Back
Home » ಆರೋಗ್ಯ
ದಪ್ಪಗಿರುವವರು ಸಣ್ಣಗಾದರೆ ನಡುವೆ ಅಂತೆ ಕಂತೆಗಳದ್ದೇ ಕಾರುಬಾರು!!!
Boldsky | 20th May, 2019 03:46 PM
 • ಸುಳ್ಳು ಸುದ್ದಿ : ಕೇವಲ ಕ್ರಂಚಿಂಗ್ ವ್ಯಾಯಾಮ ನಿಮ್ಮ ಹೊಟ್ಟೆ ಕರಗಿಸುತ್ತದೆ

  ನಿಜಾಂಶ : ಇದರಲ್ಲಿ ಒಂದು ತಿರುವಿದೆ . ಏನೆಂದರೆ ಕ್ರಂಚಿಂಗ್ ವ್ಯಾಯಾಮ ಮಾಡುವುದರಿಂದ ಹೊಟ್ಟೆ ಕರಗಿಸಲು ಅಲ್ಪ ಪ್ರಮಾಣದಲ್ಲಿ ಮಾತ್ರ ಸಹಾಯಕವಾಗುತ್ತದೆ . ನಿಮ್ಮ ಪೂರ್ತಿ ಹೊಟ್ಟೆ ಕರಗಿ ಮೊದಲಿನಂತಾಗಬೇಕಾದರೆ , ನೀವು ನಿಮ್ಮ ಇಡೀ ದೇಹದ ತೂಕ ಕಡಿಮೆ ಮಾಡಿಕೊಳ್ಳುವ ಬಗ್ಗೆ ಗಮನ ಹರಿಸಬೇಕು . " ಜರ್ನಲ್ ಒಫ್ ಸ್ಟ್ರೆಂಥ್ ಅಂಡ್ ಕಂಡೀಷನಿಂಗ್ ರಿಸರ್ಚ್ " ನ ವರದಿಯ ಪ್ರಕಾರ ಹೊಟ್ಟೆಗೆ ಸಂಬಂದಿತ ವ್ಯಾಯಾಮಗಳಾದ ಕ್ರಂಚ್ ಮತ್ತು ಇನ್ನಿತರೇ ಎಕ್ಸರ್ಸೈಜ್ ಗಳಿಂದ ದೇಹದ ತೂಕ ಕಡಿಮೆ ಮಾಡಲು ಸಾದ್ಯವಾಗುವುದಿಲ್ಲ . ಅವರ ವರದಿಯ ಫಲಿತಾಂಶಕ್ಕಾಗಿ ಸುಮಾರು 18 ರಿಂದ 40 ವರ್ಷ ವಯಸ್ಸುಳ್ಳ 24 ಜನರನ್ನು ಸಂಶೋಧನೆಗೆ ಎಂದು ಬಳಸಿಕೊಂಡು ಕಂಡು ಹಿಡಿಯಲಾಗಿತ್ತು . ಫಿಟ್ನೆಸ್ ಅಂಡ್ ವೆಲ್ನೆಸ್ ತಜ್ಞರ ಪ್ರಕಾರ ಉತ್ತಮ ಫಲಿತಾಂಶ ನಿಮ್ಮದಾಗಬೇಕಾದರೆ ಸ್ಟ್ರೆಂಥ್ ಟ್ರೇನಿಂಗ ನ ಜೊತೆಗೆ ಹೈ ಇಂಟೆನ್ಸಿಟಿ ಕಾರ್ಡಿಯೋ ಸೆಶನ್ ಕೂಡ ನಡೆಸಬೇಕು.

  Most Read: ಹೊಟ್ಟೆಯ ಬೊಜ್ಜು ಕರಗಿಸಲು ಈ ಸರಳ ಆಯುರ್ವೇದ ಮನೆ ಮದ್ದುಗಳು


 • ಸುಳ್ಳು ಸುದ್ದಿ : ಗ್ರೀನ್ ಟೀ ಹೊಟ್ಟೆ ಭಾಗದ ಕೊಬ್ಬನ್ನು ಕರಗಿಸುತ್ತದೆ .

  ನಿಜಾಂಶ : ಗ್ರೀನ್ ಟೀ ಅಲ್ಲಿ ಅನೇಕ ರೀತಿಯ ಒಳ್ಳೆಯ ಆಂಟಿ ಆಕ್ಸಿಡಾಂಟ್ಸ್ ಸೇರಿವೆ . ಇವು ಮನುಷ್ಯನ ದೇಹದ ಮೆಟಬೋಲಿಸಂ ಉತ್ತಮ ಗೊಳಿಸುತ್ತವೆ . ಆದರೆ ಕೇವಲ ಗ್ರೀನ್ ಟೀ ಹೊಟ್ಟೆ ಕರಗುವಿಕೆಯಲ್ಲಿ ತನ್ನ ಪಾತ್ರ ವಹಿಸಲಾರದು . ಇದರ ಜೊತೆ ನಿಮ್ಮ ಇತರ ಆಹಾರ ಪದ್ದತಿಗಳ ಕಡೆ ಕೂಡ ನೀವು ಗಮನ ಹರಿಸಬೇಕು . ತಜ್ಞರ ಪ್ರಕಾರ ನೀವು ದೈಹಿಕವಾಗಿ ಪ್ರತಿನಿತ್ಯ ವ್ಯಾಯಾಮ ಮಾಡಿ ಒಳ್ಳೆಯ ಆರೋಗ್ಯಕರ ಆಹಾರ ಪದ್ದತಿಗಳನ್ನು ರೂಢಿಸಿಕೊಂಡಿದ್ದೇ ಆದರೆ ಗ್ರೀನ್ ಟೀ ಮನುಷ್ಯನ ಒಟ್ಟಾರೆ ದೇಹದ ತೂಕ ಕಡಿಮೆ ಮಾಡುವಲ್ಲಿ ಮುಂದಿದೆ .


 • ಸುಳ್ಳು ಸುದ್ದಿ : ವ್ಯಾಯಾಮ ಅಥವಾ ಇನ್ನಿತರೇ ದೇಹ ದಂಡಿಸುವ ಕಾರ್ಯಗಳಲ್ಲಿ ತೊಡಗಿದರೆ ಯಾವ ಆಹಾರ ಬೇಕಾದರೂ ತಿನ್ನಬಹುದು .

  ನಿಜಾಂಶ : " ಬ್ರಿಟಿಷ್ ಮೆಡಿಕಲ್ ಜರ್ನಲ್ " ನ ವರದಿಯ ಪ್ರಕಾರ ಕೇವಲ ನಮ್ಮ ದೇಹದ ಕೊಬ್ಬಿನಂಶ ಕರಗಿಸಲು ದೇಹಕ್ಕೆ ವ್ಯಾಯಾಮ ಅಷ್ಟೇ ಸಾಲದು . ಒಳ್ಳೆಯ ಆಹಾರ ಪದ್ದತಿಯನ್ನು ಕೂಡ ರೂಡಿಸಿಕೊಳ್ಳಬೇಕು . ಆರೋಗ್ಯಕರವಲ್ಲದ ಆಹಾರ ನಮ್ಮ ದೇಹದ ತೂಕ ಇನ್ನೂ ಹೆಚ್ಚು ಮಾಡುತ್ತದೆ . ಮತ್ತು ಆ ಸಮಯದಲ್ಲಿ ವ್ಯಾಯಾಮದಿಂದ ಏನೂ ಪ್ರಯೋಜನವಾಗುವುದಿಲ್ಲ . ಆದ್ದರಿಂದ ಕೇವಲ ಗ್ರೀನ್ ಟೀ ಕುಡಿದು ಕ್ರಂಚಿಂಗ್ ವ್ಯಾಯಾಮ ಮಾಡಿದರೆ ಸಾಕು ದೇಹದ ತೂಕ ತಾನಾಗಿಯೇ ಇಳಿಯುತ್ತದೆ ಇನ್ನು ಮೇಲೆ ನಾವು ಕಣ್ಣಿಗೆ ಬೇಕಾದ ಆಹಾರ ತಿನ್ನಲು ಸ್ವತಂತ್ರರು ಎಂದು ನೀವು ಭಾವಿಸುವುದಾದರೆ ಖಂಡಿತ ಅದು ತಪ್ಪು ಕಲ್ಪನೆ .


 • ಸುಳ್ಳು ಸುದ್ದಿ : ಕಡಿಮೆ ತಿನ್ನುವುದರಿಂದ ಹೊಟ್ಟೆಯಲ್ಲಿನ ಕೊಬ್ಬು ಕರಗುತ್ತದೆ

  ನಿಜಾಂಶ : ಇಲ್ಲಿ ನಾವು ಅತ್ಯಂತ ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶ ಎಂದರೆ ಒಬ್ಬೊಬ್ಬರ ದೇಹ ಸ್ಥಿತಿ ಒಂದೊಂದು ಥರ ಇರುತ್ತದೆ . ಯಾರು ಈ ತೂಕ ಕಡಿಮೆ ಮಾಡಿಕೊಳ್ಳಬೇಕೆಂದು ಪಣ ತೊಟ್ಟು ಎಲ್ಲ ಆರೋಗ್ಯಕರ ಪದ್ದತಿಗಳನ್ನು ಅವರ ಜೇವನದಲ್ಲಿ ಅಳವಡಿಸಿಕೊಂಡಿರುತ್ತಾರೋ , ಅಂತಹವರು ಅವರ ಆಹಾರ ಪದ್ದತಿಗಳ ಮೇಲೆ ಕೂಡ ತೀವ್ರ ನಿಗಾ ವಹಿಸಬೇಕಾಗುತ್ತದೆ ನಿಜ . ಹಾಗೆಂದು ಊಟ ಮಾಡುವುದನ್ನೇ ಬಿಟ್ಟರೆ ? ಇದು ಖಂಡಿತ ತಪ್ಪು . ಹೀಗೆ ಮಾಡಿದಾಕ್ಷಣ ಅದರ ನೇರ ಪರಿಣಾಮ ಮೆಟಬೋಲಿಸಂ ಮೇಲೆಯೇ ಆಗುತ್ತದೆ . ದೇಹದ ಮೆಟಬೋಲಿಸಂ ಪ್ರಕ್ರಿಯೆ ಕಡಿಮೆ ಆದರೆ ಖಂಡಿತ ಅದು ತೂಕ ಇಳಿಸುವ ಪ್ರಕ್ರಿಯೆ ಮೇಲೆ ಅಡ್ಡ ಪರಿಣಾಮ ಬೀರುತ್ತದೆ . ಆದರಿಂದ ಒಬ್ಬ ನುರಿತ ಆರೋಗ್ಯ ತಜ್ಞರನ್ನು ಸಂಪರ್ಕಿಸಿ ವೆಯಿಟ್ ಲಾಸ್ ಪ್ಲಾನ್ ನಲ್ಲಿರುವ ನಿಮಗೆ ಒಂದು ದಿನಕ್ಕೆ ಎಷ್ಟು ಪ್ರೋಟೀನ್ , ಕಾರ್ಬೋಹೈಡ್ರೇಟ್ , ವಿಟಮಿನ್ ಗಳು ಬೇಕು ಎನ್ನುವುದನ್ನು ಮೊದಲು ತಿಳಿದುಕೊಂಡು ನಿಯಮಿತ ಆಹಾರವನ್ನು ತೆಗೆದುಕೊಳ್ಳಬಹುದು.

  Most Read: ಬರೀ ಹದಿನೈದು ದಿನಗಳಲ್ಲಿಯೇ ಹೊಟ್ಟೆಯ ಬೊಜ್ಜು ಕರಗಿಸುವ ಅದ್ಭುತ ಜ್ಯೂಸ್


 • ಸುಳ್ಳು ಸುದ್ದಿ : ಕಡಿಮೆ ಆಹಾರ ದಿನಕ್ಕೆ ಬಹಳ ಸಲ ಮಾಡುವುದರಿಂದ ಕೊಬ್ಬಿನಂಶ ಕಡಿಮೆ ಆಗುತ್ತದೆ .

  ನಿಜಾಂಶ : ಇದು ಖಂಡಿತ ಯಾವುದೇ ರೀತಿಯಲ್ಲೂ ಕೂಡ ಸಮಂಜಸವಲ್ಲ . ಏಕೆಂದರೆ ನಾವು ಕಡಿಮೆ ಆಹಾರವನ್ನು ದಿನಕ್ಕೆ ಆಗಾಗ ಬಹಳ ಸಲ ಮಾಡುವುದರಿಂದ ನಮ್ಮ ಜೀರ್ಣ ಕ್ರಿಯೆ ಕುಂಠಿತಗೊಳ್ಳುತ್ತದೆ . ಇದರಿಂದ ನಾವು ತಿನ್ನುವ ಆಹಾರದಲ್ಲಿ ಸೇರಿರುವ ಕೊಬ್ಬಿನಂಶವನ್ನು ಕರಗಿಸಿ ಅದನ್ನು ನಮ್ಮ ದೇಹದ ಕಾರ್ಯ ನಿರ್ವಹಣೆಗೆ ಬೇಕಾದ ಶಕ್ತಿಯ ರೂಪದಲ್ಲಿ ಮಾರ್ಪಾಡು ಮಾಡುವ ಪ್ರಕ್ರಿಯೆ ಸಾಮಾನ್ಯ ರೀತಿಯಲ್ಲಿ ಇರುವುದಿಲ್ಲ . " ಜರ್ನಲ್ ಒಬೆಸಿಟಿ " ಪ್ರಕಟಿಸಿದ ವರದಿಯಲ್ಲಿ ಈ ಬಗ್ಗೆ ಉಲ್ಲೇಖವಿದೆ . ಅವರು ಸಂಶೋದನೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ತಾವು ತೆಗೆದುಕೊಳ್ಳುವ ಊಟದ ಪ್ರಮಾಣ ಕಡಿಮೆ ಮಾಡಿ ದಿನಕ್ಕೆ 3 ರಿಂದ 6 ಬಾರಿ ಊಟ ಮಾಡಲು ಹೇಳಿದರು . ಆದರೆ ಅಲ್ಲಿ ತಿಳಿದ ಅಂಶವೆಂದರೆ ಅವರಿಗೆಲ್ಲ ಬರುಬರುತ್ತ ಹೊಟ್ಟೆ ಹಸಿವು ಜಾಸ್ತಿಯಾಯಿತೇ ವಿನಃ ಹೊಟ್ಟೆಯ ಕೊಬ್ಬು ಕರಗಿಸುವಲ್ಲಿ ಯಾವುದೇ ಯಶಸ್ವಿ ಕಾಣಲಿಲ್ಲ .


 • ಸುಳ್ಳು ಸುದ್ದಿ : 8 ಗಂಟೆ ನಿದ್ದೆ ಮಾಡಿದರೆ ಹೊಟ್ಟೆ ಕೊಬ್ಬು ಕರಗುತ್ತದಂತೆ !!

  ನಿಜಾಂಶ : ಆರೋಗ್ಯಕರ ಆಹಾರದ ಪದ್ದತಿಯ ಜೊತೆಗೆ ಮನುಷ್ಯನಿಗೆ ನಿದ್ದೆ ಕೂಡ ಅವಶ್ಯಕ . ಹಾಗೆಂದು ಮಿತಿ ಮೀರಿ ನಿದ್ದೆ ಮಾಡಿದರೂ ಅಪಾಯವೇ . ನಿದ್ದೆ ಕಡಿಮೆ ಮಾಡಿದರೂ ಅಪಾಯವೇ . " ಜರ್ನಲ್ ಒಫ್ ಕ್ಲಿನಿಕಲ್ ಸ್ಲೀಪ್ ಮೆಡಿಸಿನ್ " ನ ವರದಿಯ ಪ್ರಕಾರ ಗುಣಮಟ್ಟವಲ್ಲದ ಮತ್ತು ಕಡಿಮೆ ನಿದ್ದೆ ಮನುಷ್ಯನ ದೇಹದ ಕೊಬ್ಬನ್ನು ಜಾಸ್ತಿ ಮಾಡುತ್ತದೆ . ಏಕೆಂದರೆ ಕಡಿಮೆ ನಿದ್ದೆ ಮಾಡಿದರೆ ಅದು ನಾವು ತಿನ್ನುವ ಆಹಾರದ ಮೇಲೂ ಪರಿಣಾಮ ಬೀರಿ ಆರೋಗ್ಯಕರವಲ್ಲದ ಆಹಾರ ತಿನ್ನುವುದಕ್ಕೆ ದಾರಿ ಮಾಡಿಕೊಡುತ್ತದಂತೆ . ಆದ್ದರಿಂದ ಒಳ್ಳೆಯ ಮತ್ತು ಸೂಚಿಸಿದ ಗಂಟೆಗಳಷ್ಟೇ ನೆಮ್ಮದಿಯಿಂದ ಮಲಗಿ ನಿದ್ದೆ ಮಾಡಿ ನಿಮ್ಮ ಅರೋಗ್ಯ ಕಾಪಾಡಿಕೊಳ್ಳಿ .

  MOst Read:ಏಳರಿಂದ ಎಂಟು ಗಂಟೆಗಳ ಕಾಲ ನಿದ್ರೆ, ಆರೋಗ್ಯಕ್ಕೆ ಬಹಳ ಒಳ್ಳೆಯದು


 • ಸುಳ್ಳು ಸುದ್ದಿ : ಕಾಫಿಯಲ್ಲಿನ ಕೆಫೀನ್ ಅಂಶ ಕೊಬ್ಬನ್ನು ಕರಗಿಸುತ್ತದೆ .

  ನಿಜಾಂಶ : ಬೆಳಗ್ಗೆ ಎದ್ದು ಬೆಡ್ ಕಾಫಿ ಕುಡಿಯುವ ಎಲ್ಲರೂ ಗಮನಿಸಬೇಕಾದ ಅಂಶ ಇದು . ಬೆಳಗಿನ ಕಾಫಿ ನಮ್ಮನ್ನು ಇಡೀ ದಿನ ಉತ್ಸಾಹದಿಂದ ಇರಲು ಮತ್ತು ನಮ್ಮ ದೇಹದ ಚೈತನ್ಯವನ್ನು ವೃದ್ಧಿಗೊಳಿಸುತ್ತದೆ . ಆದರೆ ಅದಕ್ಕೂ ನಮ್ಮ ದೇಹದ ಕೊಬ್ಬಿನಂಶ ಕರಗುವುದಕ್ಕೂ ಯಾವುದೇ ಸಂಬಂಧ ಇಲ್ಲ . ದಿನಕ್ಕೆ ಎರಡು ಕಪ್ ಕಾಫಿ ನಮಗೆ ಮತ್ತು ನಮ್ಮ ದೇಹದ ಆರೋಗ್ಯಕ್ಕೆ ಒಳ್ಳೆಯದೇ ನಿಜ . ಹಾಗೆಂದು ಅದು ಅತಿಯಾದರೆ ಖಂಡಿತ ಅದೂ ಕೂಡ ನಮ್ಮ ದೇಹದ ' ಕಾರ್ಟಿಸೋಲ್ ' ಅಂಶವನ್ನು ಹೆಚ್ಚಿಸಿ ಕೊಬ್ಬಿನಂಶವನ್ನು ಜೊತೆಗೆ ದೇಹದ ತೂಕವನ್ನೂ ಕೂಡ ಜಾಸ್ತಿ ಮಾಡುತ್ತದೆ ಎಂದರೆ ನೀವು ಅಚ್ಚರಿಗೊಳ್ಳಲೇಬೇಕು . " ಜರ್ನಲ್ ಸೈಕೊಸೊಮ್ಯಾಟಿಕ್ ಮೆಡಿಸಿನ್ " ನ ವರದಿಯ ಪ್ರಕಾರ ಯಾರು ಮಾನಸಿಕ ಖಿನ್ನತೆಯಿಂದ ಬಳಲುತ್ತಿರುತ್ತಾರೋ ಅವರಲ್ಲಿ ಕಾರ್ಟಿಸೋಲ್ ಅಂಶ ಬಹಳವೇ ಹೆಚ್ಚಿಗೆ ಇದ್ದು , ಅವರ ಕೊಬ್ಬಿನ ಅಂಶದಲ್ಲೂ ಕೂಡ ಗಮನಾರ್ಹ ಏರಿಕೆ ಕಂಡು ಬರುತ್ತದೆ .
ಜಗತ್ತಿನಲ್ಲಿ ಸತ್ಯಕ್ಕೆ ಎಷ್ಟು ಬೆಲೆಯಿದೆಯೋ ಅಷ್ಟೇ ಬೆಲೆ ಸುಳ್ಳಿಗೂ ಇದೆ . ಒಳ್ಳೆಯವರ ಮಧ್ಯೆ ಕೆಟ್ಟವರು ಹೇಗಿರುತ್ತಾರೋ ಹಾಗೆ . ಒಂದು ವಿಷಯದ ಬಗ್ಗೆ ಸತ್ಯದ ಮಾತು ಒಂದೇ ಆದರೆ , ಸುಳ್ಳಿಗೆ ಅದರ ಸರಮಾಲೆಯೇ ಸ್ನೇಹಿತರು . ಕೆಲವೊಮ್ಮೆ ಸತ್ಯ ಮೇಲುಗೈ ಸಾಧಿಸಿದರೆ ಹಲವು ಬಾರಿ ಸುಳ್ಳೇ ತನ್ನ ಹಿರಿಮೆ ಸಾಧಿಸಿ , ಸತ್ಯ ತಲೆ ತಗ್ಗಿಸುವಂತೆ ಮಾಡುತ್ತದೆ . ಇದು ಎಲ್ಲಾ ಕ್ಷೇತ್ರದಲ್ಲಿಯೂ ಹೇಗೆ ನಡೆಯುತ್ತದೆ ಅಂದ ಮೇಲೆ ನಮ್ಮ ನಿಮ್ಮನ್ನು ಬಿಟ್ಟೀತೇ ? ಆದ್ದರಿಂದ ಯಾರು ಏನೇ ಹೇಳಿದರೂ ನಮ್ಮ ತನವನ್ನು ಬಿಟ್ಟುಕೊಡದೆ ನಾವು ನಾವಾಗಿ ಸತ್ಯದ ಅನ್ವೇಷಣೆಯ ಮಾರ್ಗದಲ್ಲಿ ನಡೆಯುವುದೇ ನಿಜವಾದ ಜೀವನ.

ಇಂದು ಚರ್ಚೆ ಮಾಡುತ್ತಿರುವ ವಿಷಯ ದಪ್ಪವಾಗಿರುವವರು ತಮ್ಮ ಹೊಟ್ಟೆಯ ಸುತ್ತಳತೆಯನ್ನು ಇಳಿಸಿಕೊಳ್ಳಬೇಕು ಎಂದಿರುವವರು ಅದಕ್ಕಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿರಬೇಕಾದರೆ ಅಕ್ಕಪಕ್ಕದವರು ಅಥವಾ ಸುತ್ತ ಮುತ್ತಲಿನ ಪರಿಸ್ಥಿತಿ ಮತ್ತು ಸಂದರ್ಭ ಹೇಗೆಲ್ಲಾ ಅವರನ್ನು ಇಲ್ಲದ್ದು ಹೇಳಿ ದಾರಿ ತಪ್ಪಿಸುತ್ತದೆ ಎಂಬುದರ ಬಗ್ಗೆ. ಫಿಟ್ನೆಸ್ ಎಂಬುದು ಇಡೀ ದೇಹದ ಆರೋಗ್ಯ ಕಾಪಾಡಿದರೂ ಅದರ ಪರಿಣಾಮ ನೇರವಾಗಿ ಎದ್ದು ಕಾಣುವುದು ಮನುಷ್ಯನ ಸೊಂಟದ ಸುತ್ತಳತೆಯಲ್ಲಿ . ಹೊಟ್ಟೆಯ ಭಾಗ ಮತ್ತು ಸೊಂಟ ನೋಡಿ ಯಾರು ಬೇಕಾದರೂ ಸಲೀಸಾಗಿ ಹೇಳಬಹುದು ಈ ಮನುಷ್ಯ ' ಫಿಟ್ ಅಂಡ್ ಫೈನ್ ' ಆಗಿದ್ದಾನೆ ಅಥವಾ ಇಲ್ಲ ಎಂದು . ಒಬ್ಬ ಮನುಷ್ಯ ದೈಹಿಕವಾಗಿ ಆರೋಗ್ಯದಿಂದ ಇರಲು ಅನೇಕ ಅಂಶಗಳು ಕಾರಣವಾಗಿರಬಹುದು. ಅದರಲ್ಲಿ ಹೊಟ್ಟೆಯ ಸುತ್ತಳತೆಯೂ ಒಂದು . ದೈಹಿಕವಾಗಿ ಫಿಟ್ ಆದರೆ ಹೃದಯ ಸಂಬಂಧಿ ರೋಗಗಳು ಮಧುಮೇಹ ಮೊಳೆಗಳಿಗೆ ಸಂಬಂಧಿಸಿದ ಓಸ್ಟೆಯೋಪೋರೊಸಿಸ್ . ಹೀಗೆ ಹತ್ತು ಹಲವಾರು ಕಾಯಿಲೆಗಳನ್ನು ಬರದಂತೆ ತಡೆಯಬಹುದು . ಆದ್ದರಿಂದ ಸ್ವಲ್ಪ ಕಷ್ಟವಾದರೂ ಸರಿ ಆದಷ್ಟು ನಿಮ್ಮ ಹೊಟ್ಟೆ ಕರಗಿಸಲು ಪ್ರಯತ್ನಿಸಿ.ಇಂದು ನಾವು ಈ ಲೇಖನದಲ್ಲಿ ಹೊಟ್ಟೆ ಕರಗಿಸಲು ಜನರು ಪ್ರಯತ್ನ ಪಡುತ್ತಾ ಜೊತೆಗೆ ಯಾವ ಯಾವ ಸುಳ್ಳುಗಳನ್ನು ನಂಬುತ್ತಾರೆ ಎಂದು ನೋಡೋಣ...

   
 
ಹೆಲ್ತ್