Back
Home » ಆರೋಗ್ಯ
ಹೊಟ್ಟೆಯನ್ನು ಸಂಪೂರ್ಣವಾಗಿ ಕರಗಿಸಿ ತೂಕ ಇಳಿಸುವ 4 ಅದ್ಭುತ ಸ್ಮೂಥಿಗಳು
Boldsky | 15th May, 2019 11:29 AM
 • ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಕ್ಕಿಯೇ ಸಿಗುತ್ತದೆ

  ಇದು ಬ್ರಯಾನ್ ವಿಲ್ಸನ್ ಎನ್ನುವ ಒಬ್ಬ ವ್ಯಕ್ತಿಯ ಕಥೆ ಈತ ನೋಡಲು ಬಹಳ ದಪ್ಪವಾಗಿದ್ದನಂತೆ. ವರ್ಷಗಳ ಕಾಲ ಏನೇನೋ ಪ್ರಯತ್ನಿಸಿದರೂ ಈತನಿಗೆ ಯಾವ ಪ್ರಯೋಜನ ಕೂಡ ಆಗಿರಲಿಲ್ಲ. ವ್ಯಾಯಾಮ ಮಾಡಿ ಡಯಟ್ ಮಾಡಿ ಜೀವನವೇ ಬೇಸತ್ತು ಹೋಗಿದೆ ಎನ್ನುವ ಅವನ ಜೀವನ ಕೊನೆ ಹಂತ ತಲುಪಿದಾಗ ಅವನಿಗೆ ಯಾರೋ ದೇವರಂತೆ ಬಂದು ಈ ಸ್ಮೂಥಿಗಳ ಬಗ್ಗೆ ಹೇಳಿದರಂತೆ . ಆ ಕ್ಷಣವೇ ಅವನ ಜೀವನ ಬದಲಾಯಿತು ನೋಡಿ . ಇದೊಂದು ಕೊನೆ ಪ್ರಯತ್ನ ನಾನೇಕೆ ಟ್ರೈ ಮಾಡಬಾರದು ಎಂದು ಒಲ್ಲದ ಮನಸ್ಸಿನಿಂದ ಪ್ರಯತ್ನಿಸಿದನಂತೆ . ಪ್ರಯತ್ನಕ್ಕೆ ತಕ್ಕ ಪ್ರತಿಫಲ ಎಂಬಂತೆ ಆತನಿಗೆ ಬಹಳ ಆಶ್ಚರ್ಯ ಸಂಗತಿಯೊಂದು ಕಾದಿತ್ತು . ಅದೇನೆಂದರೆ ಅವನೇ ಹೇಳುವ ಹಾಗೆ ಕೇವಲ 6 ವಾರಗಳಲ್ಲಿ ಸುಮಾರು 19 ಪೌಂಡ್ ತೂಕ ಮತ್ತು ಸೊಂಟದ ಸುತ್ತಳತೆಯಲ್ಲಿ ಸುಮಾರು 6 ಇಂಚಿನಷ್ಟು ಕಡಿಮೆಯಾಗಿದ್ದನಂತೆ . ಇದಕ್ಕೆ ಕಾರಣ ಕೇಳಿದ ಅನೇಕರಿಗೂ ಅಚ್ಚರಿ ಮೂಡಿತ್ತು. ಏಕೆಂದರೆ ಅವನು ನೀಡಿದ ಕಾರಣ ಅಂತಹದ್ದಾಗಿತ್ತು . ಆ ಕಾರಣವೇ ನಾವು ಈ ಕೆಳಗೆ ಹೇಳಲು ಹೊರಟಿರುವ ಸ್ಮೂಥಿಗಳು .


 • ಸ್ಮೂಥಿಗಳ ಪವರ್

  ಇವುಗಳಲ್ಲಿ ಅನೇಕ ರೀತಿಯ ಪೌಷ್ಟಿಕಾಂಶಗಳ ಜೊತೆಗೆ ದೇಹದ ಕೊಬ್ಬನ್ನು ಕರಗಿಸುವ ಅಂಶಗಳಿವೆ . ಪ್ರೋಟೀನ್ ಫೈಬರ್ ಎಲ್ಲವೂ ಇದರಲ್ಲಿ ಅಡಗಿವೆ. ಈ ಸ್ಮೂಥಿಯನ್ನು ತಯಾರಿಸಲು ಬಹಳ ಸಮಯ ಬೇಕಿಲ್ಲ . ಕೇವಲ 90 ಸೆಕೆಂಡ್ ಸಾಕು . ಬಹಳ ವಸ್ತುಗಳು ಬೇಕು ಎನ್ನುವ ಚಿಂತೆ ಇಲ್ಲ. ಒತ್ತಡ ರಹಿತವಾಗಿ ತಯಾರು ಮಾಡಬಹುದು. ಇಷ್ಟು ಸುಲಭವಾದ ಸ್ಮೂಥಿಯ ಪ್ರಭಾವ ಕೂಡ ದೇಹದ ಮೇಲೆ ಬಹಳ ಬೇಗನೆ ಆಗುತ್ತದೆ ಮತ್ತು ತುಂಬಾ ಯಶಸ್ವಿಯಾಗಿ ಆಗುತ್ತದೆ. ಏಕೆಂದರೆ ಹೊಟ್ಟೆಯನ್ನು ಸಂಪೂರ್ಣ ವಾಗಿ ಕರಗಿಸಲೆಂದೇ ತಯಾರಾದ ಸ್ಮೂಥಿ ಇವುಗಳು. ಜೊತೆಗೆ ಇವುಗಳು ಸಸ್ಯಗಳಿಂದ ಮತ್ತು ಸಸ್ಯ ಪದಾರ್ಥಗಳಿಂದ ತಯಾರಾದ ಸ್ಮೂಥಿಗಳಾದ್ದರಿಂದ ಇವುಗಳಿಂದ ಏನಾದರೂ ಬೇರೆ ಪರಿಣಾಮ ಎದುರಿಸಬೇಕಾದೀತು ಎಂಬ ಭಯ ಬೇಡವೇ ಬೇಡ . ಬಾಯೆರ್ ಕಾಲೇಜ್ ಒಫ್ ಮೆಡಿಸಿನ್ ನ ಸಂಶೋಧಕರು ಹೇಳುವ ಹಾಗೆ ಡಯಟ್ ಮಾಡುವ ಯಾರೇ ಆದರೂ ಈ ಸಸ್ಯಔಷಧ ಅಥವಾ ಈ ಸಸ್ಯಗಳ 8 ಔನ್ಸ್ ನಷ್ಟು ಜ್ಯೂಸು ಕುಡಿದಿದ್ದರೋ ಅವರು 12 ವಾರಗಳಲ್ಲಿ ಸುಮಾರು 4 ಪೌಂಡ್ ನಷ್ಟು ದೇಹದ ತೂಕ ಕಡಿಮೆ ಮಾಡಿಕೊಂಡಿದ್ದರಂತೆ. ಈ ಸ್ಮೂಥಿಗಳನ್ನು ತಯಾರು ಮಾಡಲು ಬೇಕಾದ ಸಾಮಗ್ರಿಗಳನ್ನು ಮತ್ತು ಅವುಗಳಲ್ಲಿನ ಪೌಷ್ಟಿಕಾಂಶ ಗಳನ್ನು ನೋಡುವುದಾದರೆ ಮೊದಲಿಗೆ,


 • ಬ್ಲೂಬೆರ್ರಿ ಯ ಸ್ಮೂಥಿ

  *½ ಕಪ್ ಸಿಹಿ ರಹಿತ ಬಾದಾಮಿ ಹಾಲು .
  *1 ಟೀ ಸ್ಪೂನ್ ನಷ್ಟು ವೆನಿಲ್ಲಾ ಗಿಡದಿಂದ ತಯಾರಾದ ಪ್ರೋಟೀನ್ ಅಂಶದ ಪೌಡರ್ .
  *½ ಕಪ್ ನಷ್ಟು ಫ್ರೋಜನ್ ಬ್ಲೂಬೆರ್ರಿಗಳು.
  *½ ಟೇಬಲ್ ಸ್ಪೂನ್ ನಷ್ಟು ನೈಸರ್ಗಿಕವಾದ ಉಪ್ಪು ರಹಿತ ಬಾದಾಮಿಯಿಂದ ತಯಾರಾದ ಬೆಣ್ಣೆಯಂತಹ ಪೇಸ್ಟ್.
  *1 ಕಪ್ ನೀರು ( ಬೇಕಿದ್ದರೆ ಮಾತ್ರ ). 232 ಕ್ಯಾಲೋರಿಗಳು / 6 ಗ್ರಾಂ ನಷ್ಟು ಒಳ್ಳೆಯ ಫ್ಯಾಟ್ ನಂಶ / 16 ಗ್ರಾಂ ನಷ್ಟು ಕಾರ್ಬೋಹೈಡ್ರೇಟ್ / 3 ಗ್ರಾಂ ನಷ್ಟು ಫೈಬರ್ / 28 ಗ್ರಾಂ ನಷ್ಟು ಪ್ರೋಟೀನ್ ಅಂಶ.


 • ಕಡಲೆ ಕಾಯಿ ಪೇಸ್ಟ್ ಸ್ಮೂಥಿ

  *½ ಕಪ್ ನಷ್ಟು ಸಿಹಿ ರಹಿತ ಬಾದಾಮಿ ಹಾಲು .
  *1 ಟೀ ಸ್ಪೂನ್ ನಷ್ಟು ವೆನಿಲ್ಲಾ ಅಥವಾ ಚಾಕಲೇಟ್ ಗಿಡದಿಂದ ತಯಾರಾದ ಪ್ರೋಟೀನ್ ಅಂಶದ ಪೌಡರ್.
  *1 ಟೇಬಲ್ ಸ್ಪೂನ್ ನಷ್ಟು ಸಿಹಿ ರಹಿತ ಕೋಕೋ ಪೌಡರ್ .
  *½ ಫ್ರೋಜನ್ ಬಾಳೆ ಹಣ್ಣು .
  *½ ಟೇಬಲ್ ಸ್ಪೂನ್ ನಷ್ಟು ನೈಸರ್ಗಿಕವಾದ ಉಪ್ಪು ರಹಿತ ಕಡಲೆ ಕಾಯಿ ಪೇಸ್ಟ್ .
  *1 ಕಪ್ ನೀರು (ಬೇಕಿದ್ದರೆ ಮಾತ್ರ ).
  258 ಕ್ಯಾಲೋರಿ / 6 ಗ್ರಾಂ ನಷ್ಟು ಫ್ಯಾಟ್ / 21 ಗ್ರಾಂ ನಷ್ಟು ಕಾರ್ಬೋಹೈಡ್ರೇಟ್ / 5 ಗ್ರಾಂ ನಷ್ಟು ಫೈಬರ್ / 30 ಗ್ರಾಂ ನಷ್ಟು ಪ್ರೋಟೀನ್ ಅಂಶ .


 • ವೆನಿಲ್ಲಾ ಚಾಯ್

  *¼ ಕಪ್ ಸಿಹಿ ರಹಿತ ಬಾದಾಮಿ ಹಾಲು .
  *¼ ಕಪ್ ಚಾಯ್ ಟೀ ( ಟೀ ಬ್ಯಾಗ್ ನಿಂದ ಚಿಲ್ ಮಾಡಿದ್ದು ).
  *½ ಟೀ ಸ್ಪೂನ್ ನಷ್ಟು ವೆನಿಲ್ಲಾ ಗಿಡದಿಂದ ತಯಾರಾದ ಪ್ರೋಟೀನ್ ಅಂಶದ ಪೌಡರ್ .
  *½ ಫ್ರೋಜನ್ ಬಾಳೆ ಹಣ್ಣು.
  *½ ಟೀ ಸ್ಪೂನ್ ನಷ್ಟು ದಾಲ್ಚಿನ್ನಿ ಅಥವಾ ಚಕ್ಕೆ .
  *½ ಟೇಬಲ್ ಸ್ಪೂನ್ ನಷ್ಟು ನೈಸರ್ಗಿಕವಾದ ಉಪ್ಪು ರಹಿತ ಬಾದಾಮಿಯಿಂದ ತಯಾರಾದ ಬೆಣ್ಣೆಯಂತಹ ಪೇಸ್ಟ್ .
  *1 ಕಪ್ ನೀರು ( ಬೇಕಿದ್ದರೆ ಮಾತ್ರ ) .
  219 ಕ್ಯಾಲೋರಿ / 9 ಗ್ರಾಂ ನಷ್ಟು ಫ್ಯಾಟ್ /20 ಗ್ರಾಂ ನಷ್ಟು ಕಾರ್ಬೋಹೈಡ್ರೇಟ್ / 4 ಗ್ರಾಂ ನಷ್ಟು ಫೈಬರ್ /17 ಗ್ರಾಂ ನಷ್ಟು ಪ್ರೋಟೀನ್ .


 • ಗ್ರೀನ್ ಮಾನ್ಸ್ಟರ್

  *¼ ಕಪ್ ಸಕ್ಕರೆ ರಹಿತ ಸೇಬು ಹಣ್ಣಿನ ಜ್ಯೂಸ್
  *¼ ಕಪ್ ನೀರು
  *½ ಟೀ ಸ್ಪೂನ್ ನಷ್ಟು ವೆನಿಲ್ಲಾ ಗಿಡದಿಂದ ತಯಾರಾದ ಪ್ರೋಟೀನ್ ಅಂಶದ ಪೌಡರ್
  *½ ಹೋಳು ಪಿಯರ್ ಹಣ್ಣು
  *½ ಕಪ್ ನಷ್ಟು ಎಳೆ ಪಾಲಕ್ ಸೊಪ್ಪು
  *½ ಫ್ರೋಜನ್ ಬಾಳೆ ಹಣ್ಣು
  *¼ ಭಾಗ ಆವಕಾಡೊ ಹಣ್ಣು
  271 ಕ್ಯಾಲೋರಿ / 6 ಗ್ರಾಂ ನಷ್ಟು ಫ್ಯಾಟ್ / 40 ಗ್ರಾಂ ನಷ್ಟು ಕಾರ್ಬೋಹೈಡ್ರೇಟ್ /8 ಗ್ರಾಂ ನಷ್ಟು ಫೈಬರ್ /15 ಗ್ರಾಂ ನಷ್ಟು ಪ್ರೋಟೀನ್.
ನಮಗೆ ಸುಖ ಹೆಚ್ಚಾದಂತೆಲ್ಲ ಹೊಟ್ಟೆ ಬರಲು ಪ್ರಾರಂಭಿಸುತ್ತದೆ . ನೋಡಿದ ಜನರು ಅಥವಾ ಸ್ನೇಹಿತರು ನೀನು ಎಷ್ಟು ಸುಖವಾಗಿದ್ದೀಯ ಎಂದು ನಿನ್ನ ಹೊಟ್ಟೆಯೇ ಹೇಳುತ್ತದೆ ಎಂದು ಗೇಲಿ ಮಾಡುತ್ತಾರೆ . ಆದರೆ ಅವರಿಗೇನು ಗೊತ್ತು ಪಾಪ ಹೊಟ್ಟೆ ತುಂಬಾ ಕರಗಿಸಲು ಸಾಧ್ಯವಿಲ್ಲದಷ್ಟು ಕೊಬ್ಬಿನಂಶ ತುಂಬಿಕೊಂಡಿದೆ ಎಂದು. ಈ ಸಮಸ್ಯೆಯೇ ಹೀಗೆ ಹೊಟ್ಟೆ ಬರುವವರೆಗೂ ಯಾವ ಸಮಸ್ಯೆಯೂ ಇರುವುದಿಲ್ಲ. ಹೊಟ್ಟೆ ಬಂದ ಮೇಲೆ ಸಮಸ್ಯೆಯ ಸರಮಾಲೆ ನಿಲ್ಲುವುದಿಲ್ಲ.

ದೇಹಕ್ಕೆ ಒಂದೊಂದೇ ಖಾಯಿಲೆಗಳು ಅಂಟಿಕೊಳ್ಳುತ್ತಾ ಹೋಗುತ್ತವೆ. ಹೊಟ್ಟೆ ಕರಗಿಸಲು ಅನೇಕರು ವ್ಯಾಯಾಮ ಶಾಲೆಗೆ ಸೇರಿ ಅನೇಕ ರೀತಿಯ ದೈಹಿಕ ಕಸರತ್ತು ಮಾಡುತ್ತಾರೆ. ಅನೇಕ ರೀತಿಯ ಡಯಟ್ ಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಹೊಟ್ಟೆ ಕರಗುವುದಿಲ್ಲ ಇವರು ಬಿಡುವುದಿಲ್ಲ ಎನ್ನುವಂತಾಗಿರುತ್ತದೆ ಇವರ ಬದುಕು. ಒಟ್ಟಿನಲ್ಲಿ ಮೊದಲಿಗಿಂತ ಜೀವನ ಒಂದು ರೀತಿಯ ಹೊಸ ತಿರುವನ್ನು ಪಡೆದು ಸದಾ ಮುಜುಗರಕ್ಕೆ ಒಳಗಾಗುತ್ತಿರುತ್ತಾರೆ. ಆದರೆ ಇದಕ್ಕೆಲ್ಲಾ ಒಂದು ಮಂಗಳ ಹಾಡಬೇಕೆಂದು ನಿರ್ಧರಿಸಿ ಇಂದು ಈ ಲೇಖನದಲ್ಲಿ ನಾವು ಕೆಲವೊಂದು ಸ್ಮೂಥಿಗಳ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ . ಇವುಗಳು ಬಹಳ ಪರಿಣಾಮಕಾರಿ ಕೂಡ ಆಗಿದ್ದು ಇದರಿಂದ ಬಹಳಷ್ಟು ಜನ ಪ್ರಯೋಜನ ಕೂಡ ಪಡೆದಿದ್ದಾರೆ. ಈಗಲೂ ಪಡೆಯುತ್ತಿದ್ದಾರೆ ಕೂಡ. ಇಷ್ಟೊಂದು ಇವುಗಳ ಬಗ್ಗೆ ನಾವು ನಿಮಗೆ ಹೇಳಬೇಕೆಂದರೆ ನಮ್ಮ ಬಳಿ ಸಾಕ್ಷಿಯೊಂದು ಇರಲೇಬೇಕಲ್ಲವೇ? ಖಂಡಿತ ಇದೆ.

   
 
ಹೆಲ್ತ್