Back
Home » ಆರೋಗ್ಯ
ನೈಸರ್ಗಿಕವಾಗಿ ಉರಿಯೂತ ಸಮಸ್ಯೆಯ ವಿರುದ್ಧ ಹೋರಾಡುವ ಆಹಾರಗಳು
Boldsky | 19th May, 2019 09:05 AM
 • ಬೆರ್ರಿ ಹಣ್ಣುಗಳು

  ಸಾಮಾನ್ಯವಾಗಿ ಪ್ರಖ್ಯಾತಿ ಪಡೆದಿರುವ ಬೆರ್ರಿ ಹಣ್ಣುಗಳೆಂದರೆ ,
  * ಸ್ಟ್ರಾ ಬೆರ್ರಿ
  * ರಾಸ್ಪ್ ಬೆರ್ರಿ
  * ಬ್ಲಾಕ್ ಬೆರ್ರಿ
  * ಬ್ಲೂ ಬೆರ್ರಿ
  ಬೆರ್ರಿ ಹಣ್ಣುಗಳು ನೋಡುವುದಕ್ಕೆ ಮಾತ್ರ ಚಿಕ್ಕದಿರುತ್ತವೆ ಅವುಗಳ ಗಾತ್ರ ನೋಡಿ ಅಲ್ಲಗಳೆಯುವಂತಿಲ್ಲ . ಅವುಗಳಲ್ಲಿ ಅಗಾಧವಾದ ಪ್ರೋಟೀನ್ , ಮಿನರಲ್ ಮತ್ತು ಫೈಬರ್ ನ ಅಂಶವಿರುತ್ತದೆ . ಇದರ ಜೊತೆಗೆ ಬೆರ್ರಿ ಹಣ್ಣುಗಳಲ್ಲಿ " ಅಂಥೋ ಸಿಯಾನಿನ್ " ಎಂಬ ಆಂಟಿ ಒಕ್ಸಿಡಾಂಟ್ ಯಥೇಚ್ಛವಾಗಿರುತ್ತದೆ . ಇದು ಉರಿಯೂತದಿಂದ ದೇಹದ ಮೇಲೆ ಆಗುವ ಪ್ರಭಾವವನ್ನು ಕಡಿಮೆ ಮಾಡುವ ಶಕ್ತಿ ಹೊಂದಿದೆ . ಹಾಗು " ನ್ಯಾಚುರಲ್ ಕಿಲ್ಲರ್ " ಅಥವಾ " ಎನ್ ಕೆ " ಕೋಶಗಳನ್ನು ಆ ಕ್ಷಣದಲ್ಲಿ ಉತ್ಪತ್ತಿ ಮಾಡಿ ದೇಹದಲ್ಲಿನ ರೋಗ ನಿರೋಧಕ ಶಕ್ತಿಯ ವ್ಯವಸ್ಥೆಯನ್ನು ಚೆನ್ನಾಗಿ ಕೆಲಸ ಮಾಡಲು ಪ್ರೇರೇಪಿಸುತ್ತದೆ .


 • ಫ್ಯಾಟಿ ಫಿಶ್ ಅಥವಾ ಮೀನುಗಳು

  ಕೆಲವೊಂದು ಉತ್ತಮವಾದ ಫ್ಯಾಟಿ ಫಿಶ್ ಗಳೆಂದರೆ ,
  * ಸಾಲ್ಮನ್
  * ಹೆರಿಂಗ್
  *ಸಾರ್ಡಿನ್ಸ್
  *ಮ್ಯಾಕೆರೆಲ್
  *ಆಂಖೊವೀಸ್
  ನಿಮಗೆಲ್ಲಾ ತಿಳಿದಿರುವ ಹಾಗೆ ಎಲ್ಲ ಮೀನುಗಳಲ್ಲೂ ಒಮೇಗಾ - 3 ಫ್ಯಾಟಿ ಆಸಿಡ್ ಗಳಿದ್ದರೂ , ಈ ಫ್ಯಾಟಿ ಫಿಶ್ ಗಳಲ್ಲಿ ಪ್ರೋಟೀನ್ ಮತ್ತು ಒಮೇಗಾ - 3 ಫ್ಯಾಟಿ ಆಸಿಡ್ ನ ' ಈ ಪಿ ಎ ' ಮತ್ತು ' ಡಿ ಎಚ್ ಎ ' ಎನ್ನುವ ಅಂಶಗಳು ಹೇರಳವಾಗಿವೆ . ನಿಮ್ಮ ದೇಹ ಈ ಫ್ಯಾಟಿ ಆಸಿಡ್ ಗಳನ್ನು ಪರಿಷ್ಕರಿಸಿ ರೆಸೊಲ್ವಿನ್ ಮತ್ತು ಪ್ರೊಟೆಕ್ಟಿನ್ ಗಳಾಗಿ ಪರಿವರ್ತಿಸುತ್ತದೆ . ಇವು ಉರಿಯೂತದ ನಿವಾರಣೆಗೆ ಬಹಳ ಪರಿಣಾಮಕಾರಿಯಾಗಿವೆ .


 • ಡಾರ್ಕ್ ಚಾಕಲೇಟ್

  ಸಿಹಿ ಎಲ್ಲರಿಗೂ ಇಷ್ಟವೇ . ಅದರಲ್ಲೂ ತಿನ್ನಲು ಯಮ್ಮಿ ಯಾಗಿರುವ ಡಾರ್ಕ್ ಚಾಕಲೇಟ್ ಆರೋಗ್ಯಕ್ಕೂ ಸಹಕಾರಿ . ಇದರಲ್ಲೂ ಕೂಡ ಆಂಟಿ ಒಕ್ಸಿಡಾಂಟ್ ಗುಣಲಕ್ಷಣಗಳಿರುವುದ ರಿಂದ ಇಂಪ್ಲಾ ಮೇಷನ್ ಅನ್ನು ತಡೆಯುತ್ತವೆ . ಡಾರ್ಕ್ ಚಾಕಲೇಟ್ ನಲ್ಲಿ ಅಡಗಿರುವ ಪ್ಲಾವೊನೋಲ್ ಅಂಶ , ಆಂಟಿ ಇಂಪ್ಲಾಮ್ಯಾಟೋರಿ ಗುಣ ಹೊಂದಿದ್ದು ನಿಮ್ಮ ಆರ್ಟರಿ ಗಳನ್ನು ಸುತ್ತುವರೆದಿರುವ ಎಂಡೋಥೆಲಿಯಲ್ ಕೋಶಗಳನ್ನು ಆರೋಗ್ಯಪೂರ್ಣವಾಗಿರಲು ಸಹಾಯ ಮಾಡುತ್ತವೆ . ಒಟ್ಟಿನಲ್ಲಿ ಡಾರ್ಕ್ ಚಾಕಲೇಟ್ ನಲ್ಲಿನ ಮಹತ್ವದ ಗುಣಗಳು ದೇಹಕ್ಕೆ ಅನೇಕ ರೀತಿಯಲ್ಲಿ ಪರಿಣಾಮಕಾರಿ.


 • ಟೊಮೇಟೊ

  ಟೊಮ್ಯಾಟೋ ಕೇವಲ ಅಡುಗೆಗೆ ಅಷ್ಟೇ ಸೀಮಿತವಾಗಿರದೆ , ಇಂಪ್ಲಾ ಮೇಷನ್ ಕಡಿಮೆ ಮಾಡುವುದರಲ್ಲಿ ಕೂಡ ಮಹತ್ತರ ಪಾತ್ರ ವಹಿಸುತ್ತದೆ . ಟೊಮೇಟೊ ನಲ್ಲಿ ವಿಟಮಿನ್ ಸಿ , ಪೊಟ್ಯಾಸಿಯಂ ಜೊತೆಗೆ ಅನೇಕ ಪೌಷ್ಟಿಕಾಂಶಗಳು ಅಡಗಿವೆ . ಇದರಲ್ಲಿ " ಲೈಕೊಪೀನ್ " ಕೂಡ ಒಂದು . ಲೈಕೊಪೀನ್ ಒಂದು ಆಂಟಿ ಒಕ್ಸಿಡಾಂಟ್ ಆಗಿದ್ದು ಅತ್ಯಂತ ಪ್ರಭಾವಶಾಲಿಯಾದ ಆಂಟಿ ಇಂಪ್ಲಾ ಮ್ಯಾಟೋರಿ ಯಾಗಿ ಕೆಲಸ ಮಾಡುತ್ತದೆ . ಲೈಕೊಪೀನ್ ಪ್ರೊ ಇಂಪ್ಲಾ ಮ್ಯಾಟೋರಿ ಕಾಂಪೌಂಡ್ ಗಳನ್ನು ಕಡಿಮೆ ಗೊಳಿಸಿ ಅನೇಕ ರೀತಿಯ ಕ್ಯಾನ್ಸರ್ ಖಾಯಿಲೆಗಳನ್ನು ಆರಂಭದಲ್ಲೇ ತಡೆಗಟ್ಟುತ್ತದೆ . ಟೊಮೇಟೊ ವನ್ನು ಆಲಿವ್ ಆಯಿಲ್ ಜೊತೆ ಬೇಯಿಸಿ ತಿಂದರೆ ಸಾಕಷ್ಟು ಲೈಕೊಪೀನ್ ನಮ್ಮ ದೇಹವನ್ನು ಸೇರುತ್ತದೆ .


 • ಅರಿಶಿನ

  ಪಲ್ಯ , ಸಾಗು , ಸಾರು ಇನ್ನಿತರೇ ಭಾರತೀಯ ಅಡುಗೆಗಳಲ್ಲಿ ಅರಿಶಿನದ್ದೇ ಮೇಲುಗೈ. ಮಾಡಿದ ಅಡುಗೆ ನೋಡಲು ಚೆಂದ ಕಾಣಲೆಂದು ಬಳಸುವ ಅರಿಶಿನ ದಲ್ಲಿ ಅನೇಕ ಔಷಧೀಯ ಗುಣಗಳೂ ಅಡಗಿವೆ. ಆಂಟಿ ಬ್ಯಾಕ್ಟೇರಿಯಾಲ್ ಮತ್ತು ಆಂಟಿ ಇಂಪ್ಲಾ ಮ್ಯಾಟೋರಿ ಗುಣವಿರುವ ಕರ್ಕ್ಯುಮಿನ್ ಎಂಬ ಪೌಷ್ಟಿಕಾಂಶ ಅರಿಶಿನದಲ್ಲಿ ಅಡಗಿರುವುದರಿಂದ ಅರಿಶಿನ , ರುಚಿಯ ಜೊತೆಗೆ ಉರಿಯೂತ ಶಮನ ಮಾಡುವ ರೀತಿಯಲ್ಲಿ ಆರೋಗ್ಯ ರಕ್ಷಣೆಯಲ್ಲೂ ಬಹಳಷ್ಟು ಮಹತ್ವ ಪಡೆದುಕೊಂಡಿದೆ . ಆರ್ಥ್ರೈಟಿಸ್ , ಮಧುಮೇಹ ಮತ್ತು ಇನ್ನಿತರ ಖಾಯಿಲೆಗಳಿಗೆ ಅರಿಶಿನ ರಾಮಬಾಣವಾಗಿ ಕೆಲಸ ಮಾಡುತ್ತದೆ. ಈ ಸಮಸ್ಯೆಗಳಿಂದ ಬಳಲುತ್ತಿರುವವರು ಕರ್ಕ್ಯುಮಿನ್ ಅಂಶವಿರುವ ಇನ್ನಿತರೇ ಆಹಾರಗಳನ್ನು ತೆಗೆದುಕೊಳ್ಳುವುದೂ ಬಹಳಷ್ಟು ಉತ್ತಮ.


 • ದ್ರಾಕ್ಷಿ ಹಣ್ಣುಗಳು

  ದ್ರಾಕ್ಷಿಯಲ್ಲಿ ಅಂಥೋ ಸಯಾನಿನ್ ಅಂಶವಿದೆ. ಇದು ಉರಿಯೂತ ಶಮನಕ್ಕೆ ಬಹಳ ಸಹಕಾರಿ. ಹೃದಯ ಸಂಬಂಧಿ ಕಾಯಿಲೆ ಮಧುಮೇಹ, ಒಬೆಸಿಟಿ, ಸ್ಥೂಲಕಾಯತೆ, ಅಲ್ಜ್ಹೀಮಾರ್ ಖಾಯಿಲೆ ಮತ್ತು ಕಣ್ಣಿನ ಸಮಸ್ಯೆಗಳಿಗೂ ದ್ರಾಕ್ಷಿಯಲ್ಲಿರುವ ಗುಣಗಳು ಸಹಕಾರಿ ರೆಸ್ವೆರಾಟ್ರೋಲ್ ಎಂಬ ಇನ್ನೊಂದು ಅಂಶ ದ್ರಾಕ್ಷಿಯಲ್ಲಿದ್ದು, ಅರೋಗ್ಯ ರಕ್ಷಣೆಗೆ ಬಹಳಷ್ಟು ಸಹಾಯ ಮಾಡುತ್ತದೆ .


 • ಎಕ್ಸ್ಟ್ರಾ ವರ್ಜಿನ್ ಆಲಿವ್ ಆಯಿಲ್

  ಇತ್ತೀಚಿಗೆ ಎಕ್ಸ್ಟ್ರಾ ವರ್ಜಿನ್ ಆಲಿವ್ ಆಯಿಲ್ ಬಹಳಷ್ಟು ಮಹತ್ವ ಪಡೆದುಕೊಳ್ಳುತ್ತಿದೆ. ಇದರಲ್ಲಿರುವ ಮೊನೊ ಅನ್ ಸ್ಯಾಚುರೇಟೆಡ್ ಫ್ಯಾಟ್ ಅಂಶಗಳು ಹಲವಾರು ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತವೆ. ಬ್ರೈನ್ ಕ್ಯಾನ್ಸರ್, ಹೃದಯ ರೋಗಗಳು ಇನ್ನಿತರೇ ಕಠಿಣ ಆರೋಗ್ಯ ಸಮಸ್ಯೆಗಳು ಇದರಿಂದ ದೂರಾಗುತ್ತವೆ. ' ಒಲೆಯೊಕ್ಯಾಂಥಲ್ ' ಎಂಬ ಅಂಶ ಆಲಿವ್ ಆಯಿಲ್ ನಲ್ಲಿದ್ದು ' ಐಬುಪ್ರೊಫೇನ್' ಎಂಬ ಉರಿಯೂತ ಶಮನಕ್ಕಾಗಿ ಉಪಯೋಗಿಸುವ ಆಂಟಿ ಇಂಪ್ಲಾ ಮ್ಯಾಟೋರಿ ಔಷಧಯದಷ್ಟು ಶಕ್ತಿಯುತವಾಗಿದೆ. ಇದರಿಂದ ಬೇರೆ ಯಾವುದೇ ರಿಫೈನ್ಡ್ ಆಲಿವ್ ಆಯಿಲ್ ಗಿಂತ ಎಕ್ಟ್ರಾ ವರ್ಜಿನ್ ಆಲಿವ್ ಆಯಿಲ್ ನಲ್ಲಿ ಆಂಟಿ ಇಂಪ್ಲಾ ಮ್ಯಾಟೋರಿ ಗುಣವಿದೆ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದು .


 • ಗಮನಿಸತಕ್ಕಂತಹ ವಿಶೇಷ ಅಂಶಗಳು

  * ಇಂಪ್ಲಾಮೇಷನ್ ಧೀರ್ಘಕಾಲವಿದ್ದರೆ ಬಹಳ ಅಪಾಯಕಾರಿ .
  * ಬೆರ್ರಿ ಹಣ್ಣುಗಳಲ್ಲಿ ಪ್ರೋಟೀನ್ , ವಿಟಮಿನ್ ಮತ್ತು ಮಿನರಲ್ ಅಂಶಗಳು ಹೇರಳವಾಗಿವೆ .
  * ಎಕ್ಸ್ಟ್ರಾ ವರ್ಜಿನ್ ಆಲಿವ್ ಆಯಿಲ್ ಅತ್ಯಂತ ಪರಿಣಾಮಕಾರಿಯಾದ ಆಂಟಿ ಇಂಪ್ಲಾಮ್ಯಾಟೋರಿ ಪ್ರಯೋಜನಗಳನ್ನು ಕೊಡುತ್ತದೆ .
  * ಇಂಪ್ಲಾ ಮೇಷನ್ ಅಥವಾ ಉರಿಯೂತವನ್ನು ಕಡಿಮೆ ಮಾಡುವ ಇನ್ನಿತರೇ ಆಹಾರಗಳ ಬಗ್ಗೆಯೂ ಗಮನ ಕೊಡಿ .
ನಮ್ಮ ದೇಹದಲ್ಲಿ ಸ್ವಲ್ಪ ಬದಲಾವಣೆ ಆದರೂ ನಮಗೆ ಹಿತವೆನಿಸುವುದಿಲ್ಲ. ಮನುಷ್ಯ ಎಂದ ಮೇಲೆ ಎಲ್ಲವನ್ನು ಸಹಿಸಿಕೊಳ್ಳಬೇಕು ಅವನಿಗೆ ಯಾವ ಸಮಯದಲ್ಲಿ ಯಾವ ಖಾಯಿಲೆ ಬರುತ್ತದೆ ಎಂದು ಹೇಳುವುದಕ್ಕೆ ಆಗುವುದಿಲ್ಲ.ಇಂಪ್ಲಾಮೇಷನ್ ಅಂದರೆ ಉರಿಯೂತ ಕೂಡ ಅಷ್ಟೇ. ನಮಗೆ ಏನಾದರೂ ಸಮಸ್ಯೆಯಾಗಿ ಗಾಯವಾದರೆ ಮೊದಲು ಪ್ರತಿಕ್ರಿಯಿಸುವುದು, ನಮ್ಮ ಮೆದುಳು, ನಮ್ಮ ನರಮಂಡಲ . ಹೇಗಾದರೂ ಮಾಡಿ ಈ ಗಾಯ ದೊಡ್ಡದಾಗದಂತೆ ಅಥವಾ ಹೊರಗಿನಿಂದ ಯಾವುದೇ ಬ್ಯಾಕ್ಟೀರಿಯಾ , ವೈರಸ್ ಒಳಬಾರದಂತೆ ಬಿಳಿ ರಕ್ತ ಕಣಗಳನ್ನು ಬಿಡುಗಡೆ ಗೊಳಿಸಿ ಅದನ್ನು ಅತ್ಯಂತ ಪರಿಣಾಮಕಾರಿಯಾಗಿ ತಡೆ ಗಟ್ಟುತ್ತವೆ . ಇದಕ್ಕೆ ನಾವು ದೇಹದ ರೋಗ ನಿರೋಧಕ ಶಕ್ತಿ ಎಂದು ಹೇಳುವುದು. ಕೆಲವೊಂದು ಬಾರಿ ಈ ಇಂಪ್ಲಾಮೇಷನ್ ನಮಗೆ ಒಳ್ಳೆಯದೇ ಆಗಿರುತ್ತದೆ.

ಉದಾಹರಣೆಗೆ ಆಗಾಗ ಮೊಣಕಾಲು ಹೊಡೆತ ಬರುತ್ತಿದ್ದರೆ , ನಮ್ಮ ಕಾಲುಗಳಿಗೆ ಸ್ವಲ್ಪ ಆರೈಕೆ ಅಗತ್ಯವಿದೆ ಎಂದು ನಮಗೆ ಅರಿವಾಗುತ್ತದೆ . ಅದೇ ಉರಿಯೂತ ಧೀರ್ಘ ಕಾಲ ದೇಹದಲ್ಲೇ ಉಳಿದರೆ , ಉಪಯೋಗಕ್ಕಿಂತ ತೊಂದರೆಯೇ ಜಾಸ್ತಿ . ನಮ್ಮ ದೈನಂದಿನ ಚಟುವಟಿಕೆಗಳನ್ನು ಸಲೀಸಾಗಿ ಮಾಡಲು ಬಿಡುವುದಿಲ್ಲ. ಆಗ ದೇಹಕ್ಕೆ ಕಡಿಮೆ ಕೆಲಸ ಕಾರ್ಯಗಳಿಂದ ಒತ್ತಡ ಉಂಟಾಗಿ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳುತ್ತದೆ... ನಿಸರ್ಗದ ಮಧ್ಯೆಯೇ ಬದುಕುವ ನಮಗೆ ಎದುರಾಗುವ ಸಮಸ್ಯೆಗಳಿಗೆ ದೇವರು ನಿಸರ್ಗದಲ್ಲೇ ಪರಿಹಾರಗಳನ್ನು ತಯಾರು ಮಾಡಿರುತ್ತಾನೆ . ನಾವು ಅವುಗಳ ಜಾಡು ಹಿಡಿದು ಹೋಗಬೇಕಷ್ಟೆ . ಇಂಪ್ಲಾಮೇಷನ್ ಅಥವಾ ಉರಿಯೂತಕ್ಕೂ ಅಷ್ಟೇ. ಕೆಲವೊಂದು ನಿಸರ್ಗದತ್ತವಾದ ಆಹಾರಗಳಿಂದ ಈ ಉರಿಯೂತವನ್ನು ಶಮನ ಮಾಡಬಹುದು. ಅವು ಯಾವುವೆಂದರೆ...

 
ಹೆಲ್ತ್