Back
Home » ಆರೋಗ್ಯ
ಆರೋಗ್ಯ ಟಿಪ್ಸ್: ಹಲಸಿನ ಹಣ್ಣನ್ನು ತಿಂದರೆ ದೇಹದ ತೂಕ ಕಡಿಮೆ ಆಗುತ್ತದಂತೆ!
Boldsky | 14th May, 2019 01:05 PM
 • ಕರಾವಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ

  ಹಲಸಿನ ಹಣ್ಣು ಹೆಚ್ಚಾಗಿ ಕರಾವಳಿ ಪ್ರದೇಶಗಳಲ್ಲಿ ಮತ್ತು ಕರಾವಳಿ ತೀರದ ರಾಜ್ಯಗಳಲ್ಲಿ ಕಂಡುಬರುತ್ತದೆ . ಕೇರಳ , ಕರ್ನಾಟಕ ಮತ್ತು ತಮಿಳುನಾಡು ಈ ಭಾಗಗಳಲ್ಲಿ ಹಲಸನ್ನು ಹೆಚ್ಚು ಬೆಳೆಯುತ್ತಾರೆ ಮತ್ತು ತಿನ್ನುತ್ತಾರೆ ಮತ್ತು ದೇಶದ ಇತರ ರಾಜ್ಯಗಳಿಗೂ ಕಳಿಸಿಕೊಡುತ್ತಾರೆ . ಹೊರ ದೇಶಕ್ಕೂ ರಫ್ತು ಮಾಡುವುದೂ ಉಂಟು . ನಮ್ಮ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಇದರ ಪಾತ್ರ ಕೂಡ ಇದೆ . ಅದೇನೇ ಇರಲಿ . ಹಲಸಿನ ಹಣ್ಣಿಗೆ ಇಷ್ಟೊಂದು ಬೇಡಿಕೆ ಬರಲು ಕಾರಣ ಏನು ? ಅದರಲ್ಲಿ ನೈಸರ್ಗಿಕವಾಗಿ ಅಡಗಿರುವ ಪೋಷಕಾಂಶಗಳು ಮತ್ತು ಖನಿಜಾಂಶಗಳು ಮನುಷ್ಯನ ದೇಹಕ್ಕೆ ಬಹಳ ಉಪಯೋಗ ತರುತ್ತವೆ . ಕೆಲವು ಶ್ರೀಮಂತ ದೇಶಗಳಲ್ಲಿ ಹಲಸಿನ ತಿರುಳನ್ನು ಅನೇಕ ಬಗೆಯ ಔಷಧಗಳಲ್ಲಿ ಕೂಡ ಬಳಸುತ್ತಾರೆ ಎಂಬ ಮಾತಿದೆ .


 • ತೂಕ ಇಳಿಸಿಕೊಳ್ಳುವಲ್ಲಿ ಪರ್ಫೆಕ್ಟ್ ಹಣ್ಣು

  ಹಲಸು ಮನುಷ್ಯನ ದಡೂತಿ ದೇಹವನ್ನು ಇಳಿಸಿ ಒಂದು ಒಳ್ಳೆಯ ರೂಪ ತಂದು ಕೊಡುತ್ತದೆ . ಅಂದರೆ ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನುವವರು ಯಾವ ಭಯವೂ ಇಲ್ಲದೆ ಹಲಸಿನ ಸೇವನೆ ಮಾಡಬಹುದು . ಇದರಿಂದ ಆರೋಗ್ಯಕ್ಕೂ ಕೂಡ ಬಹಳ ಒಳ್ಳೆಯದು . ಹಾಗಾದರೆ ಬನ್ನಿ ಹಲಸಿನ ಹಣ್ಣು ಮನುಷ್ಯನ ದೇಹದ ತೂಕ ಇಳಿಸಲು ಯಾವ ಯಾವ ರೀತಿಯಲ್ಲಿ ಸಹಾಯ ಮಾಡಬಲ್ಲುದು ಹಾಗು ಅದರಲ್ಲಿ ದಪ್ಪಗಿನ ದೇಹವನ್ನು ಸಣ್ಣಗೆ ಮಾಡುವಂತಹ ಗುಣ ಲಕ್ಷಣಗಳು ಏನೇನು ಅಡಗಿವೆ ಎಂಬುದರ ಬಗ್ಗೆ ಇಂದು ಗಮನ ಹರಿಸೋಣ...

  Most Read:ಹಲಸಿನ ಪಾಯಸದ ರುಚಿ ಮರೆಯುವಂತಿಲ್ಲ


 • ಕಡಿಮೆ ಕೊಬ್ಬಿನ ಅಂಶ ಇರುವ ಹಣ್ಣು ಹಲಸು

  ಹೌದು ಇತ್ತೀಚಿಗೆ ನಾವು ಆಹಾರವೆಂದು ಏನೇ ತಿಂದರೂ ಅದರಲ್ಲಿ ಸ್ವಲ್ಪ ಪ್ರಮಾಣದ ಕೊಬ್ಬಿನ ಅಂಶ ಅಡಗಿರುತ್ತದೆ . ಇದು ನಮ್ಮ ದೇಹದ ತೂಕ ಹೆಚ್ಚು ಮಾಡಿ ನಮ್ಮ ಹೃದಯದ ಮೇಲೆ ಒಂದು ರೀತಿಯ ಕೆಟ್ಟ ಪರಿಣಾಮ ಬೀರುತ್ತದೆ . ಆದರೆ ಹಲಸಿನ ಹಣ್ಣಿನ ವಿಚಾರದಲ್ಲಿ ಹಾಗಲ್ಲ . ತೂಕ ಹೆಚ್ಚು ಮಾಡುತ್ತದೆ ಎಂಬ ಯಾವುದೇ ಅನುಮಾನವಿಲ್ಲದೆ ಯಥೇಚ್ಛವಾಗಿ ತಿಂದರೂ ಸಹ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ . ಬದಲಿಗೆ ನಮ್ಮ ದೇಹದಲ್ಲಿ ಸೇರಿಕೊಂಡಿರುವ ಮತ್ತು ಬೇಡದಿರುವ ಕೆಟ್ಟ ಕೊಬ್ಬನ್ನು ಕರಗಿಸುತ್ತದೆ . ದೇಹವನ್ನು ಒಂದು ಒಳ್ಳೆಯ ಆಕಾರಕ್ಕೆ ತಂದು ಹೃದಯ ಸಂಬಂಧಿ ಸಮಸ್ಯೆ ಏನಾದರೂ ಇದ್ದರೂ ಕೂಡ ಅದನ್ನೂ ದೂರಗೊಳಿಸುತ್ತದೆ .


 • ಹಲಸಿನ ತೊಳೆಯಲ್ಲಿ ಸೋಡಿಯಂ ಅಂಶ ತುಂಬಾ ಕಡಿಮೆ

  ಮನುಷ್ಯ ಹೆಚ್ಚು ಸೋಡಿಯಂ ಹೊಂದಿರುವ ಆಹಾರ ತಿನ್ನುತ್ತಾ ಹೋದಷ್ಟು ಅವನ ಆರೋಗ್ಯದ ಸ್ಥಿತಿ ಕುಂಟುತ್ತಾ ಹೋಗುತ್ತದೆ . ಸೋಡಿಯಂ ಅಂಶ ದೇಹದ ಯಶಸ್ವೀ ಕಾರ್ಯ ನಿರ್ವಹಣೆಗೆ ಅಲ್ಪ ಪ್ರಮಾಣದಲ್ಲಷ್ಟೇ ಬೇಕು . ಸೋಡಿಯಂ ಅಂಶ ಹೆಚ್ಚಾದಷ್ಟೂ ದೇಹದ ತೂಕ ಕೂಡ ಹೆಚ್ಚುತ್ತಾ ಹೋಗುತ್ತದೆ . ಇದರಿಂದ ಬಿ ಪಿ , ಹೃದಯಾಘಾತ ದಂತಹ ಸಮಸ್ಯೆಗಳಿಗೆ ಮುನ್ನುಡಿ ಬರೆದಂತಾಗುತ್ತದೆ. ಹಲಸಿನ ಹಣ್ಣಿನಲ್ಲಿ ಸೋಡಿಯಂ ಅಂಶ ಕಡಿಮೆ ಇದ್ದು , ಮನುಷ್ಯನ ದೇಹದಲ್ಲಿ ಸೇರಿರುವ ಅಧಿಕ ಸೋಡಿಯಂ ಅಂಶವನ್ನೂ ಕೂಡ ಕಡಿಮೆ ಮಾಡುತ್ತದೆ . ಯಾರು ದೇಹದ ತೂಕ ಇಳಿಸಿಕೊಳ್ಳಲು ಮನಸ್ಸಿನಲ್ಲಿ ಡಯಟ್ ಮಾಡಬೇಕೆಂದು ಲೆಕ್ಕ ಹಾಕುತ್ತಿದ್ದೀರೋ , ಅವರು ಹಲಸನ್ನು ಅವರ ಡಯಟ್ ನಲ್ಲಿ ಯಾವುದೇ ಚಿಂತೆ ಇಲ್ಲದೆ ಸೇರಿಸಿಕೊಳ್ಳಬಹುದು.

  Most Read: ಗರ್ಭಾವಸ್ಥೆಯಲ್ಲಿ ಹಲಸಿನ ಹಣ್ಣನ್ನು ಸೇವಿಸುವುದು ಒಳ್ಳೆಯದ್ದೇ?


 • ಹಲಸಿನಲ್ಲಿದೆ ಅಧಿಕ ಫೈಬರ್

  ನಮ್ಮ ದೇಹವು ಒಂದು ರೀತಿಯ ಯಂತ್ರ ಇದ್ದಂತೆ . ನಾವು ತಿಂದ ಆಹಾರ ಚೆನ್ನಾಗಿ ಜೀರ್ಣವಾಗಿ ನಮಗೆ ಅದರಿಂದ ಶಕ್ತಿ ಬರಬೇಕೆಂದರೆ ನಮ್ಮ ದೇಹದೊಳಗೆ ಜೀರ್ಣಾಂಗ ಅಂದರೆ ಡೈಜೆಸ್ಟಿವ್ ಸಿಸ್ಟಮ್ ಚೆನ್ನಾಗಿ ಕೆಲಸ ಮಾಡಬೇಕು . ಹೇಗೆ ನಮ್ಮ ಕಣ್ಣೆದುರಿಗೆ ಇರುವ ಯಂತ್ರ ಅದರ ಕಾರ್ಯ ದಕ್ಷತೆಯನ್ನು ಕಾಯ್ದುಕೊಳ್ಳಲು ಅದಕ್ಕೆ ಸಮಯಕ್ಕೆ ಸರಿಯಾಗಿ ಆಯಿಲ್ ಹಾಕುತ್ತೇವೆಯೋ ಅದೇ ರೀತಿ ನಮ್ಮ ದೇಹದ ಒಳಗಿರುವ ನಮ್ಮ ಜೀರ್ಣಾಂಗ ಚೆನ್ನಾಗಿ ಕೆಲಸ ಮಾಡಲು ಅದಕ್ಕೆ ಫೈಬರ್ ನ ಅಂಶ ಬಹಳಷ್ಟು ಅಗತ್ಯವಿರುತ್ತದೆ . ಹಲಸಿನ ಹಣ್ಣನ್ನು ತಿನ್ನುವುದರಿಂದ ಈ ಸಮಸ್ಯೆ ತಾನಾಗಿಯೇ ಬಗೆಹರಿಯುತ್ತದೆ . ಏಕೆಂದರೆ ಅದರಲ್ಲಿರುವ ಅಧಿಕ ವಾದ ಫೈಬರ್ , ಜೀರ್ಣಾಂಗಕ್ಕೆ ಒಳ್ಳೆಯ ಚೈತನ್ಯ ಕೊಟ್ಟು ಚೆನ್ನಾಗಿ ಕೆಲಸ ಮಾಡುವಂತೆ ಮಾಡಿ ದೇಹದಲ್ಲಿರುವ ಕೊಬ್ಬಿನ ಅಂಶವನ್ನೂ ಕೂಡ ತಗ್ಗಿಸುತ್ತದೆ . ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಲು ಇದಕ್ಕಿಂತ ಇನ್ನೇನು ಬೇಕು ?


 • ಹಲಸಿನಲ್ಲಿವೆ ದೇಹಕ್ಕೆ ಬೇಕಾದ ಎಲ್ಲಾ ರೀತಿಯ ಪೋಷಕಾಂಶಗಳು ಮತ್ತು ಖನಿಜಾಂಶಗಳು

  ಮಾನವ ದೇಹದ ಪ್ರತಿ ನಿತ್ಯ ಕಾರ್ಯ ನಿರ್ವಹಣೆಗೆ ಎಲ್ಲ ರೀತಿಯ ಪ್ರೋಟೀನ್, ಕಾರ್ಬೋಹೈಡ್ರೇಟ್, ವಿಟಮಿನ್ ಗಳೂ ಬೇಕು. ಯಾವೊಂದು ಕಡಿಮೆ ಆದರೂ ದೇಹದಲ್ಲಿ ಅದಕ್ಕೆ ಸಂಭಂದ ಪಟ್ಟ ಕೆಲಸ ಕಡಿಮೆ ಆಗುತ್ತಾ ಹೋಗುತ್ತದೆ . ಹೀಗಿರಬೇಕಾದರೆ ಅವೆಲ್ಲ ಒಟ್ಟಿಗೆ ಸಿಕ್ಕರೆ ಎಷ್ಟು ಖುಷಿ ಅಲ್ಲವೇ . ಹಾಗಾದರೆ ಇನ್ನೇಕೆ ತಡ ? ಹಲಸನ್ನು ಸೇವಿಸಲು ಪ್ರಾರಂಭಿಸಿ ಹಲಸು ತನ್ನಲ್ಲಿ ಅಡಗಿರುವ ಈ ಎಲ್ಲಾ ವಿಶೇಷ ಗುಣಗಳಿಂದ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಗೆಳೆಯುತ್ತದೆ . ದೇಹದ ಚರ್ಮಕ್ಕೆ ಮತ್ತು ಕೂದಲಿಗೂ ಸಹ ಅಗತ್ಯವಾದ ಪೌಷ್ಟಿಕಾಂಶಗಳನ್ನು ಒದಗಿಸಿ ನಮ್ಮ ಒಟ್ಟಾರೆ ದೇಹದ ಆರೋಗ್ಯ ಕಾಪಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ .
ವಸಂತ ಕಾಲ ಪ್ರಾರಂಭ ಆಯಿತೆಂದರೆ ಒಂದೊಂದು ಹಣ್ಣುಗಳ ಸುಗ್ಗಿ ಕೂಡ ಶುರು . ತಳಿರು ತೋರಣಗಳಿಂದ ಪ್ರಾರಂಭವಾದ ವರ್ಷದ ಮೊದಲ ಹಬ್ಬ ಸಂಕ್ರಾಂತಿ ಇದಕ್ಕೆ ಮುನ್ನುಡಿ . ಮಾವು ಬೇವಿನಿಂದ ಶುರುವಾದ ಹೊಸ ಋತು ಅನೇಕ ಹಣ್ಣುಗಳ ಬರುವಿಕೆಗೂ ಕಾರಣ. ಬಹಳಷ್ಟು ಪ್ರೀತಿ ಪ್ರಿಯವಾದ ಹಲಸು ಕೂಡ ಇದಕ್ಕೆ ಹೊರತೇನಲ್ಲ. ಹಲಸಿನ ಕಾಲದಲ್ಲಿ ಅದರ ಕಾಯಿ ಮತ್ತು ಹಣ್ಣು ಎರಡೂ ಉಪಯೋಗಕ್ಕೆ ಬರುತ್ತವೆ . ಈಗಲೂ ಹಳ್ಳಿಗಳಲ್ಲಿ ತಯಾರು ಮಾಡುವ ಹಲಸಿನ ಕಾಯಿಯ ಸಾರು ನಿಜಕ್ಕೊ ಬಾಯಿ ಚಪ್ಪರಿಸುವಂತಿರುತ್ತದೆ . ಹಲಸಿನ ಹಣ್ಣಿನಿಂದ ಇನ್ನೂ ಅನೇಕ ಬಗೆಯ ಖಾದ್ಯ ಗಳನ್ನು ತಯಾರಿಸುತ್ತಾರೆ ಹಲಸಿನ ಐಸ್ ಕ್ರೀಂ , ಹಲಸಿನ ಚಿಪ್ಸ್, ಹಲಸಿನ ಹಪ್ಪಳ , ಹಲಸಿನ ಬನ್ನು , ಹಲಸಿನ ಜ್ಯೂಸ್ , ಹಲಸಿನ ಇಡ್ಲಿ , ಹಲಸಿನ ಜಾಮ್ , ಹಲಸಿನ ಪಾಯಸ, ಹಲಸಿನ ಹಲ್ವ, ಹೀಗೆ ಹಲಸಿನ ಬಂಧು ಬಳಗವೇ ಜೋರಾಗಿದೆ

ಅದರ ಬೀಜಗಳೂ ಅಷ್ಟೇ ಬೇಯಿಸಿದರೂ, ಸುಟ್ಟರೂ ತಿನ್ನಲು ಬಹಳ ರುಚಿ. ಹಲಸಿನ ಹಣ್ಣಿನ ಬೀಜದಿಂದ ಮಾಡಿದ ಒಬ್ಬಟ್ಟು ಎಷ್ಟು ತಿಂದರೂ ಆಸೆ ತೀರುವುದಿಲ್ಲ. ಹಲಸಿನ ಹಣ್ಣಿನ ವಿಶೇಷತೆಯೇ ಹಾಗೆ . ಬೇರೆ ಹಣ್ಣುಗಳಿಗೆ ಹೋಲಿಸಿದರೆ ಹಲಸಿನ ಹಣ್ಣು ನೋಡುವುದಕ್ಕೆ ಗಜಗಾತ್ರದ ಹಣ್ಣಾಗಿದ್ದು ಮೇಲೆ ಮಾತ್ರ ಒರಟು , ಒಳಗೆ ಸಿಹಿಯ ಸಾಗರ . ಕೆಲವರು ಮನುಷ್ಯರನ್ನೂ ಕೂಡ ಹಲಸಿನ ಹಣ್ಣಿಗೆ ಹೋಲಿಸುತ್ತಾರೆ. ಮೇಲೆ ಒರಟು ಸ್ವಭಾವವಾದರೂ ಒಳಗೆ ಹಲಸಿನ ಥರ ಎಂದು . ನಮ್ಮ ಸುತ್ತ ಮುತ್ತ ಇಂತಹ ಪ್ರಕೃತಿಯ ಸೊಬಗನ್ನು ತುಂಬಿದ ಆ ದೇವರಿಗೆ ನಮ್ಮದೊಂದು ಸಲಾಂ.

   
 
ಹೆಲ್ತ್