Back
Home » ಆರೋಗ್ಯ
ದೈಹಿಕವಾಗಿ ಫಿಟ್ ಆಗಿರಿ ಕ್ಯಾನ್ಸರ್ ನಿಮ್ಮ ಹತ್ತಿರ ಕೂಡ ಸುಳಿಯುವುದಿಲ್ಲ !!!
Boldsky | 16th May, 2019 11:40 AM

ಇತ್ತೀಚಿನ ಬಿಡುವಿಲ್ಲದ ದಿನ ನಿತ್ಯದ ಕೆಲಸ ಕಾರ್ಯದ ನಡುವೆ ಮನುಷ್ಯ ವ್ಯಾಯಾಮ ಮಾಡುವುದನ್ನೇ ಮರೆತುಬಿಟ್ಟಿದ್ದಾನೆ . ವ್ಯಾಯಾಮ ವಿಲ್ಲದ ದೇಹ ಒಣಗಿದ ಮರದ ಕೊಂಬೆ ಇದ್ದಂತೆ . ಅದೇ ವ್ಯಾಯಾಮ ಮಾಡುತ್ತಾ ದೈಹಿಕವಾಗಿ ಫಿಟ್ ಆಗಿರುವ ಮನುಷ್ಯನ ನರ ನಾಡಿಗಳೆಲ್ಲ ಸದಾ ಸಕ್ರೀಯವಾಗಿರುತ್ತವೆ . ಫಿಟ್ನೆಸ್ ಗೂ ಕ್ಯಾನ್ಸರ್ ಗೂ ಸಂಭಂದವಿದೆ ಎಂದರೆ ನೀವು ನಂಬುತ್ತೀರಾ ? ನಂಬಲೇಬೇಕು.

Most Read: ಕ್ಯಾನ್ಸರ್ ರೋಗ ನಿಯಂತ್ರಣಕ್ಕೆ ಸೂಕ್ತ ಆಹಾರ ಕ್ರಮ

ಜರ್ನಲ್ ಕ್ಯಾನ್ಸರ್ ಮಾಡಿದ ಸಂಶೋಧನೆಯಿಂದ ಈ ವಿಷಯ ಬೆಳಕಿಗೆ ಬಂದಿದೆ. ಏನೆಂದರೆ ಯಾರು ದೈಹಿಕವಾಗಿ ವ್ಯಾಯಾಮ ಮಾಡಿ ಸದೃಢವಾಗಿರುತ್ತಾರೋ ಅಂತಹವರು ಕ್ಯಾನ್ಸರ್ ನಿಂದ ಜೀವಮಾನವಿಡೀ ದೂರವೇ ಉಳಿದಿರುತ್ತಾರೆ . ಅದೇ ವ್ಯಾಯಾಮ ಮಾಡದೇ ಇರುವ ವ್ಯಕ್ತಿಗಳು ಶ್ವಾಸಕೋಶದ ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್ ಅಂದರೆ ಕರುಳಿಗೆ ಸಂಭಂದಪಟ್ಟ ಕ್ಯಾನ್ಸರ್ ಗೆ ಬಹಳ ಬೇಗನೆ ಬಲಿಯಾಗುತ್ತಾರೆ . ಈ ರೀತಿಯ ಸಂಶೋಧನೆ ಮಾಡಲು ಈ ಸಂಸ್ಥೆ 1991-2009 ರ ಮಧ್ಯೆ ಸುಮಾರು 49143 ಜನರನ್ನು ವ್ಯಾಯಾಮ ಮತ್ತು ಒತ್ತಡ ಪರೀಕ್ಷೆಗೆ ಒಳಪಡಿಸಿತ್ತು.

ಅವರನ್ನು ಸುಮಾರು 7 ವರ್ಷ 7 ತಿಂಗಳ ಕಾಲ ಅತ್ಯಂತ ಸೂಕ್ಷ್ಮವಾಗಿ ಗಮನಿಸಿತ್ತು . ಯಾರು ಚೆನ್ನಾಗಿ ವ್ಯಾಯಾಮ ಮಾಡಿ ದೈಹಿಕವಾಗಿ ಫಿಟ್ ಆಗಿದ್ದರೋ , ಅವರಲ್ಲಿ ಶೇಕಡಾ 77 ರಷ್ಟು ಶ್ವಾಸಕೋಶದ ಕ್ಯಾನ್ಸರ್ ಬರುವುದು ಕಡಿಮೆ ಆಗಿತ್ತು ಮತ್ತು ಶೇಖಡಾ 61 ರಷ್ಟು ಜನರು ಕೊಲೊರೆಕ್ಟಲ್ ಕ್ಯಾನ್ಸರ್ ನಿಂದ ಪಾರಾಗಿದ್ದರು. ಇದರಲ್ಲಿ ಇನ್ನೂ ಉಳಿದ ದೈಹಿಕವಾಗಿ ಫಿಟ್ ಆಗಿದ್ದ ಶ್ವಾಸಕೋಶದ ಕ್ಯಾನ್ಸರ್ ಹೊಂದಿದ ಜನರಲ್ಲಿ ಶೇಕಡಾ 44 ರಷ್ಟು ಜನರು ಪ್ರಾಣಾಪಾಯದಿಂದ ಪಾರಾಗಿದ್ದರು ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್ ಹೊಂದಿದವರಲ್ಲಿ ಶೇಖಡಾ 89 ರಷ್ಟು ಮಂದಿ ಈ ತೊಂದರೆಯಿಂದ ದೂರ ಉಳಿದಿದ್ದರು . ಅಮೆರಿಕಾದ ಪ್ರತಿಷ್ಠಿತ ಜಾನ್ಸ್ ಹೋಪ್ಕಿನ್ಸ್ ಯೂನಿವರ್ಸಿಟಿ ಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ಕ್ಯಾಥರೀನ್ ಹ್ಯಾಂಡಿ ಮಾರ್ಷಲ್ ರವರು ಹೇಳುವ ಪ್ರಕಾರ ಅವರ ಸಂಸ್ಥೆಯಿಂದ ಮಾಡಲಾದ ಈ " ಫಿಟ್ನೆಸ್ ನಿಂದ ಕ್ಯಾನ್ಸರ್ ಬರುವುದೇ ಇಲ್ಲವೇ ? " ಎಂಬ ಸಂಶೋಧನೆಯು ಜಗತ್ತಿನಲ್ಲೇ ಮೊದಲು ಮತ್ತು ಅತ್ಯಂತ ಪರಿಣಾಮಕಾರಿ ಸಂಶೋಧನೆಯಾಗಿತ್ತು.

ಮಾರ್ಷಲ್ ರ ಪ್ರಕಾರ ಅನೇಕರು ಇಂದಿಗೂ ಈ ಫಿಟ್ನೆಸ್ ಟೆಸ್ಟಿಂಗ್ ಗೆ ಅವರ ವೈದ್ಯರ ಸಹಯೋಗದೊಂದಿಗೆ ಒಳಗಾಗುತ್ತಿದ್ದಾರೆ . ತುಂಬಾ ಜನರು ಈ ಪರೀಕ್ಷೆಯ ಫಲಿತಾಂಶ ಕೂಡ ತೆಗೆದುಕೊಂಡಿದ್ದಾರೆ ಅವರಿಗೆ ಕ್ಯಾನ್ಸರ್ ಬರದಿರಲು ಯಾವ ರೀತಿಯ ಫಿಟ್ನೆಸ್ ಅಗತ್ಯ ಮತ್ತು ಬಂದ ಮೇಲೆ ಎಷ್ಟು ಹೊತ್ತಿನ ದೈಹಿಕ ಕಸರತ್ತು ಪ್ರತಿನಿತ್ಯ ಬೇಕು ಎನ್ನುವುದನ್ನೂ ಚೆನ್ನಾಗಿ ತಿಳಿಸಿದ್ದಾರೆ. ಏಕೆಂದರೆ ಫಿಟ್ನೆಸ್ ಕಡಿಮೆ ಆದರೆ ಹೃದಯ ಸಂಬಂಧಿ ಕಾಯಿಲೆಗಳು ಒಂದೊಂದಾಗಿ ಪ್ರಾರಂಭವಾಗುತ್ತವೆ . ಆದರಿಂದ ನಮ್ಮ ದೇಹಕ್ಕೆ ಯಾವ ಖಾಯಿಲೆ ಅಂಟುಕೊಳ್ಳಬಾರದು ಎಂದು ನಾವು ಹೇಗೆ ಶತಾಯಗತಾಯ ಪ್ರಯತ್ನಿಸುತ್ತೇವೋ , ಅಷ್ಟೇ ಕರಾರುವಾಕ್ಕಾಗಿ ನಮ್ಮ ಹೃದಯದ ಕೂಗನ್ನೂ ಕೇಳಿಸಿಕೊಳ್ಳಬೇಕಲ್ಲವೇ ?

   
 
ಹೆಲ್ತ್