Back
Home » ಇತ್ತೀಚಿನ
ಹೃದಯ ಕಾಯಿಲೆ ಬಗ್ಗೆ ವೈದ್ಯರಿಗಿಂತ ಉತ್ತಮ ಮಾಹಿತಿ ನೀಡಲಿದೆ ಹೊಸ 'AI ತಂತ್ರಜ್ಞಾನ'!
Gizbot | 14th May, 2019 02:06 PM

ಪ್ರಸ್ತುತ ತಂತ್ರಜ್ಞಾನ ಊಹೆಗೂ ನಿಲುಕದ ಬೆಳವಣಿಗೆಯತ್ತ ಮುಖ ಮಾಡಿದ್ದು, ಅದರಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ (artificial intelligence -AI) ಸದ್ಯ ಮೆಡಿಕಲ್‌ ಕ್ಷೇತ್ರಕ್ಕೂ ಕಾಲಿರಿಸಿ ಹೊಸ ಪರಿಕರಗಳನ್ನು ಪರಿಚಯಿಸಿದೆ. ಆದರೆ ಇದೀಗ ವಿಜ್ಞಾನಿಗಳು ಹೊಸ ಕೃತಕ ಬುದ್ಧಿಮತ್ತೆ ಟೆಕ್ನಾಜಿಯ ಅನ್ನು ಅಭಿವೃದ್ಧಿ ಪಡೆಸಿದ್ದು, ಇದು ಮಾನವರ ಹೃದಯ ಕಾಯಿಲೆ ಮತ್ತು ಸಾವಿನ ಬಗ್ಗೆ ಶೇ.90% ನಿಖರ ಮಾಹಿತಿ ಒದಗಿಸುವ ಸಾಮರ್ಥ್ಯವನ್ನು ಪಡೆದಿದೆ.

ಹೌದು, ಹೊಸ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಆಧಾರಿತ ಉಪಕರಣಗಳು ರೋಗಿಗಳ ಹೃದಯದ ಕಾಯಿಲೆ ಮತ್ತು ಮರಣದ ಕುರಿತು ಊಹಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಇತ್ತೀಚಿನ ಅಧ್ಯನಯವೊಂದು ತಿಳಿಸಿದೆ. ಪೋರ್ಚುಗಲ್‌ನಲ್ಲಿ ನಡೆದ 'ನ್ಯೂಕ್ಲಿಯರ್ ಕಾರ್ಡಿಯಾಲಜಿ ಮತ್ತು ಕಾರ್ಡಿಯಾಕ್ CT (ICNC) 2019 ರ ಅಂತರರಾಷ್ಟ್ರೀಯ ಸಮಾವೇಶದಲ್ಲಿ ಈ ಅಧ್ಯಯನವನ್ನು ಮಂಡಿಸಲಾಗಿದೆ.

ಎದೆ ನೋವಿನಿಂದ ಬಳಲುತ್ತಿದ್ದ ಸುಮಾರು 950 ರೋಗಿಗಳನ್ನು ಈ ಅಧ್ಯಯನಕ್ಕೆ ಒಳಪಡಿಸಿಕೊಳ್ಳಲಾಗಿದ್ದು, ಸುಮಾರು ಆರು ವರ್ಷಗಳ ಕಾಲ ರೋಗಿಗಳ ಆರೋಗ್ಯವನ್ನು ಅವಲೋಕಿಸಲಾಗಿದೆ. ಈ ಅವಧಿಯಲ್ಲಿ ಅವರಲ್ಲಿ 24 ಹೃದಯಾಘಾತದಿಂದ ಮರಣ ಹೊಂದಿದ್ದು, 49 ಇತರೆ ಕಾರಣಗಳಿಂದ ಮೃತರಾಗಿದ್ದಾರೆ. ಇನ್ನು 85 ರೋಗಿಗಳನ್ನು ಮಷಿನ್‌ ಲರ್ನಿಂಗ್ LogitBoost ತಂತ್ರಜ್ಞಾನದ ಮೂಲಕ ನಿರಂತರವಾಗಿ ಪರೀಕ್ಷಿಸಿಲಾಗಿದ್ದು, ಹೃದಯ ಕಾಯಿಲೆ ಮತ್ತು ಸಾವಿನ ಬಗ್ಗೆ ನಿಖರ ಮೂನ್ಸುಚನೆ ದೊರೆತಿದೆ ಎನ್ನಲಾಗಿದೆ.

ಹೃದಯ ಕಾಯಿಲೆ ರೋಗಿಯನ್ನು ವೈದ್ಯರು ಸೂಕ್ತ ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸುವ ಮೂಲಕ ವರಧಿಯನ್ನು ನೀಡುತ್ತಾರೊ ಹಾಗೇ ಕೃತಕ ಬುದ್ಧಿಮತ್ತೆ ಆಧಾರಿತ ವೇರಿಯೆಬಲ್ಸ್‌ ಮತ್ತು ರೋಗಿಯ ವೈಯಕ್ತಿಕ ಆರೋಗ್ಯ ಸ್ಥಿತಿಯ ಆಧಾರದ ಮೇಲೆ ಅವರ ಹೃದಯ ಆರೋಗ್ಯ ಮಟ್ಟವನ್ನು ತಿಳಿಸಬಲ್ಲದು ಎನ್ನಲಾಗುತ್ತಿದೆ. ಈ ತಂತ್ರಜ್ಞಾನವು ಫ್ಯಾಮಿಲಿ ಡಾಕ್ಟರ್‌ಗಿಂತ ಹೆಚ್ಚು ನಿಖರ ವರದಿ ನೀಡುವ ಸಾಮರ್ಥ್ಯವನ್ನು ಪಡೆದಿದೆ ಎನ್ನಲಾಗಿದೆ.

algorithm ತಂತ್ರಜ್ಞಾನದ ಮೂಲಕ ಹಲವು ಆಯಾಮಗಳಲ್ಲಿ ಹಂತ ಹಂತವಾಗಿ ಪರೀಕ್ಷೆಗಳಿಂದ ವಿಶ್ಲೇಷಣೆ ಮಾಡಲಾಗಿದ್ದು, ಈ ಪ್ರಕಾರ ರೋಗಿಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಗುರುತಿಸಬಲ್ಲದು ಎನ್ನುವ ಅಂಶಗಳನ್ನು ತಿಳಿಸಲಿದೆ ಹಾಗೂ ರೋಗಿಯ ಹೃದಯದ ಆರೋಗ್ಯ ಮಟ್ಟವನ್ನು ವೈಯಕ್ತಿಕವಾಗಿ ನೀಡಲಿದೆ ಎಂದು ಈ ಅಧ್ಯಯನದ ವರದಿಗಾರ ಜುರೆಜ್-ಒರೊಝೊ ಹೇಳಿದ್ದಾರೆ.

ಓದಿರಿ : ವಾಟ್ಸಪ್‌ ಸೇರಿಕೊಳ್ಳಲಿವೆ ನೀವು ನಿರೀಕ್ಷಿಸುತ್ತಿದ್ದ 5 ಹೊಸ ಫೀಚರ್ಸ್‌!

   
 
ಹೆಲ್ತ್