Back
Home » ಇತ್ತೀಚಿನ
ಆನ್ ಲೈನ್ ನಲ್ಲಿ ಖರೀದಿಸಿದ ವಸ್ತು ಕಳುವಾಗದಂತೆ ನೋಡಿಕೊಳ್ಳುವುದು ಹೇಗೆ?
Gizbot | 17th May, 2019 07:15 PM
 • ಅಮೇಜಾನ್ ಕೀಗೆ ಸೈನ್ ಅಪ್ ಆಗಿ

  ಅಮೇಜಾನ್ ಈ ಸಮಸ್ಯೆಯನ್ನು ಅಮೇಜಾನ್ ಕೀಯಿಂದ ಪರಿಹರಿಸುವುದಕ್ಕೆ ಪ್ರಯತ್ನಿಸುತ್ತಿದೆ. ಇದರಲ್ಲಿ ಹಲವು ಸ್ಮಾರ್ಟ್ ಡಿವೈಸ್ ಗಳಿರುತ್ತದೆ. ಲಾಕ್ ಗಳು, ಕ್ಯಾಮರಾಗಳು ಇತ್ಯಾದಿಗಳು. ಇದು ನಿಮ್ಮ ಮನೆ, ಗ್ಯಾರೇಜ್ ಅಥವಾ ಕಾರಿನಲ್ಲೂ ಕೂಡ ನಿಮ್ಮ ಸಾಮಾನನ್ನು ಇರಿಸುವುದಕ್ಕೆ ಅನುಮತಿ ನೀಡುತ್ತದೆ. ಅಪರಿಚಿತರು ನಿಮ್ಮ ಮನೆಗೆ ಡೆಲಿವರಿ ಮಾಡುವಾಗ ಕ್ಯಾಮರಾಗಳು ಅಥವಾ ಆಪ್ ಗಳು ಎಲ್ಲಾ ವಿಚಾರಗಳನ್ನು ಮೇಲ್ವಿಚಾರಣೆ ಮಾಡುತ್ತದೆ. ಹಾಗಂತ ಇದು 100 % ಪರಿಹಾರ ನೀಡುತ್ತದೆ ಎಂದರ್ಥವಲ್ಲ.

  ಇದು ಅಂದಾಜು 215 ಡಾಲರ್ ವೆಚ್ಚದಲ್ಲಿ ಆರಂಭವಾಗುತ್ತದೆ. ಇದರಲ್ಲಿ ಇನ್ಸಲೇಷನ್ ಸೇರಿರುವುದಿಲ್ಲ.140 ಡಾಲರ್ ಹೆಚ್ಚುವರಿಯಾಗಿ ನೀಡಬೇಕಾಗುತ್ತದೆ. ಸದ್ಯ ಈ ಸೇವೆಯು ಸುಮಾರು 50 ಸಿಟಿಗಳಲ್ಲಿ ಲಭ್ಯವಿದೆ. 13 ಸಿಟಿಗಳು ಇತ್ತೀಚೆಗಷ್ಟೇ ಸೇರಿವೆ. ಇದನ್ನು ಬಳಸುವುದಕ್ಕೆ ನೀವು ಅಮೇಜಾನ್ ಪ್ರೈಮ್ ನ ಚಂದಾದಾರಿಕೆಯನ್ನು ಹೊಂದಿರಬೇಕಾಗುತ್ತದೆ.

  ಕಾರಿನಲ್ಲಿರುವ ಕೀ ಕೂಡ ಪ್ರೈಮ್ ನ್ನು ಹೊಂದಿರಬೇಕಾಗುತ್ತದೆ. ಕೆಲವು ನಿರ್ಧಿಷ್ಟ ಕಂಪೆನಿಯು ಕಾರ್ ಗಳಲ್ಲಿ ಈ ಸೇವೆ ಸದ್ಯ ಸಭ್ಯವಿದೆ. ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ವಿಸ್ತಾರಗೊಳ್ಳುವ ನಿರೀಕ್ಷೆ ಇದೆ.

  ಇನ್ನು ನಿಮ್ಮ ಬಳಿ ಚೇಂಬರ್ಲೈನ್ ಮೈಕ್ಯೂ ಸ್ಮಾರ್ಟ್ ಗ್ಯಾರೇಜ್ ಬಾಗಿಲಿನ ತೆರೆಯುವಿಕೆಯ ಆಯ್ಕೆ ಇದ್ದಲ್ಲಿ ಅಮೇಜಾನಿನ ನೂಕನ ಕೀ ಆಯ್ಕೆಯು ಪ್ಯಾಕೇಜ್ ಡೆಲಿವರಿಯನ್ನು ಗ್ಯಾರೇಜಿಗೆ ನೀಡುತ್ತದೆ.


 • ನಿಮ್ಮ ಹತ್ತಿರದಲ್ಲೇಲ್ಲಾದರೂ ಅಮೇಜಾನ್ ಲಾಕರ್ ಇದಿಯಾ ಎಂದು ಪರೀಕ್ಷಿಸಿ

  ಅಮೇಜಾನಿನ ವಿತರಣೆಯಲ್ಲಿ ಮೋಸವಾಗುವಿಕೆ ಮೇಲಿನ ಒಂದು ವಿಧಾನದಿಂದ ಪರಿಹರಿಸಲಾಗುವುದಿಲ್ಲ. ಅಮೇಜಾನ್ ಲಾಕರ್ ಗಳಿಗೆ ನೀವು ಮೊರೆ ಹೋಗಬಹುದು. ಇದರಲ್ಲಿ ವಿತರಣೆಯಾದ ನಂತರ ಅದನ್ನು ಪಡೆಯುವುದಕ್ಕಾಗಿ ನಿಮಗೆ ಸೀಕ್ರೆಟ್ ಪಿನ್ ಸೇರಿದಂತೆ ಕೆಲವು ಪ್ರಮುಖ ಅಂಶಗಳು ಸಿಗುತ್ತವೆ. ಇವುಗಳನ್ನು ಬಳಸಿ ನೀವು ಲಾಕರ್ ನಲ್ಲಿರುವ ವಸ್ತುವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಅಮೇಜಾನ್ ಲಾಕರ್ ಬಳಕೆ ಯಾವುದೇ ಹೆಚ್ಚುವರಿ ಶುಲ್ಕಗಳಿರುವುದಿಲ್ಲ ಮತ್ತು ಇವುಗಳು ದೊಡ್ಡ ಗಾತ್ರದ ಪ್ಯಾಕೇಜ್ ಗಳನ್ನು ರಿಸೀವ್ ಮಾಡುವುದಿಲ್ಲ. ಇದೊಂದು ಪರ್ಯಾಯ ಮಾರ್ಗವಷ್ಟೇ ಹೊರತು ಅನುಕೂಲಕರವಾಗಿರುವ ಮಾರ್ಗವೆಂದು ಅನ್ನಿಸುವುದಿಲ್ಲ.


 • ಬಾಕ್ಸ್ ಲಾಕ್ ನ್ನು ಇನ್ಸ್ಟಾಲ್ ಮಾಡಿ Enlarge

  ಅಮೇಜಾನ್ ನಲಿಲಿ ಬಾಕ್ಸ್ ಲಾಕ್ ಆಯ್ಕೆಯೂ ಕೂಡ ಇದೆ. ಇದೊಂದು ಸ್ಮಾರ್ಟ್ ಪಾಡ್ ಲಾಕ್ ಆಗಿದ್ದು ಪ್ಯಾಕೇಜ್ ನ್ನು ಸ್ಕ್ಯಾನ್ ಮಾಡಬೇಕಾಗುತ್ತದೆ ಆ ಪ್ಯಾಕೇಜ್ ತೆರೆಯುವುದಕ್ಕೆ ನೀವು ಡೆಲಿವರಿ ಮಾಡುವ ವ್ಯಕ್ತಿ ಸ್ಟೋರೇಜ್ ಬಾಕ್ಸ್ ಗಾಗಿ ನಿಮಗೆ ಕಳುಹಿಸಲಾಗಿರುವ ಕೋಡ್ ನ್ನು ಸ್ಕ್ಯಾನ್ ಮಾಡಿದರೆ ಮಾತ್ರವೇ ಸಾಧ್ಯವಾಗುತ್ತದೆ.

  ಬಾಕ್ಸ್ ಲಾಕ್ ಗೆ ಸ್ಕ್ಯಾನಿಂಗ್ ಮತ್ತು ಕನೆಕ್ಟಿವಿಟಿಯ ಅಗತ್ಯವಿರುತ್ತದೆ. ಇದು ಖಂಡಿತ ಅಧ್ಬುತ ಪರಿಹಾರ ಎಂದೆನಿಸುತ್ತದೆ ಆದರೆ ಇದಕ್ಕಾಗಿ ನೀವು 129 ಡಾಲರ್ ವರೆಗೆ ಪಾವತಿ ಮಾಡಬೇಕಾಗುತ್ತದೆ.


 • ನೆರೆಹೊರೆಯವರ ಪಟ್ಟಿ ಸೇರಿಸಿ

  ನೀವು ನಿಮ್ಮ ನೆರೆಹೊರೆಯವರ ಮೇಲೆ ನಂಬಿಕೆ ಇಡುತ್ತೀರಾದರೆ ಅವರ ಮನೆಗೆ ಪ್ಯಾಕೇಜ್ ನ್ನು ಶಿಪ್ಪಿಂಗ್ ಮಾಡುವ ಆಯ್ಕೆಯನ್ನು ಮಾಡಿಕೊಳ್ಳಬಹುದು. ನೀವು ನಿಮ್ಮ ನಿಮ್ಮ ನೆರೆಹೊರೆಯ ವ್ಯಕ್ತಿಗೆ ಯಾವ ಸಮಯಕ್ಕೆ ಪ್ಯಾಕೇಜ್ ಪಡೆಯುವುದು ಅನುಕೂಲವಾಗುತ್ತದೆ ಎಂಬುದನ್ನು ನಮೂದಿಸಿದರೆ ಅದೇ ಸಮಯಕ್ಕೆ ಡೆಲಿವರಿಯನ್ನು ಮಾಡಲಾಗುತ್ತದೆ. ಹಾಗಾಗಿ ಮನೆ ಬಾಗಿಲಿಗೆ ಡೆಲಿವರಿ ಆಗಿರುವ ವಸ್ತುವು ಕಳುವಾಗುವುದು ತಪ್ಪುತ್ತದೆ.


 • ಆಫೀಸಿಗೆ ಪ್ಯಾಕೇಜ್ ಡೆಲಿವರಿ ಆಗುವಂತೆ ನೋಡಿಕೊಳ್ಳಿ

  ಇದು ಕೂಡ ಒಂದು ಸೇಫ್ ಆಗಿರುವ ಮಾರ್ಗವಾಗಿದೆ. ನೀವು ಆಫೀಸಿನಲ್ಲಿರುವಾಗ ಮನೆಗೆ ಡೆಲಿವರಿ ಮಾಡುವುದರಿಂದಾಗಿ ಕಳೆದುಹೋಗುವ ಸಾಧ್ಯತೆ ಇರುತ್ತದೆ. ಆದರೆ ಕೆಲವು ದೊಡ್ಡದೊಡ್ಡ ಬಾಕ್ಸ್ ಗಳನ್ನು ಆಫೀಸಿಗೆ ಡೆಲಿವರಿ ಮಾಡಿಸಿಕೊಂಡರೆ ಪುನಃ ಆಫೀಸಿನಿಂದ ಮನೆಗೆ ಕಾರಿನಲ್ಲೋ, ಟ್ರೈನಿನಲ್ಲೋ, ಇಲ್ಲವೇ ಬಸ್ಸಿನಲ್ಲಿ ತರುವುದು ಕಷ್ಟವಾಗುವುದರಿಂದ ಈ ಮಾರ್ಗಕ್ಕೆ ಹೆಚ್ಚಿನವರ ಅಸಮ್ಮತಿ ಇದೆ.

  ಒಂದು ವೇಳೆ ದೊಡ್ಡ ಬಿಲ್ಡಿಂಗ್ ನಲ್ಲಿ ನೀವು ಕೆಲಸ ಮಾಡುತ್ತಿರುವವರಾಗಿದ್ದರೆ ಆಫೀಸಿನಲ್ಲೂ ನಿಮ್ಮ ಪ್ಯಾಕೇಜ್ ಮಿಸ್ ಪ್ಲೇಸ್ ಆಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲ ಕೆಲಸದ ಅವಧಿಯ ನಂತರ ಡೆಲಿವರಿಗಳಿಗೆ ಈ ಆಯ್ಕೆಯು ಸ್ವಲ್ಪ ಕಷ್ಟವಾಗುತ್ತದೆ. ಕೆಲಸಜ ಅವಧಿಯ ನಂತರ ಆಫೀಸಿನಲ್ಲಿ ನಿಮ್ಮ ಪ್ಯಾಕೇಜ್ ಗಳನ್ನು ರಿಸೀವ್ ಮಾಡುವುದಕ್ಕೆ ಯಾರೂ ಇರುವುದಿಲ್ಲಮ ಮತ್ತು ಇದ್ದರೂ ಕೂಡ ಅವರು ನಿಮಗೆ ತಲುಪಿಸುತ್ತಾರೆ ಎಂಬುದಕ್ಕೆ ಖಾತ್ರಿ ಇಲ್ಲ.


 • ಸೆಕ್ಯುರಿಟಿ ಕ್ಯಾಮರಾವನ್ನು ಇನ್ಸ್ಟಾಲ್ ಮಾಡಿಕೊಳ್ಳಿ

  ಕಳ್ಳರನ್ನು ಗುರುತಿಸುವುದಕ್ಕೆ ಇರುವ ಮಾರ್ಗವೆಂದರೆ ಅದು ಕ್ಯಾಮರಾ ಕ್ಯಾಮರಾಗಳು ಇವೆ ಎಂಬುದನ್ನು ಕ್ರಿಮಿನಲ್ ಗಳು ತಿಳಿಯದೇ ಇದ್ದಾಗ ಅವರನ್ನು ಗುರುತಿಸುವುದು ಸುಲಭ. ರಿಂಗ್ 2 ಅಥವಾ ನೆಸ್ಟ್ ಹೆಲೋ ವೀಡಿಯೋ ಡೋರ್ ಬೆಲ್ ಇಂತಹವುಗಳಲ್ಲಿ ಇವುಗಳನ್ನು ಸಾಧಿಸಬಹುದು. ವೀಡಿಯೋ ಕ್ಯಾಮರಾವನ್ನು ಅಳವಡಿಸುವುದರಿಂದಾಗಿ ಕಳ್ಳರನ್ನು ಗುರುತಿಸಬಹುದು. ಆದರೆ ಅದಕ್ಕಾಗಿ ನೀವು ಸ್ವಲ್ಪ ಹಣ ಪಾವತಿಸಬೇಕಾಗುತ್ತದೆ. ಉದಾಹರಣೆದೆ ಡಮ್ಮಿ ಸೆಕ್ಯುರಿಟಿ ಕ್ಯಾಮರಾವನ್ನು ಎರಡು ಪ್ಯಾಕ್ ಗೆ ಅಳವಡಿಸುವುದಕ್ಕೆ 13ಡಾಲರ್ ವೆಚ್ಚವಾಗುತ್ತದೆ.


 • ಡೆಲಿವರಿ ಅಲರ್ಟ್ಸ್ ಗಾಗಿ ಸೈನ್ ಅಪ್ ಮಾಡಿ

  ಬುದ್ದಿವಂತಿಕೆಯೇ ಶಕ್ತಿ- ಹಾಗಾಗಿ ಯಾವಾಗಲೂ ಕೂಡ ಡೆಲಿವರಿ ಅಲರ್ಟ್ಸ್ ಗಳಿಗಾಗಿ ಸೈನ್ ಇನ್ ಆಗಿ ಇರಿ ಮತ್ತು ಡೆಲಿವರಿ ಆಗುತ್ತಿದ್ದಂತೆ ನಿಮ್ಮ ವಸ್ತುಗಳನ್ನು ಜೋಪಾನ ಮಾಡುವುದನ್ನು ಮರೆಯಬೇಡಿ. ಇಮೇಲ್ ಅಲರ್ಟ್, ಮೆಸೇಜ್ ಅಲರ್ಟ್ ಗಳನ್ನು ಫಾಲೋ ಮಾಡಿ.

  ಸೂಚನೆ- ಈ ಎಲ್ಲಾ ಆಯ್ಕೆಗಳು ಅಮೇರಿಕಾದ ಅಮೇಜಾನಿನಲ್ಲಿ ಲಭ್ಯವಿದೆ. ಭಾರತದ ಅಮೇಜಾನ್ ಇಷ್ಟು ಮುಂದುವರಿದಿಲ್ಲ ಎಂಬುದು ನಿಮಗೆ ತಿಳಿದಿರಲಿ.
ಆಧುನಿಕ ಜಗತ್ತಿನ ಖರೀದಿ ವ್ಯವಸ್ಥೆಯಾಗಿರುವ ಆನ್ ಲೈನ್ ಲೈಫ್ ಸ್ಟೈಲ್ ನ ಒಂದು ಸೈಡ್ ಎಫೆಕ್ಟ್ ಏನೆಂದರೆ ಪ್ಯಾಕೇಜ್ ಗಳ ಕಳ್ಳತನ. ನಿಮಗೆ ತಲುಪಬೇಕಾಗುರಿವ ನಿಮ್ಮ ಆರ್ಡರ್ ನ ಬಾಕ್ಸ್ ದಾರಿ ಮಧ್ಯದಲ್ಲೇ ಯಾರದ್ದೋ ಪಾಲಾಗುತ್ತದೆ. ಕಳ್ಳರ ಕೈಚಳಕಕ್ಕೆ ಸಿಲುಕುತ್ತದೆ. ಟ್ರಕ್ ಗಳಲ್ಲಿ ಪ್ಯಾಕೇಜ್ ಗಳನ್ನು ಸಾಗಿಸುವಾಗ ಅಥವಾ ನಿಮಗೆ ಡೆಲಿವರಿ ಮಾಡುವಾಗ ಅದ್ಯಾವ ಸಂದರ್ಬದಲ್ಲಿ ಎಂದು ಹೇಳಲು ಅಸಾಧ್ಯ. ಆದರೆ ಕಳ್ಳರ ಪಾಲಾಗುವುದು ಮಾತ್ರ ಸತ್ಯ.

ಇದೀಗ ಇದೊಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. 2017 ರ ಅಧ್ಯಯನವೊಂದರ ಪ್ರಕಾರ ಸುಮಾರು ಮೂರರಲ್ಲಿ ಒಂದು ಭಾಗದಷ್ಟು ಅಮೇರಿಕನ್ನರ ಪ್ಯಾಕೇಜ್ ಗಳು ಮನೆಯ ಹೊರಗಡೆಯೇ ಕಳುವಾಗಿದೆ. ಹಾಗಾದ್ರೆ ಈ ಕಳ್ಳರಿಂದ ಬಚಾವಾಗುವುದು ಹೇಗೆ? ಇಲ್ಲಿದೆ ಕೆಲವು ಆಯ್ಕೆಗಳು

   
 
ಹೆಲ್ತ್