Back
Home » ಇತ್ತೀಚಿನ
ಅಬ್ಬಾ.! ಭಾರತದಲ್ಲಿ 'ಶಿಯೋಮಿ' ಮಾರಿದ ಸ್ಮಾರ್ಟ್‌ಟಿವಿಗಳು ಎಷ್ಟು ಗೊತ್ತಾ?
Gizbot | 17th May, 2019 05:01 PM
 • ಮಿ ಟಿವಿ 4ಎ 32 ಇಂಚು, 12,499 ರೂ.

  20 W ಸ್ಪೀಕರ್ ಔಟ್ಪುಟ್
  1366 x 768 HD ರೆಡಿ
  60 ಹರ್ಟ್ಝ್: ಗುಣಮಟ್ಟಕ್ಕೆ ಪ್ರಮಾಣಿತ ರಿಫ್ರೆಶ್ ರೇಟ್
  3 x HDMI: ಸೆಟ್ ಟಾಪ್ ಬಾಕ್ಸ್
  2 x ಯುಎಸ್‌ಬಿ


 • ಮಿ ಟಿವಿ 4ಎ ಪ್ರೊ 43 ಇಂಚು, 21,999 ರೂ.

  20 W ಸ್ಪೀಕರ್ ಔಟ್ಪುಟ್
  1920 x 1080 ಫುಲ್ ಹೆಚ್‌ಡಿ-
  60 ಹರ್ಟ್ಝ್: ಗುಣಮಟ್ಟಕ್ಕೆ ಪ್ರಮಾಣಿತ ರಿಫ್ರೆಶ್ ರೇಟ್
  3 x HDMI: ಸೆಟ್ ಟಾಪ್ ಬಾಕ್ಸ್,
  3 X ಯುಎಸ್‌ಬಿ


 • ಮಿ ಟಿವಿ 4ಸಿ 32 ಇಂಚು, 12,999 ರೂ.

  20 W ಸ್ಪೀಕರ್ ಔಟ್‌ಪುಟ್
  1366 x 768 HD ರೆಡಿ
  60 ಹರ್ಟ್ಝ್:ಗುಣಮಟ್ಟಕ್ಕೆ ಪ್ರಮಾಣಿತ ರಿಫ್ರೆಶ್ ರೇಟ್
  3 x HDMI: ಸೆಟ್ ಟಾಪ್ ಬಾಕ್ಸ್
  2 x ಯುಎಸ್‌ಬಿ


 • ಮಿ ಟಿವಿ 4ಎಕ್ಸ್ 55 ಇಂಚು, 39,999 ರೂ.

  20 W ಸ್ಪೀಕರ್ ಔಟ್‌ಪುಟ್
  3840 x 2160 ಅಲ್ಟ್ರಾ ಹೆಚ್‌ಡಿ
  4x ರೆಸಲ್ಯೂಶನ್
  60 ಹರ್ಟ್ಝ್:ಗುಣಮಟ್ಟಕ್ಕೆ ಪ್ರಮಾಣಿತ ರಿಫ್ರೆಶ್ ರೇಟ್
  3 x HDMI: ಸೆಟ್ ಟಾಪ್ ಬಾಕ್ಸ್
  2 x ಯುಎಸ್‌ಬಿ


 • ಮಿ ಟಿವಿ 4ಪ್ರೊ 55 ಇಂಚು, 44,999.

  16 W ಸ್ಪೀಕರ್ ಔಟ್‌ಪುಟ್
  3840 x 2160 ಅಲ್ಟ್ರಾ ಹೆಚ್‌ಡಿ
  4x ರೆಸಲ್ಯೂಶನ್
  60 ಹರ್ಟ್ಝ್: ಗುಣಮಟ್ಟಕ್ಕೆ ಪ್ರಮಾಣಿತ ರಿಫ್ರೆಶ್ ರೇಟ್
  3 x HDMI: ಸೆಟ್ ಟಾಪ್ ಬಾಕ್ಸ್
  2 x ಯುಎಸ್‌ಬಿ


 • ಮಿ ಟಿವಿ 4ಎ PRO 49 ಇಂಚು, 29,999 ರೂ.

  20 W ಸ್ಪೀಕರ್ ಔಟ್‌ಪುಟ್
  1920 x 1080 ಫುಲ್ ಹೆಚ್‌ಡಿ
  60 ಹರ್ಟ್ಝ್: ಗುಣಮಟ್ಟಕ್ಕೆ ಪ್ರಮಾಣಿತ ರಿಫ್ರೆಶ್ ರೇಟ್
  3 x HDMI: ಸೆಟ್ ಟಾಪ್ ಬಾಕ್ಸ್,
  2 x ಯುಎಸ್‌ಬಿ


 • ಮಿ ಟಿವಿ 4ಎ 43 ಇಂಚು, 22,999 ರೂ.

  20 W ಸ್ಪೀಕರ್ ಔಟ್‌ಪುಟ್
  1920 x 1080 ಫುಲ್ ಹೆಚ್‌ಡಿ
  60 ಹರ್ಟ್ಝ್: ಗುಣಮಟ್ಟಕ್ಕೆ ಪ್ರಮಾಣಿತ ರಿಫ್ರೆಶ್ ರೇಟ್
  3 x HDMI: ಸೆಟ್ ಟಾಪ್ ಬಾಕ್ಸ್
  3 X ಯುಎಸ್‌ಬಿ


 • ಮಿ ಟಿವಿ 4ಸಿ ಪ್ರೊ 32 ಇಂಚು, 12,999 ರೂ

  20 W ಸ್ಪೀಕರ್ ಔಟ್‌ಪುಟ್
  1366 x 768 HD ರೆಡಿ
  60 ಹರ್ಟ್ಝ್: ಮಗುಣಮಟ್ಟಕ್ಕೆ ಪ್ರಮಾಣಿತ ರಿಫ್ರೆಶ್ ರೇಟ್
  3 x HDMI: ಸೆಟ್ ಟಾಪ್ ಬಾಕ್ಸ್
  2 x ಯುಎಸ್‌ಬಿ
ಭಾರತದ ಮೊಬೈಲ್ ಮಾರುಕಟ್ಟೆ ಮಾತ್ರವಲ್ಲದೇ ದೇಶದ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲೂ ಶಿಯೋಮಿ ಹವಾ ಎಬ್ಬಿಸಿದೆ. ಶಿಯೋಮಿ ಕಂಪೆನಿ ದೇಶದ ಸ್ಮಾರ್ಟ್‌ಟಿವಿ ಮಾರುಕಟ್ಟೆಗೆ ಕಾಲಿಟ್ಟ ಕೇವಲ ಒಂದು ವರ್ಷದ ಅವಧಿಯಲ್ಲೇ ಎರಡು ಮಿಲಿಯನ್ ಸ್ಮಾರ್ಟ್‌ಟಿವಿಗಳನ್ನು ಮಾರಾಟ ಮಾಡಿದ್ದು, ಕೇವಲ 14 ತಿಂಗಳಲ್ಲೇ 20 ಲಕ್ಷ (2 ಮಿಲಿಯನ್) ಮಿ ಟಿವಿಗಳನ್ನು ಮಾರಲು ಕಂಪನಿಗೆ ಸಾಧ್ಯವಾಗಿದೆ ಎಂದು ಶಿಯೋಮಿ ಇಂಡಿಯಾ ಕಂಪೆನಿ ಮಾಹಿತಿ ನೀಡಿದೆ.

ಹೌದು, ನಮ್ಮ 'ಮಿ ಎಲ್ಇಡಿ ಟಿವಿ'ಗಳು ಕೇವಲ 14 ತಿಂಗಳೊಳಗೆ ಎರಡು ಮಿಲಿಯನ್ ಮಾರಾಟದ ಮಾರಾಟವನ್ನು ಮೀರಿವೆ ಎಂದು ಘೋಷಿಸಲು ನಮಗೆ ಸಂತೋಷವಾಗಿದೆ ಎಂದು ಶಿಯೋಮಿ ಇಂಡಿಯಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಈ ಮಾರಾಟದಿಂದ ಮಿ ಅಭಿಮಾನಿಗಳು ಮತ್ತು ಭಾರತದಾದ್ಯಂತ ಸ್ಮಾರ್ಟ್‌ಟಿವಿ ಗ್ರಾಹಕರಿಗೆ ಮತ್ತಷ್ಟು ನವೀನ ತಂತ್ರಜ್ಞಾನದ ಅತ್ಯುತ್ತಮ ಉತ್ಪನ್ನಗಳನ್ನು ನೀಡುವ ಗುರಿಯನ್ನು ಹೊಂದಿರುವುದಾಗಿ ಶಿಯೋಮಿ ತಿಳಿಸಿದೆ.

ಇತ್ತೀಚಿಗಷ್ಟೇ IDC ಸ್ಮಾರ್ಟ್ ಹೋಮ್ ಡಿವೈಸ್ ಟ್ರಾಕರ್ ರಿಪೋರ್ಟ್ ಪ್ರಕಾರ, ಶಿಯೋಮಿ ಸತತ ಮೂರು ತ್ರೈಮಾಸಿಕಗಳಿಗಾಗಿ ಭಾರತದಲ್ಲಿ ಅತಿದೊಡ್ಡ ಸ್ಮಾರ್ಟ್ ಟಿವಿ ಬ್ರ್ಯಾಂಡ್ ಆಗಿ ಮಾರ್ಪಟ್ಟಿದೆ. ಪ್ರಸ್ತುತ, ಶಿಯೋಮಿ ಭಾರತದಲ್ಲಿ 8 ವಿವಿಧ ಮಿ ಟಿವಿ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಈ ಎಲ್ಲಾ ಸ್ಮಾರ್ಟ್‌ಟಿವಿಗಳು ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಉತ್ತಮ ಸ್ಮಾರ್ಟ್‌ಟಿವಿಗಳಲಾಗಿವೆ. ಹಾಗಾಗಿ, ಆ ಎಲ್ಲಾ ಸ್ಮಾರ್ಟ್‌ಟಿವಿಗಳ ಬಗ್ಗೆ ನಾವು ಈ ಕೆಳಗೆ ತಿಳಿಯೋಣ.

   
 
ಹೆಲ್ತ್