Back
Home » ಆರೋಗ್ಯ
ದೇಹದ ಅಧಿಕ ಉಷ್ಣತೆಯಲ್ಲಿ ತಂಪಾಗಿರಲು ಯೋಗಾಸನಗಳು!
Boldsky | 12th May, 2019 10:01 AM

ಬಿಸಿಲ ಝಳವನ್ನು ಯಾರಿಂದಲೂ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಯ್ಯೋ ಮಳೆರಾಯ, ಒಮ್ಮೆ ಬಂದು ಬಿಡು ಎನ್ನುವ ಕೂಗು ಎಲ್ಲಾ ಕಡೆಯಿಂದಲೂ ಕೇಳಿಬರುತ್ತಿದೆ. ಬಿಸಿಲಿನ ಝಳದಿಂದಾಗಿ ಈಗಾಗಲೇ ಎಲ್ಲಾ ಕಡೆ ನೀರಿನ ಮೂಲಗಳು ಬತ್ತಿ ಹೋಗಿದೆ. ಪ್ರತಿಯೊಂದು ಕಡೆಗಳಲ್ಲೂ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಬಿಸಿಲಿನಲ್ಲಿ ಹೊರಹೋದರೆ ಆಗ ನಿರ್ಜಲೀಕರಣ ಕೂಡ ಉಂಟಾಗುವುದು. ವಾತಾವರಣದಲ್ಲಿ ಉಷ್ಣತೆಯು ಹೆಚ್ಚಾಗುತ್ತಿದ್ದರೆ ದೇಹದಲ್ಲಿ ಕ್ರೋಧವು ಉಂಟಾಗುವುದು. ಆದರೆ ಯೋಗ ಮಾಡಿಕೊಂಡು ದೇಹವನ್ನು ಶಾಂತವಾಗಿ ಇಟ್ಟುಕೊಳ್ಳಬಹುದು. ಅದರಲ್ಲೂ ಪ್ರಾಣಾಯಾಮವು ತುಂಬಾ ಪರಿಣಾಮಕಾರಿ.

ಹಿಮಾಲದಲ್ಲಿ ಇರುವಂತಹ ಸಾಧುಸಂತರು ನಮ್ಮ ದೇಹದಲ್ಲಿ ಇರುವಂತಹ ಎಲ್ಲಾ ರೀತಿಯ ಅಂಗಗಳನ್ನು ಯಾವ ರೀತಿ ನಿಗ್ರಹ ಮಾಡಬೇಕೆಂದು ತಿಳಿದುಕೊಂಡಿರುವರು. ಅವರು ದೇಹ, ಮನಸ್ಸು ಮತ್ತು ಉಸಿರನ್ನು ತಮ್ಮ ಹದ್ದುಬಸ್ತಿನಲ್ಲಿ ಇಟ್ಟುಕೊಂಡು ಯಾವುದೇ ವಾತಾವರಣದಲ್ಲೂ ಬದುಕಬಲ್ಲರು.

ಸಿತಾಲಿ ಎಂದು ಕರೆಯುವ ಅಭ್ಯಾಸದಿಂದಾಗಿ ತಂಪಾದ ಉಸಿರಾಟ ಮಾಡಬಹುದು. ಸನ್ಯಾಸಿಗಳು ದೀರ್ಘಸಮಯದ ಧ್ಯಾನದಿಂದ ಪಕ್ಷಿಯ ಕೆಳ ಕೊಕ್ಕು ಮತ್ತು ಹೊಸ-ವಿಚಿತ್ರವಾದ ಹಸಿರು ಎಲೆಯು ಕೆಡದ ಹೀಗೆ ಹಲವಾರು ಭಂಗಿಗಳನ್ನು ಅವರು ಅಭ್ಯಾಸ ಮಾಡಿಕೊಂಡಿರುವರು. ಪ್ರಾಣಾಯಾಮದಿಂದ ನಾಲಗೆಯನ್ನು ಸರುರುಳಿ ಮಾಡಿಕೊಂಡು ಉಸಿರಾಡುವ ಮೂಲಕವಾಗಿ ತೇವಾಂಶವಿರುವಂತಹ ಗಾಳಿಯು ಒಳಹೋಗಲು ನೆರವಾಗುವುದು.

ಸಿತಾಲಿ ಅಭ್ಯಾಸ ಮಾಡಿದರೆ ಅದರಿಂದ ಹಸಿವು ಮತ್ತು ಬಾಯಾರಿಕೆ ಮಟ್ಟವನ್ನು ನಿಯಂತ್ರಣ ಮಾಡಬಹುದು. ಇದರಿಂದ ಏಕಾಂತದಲ್ಲಿ ಪ್ರೀತಿ ಹಾಗೂ ವಾತ್ಸಲ್ಯವನ್ನು ಪ್ರೋತ್ಸಾಹಿಸುವುದು. ಈ ವಿಧಾನದಿಂದ ದೇಹಕ್ಕೆ ಹೆಚ್ಚಿನ ತೇವಾಂಶ ಸಿಗುವುದು ಮತ್ತು ಇದರಿಂದ ದೇಃವು ತುಂಬಾ ಶಾಂತವಾಗಿ ಇರುವುದು. ಆಯುರ್ವೇದವು ಹೇಳುವ ಪ್ರಕಾರ ಇದು ಪಿತ್ತವನ್ನು ಕಡಿಮೆ ಮಾಡುವುದು. ಪಿತ್ತ ಸಮಸ್ಯೆಯು ಬೇಸಗೆಯಲ್ಲಿ ಹೆಚ್ಚಾಗಿರುವುದು. ಈ ಅಭ್ಯಾಸದಿಂದಾಗಿ ಬಾಯಿಯ ದುರ್ವಾಸನೆ, ರಕ್ತದೊತ್ತಡ ಮತ್ತು ಜ್ವರ ಕಡಿಮೆ ಮಾಡುವುದು.

Most Read: 9 ಸಾಮಾನ್ಯ ಯೋಗ ಮುದ್ರಾಗಳು ಮತ್ತು ಅದರ ಆರೋಗ್ಯಕಾರಿ ಲಾಭಗಳು

ಆಸನ ಮಾಡುವುದು ಹೇಗೆ?

ದೇಹವನ್ನು ಸರಿಯಾಗಿ ಆರಾಮವಾಗಿ ನೆಲದ ಮೇಲೆ ಕುಳಿತುಕೊಳ್ಳಿ. ತಲೆ, ಕುತ್ತಿಗೆ ಮತ್ತು ಬೆನ್ನು ಸರಿಯಾಗಿರಲಿ. ಕೆಲವು ನಿಮಿಷಗಳ ತನಕ ನೀವು ಸರಿಯಾಗಿ ಉಸಿರಾಡಿಕೊಳ್ಳಿ. ತುಟಿಗಳನ್ನು ಓ ಆಕಾರದಲ್ಲಿ ಮಾಡಿಕೊಂಡು ಕಣ್ಣುಗಳನ್ನು ಮುಚ್ಚಿಕೊಳ್ಳಿ ಮತ್ತು ಬಾಯಿ ತೆರೆಯಿರಿ. ನಾಲಗೆಯನ್ನು ಸುರುಳಿ ಮಾಡಿಕೊಳ್ಳಿ ಮತ್ತು 3/4ಇಂಚು ಬಾಯಿಯು ಹೊರಗೆ ಬರಲಿ. ಸ್ಟ್ರಾದಲ್ಲಿ ನೀರು ಕುಡಿಯುವಂತೆ ನೀವು ಆಳವಾಗಿ ಬಾಯಿ ಮೂಲಕ ಉಸಿರಾಡಿ. ಶಾಂತವಾಗಿರುವಂತಹ ಉಸಿರು ಹೊಟ್ಟೆ ಮತ್ತು ಕಿಬ್ಬೊಟ್ಟೆಗೆ ತೆರಳುವುದು. ಈಗ ನಿಧಾನವಾಗಿ ನಾಲಗೆ ಒಳಗೆ ಎಳೆದುಕೊಳ್ಳಿ ಮತ್ತು ಬಾಯಿ ಮುಚ್ಚಿ. ಮೂಗಿನ ಮೂಲಕ ಉಸಿರು ಹೊರಗೆ ಹಾಕಿ. ಮತ್ತೆ ಕೆಲವು ನಿಮಿಷಗಳ ಕಾಲ ಆರಾಮವಾಗಿ ಉಸಿರಾಡಿ. 2ರಿಂದ 3 ನಿಮಿಷಗಳ ತನಕ ಸಿತಾಲಿಯನ್ನು ಅಭ್ಯಾಸ ಮಾಡಿ. 10 ನಿಮಿಷಗಳ ಕಾಲ ನೀವು ಹೀಗೆ ಅಭ್ಯಾಸ ಮಾಡಿಕೊಳ್ಳಬೇಕು.

ನಾಲಗೆ ಸುರುಳಿ ಮಾಡಲು ಪರ್ಯಾಯ

ದೇಹವನ್ನು ಸರಿಯಾಗಿ ಆರಾಮವಾಗಿ ನೆಲದ ಮೇಲೆ ಕುಳಿತುಕೊಳ್ಳಿ. ತಲೆ, ಕುತ್ತಿಗೆ ಮತ್ತು ಬೆನ್ನು ಸರಿಯಾಗಿರಲಿ.

ಕೆಳಗಿನ ಹಾಗೂ ಮೇಲಿನ ಹಲ್ಲುಗಳ ಮೇಲೆ ನೀವು ನಿಧಾನವಾಗಿ ಒತ್ತಡ ಹಾಕಿ ಮತ್ತು ತುಟಿಗಳನ್ನು ಬಿಚ್ಚಿಕೊಂಡು ಆದಷ್ಟು ಮಟ್ಟಿಗೆ ಹಲ್ಲುಗಳು ಗಾಳಿಗೆ ಒಡ್ಡಲು ಬಿಟ್ಟುಬಿಡಿ. ಹಲ್ಲುಗಳು ನಡುವಿನಿಂದಲೇ ನೀವು ನಿಧಾನವಾಗಿ ಉಸಿರಾಡುವ ಮೂಲಕವಾಗಿ ಉಸಿರಾಟದ ಸದ್ದು ಉತ್ಪತ್ತಿಯಾಗುವಂತೆ ನೀವು ಹೆಚ್ಚು ಗಮನಹರಿಸಬೇಕು. ಇದರ ಬಳಿಕ ನೀವು ಬಾಯಿ ಮುಚ್ಚಿಕೊಳ್ಳಿ ಮತ್ತು ನಿಧಾನವಾಗಿ ಮೂಗಿನ ಮೂಲಕ ಉಸಿರು ಹೊರಗೆ ಬಿಡಿ. ಈ ಅಭ್ಯಾಸವನ್ನು ಸಿತ್ಕರಿ' ಎಂದು ಹೇಳುವರು. 20 ನಿಮಿಷ ಕಾಲ ನೀವು ಇದನ್ನು ಅಭ್ಯಾಸ ಮಾಡಿ. ಶಮನವನ್ನು ನೀಡುವಂತಹ ಹಠ ಯೋಗ ಪ್ರದಿಪಿಕ ಹೇಳುವ ಪ್ರಕಾರ ಸಿತ್ಕರಿ ಅಂತಃಸ್ರಾವಕ ವ್ಯವಸ್ಥೆ ಉತ್ತಮಪಡಿಸುವುದು ಮತ್ತು ಉತ್ತಮ ಉತ್ಸಾಹ ಬೆಳೆಸಲು ನೆರವಾಗುವುದು.

ಎಚ್ಚರಿಕೆ

ಸಿತಾಲಿ ಮತ್ತು ಸಿತ್ಕರಿ ದೇಹದ ತಾಪಮಾನ ಕಡಿಮೆ ಮಾಡುವುದು. ಇದನ್ನು ಹೆಚ್ಚು ಉಷ್ಣತೆ ಇರುವಂತಹ ಸಮಯದಲ್ಲಿ ಮಾಡಬೇಕು ಅಥವಾ ಕೆಲವೊಂದು ಕಠಿಣ ಯೋಗಾಸನ ಮತ್ತು ದೈಹಿಕ ಶ್ರಮದ ಬಳಿಕ ಇದನ್ನು ಮಾಡಬಹುದು. ಇನ್ನು ದೇಹದ ಆರೋಗ್ಯಕ್ಕೆ ಸಹಾಯವಾಗುವ ಕೆಲವೊಂದು ಪರಿಣಾಮಕಾರಿ ಯೋಗಾಸನಗಳ ಬಗ್ಗೆ ಕೂಡ ಮಾಹಿತಿ ನೀಡಿದ್ದೇವೆ ಮುಂದೆ ಓದಿ

ಹಾಲಾಸನ

ಈ ಆಸನವು ಯಾರು ದೀರ್ಘಕಾಲದವರೆಗೆ ಕುಳಿತು ಕೆಲಸ ಮಾಡುತ್ತಾರೋ ಅಂತಹವರಿಗೆ ಸಾಕಷ್ಟು ಸಹಾಯಕವಾಗಿದೆ. ಇದು ಥೈರಾಯ್ಡ್ ಗ್ರಂಥಿಗಳು, ಪ್ಯಾರಾಥೈರಾಯ್ಡ್ ಗ್ರಂಥಿಗಳು , ಶ್ವಾಸಕೋಶದ ಮತ್ತು ಕಿಬ್ಬೊಟ್ಟೆಯ ಭಾಗದ ಅಂಗಗಳನ್ನು ಪ್ರಚೋದಿಸುತ್ತದೆ. ಮುಖದಲ್ಲಿ ಮತ್ತು ತಲೆಯಲ್ಲಿ ರಕ್ತದ ಸಮಾನದ ಹಂಚಿಕೆಯನ್ನು ಕಾಯ್ದುಕೊಳ್ಳುವಂತೆ ಮಾಡುತ್ತದೆ. ಹಾಗೂ ಜೀರ್ಣಕ್ರಿಯೆಗೆ ಮತ್ತು ಹಾರ್ಮೋನ್ ಬದಲಾವಣೆಯ ನಿಯಂತ್ರಣಕ್ಕೆ ಈ ಭಂಗಿ ಸಹಾಯಕ. ನೆನಪಿನಲ್ಲಿಡಬೇಕಾದ ಅಂಶಗಳು: ನೀವು ಅಧಿಕ ರಕ್ತದೊತ್ತಡ, ಅತಿಸಾರ, ಯಕೃತ್ತಿನ ಅಸ್ವಸ್ಥತೆಯಿಂದ ಬಳಲುತ್ತಿದ್ದರೆ ಅಥವಾ ಕುತ್ತಿಗೆ ನೋವನ್ನು ಅನುಭವಿಸುತ್ತಿದ್ದರೆ ಈ ಆಸನವನ್ನು ಮಾಡಬೇಡಿ.

Most Read: ಕೂದಲುದುರುವ ಸಮಸ್ಯೆಗೆ ಶೀಘ್ರ ಪರಿಹಾರ: ಅದುವೇ ಯೋಗ!

ಕುತ್ತಿಗೆ ಹಾಗೂ ಬೆನ್ನಿನ ಸ್ನಾಯುಗಳಿಗೆ ಸಹಾಯವಾಗುವ ಮತ್ಸ್ಯಾಸನ

ಈ ಆಸನವು ನಿಮ್ಮ ಮುಖದ ಮೂಳೆಯ ವಿಶ್ರಾಂತಿಗೆ ಮತ್ತು ಕುತ್ತಿಗೆ ಮತ್ತು ಬೆನ್ನಿನ ಸ್ನಾಯುಗಳನ್ನು ಬಲಪಡಿಸುತ್ತದೆ. ಇದು ಮುಖದಲ್ಲಿ ರಕ್ತದ ಹರಿವನ್ನು ಹೆಚ್ಚಿಸುತ್ತದೆ ಜೊತೆಗೆ ರಕ್ತದಲ್ಲಿ ಆಮ್ಲನಜನಕದ ಪ್ರಮಾಣವನ್ನೂ ಹೆಚ್ಚಿಸುತ್ತದೆ.

ಕುಳಿತು ಮುಂದಕ್ಕೆ ಬಾಗುವುದು (ಪಶ್ಚಿಮೋತ್ತಾಸನ)

ಪಶ್ಚಿಮೋತ್ತಾಸನವನ್ನು ಮಾಡಲು ಕಾಲುಗಳನ್ನು ನೇರವಾಗಿಟ್ಟುಕೊಂಡು ಕುಳಿತುಕೊಳ್ಳಿ, ಕೈಗಳು ನಿಮ್ಮ ದೇಹದ ಜೊತೆಗಿರಲಿ. ದೇಹವನ್ನು ಮುಂದಕ್ಕೆ ಬಗ್ಗಿಸಿ. ಮೂಳೆತುದಿಯನ್ನು ಉದ್ದವಾಗಿಸಿ ಮತ್ತು ಕಾಲ್ಬೆರಳುಗಳ ಕಡೆಪಶ್ಚಿಮೋತ್ತಾಸನವನ್ನು ಮಾಡಲು ಕಾಲುಗಳನ್ನು ನೇರವಾಗಿಟ್ಟುಕೊಂಡು ಕುಳಿತುಕೊಳ್ಳಿ, ಕೈಗಳು ನಿಮ್ಮ ದೇಹದ ಜೊತೆಗಿರಲಿ. ದೇಹವನ್ನು ಮುಂದಕ್ಕೆ ಬಗ್ಗಿಸಿ. ಮೂಳೆತುದಿಯನ್ನು ಉದ್ದವಾಗಿಸಿ ಮತ್ತು ಕಾಲ್ಬೆರಳುಗಳ ಕಡೆ ನಿಮ್ಮ ಕೈಗಳನ್ನು ವಿಸ್ತರಿಸಿ ನಿಮ್ಮ ಕೈಗಳನ್ನು ವಿಸ್ತರಿಸಿ

ಮಗುವಿನ ಜನನದ ಬಳಿಕ ತೂಕ ಕಳಕೊಳ್ಳಲು ಯೋಗಾಸನ (ಬ್ರಹ್ಮನ ಮಗನ ಭಂಗಿ)

ನಿಮ್ಮ ಹೊಟ್ಟೆಯ ಸ್ನಾಯುಗಳಲ್ಲಿ ನೋವಿದ್ದರೆ ಇಂತಹ ಆಸನ ನಿಮಗೆ ನೆರವಾಗುತ್ತದೆ. ನಿಮ್ಮ ಕಾಲುಗಳನ್ನು ಉದ್ದಕ್ಕೆ ಚಾಚಿಕೊಂಡು ಕುಳಿತುಕೊಳ್ಳಿ. ಈಗ ಒಂದು ಕಾಲನ್ನು ಮಡಚಿ ಮತ್ತು ಕೈಗಳ ಒಳಗಿಡಿ. ನಿಮ್ಮ ಕೈಗಳನ್ನು ಹಿಂದಕ್ಕೆ ಕೊಂಡೊಹೋಗಿ ಬೆರಳುಗಳನ್ನು ಪರಸ್ಪರ ಎದುರುಬದುರಾಗಿಸಿ. ಸುಮಾರು 30 ನಿಮಿಷಗಳ ತನಕ ಹಾಗೆ ಇಡಿ ಮತ್ತು ಈ ಭಂಗಿಯನ್ನು ಮತ್ತೊಂದು ಭಂಗಿಯೊಂದಿಗೆ ಹಾಗೆ ಮುಂದುವರಿಸಿ.

ಪದ್ಮಾಸನ

ಪದ್ಮಾಸನದಿಂದ ಮೊಣಗಂಟಿನ ನೋವನ್ನೇ ಪ್ರಮುಖವಾಗಿ ಕಂಡವರು ಇದರ ಇತರ ಸದ್ಗುಣಗಳನ್ನು ನೋಡೇ ಇರಲಿಲ್ಲ. ಹಿಂದಿನ ಕಾಲದಲ್ಲಿ ಋಷಿಮುನಿಗಳು ಪದ್ಮಾಸನದಲ್ಲಿ ಕುಳಿತೇ ತಪಸ್ಸು ಮಾಡುತ್ತಾ ವರ್ಷಗಟ್ಟಲೆ ದಿನ ಕಳೆಯುತ್ತಿದ್ದರು. ಅವರ ದೇಹವನ್ನು ಸುಸ್ಥಿತಿಯಲ್ಲಿಡಲು ಪದ್ಮಾಸನ ನೆರವಾಗಿತ್ತು. ಈ ಸದ್ಗುಣಗಳನ್ನು ಅರಿತ ಯೋಗ ಶಿಕ್ಷಕರು ಪ್ರತಿದಿನ ನಿರಂತರವಾಗಿ ಕೊಂಚ ಕಾಲಕ್ಕಾದರೂ ಈ ಆಸನವನ್ನು ಅಭ್ಯಾಸ ಮಾಡಲು ತಿಳಿಸುತ್ತಾರೆ.

Most Read: ಒತ್ತಡ ನಿವಾರಣೆಗಾಗಿ ಇಲ್ಲಿದೆ 10 ಯೋಗಾಸನಗಳು!

ಸುಪ್ತ ಮತ್ಸೇಂದ್ರಾಸನ

ಈ ಆಸನ ಅನುಸರಿಸಲು ಸುಲಭವಾಗಿದ್ದು ಬೆನ್ನುಹುರಿಗೆ ಸಡಿಲತೆಯನ್ನು ನೀಡುತ್ತದೆ ಹಾಗೂ ಜೀರ್ಣಕ್ರಿಯೆಗೂ ಪೂರಕವಾಗಿದೆ. ಬೆಳಿಗ್ಗೆದ್ದ ತಕ್ಷಣವೇ ಅನುಸರಿಸಲು ಈ ಆಸನ ಸೂಕ್ತವಾಗಿದೆ.

ಇದನ್ನು ಅನುಸರಿಸುವುದು ಹೇಗೆ?

*ಮೊದಲು ನಿಮ್ಮ ಬೆನ್ನ ಮೇಲೆ ಮಲಗಿ. ಬಲಮೊಣಕಾಲನ್ನು ಬಗ್ಗಿಸಿ ಪಾದವನ್ನು ಎಡಮೊಣಕಾಲ ಕೊಂಚ ಮೇಲಿರಿಸಿ.

*ಎರಡೂ ಕೈಗಳನ್ನು ಭುಜದಿಂದ ಕೆಳಕ್ಕೆ ಬರುವಂತೆ ಚಾಚಿ ಹಸ್ತಗಳನ್ನು ತೊಡೆಗಳಿಗೆ ಒತ್ತುವಂತೆ ಇರಿಸಿ.

*ಈಗ ದೀರ್ಘ ಉಸಿರೆಳೆದುಕೊಂಡು ನಿಧಾನವಾಗಿ ಉಸಿರೆಳೆದುಕೊಳ್ಳುತ್ತಾ ಸೊಂಟವನ್ನು ಎಡಬದಿಗೆ ವಾಲಿಸಿ ಹಾಗೂ ತಲೆಯನ್ನು ಬಲಭುಜದ ಕಡೆಗೆ ನೋಡುವಂತೆ ವಾಲಿಸಿ. ಭುಜ ನೆಲದಿಂದ ಏಳದಂತೆ ತೊಡೆ ನೆಲಕ್ಕೆ ತಾಕುವವರೆಗೂ ಸೊಂಟವನ್ನು ತಿರುಗಿಸಿ. ಇದಕ್ಕಾಗಿ ಎಡಗೈಯ ನೆರವನ್ನು ಪಡೆದು ತೊಡೆಯನ್ನು ಕೆಳಕ್ಕೆ ಬಗ್ಗಿಸಬಹುದು.

*ಈ ಹಂತದಲ್ಲಿ ಕೊಂಚ ಹೊತ್ತು ಹಾಗೇ ಇದ್ದು ಮೂರು ನಾಲ್ಕು ಬಾರಿ ದೀರ್ಘವಾಗಿ ಉಸಿರಾಡಿ ಅಥವಾ ನಿಮಗೆ ಸಾಧ್ಯವಾದಷ್ಟು ಹೊತ್ತು ಇರಿ.ಉಸಿರನ್ನು ನಿಧಾನವಾಗಿ ಬಿಡುತ್ತಾ ಮೊದಲ ಹಂತಕ್ಕೆ ಬನ್ನಿ.ಇದೇ ವಿಧಾನವನ್ನು ಎಡಬದಿಗೂ ಅನುಸರಿಸಿ

ನಾಡಿ ಶೋಧನ ಪ್ರಾಣಾಯಾಮ (ಒಂದಾದಮೇಲೆ ಮತ್ತೊಂದು ಮೂಗಿನಿಂದ ಉಸಿರಾಡುವ ಆಸನ)

ನಮ್ಮ ದೇಹವನ್ನು ವಿವಿಧ ಶಕ್ತಿಗಳು ಮೂಗಿನ ಮೂಲಕ ಅಂದರೆ ಶ್ವಾಸದ ಮೂಲಕ ಪ್ರವೇಶಿಸುತ್ತದೆ ಎನ್ನಲಾಗುತ್ತದೆ. ಒಂದು ಹೊಳ್ಳೆಯಿಂದ ಉಸಿರಾಟವನ್ನು ಹೆಚ್ಚಿನ ಒತ್ತಡದಲ್ಲಿ ಎಳೆದುಕೊಳ್ಳುವ ಮೂಲಕ ಈ ಶಕ್ತಿಗಳನ್ನು ಕೇಂದ್ರೀಕರಿಸಬಹುದು. ಇದರಿಂದ ನಿದ್ರಾವಸ್ಥೆಯಲ್ಲಿದ್ದ ಶರೀರವನ್ನು ಶೀಘ್ರವೇ ಪೂರ್ಣ ಎಚ್ಚರಾಗಿಸಲು ಸಾಧ್ಯವಾಗುತ್ತದೆ ಹಾಗೂ ನರವ್ಯವಸ್ಥೆಯೂ ಚುರುಕಾಗುತ್ತದೆ. ಅನುಸರಿಸುವ ಬಗೆ: ಆರಾಮವಾಗಿ ಪದ್ಮಾಸನದಲ್ಲಿ ಹಾಸಿಗೆಯಲ್ಲಿ ಕುಳಿತು ಕಣ್ಣುಗಳನ್ನು ಮುಚ್ಚಿಕೊಳ್ಳಿ. ಈಗ ನಿಮ್ಮೆಲ್ಲಾ ಗಮನವನ್ನು ಉಸಿರಿನ ಕಡೆಗೆ ಹೊರಳಿಸಿ. ಕೆಲವು ದೀರ್ಘ ಉಸಿರುಗಳನ್ನು ಮೊದಲು ಎಳೆದುಕೊಂಡು ಪೂರ್ಣವಾಗಿ ಹೊರಬಿಡಿ.

* ಈಗ ಬಲ ಅಥವಾ ಎಡ ಹಸ್ತದಲ್ಲಿ ಜ್ಞಾನಮುದ್ರೆಯನ್ನು ಅನುಸರಿಸಿ ಉಳಿದ ಬೆರಳುಗಳನ್ನು ನೀಳವಾಗಿಸಿ (ಚಿತ್ರವನ್ನು ಗಮನಿಸಿ).

* ಮೊದಲು ಎರಡೂ ಹೊಳ್ಳೆಗಳಿಂದ ಪೂರ್ಣ ಉಸಿರನ್ನೆಳೆದುಕೊಂಡು ಇನ್ನೊಂದು ಹಸ್ತದ ಹೆಬ್ಬೆರಳು ಅಥವಾ ಉಂಗುರ ಬೆರಳಿನಿಂದ ಒಂದು ಹೊಳ್ಳೆಯನ್ನು ಮುಚ್ಚಿ ಇನ್ನೊಂದು ಹೊಳ್ಳೆಯಿಂದ ಪೂರ್ಣವಾಗಿ ಮತ್ತು ಕೊಂಚ ವೇಗವಾಗಿ ಉಸಿರನ್ನು ಹೊರಬಿಡಿ

* ಈಗ ಇದೇ ಹೊಳ್ಳೆಯಿಂದ ಉಸಿರನ್ನು ಪೂರ್ಣವಾಗಿ ಒಳಗೆಳೆದುಕೊಂಡು ಬೆರಳನ್ನು ಬದಲಾಯಿಸಿ ಈ ಹೊಳ್ಳೆಯನ್ನು ಮುಚ್ಚಿ ಇನ್ನೊಂದು ಹೊಳ್ಳೆಯಿಂದ ಉಸಿರನ್ನು ಕೊಂಚ ವೇಗವಾಗಿ ಬಿಡಿ.

* ಈ ವಿಧಾನವನ್ನು ಸುಮಾರು ಐದು ನಿಮಿಷಗಳವರೆಗೆ ಅನುಸರಿಸಿ. ಆದರೆ ಮೊತ್ತ ಮೊದಲು ಉಸಿರು ಹೊರಬಿಟ್ಟಿದ್ದ ಹೊಳ್ಳೆಗೆ ವಿರುದ್ಧವಾದ ಹೊಳ್ಳೆಯಿಂದ ಕೊನೆಯದಾಗಿ ಉಸಿರು ಬಿಡಿ, ಅಂದರೆ ಎರಡೂ ಹೊಳ್ಳೆಗಳಿಗೆ ಸಮನಾದ ಸಂಖ್ಯೆಗಳಲ್ಲಿ ಅನುಸರಿಸಬೇಕು

   
 
ಹೆಲ್ತ್