Back
Home » ಗಾಸಿಪ್
ಆಗ ದರ್ಶನ್ ಗೆ ಗೆಳೆಯ, ಈಗ ಉಪ್ಪಿಗೆ ವಿಲನ್ ಆದ ಆದಿತ್ಯ.!
Oneindia | 18th May, 2019 04:16 PM

'ಸ್ನೇಹನಾ ಪ್ರೀತಿನಾ' ಸಿನಿಮಾದಲ್ಲಿ ನಟ ದರ್ಶನ್ ಗೆ ಗೆಳೆಯನ ಪಾತ್ರ ಮಾಡಿದ್ದು ಆದಿತ್ಯ ನಿಜ ಜೀವನದಲ್ಲಿ ಡಿ ಬಾಸ್ ಗೆ ಆತ್ಮೀಯ ವ್ಯಕ್ತಿ. ಈಗ ಉಪೇಂದ್ರ ಚಿತ್ರದಲ್ಲಿ ವಿಲನ್ ಆಗಿ ನಟಿಸಲು ಸಜ್ಜಾಗುತ್ತಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

ರಿಯಲ್ ಸ್ಟಾರ್ ಉಪೇಂದ್ರ ನಾಯಕನಾಗಿ ನಟಿಸಲಿರುವ ಹೊಸ ಚಿತ್ರದಲ್ಲಿ ಡೆಡ್ಲಿ ಆದಿತ್ಯ ಖಳನಾಯಕನಾಗಿ ಬಣ್ಣ ಹಚ್ಚಲಿದ್ದಾರಂತೆ. ಈ ಚಿತ್ರವನ್ನ ಸ್ಟಾರ್ ನಿರ್ಮಾಪಕ ಎಂದು ಗುರುತಿಸಿಕೊಂಡಿರುವ ಟಿ.ಆರ್ ಚಂದ್ರಶೇಖರ್ ನಿರ್ಮಿಸಲಿದ್ದಾರೆ ಎಂಬ ಸುಳಿವು ಸಿಕ್ಕಿದೆ.

ಸದ್ಯಕ್ಕೆ ಈ ಸಿನಿಮಾದಲ್ಲಿ ಉಪೇಂದ್ರ ಮತ್ತು ಆದಿತ್ಯ ಅವರು ಬಿಟ್ಟರೇ ಬೇರೆ ಯಾವ ಪಾತ್ರಗಳು ಪಕ್ಕಾ ಆಗಿಲ್ಲ ಎಂಬ ಮಾಹಿತಿ ಇದೆ. ಮೇಘನಾ ರಾಜ್ ಮತ್ತು ಪಂಚತಂತ್ರ ಖ್ಯಾತಿಯ ಸೋನಾಲಿ ಹೆಸರು ಚರ್ಚೆಯಲ್ಲಿದೆ. ಆದ್ರೆ, ಯಾರು ಅಂತಿಮವಾಗುತ್ತಾರೋ ಗೊತ್ತಿಲ್ಲ.

'ನೀನೊಂದು ಮುಗಿಯದ ಮೌನ' ಹಾಡು ಹುಟ್ಟಿದ ರೋಚಕ ಕಥೆ ಹೇಳಿದ ಸಾಧು.!

ಈ ಚಿತ್ರಕ್ಕೆ ಟೈಟಲ್ ಏನು ಎಂಬುದು ಗೊಂದಲವಾಗಿದೆ. ಸದ್ಯದ ಮಾಹಿತಿ ಪ್ರಕಾರ, ಬುದ್ದಿವಂತ 2 ಅಥವಾ ಪಿತಮಹಾ ಶೀರ್ಷಿಕೆಗಳು ಸದ್ದು ಮಾಡ್ತಿದೆ. ಮೇ 24ರಂದು ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ.

ಸದ್ಯಕ್ಕೆ ಆರ್ ಚಂದ್ರು ನಿರ್ದೇಶನದ 'ಐ ಲವ್ ಯೂ' ಸಿನಿಮಾ ಮುಗಿಸಿರುವ ಉಪೇಂದ್ರ ಈ ಸಿನಿಮಾ ರಿಲೀಸ್ ಗಾಗಿ ಕಾಯುತ್ತಿದ್ದಾರೆ. ರಚಿತಾ ರಾಮ್ ಮತ್ತು ಸೋನು ಗೌಡ ನಾಯಕಿಯರಾಗಿ ಅಭಿನಯಿಸಿದ್ದಾರೆ.

ಶಿವಣ್ಣ ಮತ್ತು ಉಪೇಂದ್ರ ಜೊತೆಯೇ ಬರ್ತಿದ್ದಾರೆ ಚಿರು ಸರ್ಜಾ

ಮತ್ತೊಂದೆಡೆ ಆದಿತ್ಯ 'ಮುಂದುವರೆದ ಅಧ್ಯಾಯ' ಚಿತ್ರದಲ್ಲಿ ಬ್ಯುಸಿಯಿದ್ದು ಚಿತ್ರೀಕರಣ ಮಾಡ್ತಿದ್ದಾರೆ. ಇತ್ತೀಚಿಗಷ್ಟೆ ಚಿತ್ರದ ಟೀಸರ್ ರಿಲೀಸ್ ಆಗಿತ್ತು. ತಮಿಳಿನ ವಾಲು ಸಿನಿಮಾದಲ್ಲಿ ನೆಗಿಟೀವ್ ಶೇಡ್ ಪಾತ್ರ ಮಾಡಿದ್ದು, ಆದಿತ್ಯಗೆ ಕನ್ನಡದಲ್ಲಿ ಈ ರೀತಿ ಪಾತ್ರ ಮೊದಲು ಎನ್ನಲಾಗಿದೆ.

   
 
ಹೆಲ್ತ್