ಮೇ 22ರಂದು ಬೆಳಗ್ಗೆ 5.30ಕ್ಕೆ ಬಾಹ್ಯಾಕಾಶಕ್ಕೆ ಉಡಾವಣೆಯಾಗಲಿರುವ PSLV-C46 ಉಪಗ್ರಹದ ಪ್ರತಿಕೃತಿಯನ್ನು ತಮ್ಮೊಂದಿಗೆ ಒಯ್ದ ಇಸ್ರೋ ಅಧ್ಯಕ್ಷ ಕೆ ಶಿವನ್ ಅವರು ಉಪಗ್ರಹದ ಯಶಸ್ವೀ ಅಭಿಯಾನಕ್ಕಾಗಿ ಪೂಜೆ-ಪ್ರಾರ್ಥನೆ ಸಲ್ಲಿಸಿದ್ದಾರೆ. ಪಿಎಸ್ಎಲ್ವಿ-ಸಿ-46 ಉಪಗ್ರಹ ಉಡಾವಣೆಯ ಮುನ್ನಾ ದಿನವಾದ ಇಂದು ಮಂಗಳವಾರ ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ PSLV-C 46 ಉಪಗ್ರಹದ ಪ್ರತಿಕೃತಿ ಜೊತೆಗೆ ಕಾಣಿಸಿಕೊಂಡ ಕೆ ಶಿವನ್ ಅವರು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ಹೌದು, RISAT 2B ಎಂಬ ಹೆಸರಿನ ರಾಡಾರ್ ಇಮೇಜಿಂಗ್ ಭೂ ಪರಿವೀಕ್ಷಣೆಯ ಉಪಗ್ರಹವನ್ನು ಮೇ 22ರಂದು ಬೆಳಗ್ಗೆ 5.30ಕ್ಕೆ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಾಗುತ್ತಿದ್ದು, RISAT 2B ಉಪಗ್ರಹವನ್ನು ಪಿಎಸ್ಎಲ್ವಿ ಸಿ46 ಎಂಬ ವಾಹಕ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಕೇಂದ್ರದಿಂದ ನಭಕ್ಕೆ ಹೊತ್ತೂಯ್ಯಲಿದೆ. ಇದು ಪಿಎಸ್ಎಲ್ವಿ ಸಿ46 ಯೋಜನೆಯ 46ನೇ ರಾಕೆಟ್ ಆಗಿದ್ದು, ಈ ಕೇಂದ್ರದಿಂದ ಉಡಾವಣೆ ಯಾಗುತ್ತಿರುವ 72ನೇ ಉಪಗ್ರಹ ವಾಹಕವಾಗಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ ಇಸ್ರೋ ನಭೋಮಂಡಲದಲ್ಲಿ ಮತ್ತೂಂದು ಮೈಲುಗಲ್ಲು ಸ್ಥಾಪಿಸಲು ಸಿದ್ಧವಾಗಿದ್ದು, ಇದಕ್ಕಾಗಿ ಕ್ಷಣಗಣನೆ ಆರಂಭವಾಗಿದೆ. ಹಾಗಾದರೆ, ದೇಶದ ಹೆಮ್ಮೆ ಬಾಹ್ಯಾಕಾಶ ಸಂಸ್ಥೆ ಇಸ್ರೋ ಕೈಗೊಂಡಿರುವ ಭೂ ಪರಿವೀಕ್ಷಣೆಯ ರೇಡಾರ್ ಇಮೇಜಿಂಗ್ ಉಪಗ್ರಹ ಆರ್ಐಸ್ಯಾಟ್-2ಬಿ ಯೋಜನೆ ಹೇಗಿರಲಿದೆ?, ಭೂ ಪರಿವೀಕ್ಷಣೆಯ ರೇಡಾರ್ ಇಮೇಜಿಂಗ್ ಉಪಗ್ರಹದ ಉಪಯೋಗಗಳು ಯಾವುವು ಎಂಬುದನ್ನು ಮುಂದಿನ ಸ್ಲೈಡರ್ಗಳಲ್ಲಿ ಓದಿ ತಿಳಿಯಿರಿ.