Back
Home » ಇತ್ತೀಚಿನ
ಊಬರ್ ಲಕ್ಸುರಿ ರೈಡ್ ಗಳಲ್ಲಿ ಕ್ವೈಟ್ ಮೋಡ್ ಬಿಡುಗಡೆಗೊಳಿಸಿದ ಊಬರ್
Gizbot | 21st May, 2019 03:02 PM

ಊಬರ್ ನಲ್ಲಿ ಸಂಚರಿಸುವಾದ ಆದಷ್ಟು ನಿಶ್ಯಬ್ಧತೆಯ ವಾತಾವರಣವನ್ನು ಬಳಕೆದಾರರಿಗೆ ಸೃಷ್ಟಿ ಮಾಡುವುದಕ್ಕೆ ಊಬರ್ ಇಚ್ಛಿಸುತ್ತಿದೆ. ಡೈವರ್ ಗಳು ಬಳಕೆದಾರರ ಲೊಕೇಷನ್ ಗೆ ತಲುಪುವ ಸಂದರ್ಬದಲ್ಲಿ ಅತೀ ಕಡಿಮೆ ಮಾತುಕತೆಯನ್ನು ಹೊಂದುವ ದೃಷ್ಟಿಯಿಂದಾಗಿ ಆಪ್ ನಲ್ಲಿ ಕೆಲವು ಫೀಚರ್ ನ್ನು ಊಬರ್ ಬಿಡುಗಡೆಗೊಳಿಸಿದೆ.

ಆದರೆ ಇದರ ಲಾಭವನ್ನು ಪಡೆಯುವುದಕ್ಕಾಗಿ ಬಳಕೆದಾರರು ಸ್ವಲ್ಪ ಹೆಚ್ಚಿನ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಈ ಟೂಲ್ ನ್ನು "ಕ್ವೈಟ್ ಮೋಡ್" ಎಂದು ಕರೆಯಲಾಗಿದೆ ಅಂದರೆ ಶಾಂತಿಯುತ ಮೋಡ್ ಎಂದು ಅರ್ಥ. ಆದರೆ ಸದ್ಯ ಇದು ಪ್ರೀಮಿಯರ್ ರೈಡ್ ಗಳಾಗಿರುವ ಊಬರ್ ಬ್ಲಾಕ್ ಮತ್ತು ಊಬರ್ ಬ್ಲಾಕ್ ಎಸ್ ಯುವಿಗಳಲ್ಲಿ ಮಾತ್ರವೇ ಲಭ್ಯವಿರುತ್ತದೆ.

ಆಪ್ ನ ಕಾನ್ವರ್ಸೇಷನ್ ನ ಅಡಿಯಲ್ಲಿ ಇನ್ನು ಮುಂದೆ ಮೂರು ಆಯ್ಕೆಗಳಿರುತ್ತದೆ. 'Quiet Preferred,' 'Happy to Chat' ಅಥಾ 'No preference'. ಈ ಆಯ್ಕೆಗಳಿಂದ ಬಳಕೆದಾರರು ಹಾಡುಗಳನ್ನು ಕೇಳುವುದು, ಇಮೇಲ್ ಕಳಿಸುವುದು ಅಥವಾ ಇತ್ಯಾದಿ ಯಾವುದೇ ತಮ್ಮ ಕೆಲಸವನ್ನು ಡ್ರೈವರ್ ಗಳ ಕರೆಯ ಕಿರಿಕಿರಿ ಇಲ್ಲದೆಯೇ ಮುಂದುವರಿಸುವುದಕ್ಕೆ ಸಾಧ್ಯವಾಗುತ್ತದೆ. ಕೇವಲ ಒಂದು ಟ್ಯಾಪ್ ನಲ್ಲಿ ನೀವು ಕ್ವೈಟ್ ಮೋಡ್ ಗೆ ಆಯ್ಕೆ ಮಾಡಿಕೊಂಡರೆ ಯಾವುದೇ ಮಧ್ಯಂತರ ತೊಂದರೆಗಳು ನಿಮಗೆ ಪ್ರಯಾಣದ ಸಂದರ್ಬದಲ್ಲಿ ಎದುರಾಗುವುದಿಲ್ಲ. ನಿಮ್ಮ ಕೆಲಸವನ್ನು ಸರಾಗವಾಗಿ ಮುಂದುವರಿಸಬಹುದು.

ಇನ್ನು ಚಾಟ್ ಮಾಡಿ ಡ್ರೈವರ್ ಗಳ ಜೊತೆಗೆ ಮಾತುಕತೆ ನಡೆಸಬಹುದಾದ ಆಯ್ಕೆಯೂ ಕೂಡ ಇದೆ. ರೈಡ್ ಪ್ರಿಫರೆನ್ಸ್ ಎಂಬ ಲಿಸ್ಟ್ ನ ಊಬರ್ ನ ಹೊಸ ಪಟ್ಟಿಯಲ್ಲಿ ಈ ಆಯ್ಕೆಗಳು ಲಭ್ಯವಾಗುತ್ತದೆ. ಇವುಗಳು ಪ್ರೀಮಿಯಂ ರೈಡ್ ನ ಸಂದರ್ಬದಲ್ಲಿ ಮಾತ್ರವೇ ಲಭ್ಯವಿರುತ್ತದೆ ಎಂಬುದು ನೀವು ಗಮನಿಸಬೇಕಾಗಿರುವ ಅಂಶವಾಗಿದೆ.

ಈ ಫೀಚರ್ ಗಳ ಅನ್ವಯ ಬಳಕೆದಾರರು ತಮ್ಮ ಲಗೇಜ್ ಗೆ ಸಹಾಯ ಮಾಡಬೇಕೇ ಮತ್ತು ಎಸಿ ಟೆಂಪರೇಷನ್ ತಮ್ಮ ಪ್ರಯಾಣದ ಸಂದರ್ಬದಲ್ಲಿ ಎಷ್ಟಿರಬೇಕು ಎಂಬುದನ್ನು ಕೂಡ ತಿಳಿಸುವುದಕ್ಕೆ ಅವಕಾಶವಿರುತ್ತದೆ.

ಒಂದು ವೇಳೆ ರೈಡ್ ಬುಕ್ ಮಾಡಿದ ನಂತರ ಹೊರಡಲು ಸಾಧ್ಯವಾಗದೇ ಇದ್ದಲ್ಲಿ ಬಳಕೆದಾರರಿಗೆ ರೈಡ್ ಕ್ಯಾನ್ಸಲ್ ಮಾಡುವ ಬದಲು ತಮ್ಮ ಪಿಕ್ ಅಪ್ ಸಮಯವನ್ನು ಸ್ವಲ್ಪ ಮುಂದೂಡುವ ಅವಕಾಶವನ್ನು ಕೂಡ ಊಬರ್ ನೀಡುತ್ತದೆ. ಊಬರ್ ಬ್ಲಾಕ್ ನಲ್ಲಿ ಒಂದು ವೇಳೆ ಡ್ರೈವರ್ 5 ನಿಮಿಷ ಕಾಯುವಂತಾದರೂ ಕೂಡ ಚಾರ್ಜ್ ಮಾಡಲಾಗುತ್ತದೆ. ಅವರು ರೈಡ್ ಕ್ಯಾನ್ಸಲ್ ಮಾಡುವುದಕ್ಕೂ ಮುನ್ನ 15 ನಿಮಿಷ ಕಾಯುವುದಕ್ಕೆ ಅವರಿಗೆ ಅವಕಾಶವಿರುತ್ತದೆ .

ಊಬರ್ ಬ್ಲಾಕ್ ನಲ್ಲಿ ಹೆಚ್ಚು ಪ್ರೊಫೆಷನಲ್ ಆಗಿರುವ ಡ್ರೈವರ್ ಗಳು ಮತ್ತು ಉತ್ತಮ ಕಾರ್ ಗಳನ್ನು ಊಬರ್ ಬ್ಲಾಕ್ ರೈಡ್ ಗೆ ನಿಗದಿಗೊಳಿಸುತ್ತಿದೆ. ಊಬರ್ ಬ್ಲಾಕ್ ಅಥವಾ ಊಬರ್ ಬ್ಲಾಕ್ ಎಸ್ ಯುವಿಯನ್ನು ಬಳಕೆದಾರರು ಆಯ್ಕೆ ಮಾಡುತ್ತಿದ್ದಾರೆ ಅಂದರೆ ಅವರು ಹೆಚ್ಚು ಗುಣಮಟ್ಟದ, ಉತ್ತಮ ಅನುಭವ ನೀಡುವ ಕಾರ್ ನ್ನು ಅವರು ಬಳಸುವುದಕ್ಕೆ ಇಚ್ಛಿಸುತ್ತಿದ್ದಾರೆ ಎಂದರ್ಥ ಎಂದು ಕಂಪೆನಿ ಹೇಳಿಕೊಂಡಿದೆ. ಈ ಎಲ್ಲಾ ಹೊಸ ಫೀಚರ್ ಗಳ ಮೂಲಕ ಉತ್ತಮ ಪ್ರಯಾಣ ಬಳಕೆದಾರರದ್ದಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತದೆ ಊಬರ್

ಊಬರ್ ಎಕ್ಸ್ ಗಿಂತ ಊಬರ್ ಬ್ಲಾಕ್ ರೈಡ್ 100% ಅಧಿಕ ದುಬಾರಿಯದ್ದಾಗಿರುತ್ತದೆ. ಈ ಕ್ವೈಟ್ ಮೋಡ್ ಪ್ರಯಾಣಿಕರು ನೀಡುವ ರೇಟಿಂಗ್ ನ್ನು ಅಧಿಕಗೊಳಿಸುವುದಕ್ಕೆ ಖಂಡಿತ ನೆರವಾಗಲಿದೆ ಎಂದು ಹೇಳಲಾಗುತ್ತೆ. ಕೆಲವು ಪ್ರಯಾಣಿಕರು ಡ್ರೈವರ್ ಗಳಿಗೆ ಕಡಿಮೆ ಸ್ಕೋರ್ ನೀಡುತ್ತಾರೆ. ಅವರು ಅತಿಯಾಗಿ ಮಾತನಾಡುತ್ತಾರೆ ಅಥವಾ ಸಮಾಧಾನದ ಸ್ವಭಾವ ಹೊಂದಿರುವುದಿಲ್ಲ ಎಂಬ ಕಾರಣಕ್ಕೆ ಪ್ರಯಾಣಿಕರು ಸ್ಕೋರ್ ನೀಡುವುದಕ್ಕೆ ಹಿಂದೇಟು ಹಾಕುತ್ತಾರೆ. ಆದರೆ ಈ ಕೇಸ್ ನಲ್ಲಿ ಅಂದರೆ ಈ ಫೀಚರ್ ಬಳಕೆ ಮಾಡಿದಾಗ ಖಂಡಿತ ಈ ಸಮಸ್ಯೆ ಎದುರಾಗುವುದಿಲ್ಲ ಎಂದು ಊಬರ್ ತಿಳಿಸುತ್ತಿದೆ.

ಊಬರ್ ನ ಭದ್ರತಾ ಫೀಚರ್ ಗಳು ಯಾವುದು ಗೊತ್ತಾ?

ಫೇಕ್ ಡ್ರೈವರ್ ಗಳಿಂದ ರಕ್ಷಣೆಗಾಗಿ ಊಬರ್ ಕೆಲವು ಸೇಫ್ಟೀ ಫೀಚರ್ ಗಳನ್ನು ಬಿಡುಗಡೆಗೊಳಿಸುತ್ತಿದೆ. ತನ್ನದೇ ರೈಡ್ ಎಂದು ಭಾವಿಸಿ ಕಾರಿನಲ್ಲಿ ಕುಳಿದ ಕಾಲೇಜು ವಿದ್ಯಾರ್ಥಿಯ ಕೊಲೆ ಪ್ರಕರಣದ ನಂತರ ಊಬರ್ ಬಹಳ ಎಚ್ಚೆತ್ತುಕೊಂಡಿದೆ.

ಸರಿಯಾದ ಕಾರು ಎಂದು ಗುರುತಿಸುವುದಕ್ಕೆ ಅನುಕೂಲಕರವಾಗಿರುವಂತಹ ಕೆಲವು ಹೆಜ್ಜೆಗಳನ್ನು ಊಬರ್ ತೆಗೆದುಕೊಳ್ಳುತ್ತಿದೆ. ಕಾರಿನೊಳಗೆ ಕುಳಿತುಕೊಳ್ಳುವುದಕ್ಕೂ ಮುನ್ನ ನಿಮ್ಮದೇ ರೈಡ್ ಎಂದು ಖಾತ್ರಿ ಮಾಡಿಕೊಳ್ಳುವುದಕ್ಕೆ ಅನುಕೂಲಕರವಾಗಿರುವಂತಹ ಕೆಲವು ಫೀಚರ್ ಬಿಡುಗಡೆಗೊಳಿಸುತ್ತಿದೆ. ಕೊಲಂಬಿಯಾ ಮತ್ತು ಸೌತ್ ಕ್ಯಾರೋಲಿನಾದಲ್ಲಿ ಈ ಪೀಚರ್ ಗಳು ಈಗಾಗಲೇ ಕೆಲಸ ಮಾಡುತ್ತಿದೆ ಮತ್ತು ಯುಎಸ್ ನಲ್ಲಿ ಕೆಲವೇ ದಿನಗಳಲ್ಲಿ ಆರಂಭವಾಗುತ್ತದೆ.

ಯುನಿವರ್ಸಿಟಿಯ ವಿದ್ಯಾರ್ಥಿಗಳಿಗೆ ಸಹಾಯವಾಗುವಂತಹ ಕೆಲವು ಹೊಸ ಫೀಚರ್ ಗಳನ್ನು ಬಿಡುಗಡೆಗೊಳಿಸಲಾಗುತ್ತಿದೆ. ಆ ಮೂಲಕ ಫೇಕ್ ಡ್ರೈವರ್ ಗಳಿಗೆ ಮರುಳಾಗದೇ ತಮ್ಮದೇ ರೈಡ್ ನಲ್ಲಿ ಆರಾಮದಾಯಕವಾಗಿ ವಿದ್ಯಾರ್ಥಿಗಳು ಸಂಚರಿಸಬೇಕು ಎಂಬ ಉದ್ದೇಶವನ್ನು ಊಬರ್ ಹೊಂದಿದೆ. ಸೌತ್ ಕ್ಯಾರೋಲಿನಾ ಯುನಿವರ್ಸಿಯಲ್ಲಿ ಕೆಲವು ನಿರ್ಧಿಷ್ಟ ಪಿಕ್ ಅಪ್ ಝೋನ್ ಗಳನ್ನು ಕೂಡ ವಿದ್ಯಾರ್ಥಿದೆಸೆಯಲ್ಲಿ ಕ್ಯಾಂಪಸ್ ನಲ್ಲಿ ನಿರ್ಮಿಸಲಾಗುತ್ತಿದೆ. ಈ ಝೋನ್ ಗಳನ್ನು ಹತ್ತಿರದ ಕಾನೂನು ಅಧಿಕಾರಿಗಳಿಂದ ಮಾನಿಟರ್ ಕೂಡ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.

 
ಹೆಲ್ತ್