Back
Home » ಆರೋಗ್ಯ
ನಿಮ್ಮಲ್ಲಿ ಯಾರೂ ಹೇಳಿರದ ಡಯಟ್‌ನ ಬಗ್ಗೆ ಇರುವ 7 ತಪ್ಪು ತಿಳುವಳಿಕೆಗಳು
Boldsky | 15th May, 2019 03:33 PM
 • ತಪ್ಪು ತಿಳುವಳಿಕೆ 1: ಕೇಲ್ ಅಥವಾ ಪಾಲಕ್ ಸೊಪ್ಪು ಹಸಿರು ತರಕಾರಿಗಳಲ್ಲೇ ಉತ್ತಮ ನಿಜ ಅಂಶ :

  ಸಾಮಾನ್ಯವಾಗಿ ಡಯಟ್ ಮಾಡುವವರು ಅಥವಾ ಡಯಟ್ ಮಾಡುವುದಕ್ಕೆ ಹೇಳುವವರು ಕೇಲ್ ಅಥವಾ ಪಾಲಕ್ ಸೊಪ್ಪಿನ ವಿಷಯ ಬಳಸಿಯೇ ಇರುತ್ತಾರೆ. ಕೇಲ್ ಪೋಷಕಾಂಶಗಳ ಆಗರ . ಇದರಲ್ಲಿ ಆಂಟಿ ಆಕ್ಸಿಡೆಂಟ್ ಗುಣಗಳಿರುವುದರಿಂದ ಕೇಲ್ ನ ಚಿಪ್ಸ್ ಡಯಟ್ ಗೆ ಬಹಳ ಒಳ್ಳೆಯದು ಎಂದು. ಹಾಗೆಂದು ನೀವು ಚಿಪ್ಸ್ ಪ್ಯಾಕೆಟ್ ತರಲು ಸೂಪರ್ ಮಾರ್ಟ್‌ಗೆ ಹೋಗುವ ಮೊದಲು ಇಲ್ಲೊಮ್ಮೆ ಗಮನಿಸಿ . ವಿಲಿಯಂ ಪೀಟರ್ಸನ್ ಯೂನಿವರ್ಸಿಟಿ ಯು 2014 ರಲ್ಲಿ ಒಂದು ಸಂಶೋಧನೆಯನ್ನು ಕೈಗೊಂಡಿತ್ತು. ಏನಪ್ಪಾ ಅಂದರೆ ಹಣ್ಣು ತರಕಾರಿಗಳನ್ನು ಅವುಗಳಲ್ಲಿ ಅಡಗಿರುವ 17 ರೀತಿಯ ನ್ಯೂಟ್ರಿಷನ್ ಅಂಶಗಳಿಂದ ಹೃದಯ ರಕ್ತ ನಾಳದ ಆರೋಗ್ಯಕ್ಕೆ ಎಷ್ಟು ಪರಿಣಾಮಕಾರಿ ಎಂಬುದರ ಆಧಾರದ ಮೇಲೆ 1 ರಿಂದ 10 ರವರೆಗೆ ರ್ಯಾಂಕ್ ನೀಡುವುದು. ಆಶ್ಚರ್ಯ ಎಂದರೆ ಕೇಲ್ ಆ ಹತ್ತರಲ್ಲೂ ಬರಲೇ ಇಲ್ಲ.ಅಲ್ಲಿಗೆ ಕೇಲ್ ಇತರ ತರಕಾರಿಗಳಂತೆ ಅಷ್ಟೇ ಎಂದು ಸಾಬೀತು ಪಡಿಸಿದಂತಾಯಿತು. ಇದಕ್ಕೂ ಡಯಟ್ ಗೂ ಯಾವುದೇ ತರನಾದ ಸಂಬಂಧವಿಲ್ಲ ಎಂಬುದು ಸಾಬೀತು ಪಟ್ಟಿತು .


 • ತಪ್ಪು ತಿಳುವಳಿಕೆ 2-ಒಮೇಗಾ 3 ಫ್ಯಾಟ್ಸ್ ಬೇಕೆಂದರೆ ಮೀನು ತಿನ್ನಬೇಕು ನಿಜ ಅಂಶ

  ಒಮೇಗಾ 3 ಫ್ಯಾಮಿಲಿಯ ಬಗ್ಗೆ ಹೇಳಬೇಕೆಂದರೆ ಅವುಗಳಿಂದ ಬಹಳ ಉಪಯೋಗವಿದೆ . ಚಿಕ್ಕ ಮಕ್ಕಳ ಮೆದುಳು ಬೆಳವಣಿಗೆಯಿಂದ ಹಿಡಿದು ದೊಡ್ಡವರ ಹೃದಯದ ಆರೋಗ್ಯ ಕಾಪಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ . EPA ಮತ್ತು DHA ಎಂಬ ಈ ಎರಡು ಒಮೇಗಾ 3 ಫ್ಯಾಟಿ ಆಸಿಡ್ ಗಳು ಕೇವಲ ಸಮುದ್ರಾಹಾರದಿಂದ ಮಾತ್ರ ಸಿಗಲು ಸಾಧ್ಯ. ಆದರೆ ಮನುಷ್ಯನ ದೇಹಕ್ಕೆ 3 ರೀತಿಯ ಫ್ಯಾಟಿ ಆಸಿಡ್ ಗಳ ಅವಶ್ಯಕತೆ ಇರುತ್ತದೆ . ಮೂರನೆಯದು ALA ಫ್ಯಾಟಿ ಆಸಿಡ್ . ಇದು ವಾಲ್ ನಟ್ , ಪ್ಲಾಕ್ಸ್ ಸೀಡ್ , ಕ್ಯಾನೋಲ ಆಯಿಲ್ , ಸೋಯಾ ಬೀನ್ ಮತ್ತು ಇನ್ನಿತರೇ ಸಸ್ಯಗಳಲ್ಲಿ ಅಡಗಿದೆ . ಸಂಶೋಧಕರು ಹೇಳುವ ಪ್ರಕಾರ ಈ ALA ಫ್ಯಾಟಿ ಆಸಿಡ್ ಇಲ್ಲದೆ ಹೋದರೆ ಮುಳ್ಳುಮುಳ್ಳು ಚರ್ಮ , ತಲೆ ಕೂದಲಿನ ಬೆಳವಣಿಗೆಯಲ್ಲಿ ತೊಂದರೆ ಹಾಗು ಗಾಯ ಮಾಗುವುದರಲ್ಲಿ ನಿಧಾನ ಹೀಗೆ ಹತ್ತು ಹಲವು ತೊಂದರೆ ಅನುಭವಿಸಬೇಕಾಗುತ್ತದೆ .ALA ಫ್ಯಾಟಿ ಆಸಿಡ್ ಹೆಚ್ಚಿರುವ ಪದಾರ್ಥಗಳನ್ನು ಬಳಸಿದರೆ , ಹಾರ್ಟ್ ಅಟ್ಯಾಕ್ ಆಗುವ ಸಂಭವ ಕಡಿಮೆ ಇರುತ್ತದೆ . ಹಾಗೆಂದು ತೀರಾ ಇದೊಂದರ ಮೇಲೆಯೇ ಅವಲಂಬಿತವಾಗದೆ ಮೂರು ಬಗೆಯ ಫ್ಯಾಟಿ ಆಸಿಡ್ ಗಳಿಗೆ ಮೀನು ಜೊತೆಗೆ ಮೇಲೆ ಹೇಳಿದ ಸಸ್ಯಾಹಾರದ ಉಪಾಹಾರ ಸೇವಿಸಲು ಮರೆಯಬೇಡಿ .


 • ತಪ್ಪು ತಿಳುವಳಿಕೆ 3 : ಬಿಳಿ ಬಣ್ಣದ ಬ್ರೆಡ್‌ಗಿಂತ ಕಂದು ಬಣ್ಣದ ಬ್ರೆಡ್ ಮೇಲು ನಿಜ ಅಂಶ:

  ಪ್ಯಾಕ್ ಮಾಡಿರುವ ಬಿಳಿ ಬಣ್ಣದ ಬ್ರೆಡ್ ಗಿಂತ ಸಕಲ ಧಾನ್ಯಗಳನ್ನು ಉಪಯೋಗಿಸಿ ತಯಾರಿಸಿರುವ ಈ ಕಂದು ಬಣ್ಣದ ಬ್ರೆಡ್ ಆರೋಗ್ಯಕ್ಕೆ ಒಳ್ಳೆಯದು ಎಂದು ಅದನ್ನೇ ತರಲು ಬೇಕರಿ ಕಡೆಗೆ ಓಡುತ್ತಿದ್ದರೆ ಸ್ವಲ್ಪ ನಿಲ್ಲಿ, ಏಕೆಂದರೆ ಅದು ಚೆನ್ನಾಗಿ ಕಾಣಲೆಂದು ಮತ್ತು ಜನರನ್ನು ಆಕರ್ಷಿಸಲೆಂದು ಅದಕ್ಕೆ ಕಾಫಿ ಪೌಡರ್, ಬಣ್ಣ ಮತ್ತು ಇನ್ನಿತರೆ ವಸ್ತುಗಳನ್ನು ಹಾಕಿ ತಯಾರು ಮಾಡಿರುತ್ತಾರೆ . ಅದು ಆರೋಗ್ಯಕ್ಕೆ ಒಳ್ಳೆಯದಾಗುವುದಕ್ಕೆ ಹೇಗೆ ಸಾಧ್ಯ? ಅದರಲ್ಲಿರುವುದೂ ಸಕ್ಕರೆ ಮತ್ತು ಮೈದಾ ಹಿಟ್ಟಿನ ಅಂಶವೇ. ಹಾಗಾಗಿ ಎಲ್ಲಿ ಹೋಲ್ ವೀಟ್ ಬ್ರೆಡ್ ಎಂದು ಹಾಕಿರುತ್ತಾರೋ ಅದೇ ಬ್ರೆಡ್ ತಿನ್ನಲು ಯೋಗ್ಯ .


 • ತಪ್ಪು ತಿಳುವಳಿಕೆ 4 : ಕೇಕ್ ತಿಂದರೆ ಮನಸ್ಸಿಗೆ ಖುಷಿ ಸಿಗುತ್ತದೆ ನಿಜ ಅಂಶ

  ಕೇಕ್ ನೋಡಲು ಚೆನ್ನಾಗಿರುತ್ತದೆ . ಮುಟ್ಟಲು ಮೃದುವಾಗಿರುತ್ತದೆ . ಹಾಗೆಂದು ಅದನ್ನು ತಿಂದರೆ ಮನಸ್ಸಿನ ದುಃಖ ದುಗುಡಗಳೆಲ್ಲಾ ದೂರಾಗಿ ಮನಸ್ಸಿಗೆ ಖುಷಿ ನೆಮ್ಮದಿ ಸಿಗುವುದೇ? ಇದೊಂದು ತಪ್ಪು ಕಲ್ಪನೆ ಜನರಲ್ಲಿದೆ . ಕೇಕ್ ಕೇವಲ ಸಂಭ್ರಮದ ದಿನ ಆಚರಿಸಲಿಕ್ಕೆ ವಿನಃ ಯಾವಾಗಲೂ ತಿಂದು ಖುಷಿಯಾಗಲು ಸಾಧ್ಯವಿಲ್ಲ. ಇದರಿಂದ ಸೊಂಟದ ಸುತ್ತಳತೆ ಜಾಸ್ತಿ ಆಗುತ್ತದೆ ಅಷ್ಟೇ .


 • ತಪ್ಪು ತಿಳುವಳಿಕೆ 5: ಕೋಳಿ ಮೊಟ್ಟೆಯಿಂದ ದೂರ ಉಳಿಯಬೇಕಂತೆ ನಿಜ ಅಂಶ:

  ಮನುಷ್ಯನಿಗೆ ಹಾರ್ಟ್ ಅಟ್ಯಾಕ್ ಆಗುವುದು ರಕ್ತದಲ್ಲಿನ ಅತಿ ಹೆಚ್ಚು ಬ್ಯಾಡ್ ಕೊಲೆಸ್ಟರಾಲ್ ನಿಂದ ಎಂದು ನಿಮಗೆ ಗೊತ್ತಿದೆ . ಫ್ರಾಮಿಂಗ್ಹ್ಯಾಮ್ ಹಾರ್ಟ್ ಸ್ಟಡಿ ಕೂಡ ಇದನ್ನೇ ಹೇಳಿದೆ. ಆದರೆ ಇಲ್ಲಿ ಮೊಟ್ಟೆ ತಿಂದರೆ ಹಾರ್ಟ್ ಅಟ್ಯಾಕ್ ಆಗುವ ಸಂಭವ ಹೆಚ್ಚು ಎಂಬ ತಪ್ಪು ಕಲ್ಪನೆ ಜನರಲ್ಲಿದೆ . ಹಾಗೇನೂ ಇಲ್ಲ. ಮೊಟ್ಟೆಗೂ ಹೃದಯ ಸಂಬಂಧಿ ಕಾಯಿಲೆಗೂ ಯಾವುದೇ ಸಂಬಂಧವಿಲ್ಲ . ಅಷ್ಟಕ್ಕೂ ಕೊಲೆಸ್ಟರಾಲ್ ನಮ್ಮ ದೇಹಕ್ಕೆ ನಾವು ತೆಗೆದುಕೊಳ್ಳುವ ಇತರೆ ಆಹಾರದಿಂದ ಬರುತ್ತದೆ. ಉಳಿದ ಕೊಲೆಸ್ಟ್ರಾಲ್ ಅನ್ನು ನಮ್ಮ ದೇಹದಲ್ಲಿನ ಲಿವರ್ ತಯಾರು ಮಾಡುತ್ತದೆ . ನಾವು ಚೀಸ್ ಬರ್ಗರ್ ತಿಂದಾಗ ಕೊಲೆಸ್ಟರಾಲ್ ಉತ್ಪತ್ತಿಯಾಗುತ್ತದೆಯೇ ಹೊರತು ಬೇಯಿಸಿದ ಮೊಟ್ಟೆ ತಿಂದಾಗ ಯಾವುದೇ ಅಪಾಯವಿರುವುದಿಲ್ಲ . ಆದ್ದರಿಂದ ನೀವು ಧೈರ್ಯವಾಗಿ ಮೊಟ್ಟೆಗಳ ಸೇವನೆ ಮಾಡಬಹುದು . ಮೊಟ್ಟೆಗಳಲ್ಲಿ ಅನೇಕ ಪೋಷಕಾಂಶಗಳಿವೆ . ಕಬ್ಬಿಣದ ಅಂಶ , ಖನಿಜ ಅಂಶ ಮತ್ತು ವಿಟಮಿನ್ ಬಿ ಕೂಡ ಸೇರಿದೆ .


 • ತಪ್ಪು ತಿಳುವಳಿಕೆ 6 : ನ್ಯೂಟ್ರಿಷನ್ ಬಾರ್‌ಗಳು ಆರೋಗ್ಯಕರ ನಿಜ ಅಂಶ :

  ಅಂಗಡಿಯಲ್ಲಿ ಸಿಗುವ ಪ್ಯಾಕ್ ಮಾಡಿರುವ ನ್ಯೂಟ್ರಿಷನ್ ಬಾರ್ ಗಳು ಕೃತಕ ಪದಾರ್ಥಗಳನ್ನು ಹೊಂದಿರುತ್ತವೆ . ಅವುಗಳು ಮನುಷ್ಯನ ದೇಹಕ್ಕೆ ಇನ್ನೂ ಹಾನಿಯನ್ನೇ ಉಂಟು ಮಾಡುತ್ತವೆ . ಏಕೆಂದರೆ ಅವುಗಳಲ್ಲಿನ ಕೆಮಿಕಲ್ ಗಳು ಮತ್ತು ಕೃತಕ ಬಣ್ಣಗಳು ಇದಕ್ಕೆ ಕಾರಣ . ಕಡಿಮೆ ಶುಗರ್ ಹೊಂದಿರುವ ಈ ನ್ಯೂಟ್ರಿಷನ್ ಬಾರ್ ನಲ್ಲಿ ಸುಕ್ರೇಲೋಸ್ ಅಥವಾ ಶುಗರ್ ಆಲ್ಕೋಹಾಲ್ ಅಂಶ ಇರುತ್ತದೆ . ಇದು ದೇಹಕ್ಕೆ ತುಂಬಾ ಹಾನಿಕಾರಕ . ಸುಕ್ರೇಲೋಸ್ ಒಂದು ಕೀಟನಾಶಕವಾಗಿದ್ದು ಅದಕ್ಕೆ ವಿಷಕಾರಿ ಕೆಮಿಕಲ್ ಆದ ಕ್ಲೋರಿನ್ ಅನ್ನು ಬಳಕೆ ಮಾಡಿರುತ್ತಾರೆ . ಹಾಗೆ ಶುಗರ್ ಆಲ್ಕೋಹಾಲ್ ಗಳಾದ ಮಾಲ್ತಿಟೊಲ್ ಮತ್ತು ಎರಿಥ್ರಿಟೊಲ್ ನಲ್ಲಿ ಬಯೋಟೆಕ್ನಾಲಜಿ ಯಲ್ಲಿ ಕಂಡುಹಿಡಿಯಲಾದ ಜೋಳದ ಹಿಟ್ಟನ್ನು ಬಳಸಿರುತ್ತಾರೆ. ಇದು ಬಹಳ ಜನಕ್ಕೆ ಅಲರ್ಜಿ ಉಂಟು ಮಾಡುತ್ತದೆ ಮತ್ತು ಜೀರ್ಣ ವ್ಯವಸ್ಥೆಯನ್ನು ಹಾಳು ಮಾಡುತ್ತದೆ.

  MOst Read: ಸಾಂಪ್ರದಾಯಿಕ ಅಡುಗೆ ರೊಟ್ಟಿ-ದಾಲ್‍ನ ವಿಶೇಷ ಗುಣಗಳು


 • ತಪ್ಪು ತಿಳುವಳಿಕೆ 7 : ಪ್ರೋಟೀನ್ ಅಂಶ ವಿರುವ ಆಹಾರ ಸೇವಿಸಿದರೆ ಮಾಂಸ ಖಂಡಗಳು ಹೆಚ್ಚು ಹೆಚ್ಚು ಬೆಳೆಯುತ್ತವೆ:

  ನಿಜ ಅಂಶ :
  ನಮ್ಮ ದೇಹದ ಮಾಂಸ ಖಂಡಗಳು ಬೆಳೆಯಬೇಕೆಂದರೆ ಈ ಮೂರು ಅಂಶಗಳು ಬಹಳ ಮುಖ್ಯ . ಸಾಕಷ್ಟು ಕ್ಯಾಲೊರಿ , ಸಮರ್ಪಕವಾದ ಪ್ರೋಟೀನ್ ಅಂಶ ಮತ್ತು ಸಮಯಕ್ಕೆ ತಕ್ಕಂತೆ ದೈಹಿಕ ಕಸರತ್ತು . ಕ್ಯಾಲೊರಿ ಅಂಶ ಇಲ್ಲದೆ ತೆಗೆದುಕೊಳ್ಳುವ ಪ್ರೋಟೀನ್ ಕೇವಲ ದೇಹದ ಕಾರ್ಯ ಚಟುವಟಿಕೆಗಾಗಿ ಶಕ್ತಿಯಾಗಿ ಮಾರ್ಪಾಡಾಗುತ್ತದೆ . ಅಧಿಕ ಪ್ರೋಟೀನ್ ಕೊಬ್ಬಿನಂಶದಲ್ಲಿ ಸೇರ್ಪಡೆಯಾಗುತ್ತದೆ . ನಮ್ಮ ದೇಹದ ಆರೋಗ್ಯಕ್ಕಾಗಿ ಅಗತ್ಯವಿರುವ ಪ್ರೋಟೀನ್ ಅಂಶವನ್ನು ಮಾತ್ರ ತೆಗೆದುಕೊಂಡು ಒಳ್ಳೆಯ ವ್ಯಾಯಾಮ ಮಾಡಿದರೆ ಖಂಡಿತ ನಾವು ಚೆನ್ನಾಗಿ ಆರೋಗ್ಯವಾಗಿರುತ್ತೇವೆ .
ಈ ಆಧುನಿಕ ಕಾಲದ ಜೀವನ ಶೈಲಿಯಲ್ಲಂತೂ ಎಲ್ಲರೂ ಡಯಟ್ ನ ಮೊರೆ ಹೋಗಿದ್ದಾರೆ . ಅದಕ್ಕೆ ಕಾರಣಗಳು ಹಲವಾರಿರಬಹುದು . ಆದರೆ ಜೊತೆಗೆ ಅಂತೆ ಕಂತೆ ಗಳೂ ಅಂಟಿಕೊಂಡಿರುತ್ತವೆ . ಕೆಲವು ಡಯಟ್‌ಗೆ ಒಳ್ಳೆಯ ಆಹಾರ ಎಂದು ಕೆಲವರು ಹೇಳಿದರೆ , ಅದನ್ನು ತಿನ್ನುವಷ್ಟರಲ್ಲಿ ಡಯಟ್ ಗೆ ಯಾರಾದರೂ ಈ ಆಹಾರವನ್ನು ತಿನ್ನುತ್ತಾರೆಯೇ ಎಂದು ಹಲವರು ಮಾತನಾಡಿರುತ್ತಾರೆ . ಉದಾಹರಣೆಗೆ ಕೋಳಿ ಮೊಟ್ಟೆ ತಿನ್ನಬಹುದು .ಇದು ಡಯಟ್ ಮಾಡುತ್ತಿರುವವರಿಗೆ ಅನುಕೂಲ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರದು ವಿರುದ್ಧ ರೀತಿಯವಾದ. ತಿನ್ನಲು ಬಯಸುವವರು ಮಾತ್ರ ತಲೆಗೆ ಹುಳು ಬಿಟ್ಟುಕೊಂಡು ಕುಳಿತಿರುತ್ತಾರೆ. ನಾವು ನಿಜಕ್ಕೂ ಈ ಆಹಾರ ತಿನ್ನಬೇಕೋ ಬೇಡವೋ ಎಂಬ ಅನುಮಾನ ನಮ್ಮನ್ನೇ ಕಾಡಲು ಶುರು ಮಾಡಿರುತ್ತದೆ. ಇಂತಹ ಕೆಲವು ಆಯ್ದ ಡಯಟ್ ಆಹಾರಗಳನ್ನು ಹೆಕ್ಕಿ ತಂದು ಅದರ ಹಿಂದಿರುವ ತಪ್ಪು ತಿಳುವಳಿಕೆಯನ್ನು ನಾವು ತಿಳಿಸುತ್ತೇವೆ. ಮೊದಲಿಗೆ ಪಾಲಕ್ ಸೊಪ್ಪಿನ ಬಗ್ಗೆ ನೋಡೋಣ .

   
 
ಹೆಲ್ತ್