Back
Home » ಆರೋಗ್ಯ
ಮೆದುಳಿಗೆ ವಯಸ್ಸಾಗುವುದನ್ನು ತಡೆಯಲು, ಒಂದಿಷ್ಟು ಸರಳ ಟಿಪ್ಸ್
Boldsky | 21st May, 2019 12:10 PM
 • ಮೆದುಳಿನ ವ್ಯಾಯಾಮ ಮಾಡಿ

  ಹದಿಹರೆಯದಲ್ಲಿ ನಾವು ಕೆಲವೊಂದು ಮಾಹಿತಿಗಳನ್ನು ಹಾಗೂ ಬಲಿಷ್ಠ ಸಂಕೇತಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಿದ್ದೇವೆ. ಆದರೆ ಇದು ಈಗ ಸಾಧ್ಯವಿಲ್ಲದಂತೆ ಆಗಬಹುದು. ಮಾಹಿತಿ ನೆನಪು ಮಾಡಿಕೊಳ್ಳುವುದು ಮತ್ತು ಮಾಹಿತಿಯನ್ನು ಉಳಿಸಿಕೊಳ್ಳುವುದು ಕಷ್ಟವಾಗಿರಬಹುದು. ಸುಡೋಕೊ, ಪದಬಂಧ ಮತ್ತು ಇದರ ಕೆಲವೊಂದು ಮೆದುಳಿಗೆ ಗಮನ ನೀಡುವಂತಹ ಕಾರ್ಯಗಳನ್ನು ಮಾಡುವುದರಿಂದಾಗಿ ಮೆದುಳಿಗೆ ಹೆಚ್ಚಿನ ಲಾಭವಾಗುವುದು. ನ್ಯಾಶನಲ್ ಇನ್ ಸ್ಟಿಟ್ಯೂಟ್ ಆಫ್ ಹೆಲ್ತ್ ಸ್ಟಡಿ ಪ್ರಕಾರ ಮೆದುಳಿಗೆ ವ್ಯಾಯಾಮ ನೀಡಿದರೆ ಆಗ ನೆನಪಿನ ಶಕ್ತಿಯು ಉಳಿಯುವುದು ಎಂದು ತಿಳಿದುಬಂದಿದೆ.

  Most Read: ನಿಮ್ಮ ಮೆದುಳಿನ ಶಕ್ತಿ ಹೆಚ್ಚಿಸುವ ಅತ್ಯದ್ಭುತ ಆಹಾರಗಳು


 • ಪ್ರತಿನಿತ್ಯ ಒಂದು ಮೈಲಿ ನಡೆಯಿರಿ

  ನಿಯಮಿತ ವ್ಯಾಯಾಮ ಹಾಗೂ ಪ್ರತಿನಿತ್ಯ ನಡೆಯುವುದರಿಂದಾಗಿ ನೆನಪಿನ ಶಕ್ತಿ ಕುಂದಿಸುವಂತಹ ಕೆಲವೊಂದು ಕಾಯಿಲೆಗಳನ್ನು ದೂರ ಮಾಡಬಹುದು. ಪ್ರತಿನಿತ್ಯ ನೀವು ಒಂದು ಅಥವಾ ಎರಡು ಮೈಲು ನಡೆದರೆ ಆಗ ನಿಮ್ಮ ನರವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸುವುದು. ಮೆದುಳಿನ ಕಾರ್ಯವನ್ನು ಹೆಚ್ಚು ಮಾಡಲು ನೀವು ದೊಡ್ಡ ಮಟ್ಟದ ವ್ಯಾಯಮ ಮಾಡಬೇಕೆಂದಿಲ್ಲ. ಇದಕ್ಕಾಗಿ ಎರಡು ಮೈಲು ನಡೆಯುವುದು ಅಥವಾ ಐದು ಮೈಲು ಸೈಕಲ್ ಸವಾರಿ ಮಾಡುವುದು ಒಳ್ಳೆಯದು.


 • ಏನಾದರೂ ಹೊಸತನ್ನು ಕಲಿಯಿರಿ

  ವಯಸ್ಸಾಗುತ್ತಿರುವ ಮೆದುಳಿಗೆ ಏನಾದರೂ ಹೊಸತು ಮತ್ತು ಅದರ ಸಾಮರ್ಥ್ಯವನ್ನು ವದ್ಧಿಸುವಂತಹ ಕೆಲಸ ಮಾಡಬೇಕಾಗಿದೆ. ಹೊಸ ನೃತ್ಯ ಪ್ರಕಾರ, ಭಾಷೆ ಅಥವಾ ಯಾವುದೇ ಸಂಗೀತ ಪರಿಕರಗಳನ್ನು ಕಲಿಯಬಹುದು. ಇಂತಹ ಚಟುವಟಿಕೆಗಳು ಮೆದುಳಿನ ನ್ಯೂಕ್ಲಿಯಸ್ ಬಸಾಲಿಸ್ ಎನ್ನುವುದರ ಅಂಗವಾಗಿದೆ ಮತ್ತು ಇದು ಏಕಾಗ್ರತೆ ಮತ್ತು ಮೆದುಳಿನಲ್ಲಿ ಆಲೋಚನೆಗಳನ್ನು ಏಕೀಕರಣಗೊಳಿಸಲು ಪ್ರಮುಖ ಪಾತ್ರ ವಹಿಸುವುದು. ನೀವು ಇದನ್ನು ಪ್ರತಿನಿತ್ಯ ಒಂದು ಗಂಟೆಗಳ ಕಾಲ ಮಾಡಿದರೆ ಆಗ ನಿಮಗೆ ಏಕಾಗ್ರತೆ ಹೆಚ್ಚಾಗುವುದು.


 • ನಿಮ್ಮ ಸ್ವರದ ಕಡೆ ಗಮನಹರಿಸಿ

  ನಿಮ್ಮ ಸ್ವರದ ಕಡೆಗೆ ಗಮನಹರಿಸುವ ಮೂಲಕವಾಗಿ ನೀವು ಮತ್ತೆ ಶಕ್ತಿ ಪಡೆಯಬಹುದು. ಕೆಲವೊಂದು ಸಂದರ್ಭದಲ್ಲಿ ನೀವು ಯಾವುದೇ ವ್ಯಕ್ತಿ ಭಾಷಣ ಕೇಳುತ್ತಲಿದ್ದರೆ ಆಗ ನಿಮ್ಮ ಮೆದುಳು ಹೆಚ್ಚು ಚುರುಕಾಗಿ ಶಕ್ತಿ ಸಿಗುವುದು. ಅದೇ ರೀತಿಯಾಗಿ ಕೆಲವೊಂದು ಸಂದರ್ಭದಲ್ಲಿ ಕೆಲವರ ಭಾಷಣ ಕೇಳಿದರೆ ಶಕ್ತಿಯು ಕುಂದುವುದು ಮತ್ತು ನಿದ್ರೆ ಆವರಿಸಿಕೊಳ್ಳುವುದು.

  Most Read: ಮೆದುಳು ಸ್ನೇಹಿ ಆಹಾರಗಳು- ದಿನನಿತ್ಯ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ


 • ಧ್ಯಾನ

  ಕ್ಯಾಲಿಫೋರ್ನಿಯಾದ ಯೂನಿವರ್ಸಿಟಿಯ ತಂಡ ಮತ್ತು ಲಾಸ್ ಆಂಜಲೀಸ್ ಆಂಡ್ ಸೆಂಟರ್ ಫಾರ್ ರಿಸರ್ಚ್ ಆನ್ ಏಜಿಂಗ್ ಹೆಲ್ತ್ ಆಂಡ್ ವೆಲ್ ಬೀಯಿಂಗ್ ನವರು ನಡೆಸಿರುವಂತಹ ಅಧ್ಯಯನದ ಪ್ರಕಾರ ಧ್ಯಾನದಿಂದಾಗಿ ಮನುಷ್ಯನ ಮೆದುಳಿಗೆ ವಯಸ್ಸಾಗುವುದನ್ನು ತಡೆಯಬಹುದಾಗಿದೆ. ಇದರಿಂದಾಗಿ ಅವರಲ್ಲಿನ ಜ್ಞಾಪಕ ಶಕ್ತಿಯು ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.


 • ಸರಿಯಾಗಿ ವಿಶ್ರಾಂತಿ ಪಡೆಯಿರಿ

  ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ದೇಹಕ್ಕೆ ವಿಶ್ರಾಂತಿ ನೀಡುವುದು ಅತೀ ಅಗತ್ಯವಾಗಿದೆ. ರೊಚೆಸ್ಟರ್ ನ ಯೂನಿವರ್ಸಿಟಿಯು ಕಂಡುಕೊಂಡಿರುವಂತಹ ವಿಚಾರವೆಂದರೆ ನಾವು ನಿದ್ರಿಸುವ ವೇಳೆ ಮದುಳಿನ ಗ್ಲಿಯಾ ಎನ್ನುವ ಕೋಶಗಳು ಮೆದುಳಿನಲ್ಲಿ ಇರುವಂತಹ ಕಲ್ಮಷ ಹಾಗೂ ವಿಷಕಾರಿ ಅಂಶಗಳನ್ನು ಹೊರಗೆ ಹಾಕುವುದು. ಬುದ್ಧಿಮಾಂದ್ಯತೆಯು ಕಡಿಮೆ ಆಗುವಂತಹ ಕೆಲವೊಂದು ಅಂಶಗಳನ್ನು ಇದು ಹೊರಗೆ ಹಾಕುವುದು. ಇದರಿಂದ ಹೊಸತಾಗಿ ಏಕಾಗ್ರತೆ ನಿರ್ಮಾಣಕ್ಕೆ ದಾರಿ ಆಗುವುದು. ಈ ಕೋಶಗಳು ನಿದ್ರಿಸುವ ವೇಳೆ ಹೆಚ್ಚು ಏಕಾಗ್ರತೆ ಉಂಟು ಮಾಡುವುದು ಎಂದು ಅಧ್ಯಯನ ವರದಿಗಳು ಬಹಿರಂಗಪಡಿಸಿದೆ.
ಮೆದುಳು ಎನ್ನುವುದು ನಮ್ಮ ದೇಹದ ಪ್ರಮುಖ ಅಂಗ. ಅದು ಸರಿಯಾಗಿ ಕಾರ್ಯನಿರ್ವಹಿಸದೆ ಹೋದರೆ ಆಗ ನಮಗೆ ನೆನಪಿನ ಶಕ್ತಿ ಕಡಿಮೆ ಆಗುವುದು ಮಾತ್ರವಲ್ಲದೆ, ದೇಹದ ಬೇರೆ ಅಂಗಗಳು ಕೂಡ ತಕ್ಷಣವೇ ಪ್ರತಿಕ್ರಿಯೆ ನೀಡಲು ಆಗದು. ಮೆದುಳು ಎನ್ನುವುದು ದೇವರು ನೀಡಿರುವಂತಹ ವರದಾನ ಎನ್ನಬಹುದು. ಮೆದುಳಿನ ಸರಿಯಾದ ಆರೈಕೆ ಮಾಡಿದರೆ ಆಗ 70ರ ಹರೆಯದಲ್ಲೂ ಸರಿಯಾದ ರೀತಿಯಲ್ಲಿ ಇದು ಕಾರ್ಯನಿರ್ವಹಿಸುವುದು. ವಯಸ್ಸಾಗುತ್ತಾ ಸಾಗಿದಂತೆ ಮನುಷ್ಯರಲ್ಲಿ ನೆನಪಿನ ಶಕ್ತಿಯು ಕುಂದುವುದು.

ನೀವು ಅದೊಂದು ದಿನ ಬೆಳಗ್ಗೆ ಎದ್ದಾಗ ನಿನ್ನೆ ನೀವು ಮಾಡಿದಂತಹ ಕೆಲಸಗಳು, ಈ ದಿನ ಯಾವುದು, ಮುಂದೆ ಏನು ಮಾಡಬೇಕು ಎಂದು ಯಾವುದೂ ನೆನಪಿನಲ್ಲಿ ಇರದೇ ಇದ್ದರೆ ಆಗ ಹೇಗೆ ಆಗಬಹುದು ಹೇಳಿ. ಇದಕ್ಕೆ ಹೇಳುವುದು ಮೆದುಳಿನ ಆರೈಕೆ ಸರಿಯಾಗಿ ಮಾಡಿಕೊಳ್ಳಬೇಕು ಎಂದು. ಮೆದುಳಿಗೆ ವಯಸ್ಸಾಗುವುದನ್ನು ತಡೆಯಲು ಇಲ್ಲಿ ಕೆಲವೊಂದು ಸಲಹೆಗಳನ್ನು ಹೇಳಿಕೊಡಲಾಗಿದೆ. ಇದನ್ನು ನೀವು ಪಾಲಿಸಿಕೊಂಡು ಹೋಗಿ.

 
ಹೆಲ್ತ್