ಮತ್ತು ಸುರಕ್ಷತೆ ಇಂದ ಕೂಡಿದ್ದು ಗುಳ್ಳೆಗಳು ಬಹುಬೇಗನೆ ವಾಸಿಯಾಗಲು ಸಹಾಯಕವಾಗುತ್ತದೆ. ಮೊದಲನೆಯದಾಗಿ

   
 
ಹೆಲ್ತ್