Back
Home » ಆರೋಗ್ಯ
ತಲೆನೋವಿನಿಂದ ತಕ್ಷಣವೇ ಶಮನ ಪಡೆಯಲು ಆಕ್ಯುಪ್ರೆಶರ್ ಒತ್ತಡ ನೀಡಬಹುದಾದ ಏಳು ಕೇಂದ್ರಬಿಂದುಗಳು
Boldsky | 18th May, 2019 03:11 PM
 • ಅಕ್ಯುಪ್ರೆಶರ್ ಕೇಂದ್ರಬಿಂದುಗಳು

  ತಲೆನೋವು ಎದುರಾದಾಗ ಇದು ಮೊದಲಾಗಿ ನಮ್ಮ ಯೋಚನಾಶಕ್ತಿಯ ಮೇಲೆಯೇ ಪ್ರಭಾವಿತವಾಗುವ ಕಾರಣ ನಿತ್ಯದ ಕೆಲಸಕಾರ್ಯಗಳೆಲ್ಲಾ ಬಾಧೆಗೊಳಗಾಗುತ್ತವೆ. ಒಂದು ವೇಳೆ ತಲೆನೋವಿಗೆ ಸುರಕ್ಷಿತ ಚಿಕಿತ್ಸೆ ಪಡೆಯಬೇಕೆಂದರೆ ಇದಕ್ಕೆ ಆಕ್ಯುಪ್ರೆಶರ್ ಒಂದು ಪರಿಣಾಮಕಾರಿ ಹಾಗೂ ಸುಲಭ ಮತ್ತು ಹೆಚ್ಚಿನ ಎಲ್ಲಾ ಬಗೆಯ ತಲೆನೋವುಗಳನ್ನು ನಿವಾರಿಸುವ ವಿಧಾನವಾಗಿದೆ. ಯಾವುದೇ ಅಡ್ಡಪರಿಣಾಮಗಳಿಲ್ಲದೇ ನೀಡುವ ಈ ಚಿಕಿತ್ಸೆ ಅತಿ ಹಳೆಯ ವಿಧಾನವೇ ಆಗಿದೆ. ಇದರ ಅತ್ಯುತ್ತಮ ಧನಾತ್ಮಕ ಅಂಶವೆಂದರೆ ತಲೆನೋವು ಬಂದಾಗ ನೀವು ಮನೆ, ಕಚೇರಿ, ಯಾವುದೇ ಸ್ಥಳದಲ್ಲಿಯೇ ಇರಿ, ಯಾವುದೇ ಸಂದರ್ಭವನ್ನೇ ಎದುರಿಸುತ್ತಿರಿ, ಈ ವಿಧಾನವನ್ನು ಸ್ವತಃ ನಿರ್ವಹಿಸಿಕೊಳ್ಳಬಹುದು.

  ಈ ವಿಧಾನದಲ್ಲಿ ನಮ್ಮ ದೇಹಕ ಕೆಲವು ಅತಿ ಹೆಚ್ಚು ಸಂವೇದಿ ಸ್ಥಾನಗಳನ್ನು ಗುರುತಿಸಬೇಕಾಗಿತ್ತು ಈ ಸ್ಥಾನಗಳಲ್ಲಿ ಕೊಂಚ ಒತ್ತಡ ಹೇರುವ ಮೂಲಕ ರಕ್ತದ ಪರಿಚಲನೆಯನ್ನು ಅಗತ್ಯವಿರುವ ಭಾಗದ ಕಡೆಗೆ ಹೆಚ್ಚು ಹರಿಯುವಂತೆ ಮಾಡಿ ನೋವು ತಾನಾಗಿಯೇ ಇಲ್ಲದಂತಾಗಿಸುವುದು ಇದರ ವಿಧಾನವಾಗಿದೆ. ಈ ವಿಧಾನದ ಮೂಲಕ ಪಡೆಯುವ ಉಪಶಮನಗಳ ಬಗ್ಗೆ ಹಲವಾರು ಅಧ್ಯಯನಗಳನ್ನು ನಡೆಸಲಾಗಿದ್ದು ಇದು ಕೇವಲ ನೋವನ್ನು ನಿವಾರಿಸುವುದು ಮಾತ್ರವಲ್ಲ ಒಟ್ಟಾರೆ ಆರೋಗ್ಯ ಮತ್ತು ಸಮತೋಲನವನ್ನು ಪಡೆಯಲು ಸಾಧ್ಯ ಎಂದೂ ಕಂಡುಕೊಳ್ಳಲಾಗಿದೆ. ಇಂದಿನ ಲೇಖನದಲ್ಲಿ ತಲೆನೋವನ್ನು ತಕ್ಷಣವೇ ಕಡಿಮೆಗೊಳಿಸಲು ದೇಹದ ಏಳು ಭಾಗಗಳಲ್ಲಿರುವ ಕೇಂದ್ರಬಿಂದುಗಳನ್ನು ಗುರುತಿಸಲಾಗಿದೆ. ಬನ್ನಿ ನೋಡೋಣ: ತಲೆನೋವಿನಿಂದ ಪಾರಾಗಲು ನೆರವಾಗುವ ಅಕ್ಯುಪ್ರೆಶರ್ ಕೇಂದ್ರಬಿಂದುಗಳು


 • ಮೂರನೆಯ ಕಣ್ಣು

  ಮೂರನೆಯ ಕಣ್ಣು ಅಂದರೆ ಹಣೆಯ ನಟ್ಟ ನಡುವೆ, ಎರಡು ಹುಬ್ಬುಗಳನ್ನು ಮುಂದುವರೆಸಿದರೆ ಕೂಡುವ ಬಿಂದುವಿನ ಕೊಂಚವೇ ಮೇಲೆ ಇರುವ ಸ್ಥಾನವಾಗಿದೆ. ನಿಮ್ಮ ಹೆಬ್ಬೆರಳನ್ನು ಈ ಸ್ಥಾನದ ಮೇಲಿರಿಸಿ ಕೊಂಚವೇ ಒತ್ತಡದಲ್ಲಿ ಇಲ್ಲಿ ಒತ್ತಬೇಕು. ಕೆಲವು ಸೆಕೆಂಡುಗಳ ಕಾಲ ಒತ್ತಿಯೇ ಇದ್ದು ಬಳಿಕ ನಿವಾರಿಸಿ. ಬಳಿಕ ಮತ್ತೊಮ್ಮೆ ಹೆಚ್ಚೂ ಕಡಿಮೆ ಇದೇ ಅವಧಿಯಷ್ಟು ಕಾಲ ಮತ್ತೊಮ್ಮೆ ಒತ್ತಬೇಕು. ಹೀಗೆ ತಲೆನೋವು ಇಲವಾಗುವರೆಗೆ ಕೆಲವಾರು ಬಾರಿ ಮುಂದುವರೆಸಬೇಕು. ಒತ್ತಡದ ಅವಧಿ ಕೆಲವು ಸೆಕೆಂಡುಗಳಿಂದ ಸುಮಾರು ಒಂದು ನಿಮಿಷದವರೆಗೂ ಇರಬಹುದು. ಸಾಮಾನ್ಯವಾಗಿ ಕುಹರ ಅಥವಾ ಸೈನಸ್ ಸೋಂಕಿನಿಂದ ಎದುರಾದ ತಲೆನೋವಿಗೆ ಈ ವಿಧಾನ ಅತ್ಯುತ್ತಮ ಪರಿಹಾರವಾಗಿದ್ದು ಕೇವಲ ತಲೆನೋವು ಇಲ್ಲವಾಗುವುದು ಮಾತ್ರವಲ್ಲ ಕಣ್ಣುಗಳ ಆಯಾಸವನ್ನೂ ಪರಿಹಾರಗೊಳಿಸುತ್ತದೆ.


 • ಹೆಬ್ಬೆರಳು - ತೋರುಬೆರಳ ನಡುವಣ ಸ್ಥಾನ (Union valley (hand))

  ಈ ಸ್ಥಾನ ನಮ್ಮ ತೋರುಬೆರಳು ಮತ್ತು ಹೆಬ್ಬೆರಳ ನಡುವಣ ಭಾಗದಲ್ಲಿದೆ. ಈ ಭಾಗದಲ್ಲಿ ಇನ್ನೊಂದು ಕೈಯ ಹೆಬ್ಬೆರಳು ಮತ್ತು ತೋರುಬೆರಳುಗಳ ತುದಿಗಳನ್ನು ಮೇಲೆ ಮತ್ತು ಕೆಳಗೆ ಬರುವಂತಿರಿಸಿ ಕೊಂಚವೇ ಒತ್ತಡದಲ್ಲಿ, ಅಂದರೆ ನೋವು ಎದುರಾಗದಷ್ಟು ಒತ್ತಡದಲ್ಲಿ ಮಾತ್ರ ಮೇಲಿನಿಂದ ಕೆಳಕ್ಕೆ ಹಾಗೂ ಕೆಳಗಿನಿಂದ ಮೇಲೆ ಬರುವಂತೆ ತೀವಿಕೊಳ್ಳಬೇಕು. ಕೆಲವು ಸೆಕೆಂಡುಗಳ ಬಳಿಕ ತೋರುಬೆರಳನ್ನು ಇದ್ದಲ್ಲಿಯೇ ಇರಿಸಿ ಹೆಬ್ಬೆರಳಿನಿಂದ ಚಿಕ್ಕ ವೃತ್ತಾಕಾರದಲ್ಲಿ ಪ್ರದಕ್ಷಿಣಾಕಾರದಲ್ಲಿ ಸುಮಾರು ಹತ್ತು ಸೆಕೆಂಡ್ ಹಾಗೂ ಅಪ್ರದಕ್ಷಿಣಾಕಾರದಲ್ಲಿ ಹತ್ತು ಸೆಕೆಂಡುಗಳಂತೆ ಹೆಚ್ಚಿನ ಒತ್ತಡವಿಲ್ಲದೇ ನೀವಿಕೊಳ್ಳಬೇಕು. ಈ ವಿಧಾನದಿಂದ ಮಾನಸಿಕ ಒತ್ತಡದಿಂದ ಎದುರಾದ ತಲೆನೋವು ಮತ್ತು ಕುತ್ತಿಗೆಯ ನೋವು ಇಲ್ಲವಾಗುತ್ತದೆ.

  Most Read: ಏಕಾಗ್ರತೆ-ಜ್ಞಾಪಕಶಕ್ತಿ ಹೆಚ್ಚಿಸುವ ಆಕ್ಯುಪ್ರೆಷರ್ ಚಿಕಿತ್ಸೆ


 • ಪಾದ

  ಯಾವುದೇ ಬಗೆಯ ತಲೆನೋವು ಪ್ರಾರಂಭವಾದ ತಕ್ಷಣವೇ ಪಾದದ ಹೆಬ್ಬೆರಳು ಮತ್ತು ತೋರುಬೆರಳಿನ ನಡುವಣ ಭಾಗದಲ್ಲಿ ಕೈ ಹೆಬ್ಬೆರಳಿನ ತುದಿಯಿಂದ ಕೊಂಚವೇ ಒತ್ತಡದಿಂದ ಒತ್ತಿ ಕೆಲವು ಸೆಕೆಂಡುಗಳ ಕಾಲ ಹಾಗೇ ಇರಿಸಬೇಕು. ಏರುತ್ತಿದ್ದ ತಲೆನೋವು ಹಾಗೇ ಇಳಿದು ಹೋಗುತ್ತದೆ. ಇಷ್ಟೇ ಸಮಯದ ಒತ್ತಡವನ್ನು ಇನ್ನೊಂದು ಪಾದಕ್ಕೂ ನಿರ್ವಹಿಸಬೇಕು.

  Most Read: ಲವಲವಿಕೆಯ ಜೀವನ ಶೈಲಿಗೆ, 'ಆಕ್ಯುಪ್ರೆಷರ್ ಚಿಕಿತ್ಸೆ'


 • ಕಿವಿ

  ನಮ್ಮ ಕಿವಿಯ ಹೊರಭಾಗ ಅಥವಾ ಹೊರಗಿವಿಯಲ್ಲಿ ಒಟ್ಟು ಐದು ಸ್ಥಾನಗಳಿವೆ. ನಮ್ಮ ಐದೂ ಬೆರಳುಗಳ ತುದಿಗಳು ಒಂದಕ್ಕೊಂದು ತಾಕಿಕೊಂಡಿರುವಂತೆ ಇರಿಸಿ ಕಿರುಬೆರಳ ತುದಿಯನ್ನು ಹೊರಕಿವಿಯ ಮೇಲ್ಭಾಗಕ್ಕೆ ತಾಕುವಂತಿರಿಸಿದರೆ ಪ್ರತಿ ಬೆರಳಿನ ತುದಿ ತಾಕುವ ಭಾಗಗಳೇ ಈ ಸ್ಥಾನಗಳಾಗಿವೆ. ಬಲಕಿವಿಗೆ ಬಲಗೈಯ ಎಲ್ಲಾ ಬೆರಳುಗಳ ತುದಿಗಳು ಈ ಸ್ಥಾನಗಳಿಗೆ ತಗಲುವಂತೆ ಇರಿಸಿ ಹೆಚ್ಚಿನ ಒತ್ತಡವಿಲ್ಲದೇ ಎಲ್ಲಾ ಸ್ಥಾನಗಳಿಗೆ ಸಮಾನ ಒತ್ತಡ ಬರುವಂತೆ ಒತ್ತಿ ಕೆಲವು ಸೆಕೆಂಡ್ ಇರಿಸುವ ಮೂಲಕ ತಲೆನೋವು ಶಮನಗೊಳ್ಳುತ್ತದೆ. ಇದೇ ವಿಧಾನವನ್ನು ಇನ್ನೊಂದು ಕಿವಿಗೂ ನಿರ್ವಹಿಸಿ. ತಲೆನೋವು ಈಗಾಗಲೇ ಅತಿ ಎನಿಸುವಷ್ಟು ಏರಿದ್ದರೆ ಈ ವಿಧಾನ ಸೂಕ್ತವಾಗಿದೆ.


 • ಕುತ್ತಿಗೆಯ ಹಿಂಭಾಗ (Gates of consciousness (back of the head)

  ಭುಜದಿಂದ ಕುತ್ತಿಗೆ ಪ್ರಾರಂಭವಾಗುವ ಭಾಗದಲ್ಲಿ, ಕಿವಿಯಿಂದ ಕೊಂಚ ಹಿಂದಿರುವ ಸ್ಥಾನ ಅಥವಾ ಮೆದುಳುಬಳ್ಳಿಯ ಅಕ್ಕಪಕ್ಕದ ಸ್ಥಾನಗಳಲ್ಲಿ ಈ ಕೇಂದ್ರವಿದೆ. ಭುಜ ಮತ್ತು ಕುತ್ತಿಗೆಯ ಸ್ನಾಯುಗಳು ಸಂಧಿಸುವ ಸ್ಥಳವೂ ಹೌದು. ಈ ಭಾಗದಲ್ಲಿ, ಬಲಗೈಯಾಗಲೀ, ಎಡಗೈಯಾಗಲಿ, ತೋರು ಮತ್ತು ನಡುಬೆರಳಿನ ತುದಿಗಳು ಬರುವಂತೆ ಇರಿಸಿ ಕೊಂಚವೇ ಒತ್ತಡವನ್ನು ಮೇಲ್ಮುಖವಾಗಿ ಸುಮಾರು ಹತ್ತು ಸೆಕೆಂಡ್ ಇರಿಸಬೇಕು. ಶೀತ ಹಾಗೂ ಕಟ್ಟಿಕೊಂಡ ಮೂಗಿನಿಂದ ಎದುರಾದ ತಲೆನೋವಿಗೆ ಈ ವಿಧಾನ ಅತ್ಯುತ್ತಮವಾಗಿದೆ. ಕೈಗಳನ್ನು ಬದಲಾಯಿಸುತ್ತಾ ನೋವು ಇಳಿಯುವವರೆಗೂ ಕೆಲವಾರು ಬಾರಿ ಈ ವಿಧಾನವನ್ನು ಪುನರಾವರ್ತಿಸಿ.


 • ಹುಬ್ಬು ಮತ್ತು ಮೂಗಿನ ನಡುವೆ ( Drilling bamboo (inner corner of eyes))

  ಈ ಭಾಗ ನಮ್ಮ ಎರಡೂ ಹುಬ್ಬುಗಳಿಗೂ ಕೊಂಚ ಕೆಳಗೆ, ಮೂಗಿನ ಮೇಲ್ಭಾಗದಲ್ಲಿ, ಕಣ್ಣಿನ ಮೂಲೆ ಎನಿಸುವ ಸ್ಥಳದಲ್ಲಿದೆ. ಈ ಭಾಗದಲ್ಲಿ ಒತ್ತಡ ನೀಡುವ ಮೂಲಕ ಸೈನಸ್ ಅಥವಾ ಕುಹರದ ಸೋಂಕು ಮತ್ತು ಶೀತದ ಪ್ರಭಾವದಿಂದ ಎದುರಾದ ತಲೆನೋವು ತಕ್ಷಣ ಪರಿಹಾರವಾಗುತ್ತದೆ. ಇದಕ್ಕಾಗಿ ಎರಡೂ ಕೈಗಳ ತೋರು ಬೆರಳುಗಳನ್ನು ಈ ಕೇಂದ್ರಗಳ ಮೇಲಿರಿಸಿ ಕೊಂಚವೇ ಒತ್ತಡದಲ್ಲಿ ಸುಮಾರು ಹತ್ತು ಸೆಕೆಂಡ್ ಇರಿಸಿ ಕೆಲವಾರು ಬಾರಿ ಪುನರಾವರ್ತಿಸಿ.

  Most Read: ಆಕ್ಯುಪ್ರೆಷರ್ ಚಿಕಿತ್ಸೆಯ ಆರೋಗ್ಯಕಾರಿ ಪ್ರಯೋಜನಗಳು


 • ಮುಖ (ಮೂಗಿನ ಹೊಳ್ಳೆಗಳ ಪಕ್ಕ)

  ಮೂಗಿನ ಹೊಳ್ಳೆಗಳ ಪಕ್ಕ, ಕೆನ್ನೆ ಮತ್ತು ದವಡೆಮೂಳೆಗಳ ನಡುವಣ ಗುಂಡಿ ಇರುವಂತಿರುವಲ್ಲಿರುವ ಸ್ಥಾನದಲ್ಲಿ ತೋರು ಬೆರಳುಗಳಿಂದ ಏಕಕಾಲದಲ್ಲಿ ಒತ್ತಡ ಹೇರಿ ಕೆಲವು ಸೆಕೆಂಡ್ ಇರಿಸಿದರೆ ಕುಹರ ಅಥವಾ ಸೈನಸ್ ಸೋಂಕಿನಿಂದ ಎದುರಾಗಿರುವ ತಲೆನೋವು ಇಲ್ಲವಾಗುತ್ತದೆ.

  ಈ ಕಾರ್ಯದಲ್ಲಿ ವಹಿಸಬೇಕಾದ ಎಚ್ಚರಿಕೆಗಳು

  • ತಲೆನೋವು ಎದುರಾದರೆ ಕೇವಲ ಅಕ್ಯುಪ್ರೆಶರ್ ವಿಧಾನವೇ ಏಕಮಾತ್ರ ಚಿಕಿತ್ಸಾ ವಿಧಾನವನ್ನಾಗಿ ಪರಿಗಣಿಸಬಾರದು. ಈ ವಿಧಾನದಿಂದ ತಲೆನೋವು ಎದುರಾದ ತಕ್ಷಣವೇ ಕೈಗೊಳ್ಳಬೇಕಾದ ಪರಿಹಾರವಾಗಿರಬೇಕೇ ವಿನಃ ಇದನ್ನು ತೀವ್ರತರದ ತಲೆನೋವಿಗೆ ದೀರ್ಘಾವಧಿಯ ಚಿಕಿತ್ಸಾ ಕ್ರಮವನ್ನಾಗಿ ಪರಿಗಣಿಸಬಾರದು.
  • ಒಂದು ವೇಳೆ ಈ ಸ್ಥಿತಿಗಳು ಎದುರಾದರೆ ಅಕ್ಯುಪ್ರೆಶರ್ ವಿಧಾನ ಬಳಸದಿರಿ:
  • ಒಂವು ದೇಳೆ ಈ ಕೇಂದ್ರಗಳಲ್ಲಿ ಯಾವುದಾದರೂ ಗಾಯ, ಸುಟ್ಟಗಾಯ, ಬೊಕ್ಕೆ, ಕೀವುಗುಳ್ಳೆ, ಅಥವಾ ಚರ್ಮದ ಉರಿ ಇದ್ದರೆ
  • ಮೂರು ತಿಂಗಳು ಅಥವಾ ಹೆಚ್ಚಿನ ಅವಧಿಯ ಗರ್ಭಿಣಿಯರು
  • ಮುಖ್ಯ ಸಮಯದ ಆಹಾರ ಸೇವನೆಯ, ವ್ಯಾಯಾಮದ ಅಥವಾ ಸ್ನಾನಕ್ಕೂ ಇಪ್ಪತ್ತು ನಿಮಿಷದ ಮುನ್ನಾ ಮತ್ತು ನಂತರದ ಸಮಯ
  • ಒಂದು ವೇಳೆ ನಿಮಗೆ ಹೃದಯಸಂಬಂಧಿ ತೊಂದರೆಗಳಿದ್ದರೆನಿತ್ಯದ ಜೀವನದಲ್ಲಿ ನಾವು ಎದುರಿನುವ ಕೆಲವು ಸಾಮಾನ್ಯ ತೊಂದರೆಗಳಲ್ಲಿ ತಲೆನೋವು ಅತಿ ಹೆಚ್ಚು. ಇದು ಹದಿಹರೆಯದವರಾಗಿರಲಿ, ವಯಸ್ಕರಾಗಿರಲಿ ಅಥವಾ ವೃದ್ದರೇ ಆಗಿರಲಿ, ಯಾರನ್ನೂ ಬಿಡುವುದಿಲ್ಲ. ಸಾಮಾನ್ಯವಾಗಿ ತಲೆನೋವು ಎದುರಾದಾಗ ನಾವೆಲ್ಲರೂ ಮಾಡುವ ಮೊದಲ ಕೆಲಸವೆಂದರೆ ನೋವು ನಿವಾರಕ ಮಾತ್ರೆ ನುಂಗುವುದು.

ಆದರೆ ತಲೆನೋವುಗಳಲ್ಲಿಯೂ ಕೆಲವಾರು ವಿಧಗಳಿದ್ದು ಹಲವಾರು ಅಡ್ಡಪರಿಣಾಮಗಳೂ ಇರುತ್ತವೆ. ತಲೆನೋವು ಕಡಿಮೆಗೊಳಿಸುವ ಮೊದಲು ತಲೆನೋವು ಏಕೆ ಬರುತ್ತದೆ ಎಂದು ತಿಳಿದಿರಬೇಕಾದುದು ಅವಶ್ಯ. ಸಾಮಾನ್ಯವಾಗಿ ಮಾನಸಿಕ ಒತ್ತಡ, ಸಾಕಷ್ಟು ನಿದ್ದೆಯ ಕೊರತೆ, ಮೈಗ್ರೇನ್, ಕೆಲವು ಬಗೆಯ ವಾಸನೆಗಳಿಗೆ ಸೂಕ್ಷ್ಮಸಂವೇದಿಯಾಗಿರುವುದು, ಅಧಿಕ ರಕ್ತದೊತ್ತಡ, ಕುಹರ ಅಥವಾ ಸೈನಸ್ ನಲ್ಲಿ ಸೋಂಕು ಶೀತ ಇತ್ಯಾದಿಗಳು ಕಾರಣವಾಗಿವೆ.

 
ಹೆಲ್ತ್