Back
Home » ಆರೋಗ್ಯ
ಅಧ್ಯಯನದ ಪ್ರಕಾರ ರಾತ್ರಿ ಉಂಟಾಗುವ ಹೃದಯಘಾತಕ್ಕಿಂತ ಮುಂಜಾನೆ ಉಂಟಾಗುವ ಹೃದಯಘಾತವು ಅತ್ಯಂತ ಅಪಾಯಕಾರಿಯಂತೆ!!!!
Boldsky | 21st May, 2019 01:02 PM

ಹೃದಯ ಎನ್ನುವುದು ಮನುಷ್ಯನಿಗೆ ಅತ್ಯಂತ ಅಮೂಲ್ಯವಾದ ಅಂಗ. ಒಂದು ಮುಷ್ಟಿಯ ಗಾತ್ರವನ್ನು ಹೊಂದಿರುವ ಹೃದಯವು ದೇಹಕ್ಕೆ ಅಗತ್ಯವಾದ ರಕ್ತವನ್ನು ಪಂಪ್ ಮಾಡುವುದರ ಮೂಲಕ ಒದಗಿಸುತ್ತದೆ. ಹೃದಯವು ನಿರಂತರವಾಗಿ ಕಾರ್ಯನಿರತವಾಗಿರುತ್ತದೆ. ರಕ್ತವನ್ನು ಶುದ್ಧಿಗೊಳಿಸುವುದರ ಮೂಲಕ ದೇಹದ ಎಲ್ಲಾ ಅಂಗಾಂಗಗಳಿಗೂ ರವಾನೆಯಾಗುವಂತೆ ಮಾಡುವುದು. ನಿರಂತರವಾಗಿ ಕೆಲಸವನ್ನು ನಿರ್ವಹಿಸುವ ಹೃದಯವು ಯಾವುದೋ ಒಂದು ಅಸಂಭವಗಳಿಗೆ ಅಥವಾ ಅನುಚಿತ ಕಾರ್ಯಗಳಿಂದ ಹೃದಯಕ್ಕೆ ತೊಂದರೆ ಉಂಟಾದರೆ ಕೆಲಸ ನಿಲ್ಲಿಸಬಹುದು. ಆ ಕ್ಷಣಕ್ಕೆ ವ್ಯಕ್ತಿ ಆಘಾತಕ್ಕೆ ಒಳಗಾಗಬೇಕಾಗುವುದು.

ಹಾಗಾಗಿ ನಾವು ಸೇವಿಸುವ ಆಹಾರ ಜೀವನ ಪದ್ಧತಿ ಅತ್ಯುತ್ತಮ ರೀತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಹೃದಯಕ್ಕೆ ತೊಂದರೆ ಉಂಟಾಗಬಹುದು. ನಮ್ಮ ಸುತ್ತಮುತ್ತಲಲ್ಲಿ ಇರುವ ಕಲುಷಿತ ಮಾಲಿನ್ಯ, ದುಶ್ಚಟಗಳು, ಧೂಮಪಾನ, ಮದ್ಯಪಾನದಿಂದಾಗಿ ಹೃದಯದ ಮೇಲೆ ಒತ್ತಡ ಉಂಟಾಗುವುದು. ಅಂತಹ ಸಂದರ್ಭದಲ್ಲೂ ಹೃದಯಘಾತ ಉಂಟಾಗುವ ಸಾಧ್ಯತೆಗಳಿರುತ್ತವೆ. ಅಲ್ಲದೆ ದುಶ್ಚಟಗಳಿಂದ ಪ್ರಾಣಕ್ಕೂ ಅಪಾಯ ಉಂಟಾಗುವ ಸಾಧ್ಯತೆಗಳು ಇರುತ್ತವೆ. ಒಮ್ಮೆ ಸಣ್ಣ ಹೃದಯಘಾತ ಉಂಟಾದರೂ ಭವಿಷ್ಯದಲ್ಲಿ ತೀವ್ರವಾದ ಹೃದಯಘಾತಕ್ಕೆ ಒಳಗಾಗುವ ಸಾಧ್ಯತೆಗಳಿರುತ್ತವೆ. ಅದು ಪ್ರಾಣಕ್ಕೂ ಅಪಾಯವನ್ನುಂಟು ಮಾಡಬಹುದು. ಹೃದಯದ ಆರೋಗ್ಯ ಕಾಪಾಡಬೇಕಾದರೆ ಪಂಚಸೂತ್ರ ಅನುಸರಿಸುವುದು ಒಳಿತು. ರಕ್ತದಲ್ಲಿ ಸಕ್ಕರೆ ಪ್ರಮಾಣ, ಕೊಬ್ಬಿನಾಂಶ, ಶರೀರದ ತೂಕ ಮತ್ತು ಸೊಂಟದ ಸುತ್ತಳತೆ, ಅತಿಯಾಸೆ ಈ ಐದು ಅಂಶಗಳನ್ನು ಕಡಿಮೆಯಿಟ್ಟುಕೊಂಡರೆ ಒಳಿತು. ಜತೆಗೆ ವ್ಯಾಯಾಮ, ದೇಹದಂಡನೆ ಮುಖ್ಯ ಎನ್ನುತ್ತಾರೆ ಹೃದ್ರೋಗಗಳ ತಜ್ಞರು.

Most Read: ಮೀನು ಸೇವಿಸಿದರೆ, ಹೃದಯಕ್ಕೆ ಒಳ್ಳೆಯದು ಅಲ್ಲದೆ ಹಲವಾರು ಕಾಯಿಲೆಗಳನ್ನೂ ನಿವಾರಿಸಬಹುದು

ಗ್ರಾಮೀಣ ಪ್ರದೇಶದಲ್ಲಿ ಹೃದಯಾಘಾತ ಪ್ರಮಾಣ ಶೇ.6ರಷ್ಟು ನಗರ ಪ್ರದೇಶದಲ್ಲಿ ಶೇ.8ರಿಂದ ಶೇ.10ರಷ್ಟು ಹೆಚ್ಚಳವಾಗುತ್ತಿದೆ. ಹಿಂದೆಲ್ಲಾ ಹೆಂಗಸರಲ್ಲಿ 50 ವರ್ಷದೊಳಗೆ ಹೃದಯಾಘಾತ ಇತ್ತು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಹೆಚ್ಚಾಗುತ್ತಿದೆ. ಸಂಸಾರದ ಒತ್ತಡ, ವೃತ್ತಿಯ ಒತ್ತಡ, ಮಕ್ಕಳನ್ನು ನೋಡಿಕೊಳ್ಳುವ ಒತ್ತಡ, ಹಾರ್ಮೋನ್ ಅಸಮತೋಲನದಿಂದ ಒತ್ತಡ ಹೆಚ್ಚುತ್ತಿದೆ. 40ವರ್ಷ ಮೀರಿದ ಬಳಿಕ ಗಂಡಸರು 45ವರ್ಷ ಮೀರಿದ ಬಳಿಕ ಮಹಿಳೆಯರು ನಿಯಮಿತವಾಗಿ ರಕ್ತದಲ್ಲಿ ಸಕ್ಕರೆ ಪ್ರಮಾಣ, ಕೊಬ್ಬಿನಾಂಶ ಪರೀಕ್ಷೆ, ಥ್ರೆಡ್ಮಿಲ್ ಇಸಿಜಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಉತ್ತಮ, ಪ್ರತಿ ಬಾರಿ ಸಾಮಾನ್ಯ ಸ್ಥಿತಿಯಲ್ಲಿದ್ದರೆ 2ವರ್ಷಕೊಮ್ಮೆ ಪರೀಕ್ಷೆ ಮಾಡಿಸಿಕೊಳ್ಳಬಹುದು.

ಹೃದಯಘಾತವಾದಾಗ ಸಾಮಾನ್ಯವಾಗಿ ಎದೆಯ ಎಡಭಾಗ, ಮಧ್ಯಭಾಗದಲ್ಲಿ ನೋವು, ಉರಿ ಕಾಣಿಸಿಕೊಳುತ್ತದೆ. ಶೇ.30ರಿಂದ 40ರಷ್ಟು ಮಂದಿಗೆ ಹೃದಯಘಾತವಾದಾಗ ಎದೆಭಾಗದಲ್ಲಿ ನೋವು ಕಾಣಿಸಿಕೊಳುವುದಿಲ್ಲ. ಹೃದಯಾಘಾತ ಯಾರಿಗೆ, ಯಾವಾಗ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹೃದಯಾಘಾತ ಉಂಟಾಗುವವರೆಗೆ ಹೃದಯದ ಸಮಸ್ಯೆ ಬರಬಹುದೆಂಬ ಎಂಬ ಕಲ್ಪನೆಯೂ ಇರುವುದಿಲ್ಲ. ಇದ್ದಕ್ಕಿದ್ದ ಹಾಗೇ ಎದೆಯಲ್ಲಿ ನೋವು ಕಾಣಿಸಿಕೊಳ್ಳಲಾರಂಭಿಸುತ್ತದೆ. ಇದ್ದಕ್ಕಿದ್ದ ಹಾಗೇ ಹೃದಯಾಘಾತ ಕಾಣಿಸಿಕೊಳ್ಳುವ ಮೊದಲು ಕೆಲವೊಂದು ಲಕ್ಷಣಗಳು ಕಂಡುಬರುತ್ತದೆ. ಅದನ್ನು ಹೆಚ್ಚಿನವರು ಗಮನಿಸುವುದೇ ಇಲ್ಲ. ಆ ಲಕ್ಷಣಗಳನ್ನು ಗುರುತಿಸಿದರೆ ವೈದ್ಯರನ್ನು ಕಂಡು ಮುನ್ನೆಚ್ಚರಿಕೆ ಕ್ರಮಗಳಿಂದ ಹೃದಯಾಘಾತದಿಂದ ಉಂಟಾಗಬಹುದಾದ ಆಪತ್ತನ್ನು ತಪ್ಪಿಸಬಹುದು. ಹೃದಯಾಘಾತ ಮುನ್ನ ಕಾಣಿಸಿಕೊಳ್ಳಬಹುದಾದ ಲಕ್ಷಣಗಳ ಬಗ್ಗೆ ಇಲ್ಲಿ ಹೇಳಾಗಿದೆ ನೋಡಿ:

ಅಜೀರ್ಣ ಸಮಸ್ಯೆ

ಹದಯಾಘಾತದ ಮುನ್ನ ಅಜೀರ್ಣ ಸಮಸ್ಯೆ ಕಾಣಿಸಿಕೊಳ್ಳುವುದು. ಹೊಟ್ಟೆಯಲ್ಲಿ ಉರಿ ಕಂಡು ಬರುತ್ತದೆ.

ಒತ್ತಡ

ಎದೆಯ ಮಧ್ಯಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಎದೆಯಲ್ಲಿ ಏನೋ ಹಿಡಿದಂತೆ ಅನುಭವವಾಗುತ್ತದೆ. ಆ ನೋವು ಒಂದು ನಿಮಿಷದವರೆಗೂ ಕಾಣಿಸಿಕೊಳ್ಳಬಹುದು. ನಂತರ ಕಮ್ಮಿಯಾದಂತೆ ಅನಿಸುತ್ತದೆ. ಈ ರೀತಿ ಉಂಟಾದಾಗ ನಿರ್ಲಕ್ಷ್ಯ ಮಾಡಬೇಡಿ.

ಮೈಕೈ ನೋವು

ಭುಜ, ಕುತ್ತಿಗೆ, ದವಡೆ, ಎದೆ ಈ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತದೆ. ಮಾತ್ರೆ ತೆಗೆದುಕೊಂಡರೂ ನೋವು ಕಡಿಮೆಯಾಗುವುದಿಲ್ಲ. ಈ ರೀತಿ ಕಾಣಿಸಿಕೊಂಡರೆ ಹೃದಯಾಘಾತ ಸಮೀಪದಲ್ಲಿಯೇ ಉಂಟಾಗಬಹುದು ಎಂದು ಸೂಚಿಸುವ ಲಕ್ಷಣಗಳಾಗಿವೆ.

ತಲೆಸುತ್ತು

ಹೃದಯಾಘಾತದ ಮುನ್ನ ಸುಸ್ತು, ಬೆವರುವಿಕೆ, ತಲೆ ಸುತ್ತು, ನಾಡಿಮಿಡಿತದಲ್ಲಿ ವ್ಯತ್ಯಾಸ ಕಂಡುಬರುವುದು. ಈ ರೀತಿ ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಅಧಿಕ ರಕ್ತದೊತ್ತಡ

ಈ ಸಮಸ್ಯೆ ಇರುವವರಿಗೆ, ಸಕ್ಕರೆ ಕಾಯಿಲೆ ಇರುವವರಿಗೆ, ಅಧಿಕ ಕೊಲೆಸ್ಟ್ರಾಲ್ ಇದ್ದರೆ, ಯಾವುದೇ ರೀತಿಯ ದೈಹಿಕ ವ್ಯಾಯಾಮ ಮಾಡದೆ ಇರುವವರಿಗೆ, ಅಧಿಕ ತೂಕ ಇರುವವರಿಗೆ ಹೃದಯಾಘಾತ ಬರುವ ಸಾಧ್ಯತೆಗಳು ಹೆಚ್ಚು.

ತಲೆಸುತ್ತು

ಕಾರಣವಿಲ್ಲದೆ ತಲೆಸುತ್ತು ಬರುತ್ತಿದ್ದರೆ ಹಾಗೂ ಯಾವಾಗಲೂ ತಲೆನೋವು ಕಾಡುತ್ತಾ ಇದ್ದರೆ, ಹೃದಯವು ಮೆದುಳಿಗೆ ಸರಿಯಾಗಿ ರಕ್ತವನ್ನು ಸಂಚಾರ ಮಾಡುತ್ತಿಲ್ಲವೆಂದರ್ಥ ಇದು ಹೃದಯಾಘಾತದ ಒಂದು ಲಕ್ಷಣವಾಗಿರಬಹುದು.

ಉಸಿರಾಟದಲ್ಲಿ ವೇಗ

ಹೃದಯವು ಸರಿಯಾಗಿ ಕೆಲಸ ಮಾಡದೆ ಇದ್ದಾಗ ಶ್ವಾಸಕೋಶಕ್ಕೆ ಸರಿಯಾಗಿ ರಕ್ತ ಸಂಚಾರ ಆಗುವುದಿಲ್ಲ. ಇದರಿಂದ ಉಸಿರಾಟದಲ್ಲಿ ತೊಂದರೆಯಾಗುತ್ತದೆ. ತಂಪು ವಾತಾವರಣದಲ್ಲಿಯೂ ದೇಹ ಬೆವರುತ್ತಿದ್ದರೆ ಅದು ಹೃದಯಾಘಾತದ ಲಕ್ಷಣವಾಗಿರಬಹುದು.

ಸೋಮಾರಿತನ

ಯಾವುದೇ ಕಾರಣವಿಲ್ಲದೆ ನಮ್ಮ ದೇಹದಲ್ಲಿ ಸುಸ್ತು ಕಾಣಿಸಿಕೊಳ್ಳುತ್ತಿದ್ದಾರೆ ಅದು ಹೃದಯಾಘಾತದ ಲಕ್ಷಣವಾಗಿರಬಹುದು. ಇದು ನಮಗೆ ಒಂದು ತಿಂಗಳ ಮೊದಲು ಕಾಣಿಸಿಕೊಳ್ಳುತ್ತದೆ. ಎದೆ ಭಾಗದಲ್ಲಿ ಬಿಗಿಹಿಡಿತ, ಒತ್ತಡ, ಉರಿಯುವಂತಾಗುವುದು ಇಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದರೆ ತಕ್ಷಣವೇ ಸಂಬಂಧಪಟ್ಟ ವೈದ್ಯರನ್ನು ಭೇಟಿಯಾಗುವುದು ಸೂಕ್ತ ಅಥವಾ ಒಳ್ಳೆಯದು. ಈ ಲಕ್ಷಣ ಎಲ್ಲರಿಗೂ ಎದೆಯ ಎಡಭಾಗದಲೇ ನೋವು ಕಾಣಿಸಿಕೊಳ್ಳಬೇಕೆಂದಿಲ್ಲ. ಇದು ಕೆಲವರಿಗೆ ಕತ್ತು, ಗಂಟಲು, ಹೊಟ್ಟೆಯ ಮೇಲ್ಭಾಗ, ಬೆನ್ನು, ಸೊಂಟ, ದವಡೆ, ಭುಜಗಳಲ್ಲಿ ನೋವು ಸಹ ಬರಬಹುದು. ಅನಿಯಮಿತ ಎದೆ ಒತ್ತಡವು ಸಹ ಹೃದಯಾಘಾತದ ಲಕ್ಷಣಗಳೇ ಆಗಿರುತ್ತವೆ.

Most Read: ಪಾದದ ಕಾಲ್ಬೆರಳನ್ನು ಬಗ್ಗಿ ಮುಟ್ಟಿ ನೋಡಿ, ಹೃದಯ ಸಮಸ್ಯೆ ಇದ್ದರೆ ತಿಳಿಯುವುದು

ಕಾಣಿಸಿಕೊಳ್ಳುವುದು:

ಹೃದಯವು ಅಸಹಜ ರೀತಿಯಲ್ಲಿ ರಕ್ತವನ್ನು ಹೊರಹಾಕುತ್ತಿದ್ದಾಗ ಹೊಟ್ಟೆ ಮತ್ತು ಕೈ ಕಾಲು ಭಾಗಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಇದರಿಂದ ಹೊರಸೂಸುಗಳಲ್ಲಿ ಉರಿ ಕಾಣಿಸಿಕೊಳ್ಳಬಹುದು. ಈ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ತಡಮಾಡದೆ ಸರಿಯಾದ ಚಿಕಿತ್ಸೆಯನ್ನು ತೆಗೆದುಕೊಂಡು ಹೃದಯ ಆರೋಗ್ಯವನ್ನು ಕಾಪಾಡಿಕೊಳ್ಳಿ.

ರಾತ್ರಿ ವೇಳೆಯ ಹೃದಯಘಾತ ಅತ್ಯಂತ ಅಪಾಯಕಾರಿ:

ಹೃದಯಘಾತ ಎನ್ನುವ ಅಪಾಯಕಾರಿ ರೋಗ ಅಥವಾ ಆರೋಗ್ಯ ಸಮಸ್ಯೆಯ ಕುರಿತು ಇತ್ತೀಚೆಗೆ ಒಂದು ಅಧ್ಯಯನವನ್ನು ನಡೆಸಲಾಯಿತು. ಅದರ ಪ್ರಕಾರ ರಾತ್ರಿ ವೇಳೆಯಲ್ಲಿ ಉಂಟಾಗುವ ಹೃದಯಘಾತಕ್ಕಿಂತ ಹಗಲಿನಲ್ಲಿ ಮತ್ತು ಮುಂಜಾನೆಯ ಸಮಸಯದಲ್ಲಿ ಉಂಟಾಗುವ ಹೃದಯಘಾತವು ಅತ್ಯಂತ ಅಪಾಯಕಾರಿ ಎಂದು ಹೇಳಲಾಯಿತು.

MOst Read: ಮೊಟ್ಟೆ ಸೇವನೆಯಿಂದ ಹೃದಯದ ತೊಂದರೆಗಳು ಎದುರಾಗಬಹುದೇ? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ?

ಈ ಅಧ್ಯಯನವನ್ನು ಜರ್ನಲ್ ಟ್ರೆಂಡ್ಸ್ ಇನ್ ಇಮ್ಯುನಾಲಜಿ ಯಲ್ಲಿ ಪ್ರಕಟಿಸಲಾಯಿತು. ಅಧ್ಯಯನವು ಸರ್ಕಡಿಯನ್ ಲಯ ಮತ್ತು ಪ್ರತಿರಕ್ಷಣಾ ಪ್ರತಿಕ್ರಿಯೆಗಳ ನಡುವಿನ ಸಂಬಂಧವನ್ನು ವಿಶ್ಲೇಷಿಸಿದೆ. ಫಲಿತಾಂಶಗಳು ಬೆಳಿಗ್ಗೆ ಮತ್ತು ಸಂಜೆ ಭಿನ್ನವಾಗಿರುತ್ತವೆ ಏಕೆಂದರೆ ದೇಹದ ಬೆಳಕು, ಹಾರ್ಮೋನುಗಳು, ಚಯಾಪಚಯ ಮತ್ತು ಇತರ ಶಾರೀರಿಕ ಪ್ರಕ್ರಿಯೆಗಳಂತಹ ವಿಭಿನ್ನ ಅಂಶಗಳಿಗೆ ಪ್ರತಿಕ್ರಿಯಿಸುತ್ತದೆ. ಈ ಅಧ್ಯಯನವನ್ನು ಇಲಿಗಳ ಮೇಲೆ ನಡೆಸಲಾಯಿತು. ಮಾನವರು ಮತ್ತು ಇಲಿಗಳೆರಡರ ಬಿಳಿ ರಕ್ತ ಕಣಗಳು ಎರಡೂ ಒಂದೇ ರೀತಿಯ ಲಯಬದ್ಧ ಮಾದರಿಯನ್ನು ತೋರಿಸುತ್ತವೆ. ಸಂಶೋಧನೆಯ ಪೂರ್ಣಗೊಂಡ ನಂತರ, ಅಧ್ಯಯನದ ಪ್ರಕಾರ ಮಾನವರಲ್ಲಿ ಹೃದಯಾಘಾತಗಳು ಹೆಚ್ಚು ಹೊಡೆಯಲು ಸಾಧ್ಯವಿದೆ ಮತ್ತು ಬೆಳಿಗ್ಗೆ ಹೃದಯಾಘಾತಗಳು ರಾತ್ರಿಯಲ್ಲಿ ಸಂಭವಿಸುವವುಗಳಿಗಿಂತ ಹೆಚ್ಚು ತೀವ್ರವಾಗಿರುತ್ತದೆ.

ಜೀವನಶೈಲಿಯಲ್ಲಿ ಕೆಲವು ಸರಳ ಬದಲಾವಣೆಗಳನ್ನು ಹೃದಯಾಘಾತದಿಂದ ಒಂದು ಹೋರಾಟ ರೋಗಲಕ್ಷಣಗಳಿಗೆ ಸಹಾಯ ಮಾಡಬಹುದು. ಆರೋಗ್ಯಪೂರ್ಣ ಹೃದಯ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಒಂದು ಆರೋಗ್ಯಕರ ಹೃದಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವಂತಹ ಕ್ರಮಗಳನ್ನು ಅನುಸರಿಸಬೇಕು. ಹೃದಯಾಘಾತದ ಲಕ್ಷಣಗಳು ಆರಂಭಿಕ ಹಂತದಿಂದ ಅದನ್ನು ನಿಲ್ಲಿಸಲು ಸಹ ನೀವು ಅರ್ಥಮಾಡಿಕೊಳ್ಳಬೇಕು.

ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ಕೆಲವು ವಿಧಾನಗಳು:

* ಕನಿಷ್ಠ 20 ನಿಮಿಷಗಳ ಕಾಲ ನಿಯಮಿತವಾಗಿ ವ್ಯಾಯಾಮ ಮಾಡಿ

* ಹೃದಯದ ಆರೋಗ್ಯ ಹೆಚ್ಚಿಸುವ ಆಹಾರ ಪದಾರ್ಥವನ್ನು ಸೇವಿಸಿ.

* ನಿಮ್ಮ ರಕ್ತದೊತ್ತಡ ಹಾಗೂ ರಕ್ತ ಪರೀಕ್ಷೆಯನ್ನು ಆಗಾಗ ಮಾಡಿಸುತ್ತಲಿರಿ.

* ಕೊಲೆಸ್ಟ್ರಾಲ್ ಮಟ್ಟ ಸರಿಯಾಗಿ ಇರುವಂತೆ ನೋಡಿಕೊಳ್ಳಿ.

* ಯೋಗ ಮತ್ತು ಧ್ಯಾನದೊಂದಿಗೆ ಒತ್ತಡವನ್ನು ನಿರ್ವಹಿಸಿ

* ಧೂಮಪಾನ ಮತ್ತು ಮದ್ಯಪಾನದಿಂದ ದೂರ ಇರಿ.

   
 
ಹೆಲ್ತ್