Back
Home » ಆರೋಗ್ಯ
ಕೋಳಿಮಾಂಸ, ಕುರಿಮಾಂಸ ಸೇವನೆಯಿಂದ ಮಧುಮೇಹ ಆವರಿಸುವ ಸಾಧ್ಯತೆ ಹೆಚ್ಚಳ!
Boldsky | 17th May, 2019 04:35 PM

ಮಾಂಸಾಹಾರಗಳಲ್ಲಿ ಕುರಿ ಮತ್ತು ಕೋಳಿಯ ಮಾಂಸಗಳು ಅತಿ ಜನಪ್ರಿಯವಾಗಿದ್ದು ಇವುಗಳನ್ನು ಬೇಯಿಸಿ, ಹುರಿದ ಅಥವಾ ಇತರ ಖಾದ್ಯಗಳನ್ನು ತಯಾರಿಸಿದ ಬಳಿಕ ಕೇವಲ ಇವುಗಳ ನೋಟವೇ ನಾಲಿಗೆಯಲ್ಲಿ ನೀರೂರಿಸುತ್ತದೆ. ಅಷ್ಟಕ್ಕೂ ಇವುಗಳ ರುಚಿಯನ್ನು ಬಲ್ಲ ಯಾರಿಗೆ ಜೊಲ್ಲು ಸುರಿದಿರಲಾರದು? ಆದರೆ ಮಾಂಸಾಹಾರದಿಂದ ಕೊಂಚ ಪ್ರಮಾಣದಲ್ಲಿಯೇ ಅಪಾರ ಮಟ್ಟದ ಪೋಷಕಾಂಶಗಳೂ ಮತ್ತು ಅಧಿಕ ಕ್ಯಾಲೋರಿಗಳು ದೇಹಕ್ಕೆ ಲಭ್ಯವಾಗುತ್ತವೆ ಹಾಗೂ ಇವೇ ನಮ್ಮ ಹೃದಯ ಮತ್ತು ಇತರ ಅಂಗಗಳ ಮೇಲೆ ಹೆಚ್ಚುವರಿ ಹೊರೆ ಹೋರುವ ಮೂಲಕ ಅಪಾಯಕಾರಿಯಾಗಿವೆ. ಈ ವಾಸ್ತವ ನಮ್ಮೆಲ್ಲರಿಗೆ ಅರಿವಿದ್ದೂ ಮಾಂಸಾಹಾರದ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಲಾಗಲೀ ಇದರ ರುಚಿಯಿಂದ ವಿಮುಖರನ್ನಾಗಿಸಲೀ ಆಗುತ್ತಿಲ್ಲ. ಅಲ್ಲದೇ ಇವುಗಳ ರುಚಿ ಹೆಚ್ಚಿಸಲು ಬಳಸುವ ಎಣ್ಣೆ, ಉಪ್ಪು ಮೊದಲಾದ ಇತರ ಸಾಮಾಗ್ರಿಗಳೂ ಇವುಗಳ ಅಪಾಯವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಉದಾಹರಣೆಗೆ ಬೆಣ್ಣೆ, ಮಾಂಸದ ರುಚಿಯನ್ನು ಹೆಚ್ಚಿಸಲು ಬೆಣ್ಣೆಯನ್ನು ಢಾಳಾಗಿ ಸವರಿರುತ್ತಾರೆ.

ಇದರಿಂದ ಅಡುಗೆ ಮಾಡಿದ ಪದಾರ್ಥದ ರುಚಿ ಹೆಚ್ಚುವ ಜೊತೆಗೇ ಹೊಳಪು ಸಹಾ ಹೆಚ್ಚುತ್ತದೆ. ಈ ಆಹಾರವನ್ನು ನಿರಾಕರಿಸಲು ಯಾವುದೇ ಮಾಂಸಾಹಾರಿಗೆ ಸಾಧ್ಯವೇ ಇಲ್ಲ! ಆದರೆ ಬೆಣ್ಣೆ ಸಂತೃಪ್ತ ಕೊಬ್ಬು ಆಗಿದ್ದು ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸದಂತೆ ಆಹಾರ ತಜ್ಞರು ಎಚ್ಚರಿಸುತ್ತಿದ್ದರೂ ಮಾಂಸದ ರುಚಿ ಹೆಚ್ಚಬೇಕೆಂದರೆ ಇಷ್ಟೊಂದು ಬೆಣ್ಣೆ ಹಾಕಲೇಬೇಕಾಗುತ್ತದೆ ಎಂದು ಬಾಣಸಿಗರ ವಾದವಾಗಿದೆ. ರುಚಿಗಾಗಿ ಹೆಚ್ಚಿನ ಪ್ರಮಾಣದ ಸಂತೃಪ್ತ ಕೊಬ್ಬು ಅಥವಾ ಜಿಡ್ಡುಯುಕ್ತ ಎಣ್ಣೆಯನ್ನು ಬಳಸುವುದನ್ನು ಕಡಿಮೆ ಮಾಡಬೇಕೆಂದು, ಇಲ್ಲದಿದ್ದರೆ ನರಗಳ ಒಳಗೆ ಜಿಡ್ದುಗಡ್ಡಿ ರಕ್ತಪರಿಚಲನೆಗೆ ಅಡ್ಡಿಯುಂಟಾಗುವ ಮೂಲಕ ಹೃದಯಸಂಬಂಧಿ ತೊಂದರೆಗಳ ಸಾಧ್ಯತೆ ಹೆಚ್ಚುತ್ತದೆ ಎಂದು ಆಹಾರ ತಜ್ಞರು ಸದಾ ಎಚ್ಚರಿಸುತ್ತಲೇ ಬಂದಿದ್ದಾರೆ. ಬೆಣ್ಣೆಯಲ್ಲಿ ಸುಮಾರು 51% ಸಂತೃಪ್ತ ಕೊಬ್ಬು ಇದೆ.

ಹಾಗಾಗಿ ಪ್ರತಿ ಪ್ರಮಾಣಕ್ಕೆ ಬಳಸುವ ಬೆಣ್ಣೆಯ ಪ್ರಮಾಣ ಆರೋಗ್ಯಕರ ಮಿತಿಯಲ್ಲಿರಿಸುವುದೇ ಜಾಣತನದ ಕ್ರಮವಾಗಿದೆ. ಸಾಮಾನ್ಯವಾಗಿ ಊಟದಲ್ಲಿ ಹಲವಾರು ವೈವಿಧ್ಯತೆಯ ಖಾದ್ಯಗಳಿದ್ದು ಇವುಗಳಲ್ಲಿ ಎಲ್ಲವನ್ನೂ ಕೊಂಚ ಕೊಂಚವಾಗಿ ರುಚಿ ನೋಡಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸದಿರುವುದು ಇನ್ನೂ ಒಳ್ಳೆಯ ಕ್ರಮವಾಗಿದೆ. ಇಂದಿನ ಆಧುನಿಕ ಯುಗದಲ್ಲಿ ಆಹಾರ ನೋಡಲಿಕ್ಕೆ ಮೊದಲು ಚೆನ್ನಾಗಿರಬೇಕು, ಬಳಿಕ ನಾಲಿಗೆಗೆ ರುಚಿಕರವಾಗಿರಬೇಕು ಎಂಬ ನಿಟ್ಟಿನಲ್ಲಿಯೇ ಕೃತಕ ರಾಸಾಯನಿಕಗಳು, ಸಂರಕ್ಷಕಗಳು ಹಾಗೂ ಇತರ ಸಂಸ್ಕ್ರರಣಾ ವಿಧಾನದಿಂದ ತಯಾರಿಸಲ್ಪಡುತ್ತಿದ್ದು ಇವುಗಳ ಥಳಕಿಗೆ ನಾವೆಲ್ಲಾ ಸೋತೇ ಇದ್ದೇವೆ. ಹಾಗಾಗಿ ಮೊದಲಾಗಿ ನಾವೇನು ಸೇವಿಸುತ್ತಿದ್ದೇವೆ ಎಂಬುದನ್ನು ಅರಿತುಕೊಳ್ಳುವುದು ಅಗತ್ಯ ಕ್ರಮವಾಗಿದೆ.

Most Read: ಮಧುಮೇಹದಿಂದ ಕಿಡ್ನಿ ವೈಫಲ್ಯದ ಸಾಧ್ಯತೆ ಇದೆ-ಇದರ ಲಕ್ಷಣಗಳು ಇಲ್ಲಿದೆ ನೋಡಿ

ಬೆಣ್ಣೆ ರುಚಿಕರವೇನೋ ಹೌದು, ಆದರೆ ಇದರಲ್ಲಿ ಸಂತೃಪ್ತ ಕೊಬ್ಬಿನ ಭಂಡಾರವೇ ಇದುವ ಕಾರಣ ಅಧಿಕ ಪ್ರಮಾಣದ ಸೇವನೆಯಿಂದ ಹತ್ತು ಹಲವು ಬಗೆಯ ಕಾಯಿಲೆಗಳು ಆವರಿಸಬಹುದು. ಅಮೇರಿಕಾದ ಹಾರ್ವರ್ಡ್ ಟಿ. ಎಚ್ ಚಾಲ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಎಂಬ ಶಿಕ್ಷಣ ಸಂಸ್ಥೆಯಲ್ಲಿ ನಡೆಸಿದ ಅಧ್ಯಯನವೊಂದರಲ್ಲಿ ನಿತ್ಯವೂ ಸುಮಾರು ಹನ್ನೆರಡು ಗ್ರಾಂ ನಷ್ಟು ಬೆಣ್ಣೆಯನ್ನು ಸೇವಿಸಿದ ವ್ಯಕ್ಗಿಗಳು ಇತರ ವ್ಯಕ್ತಿಗಳಿಗಿಂತಲೂ ಮಧುಮೇಹ ಆವರಿಸಿಕೊಳ್ಳುವ ಸಾಧ್ಯತೆಯನ್ನು ದುಪ್ಪಟ್ಟು ಹೆಚ್ಚಾಗಿ ಹೊಂದಿದ್ದಾರೆ ಎಂದು ವರದಿ ಮಾಡಿದೆ.

ಸಂತೃಪ್ತ ಕೊಬ್ಬು ಆಪಾಯಕಾರಿ ಎಂಬುದು ಕೇವಲ ವಾಣಿಜ್ಯಾಧಾರಿತ ಬೂಟಾಟಿಕೆ ಎಂದು ಕೆಲವು ಸಂಸ್ಥೆಗಳು ತಮ್ಮ ಮೊಂಡುವಾದ ಮಂಡಿಸಿದ್ದು ತಮ್ಮ ಉತ್ಪನ್ನಗಳ ಮಾರಾಟವನ್ನು ಉಳಿಸಿಕೊಳ್ಳಲು ಯತ್ನಿಸುತ್ತಿವೆ. ಈ ಆಹಾರಗಳು ಈಗಾಗಲೇ ಮಿಲಿಯಾಂತರ ಡಾಲರುಗಳ ವಹಿವಾಟನ್ನು ನಡೆಸುತ್ತಿದ್ದು ಒಂದು ವೇಳೆ ಅಪಾಯಕಾರಿ ಎಂದು ದೃಢಪಟ್ಟರೆ ಈ ಬಂಡವಾಳಕ್ಕೆ ಮುಳುವಾಗುವ ಕಾರಣ ಈ ಆಹಾರ ಆರೋಗ್ಯಕರವೋ ಅಲ್ಲವೋ ಎಂಬ ವಾದ ಲಾಭ ನಷ್ಟದ ವಾದದಲ್ಲಿ ಮುಂದುವರೆಯುತ್ತಿವೆ. ಬೆಣ್ಣೆಯನ್ನು ಮನೆಯಲ್ಲಿಯೇ ತಯಾರಿಸುವುದಾದರೆ ಮೊಸರನ್ನು ಕಡೆದು ತಣ್ಣಗಿದ್ದಂತೆಯೇ ಬೆಣ್ಣೆ ಪ್ರತ್ಯೇಕಗೊಳ್ಳುತ್ತದೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಬೆಣ್ಣೆ ಕೃತಕ ವಿಧಾನದಿಂದ ತಯಾರಿಸಲಾಗಿದ್ದು ಹಾಲಿನ ಕೆನೆಯನ್ನು ಹಾಲಿನ ಪ್ರೋಟೀನ್ ಗಳು ಎಂಬ ಕ್ರಿಯೆಯನ್ನು ನಡೆಸುವಂತೆ ಮಾಡುವ ಕ್ರಿಯೆಯ ಮೂಲಕ (emulsifying milk fat) ತಯಾರಿಸಲಾಗುತ್ತದೆ. ತಯಾರಿಕಾ ಹಂತದ ಕಡೆಯಲ್ಲಿ ಉಪ್ಪನ್ನು ಸೇರಿಸಲಾಗುತ್ತದೆ. ಈ ವಿಧಾನದಲ್ಲಿ ತಯಾರಿಸಿದ ಬೆಣ್ಣೆ ರುಚಿಕರವಾಗಿದ್ದರೂ ಇದರಲ್ಲಿರುವ ಟ್ರಾನ್ಸ್ ಫ್ಯಾಟ್ ಎಂಬ ಕೊಬ್ಬುಗಳು ಅತಿ ಅಪಾಯಕಾರಿ ಕೊಬ್ಬುಗಳಾಗಿದ್ದು ಈ ಬೆಣ್ಣೆಯನ್ನು ಮನೆಯಲ್ಲಿ ತಯಾರಿಸಿದ ಬೆಣ್ಣೆಗಿಂತಲೂ ಅತಿಹೆಚ್ಚು ಅಪಾಯಕಾರಿ ಆಹಾರವಾಗಿಸುತ್ತವೆ.

ಈ ಅಧ್ಯಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಾಗೂ ಅಧ್ಯಯನದ ಲೇಖಕಿಯಾಗಿರುವ ಮಾರ್ತಾ ಗುವಾಷ್-ಫೆರ್ರೆಯವರ ಪ್ರಕಾರ ಪ್ರಾಣಿಜನ್ಯ ಕೊಬ್ಬು ಆಗಿರುವ ಬೆಣ್ಣೆಯಲ್ಲಿ ಸಂತೃಪ್ತ ಕೊಬ್ಬುಗಳು ಮತ್ತು ಇತರ ಟ್ರಾನ್ಸ್ ಕೊಬ್ಬುಗಳು ಅತಿ ಹೆಚ್ಚಿನ ಪ್ರಮಾಣದಲ್ಲಿದ್ದು ಇವುಗಳ ಸೇವನೆಯಿಂದ ಟೈಪ್ 2 ಮಧುಮೇಹ ಆವರಿಸುವ ಸಾಧ್ಯತೆ ಹೆಚ್ಚುತ್ತದೆ. ಆದರೆ ಕೆನೆಭರಿತ ಮೊಸರಿನಲ್ಲಿರುವ ಕೊಬ್ಬು ಈ ಸಾಧ್ಯತೆಯನ್ನು ಕನಿಷ್ಟವಾಗಿರಿಸುತ್ತದೆ. ಇದಕ್ಕೂ ಮುನ್ನ ಡೈರಿ ಉತ್ಪನ್ನಗಳಲ್ಲಿರುವ ಕೊಬ್ಬು ಹೃದಯಸಂಬಂಧಿ ಕಾಯಿಲೆಗಳೊಂದಿಗೆ ನಿಕಟ ಸಂಬಂಧವಿದೆ ಎಂದು ಭಾವಿಸಲಾಗಿತ್ತು. ಈ ಅಧ್ಯಯನದಲ್ಲಿ ಪಾಲ್ಗೊಂಡ ಸಂಶೋಧಕರು ಮಧುಮೇಹ ಇಲ್ಲದಿರುವ ಹಾಗೂ ಹೃದಯ ಕಾಯಿಲೆ ಆವರಿಸುವ ಸಾಧ್ಯತೆ ಹೆಚ್ಚಿರುವ 3,349 ವ್ಯಕ್ತಿಗಳ ಆರೋಗ್ಯ ಮಾಹಿತಿಗಳನ್ನು ಕೂಲಂಕಶವಾಗಿ ವಿಶ್ಲೇಷಿಸಿದ್ದರು. ಸುಮಾರು ನಾಲ್ಕುವರೆ ವರ್ಷಗಳ ಬಳಿಕ ಇದೇ ವ್ಯಕ್ತಿಗಳ ಆರೋಗ್ಯ ಮಾಹಿತಿಯನ್ನು ಮತ್ತೊಮ್ಮೆ ಪಡೆದು ಹಿಂದಿನ ಮಾಹಿತಿಗೆ ಹೋಲಿಸಿದಾಗ ಇವರಲ್ಲಿ 266 ವ್ಯಕ್ತಿಗಳಿಗೆ ಮಧುಮೇಹ ಆವರಿಸಿದ್ದುದು ಪತ್ತೆಯಾಗಿದೆ.

Most Read: ಡಯಾಬಿಟಿಸ್ ಸಮಸ್ಯೆ ಇದ್ದವರು ಮಟನ್ ಬಿರಿಯಾನಿ ತಿನ್ನಬಹುದೇ? ಇದರಿಂದ ಏನಾದರೂ ಸಮಸ್ಯೆ ಇದೆಯೇ?

ಸಸ್ಯಜನ್ಯ ಆಹಾರಸೇವನೆಯ ಪ್ರಯೋಜನಗಳು

ಪ್ರಾಣಿಜನ್ಯ ಆಹಾರಗಳ ಮಾರಕ ಪ್ರಭಾವ ಹಾಗೂ ಪರಿಣಾಮಗಳ ಬಗ್ಗೆ ಹಲವಾರು ವರದಿಗಳು ಬರುತ್ತಿದ್ದಂತೆಯೇ ಈಗೇನು ಮಾಡುವುದು ಎಂಬ ಪ್ರಶ್ನೆಗೆ ಸಸ್ಯಾಹಾರಕ್ಕೆ ಬದಲಿಸಿಕೊಳ್ಳುವುದು ಎಂಬ ಉತ್ತರವೇ ಹೆಚ್ಚಾಗಿ ಕೇಳಿಬರುತ್ತಿದೆ. ಆಹಾರ ತಜ್ಞರು ಸಸ್ಯಾಹಾರವನ್ನೇ ಹೆಚ್ಚಾಗಿ ನೆಚ್ಚಿಕೊಳ್ಳಬೇಕು ಎಂದು ಹಿಂದಿನಿಂದಲೂ ಹೇಳುತ್ತಲೇ ಬಂದಿದ್ದಾರೆ ಹಾಗೂ ನಿತ್ಯದ ಅಹಾರದಲ್ಲಿ ಕೆಂಪು ಮಾಂಸ, ಚೀಸ್, ಬೆಣ್ಣೆ ಮೊದಲಾದ ಪ್ರಾಣಿಜನ್ಯ ಆಹಾರಗಳಿಗಿಂತಲೂ ಸಸ್ಯಜನ್ಯ ಉತ್ಪನ್ನಗಳೇ ಹೆಚ್ಚಾಗಿ ಇರಬೇಕು. ಈ ಆಹಾರಗಳ ಸೇವನೆಯ ಪ್ರಯೋಜನಗಳನ್ನು ಈಗಾಗಲೇ ಕೆಲವು ವರದಿಗಳು ಪ್ರಕಟಿಸಿದ್ದು ದ್ವಿದಳಧಾನ್ಯ, ಇಡಿಯ ಧಾನ್ಯ, ಹಣ್ಣುಗಳು, ತರಕಾರಿಗಳು ಮತ್ತು ಒಣಫಲಗಳಿಂದ ಕೂಡಿದ ಆಹಾರ ಹೆಚ್ಚು ಆರೋಗ್ಯಕರವಾಗಿವೆ ಹಾಗೂ ಪ್ರಕೃತಿಯ ಮೇಲೆ ಕಡಿಮೆ ಆಕ್ರಮಣವನ್ನು ಎಸಗಿ ಇವುಗಳು ಉತ್ಪತ್ತಿಯಾಗಿರುತ್ತವೆ ಎಂದು ವಿವರಿಸಿವೆ.

ಮೆಡಿಟರೇನಿಯನ್ ಆಹಾರಕ್ರಮ 620

ಮೆಡಿಟರೇನಿಯನ್ ಅಥವಾ ಹೆಚ್ಚಿನ ಸಸ್ಯಜನ್ಯ ಉತ್ಪನ್ನಗಳೇ ಇರುವ ಆಹಾರಕ್ರಮದಲ್ಲಿ ಹೆಚ್ಚಿನ ಪ್ರಮಾಣದ ಹಣ್ಣು ಮತ್ತು ತರಕಾರಿಗಳು, ಸಸ್ಯಜನ್ಯ ಪ್ರೋಟೀನುಗಳು ಹಾಗೂ ಅಧಿಕ ಆರೋಗ್ಯಕರ ಕೊಬ್ಬುಗಳಿರುವ ಆಲಿವ್ ಎಣ್ಣೆ ಹಾಗೂ ಅತಿ ಕಡಿಮೆ ಪ್ರಮಾಣದಲ್ಲಿ ಸಂಸ್ಕರಿತ ಸಕ್ಕರೆ ಮತ್ತು ಸಂತೃಪ್ತ ಕೊಬ್ಬುಗಳು ಇರುತ್ತವೆ. ಈ ಆಹಾರಕ್ರಮವನ್ನು ಅಳವಡಿಸಿಕೊಂಡಾಗ ಮಾರಕ ಹೃದಯಸಂಬಂಧಿ ತೊಂದರೆಗಳು ಆವರಿಸುವ ಹಾಗೂ ವಿಶೇಷವಾಗಿ ಟೈಪ್ 2 ಮಧುಮೇಹ ಆವರಿಸುವ ಸಾಧ್ಯತೆ ಕಡಿಮೆಯಾಗುತ್ತದೆ ಎಂದು ಅಮೇರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್ ಎಂಬ ಮಾಧ್ಯಮದಲ್ಲಿ ಪ್ರಕಟವಾಗಿದೆ.

Most Read: ಡಯಾಬಿಟಿಸ್ ಇದ್ದರೆ ಬೆನ್ನುನೋವು, ಕುತ್ತಿಗೆ ನೋವು ಬರುವ ಸಾಧ್ಯತೆ ಹೆಚ್ಚಂತೆ!!

ಆದರೆ ಕೇವಲ ಸಸ್ಯಜನ್ಯ ಆಹಾರವಿದೆ ಎಂದ ಮಾತ್ರಕ್ಕೇ ಮೆಡಿಟರೇನಿಯನ್ ಆಹಾರಕ್ರಮ 620 ಎಂಬ ವಿಧಾನ ಅತ್ಯಂತ ಆರೋಗ್ಯಕರ ಎಂದು ಸಾಬೀತಾಗುವುದಿಲ್ಲ. ಈ ಅಹಾರಕ್ರಮದಲ್ಲಿ ಬಳಕೆಯಾಗುವ ಆಲಿವ್ ಎಣ್ಣೆ, ಒಣಫಲ, ಬೆಣ್ಣೆಹಣ್ಣುಗಳಲ್ಲಿ ಕಂಡುಬರುವ ಅಸಂತೃಪ್ತ ಕೊಬ್ಬುಗಳು ಹಾಗೂ ಹಸಿಸೊಪ್ಪುಗಳಾದ ಪಾಲಕ್, ಸೆಲೆರಿ ಮತ್ತು ಕ್ಯಾರೆಟ್ಟುಗಳಲ್ಲಿ ಕಂಡುಬರುವ ನೈಟ್ರೈಟುಗಳು ಮತ್ತು ನೈಟ್ರೇಟುಗಳು ಪರಿಪೂರ್ಣವಾಗಿ ಆರೋಗ್ಯಕರವಲ್ಲ. ಆದರೆ ಈ ಆಹಾರಕ್ರಮದಲ್ಲಿ ಲಭಿಸುವ ನೈಟ್ರೋ ಕೊಬ್ಬಿನ ಆಮ್ಲಗಳು ರಕ್ತದ ಒತ್ತಡವನ್ನು ಕಡಿಮೆ ಮಾಡುವ 'ಕರಗಬಲ್ಲ ಎಪೋಕ್ಸೈಡ್ ಹೈಡ್ರೋಲೇಸ್'(soluble Epoxide Hydrolase)ಎಂಬ ಕಣಗಳನ್ನು ನಿಗ್ರಹಿಸುತ್ತವೆ. ಹಾಗೂ ಈ ಅಹಾರದಲ್ಲಿರುವ ಪೋಷಕಾಂಶಗಳು ರಕ್ತದಲ್ಲಿನ ಸಕ್ಕರೆಯ ಅಂಶವನ್ನೂ ಸಮತೋಲನದಲ್ಲಿರಿಸುತ್ತವೆ.

   
 
ಹೆಲ್ತ್