Back
Home » ಇತ್ತೀಚಿನ
ಶಿಯೋಮಿಯ ಖತರ್‌ನಾಕ್ ಗೇಮ್ ಪ್ಲ್ಯಾನ್!..'ನೋಟ್ 7ಎಸ್' VS 'ನೋಟ್ 7 ಪ್ರೊ'!!
Gizbot | 21st May, 2019 03:47 PM
  • ಡಿಸ್‌ಪ್ಲೇ

    ರೆಡ್ಮಿ ನೋಟ್ 7 ಎಸ್ ಫೋನ್ 6.3 ಪೂರ್ಣ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು ಹೆಚ್ಚು ಪ್ರಖರವಾಗಿದೆ. 1,080 x 2,340ಪಿ ಪಿಕ್ಸೆಲ್ ಸಾಮರ್ಥ್ಯದ ಡಿಸ್‌ಪ್ಲೇಯ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್ ಅನ್ನು ಒದಗಿಸಲಾಗಿದೆ. ಹಾಗೇ ಡಿಸ್‌ಪ್ಲೇಯಲ್ಲಿ ವಾಟರ್ ಡ್ರಾಪ್ ಡಾಟ್ ನೋಚ್ ನೀಡಲಾಗಿದ್ದು ಜೊತೆ ತೆಳುವಾದ 1.95 ಎಂಎಂ ಬೆಜಲ್ ರಚನೆಯನ್ನು ಪಡೆದುಕೊಂಡಿದೆ.

    ರೆಡ್‌ಮಿ ನೋಟ್ 7 ಪ್ರೊ ಫೋನ್ 1,080 x 2,340ಪಿ ರೆಸಲ್ಯೂಶನ್ ಮತ್ತು 19.5:9ರ ಆಕಾರ ಅನುಪಾತದೊಂದಿಗೆ 6.3-ಇಂಚಿನ LTPS ಎಲ್‌ಸಿಡಿ ಪ್ರದರ್ಶನದೊಂದಿಗೆ ಬಿಡುಗಡೆಯಾಗಿದೆ. ಕಣ್ಣಿನ ಒತ್ತಡವನ್ನು ತಪ್ಪಿಸಲು ಸನ್‌ಲೈಟ್ ಡಿಸ್‌ಪ್ಲೇ ಮತ್ತು ಓದುವಿಕೆ ವಿಶೇಷ ಮೋಡ್ ಅನ್ನು ಹೊಂದಿರುವ ಫೋನ್ ಭಾಗಶಃ ಪೂರ್ಣ ಪ್ರಮಾಣದ ಸ್ಕ್ರೀನ್ ಡಿಸ್‌ಪ್ಲೇಯಂತೆ ಹೊಂದಿದೆ.


  • ಪ್ರೊಸೆಸರ್

    ರೆಡ್ಮಿ ನೋಟ್ 7ಎಸ್ ನಲ್ಲಿ 2.2 ಗಿಗಾಹರ್ಡ್ಜ ಶಕ್ತಿಯ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 660 ಪ್ರೊಸೆಸರ್ MIUI 10 ಟಾಪ್ ಆಂಡ್ರಾಯ್ಡ್ ಪೈನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಫೋನ್ ಎರಡು ವೇರಿಯಂಟ್ ಆಯ್ಕೆಗಳಲ್ಲಿ ದೊರೆಯಲಿದ್ದು, ಅವು ಕ್ರಮವಾಗಿ 3GB RAM ಮತ್ತು 32GB ಆಂತರಿಕ ಸಂಗ್ರಹ ಹಾಗೂ 4GB RAM ಮತ್ತು 64 GB ಸ್ಟೋರೇಜ್‌ ಸ್ಥಳಾವಕಾಶವನ್ನು ಹೊಂದಿದೆ.

    ಆಕ್ಟಕೋರ್ ಸ್ನಾಪ್‌ಡ್ರಾಗನ್ 675 SoC ಪ್ರೊಸೆಸರ್ ಜೊತೆಗೆ 6GB LPDDR4X RAM ಮತ್ತು 128GB ಆಂತರಿಕ ಮೆಮೊರಿಯನ್ನು 'ರೆಡ್‌ಮಿ ನೋಟ್ 7 ಪ್ರೊ'ನಲ್ಲಿ ನೋಡಬಹುದು. ರೆಡ್‌ಮಿ ಫೋನಿನಲ್ಲಿ ಇದೇ ಮೊದಲ ಬಾರಿಗೆ 128GB ಮೆಮೊರಿಯನ್ನು ತರಲಾಗಿದ್ದು, ಅಡ್ರಿನೋ 612 ಜಿಪಿಯು ಜೊತೆಗೆ MIUI 10 ಟಾಪ್ ಆಂಡ್ರಾಯ್ಡ್ ಪೈನಲ್ಲಿ ಸ್ಮಾರ್ಟ್‌ ಕಾರ್ಯನಿರ್ವಹಣೆ ನೀಡಲಿದೆ.


  • ರಿಯರ್ ಕ್ಯಾಮೆರಾ

    ರೆಡ್ಮಿ ನೋಟ್‌ 7ಎಸ್ ನಲ್ಲಿ 48 ಮೆಗಾಪಿಕ್ಸಲ್ ಸೋನಿ IMX586 ಕ್ಯಾಮೆರಾ ಒದಗಿಸಲಾಗಿದ್ದು, ಸೆಕೆಂಡರಿ ಕ್ಯಾಮೆರಾವು 5 ಎಂಪಿ ಸಾಮರ್ಥ್ಯದಲ್ಲಿದೆ ಇನ್ನು ಸ್ಮಾರ್ಟ್‌ಫೋನ್ PDAF, EIS ಮತ್ತು AI ಪೋರ್ಟ್ರೇಟ್ ಮೋಡ್ ಬೆಂಬಲದೊಂದಿಗೆ ಬರುತ್ತದೆ ಮತ್ತು ಗುಣಮಟ್ಟದಲ್ಲಿ ಫೋಟೊಗಳನ್ನು ಸೆರೆಹಿಡಿಯಬಲ್ಲ 4x ಡೈನಾಮಿಕ್ ಶ್ರೇಣಿಯ ಸೂಪರ್‌ ಪಿಕ್ಸಲ್ ತಂತ್ರಜ್ಞಾನ ಹೊಂದಿದೆ.

    ರೆಡ್‌ಮಿ ನೋಟ್ 7 ಪ್ರೊನಲ್ಲಿ 48MP ಪ್ರಾಥಮಿಕ ಸಂವೇದಕ ಮತ್ತು 5 MP ಸೆಕೆಂಡರಿ ಸಂವೇದಕಗಳನ್ನು ನೀಡಲಾಗಿದೆ. 48MP ಕ್ಯಾಮರಾವು ಸೋನಿ IMX586 ಸಂವೇದಕವನ್ನು ಬಳಸುತ್ತಿದ್ದು, ಇದು ಸ್ಮಾರ್ಟ್‌ಫೋನಿಗೆ ಅತ್ಯುನ್ನತ ರೆಸಲ್ಯೂಶನ್ ಸಂವೇದಕವಾಗಿದೆ. ಗುಣಮಟ್ಟದ ಫೋಟೊಗಳನ್ನು ಸೆರೆಹಿಡಿಯಬಲ್ಲ 4x ಡೈನಾಮಿಕ್ ಶ್ರೇಣಿಯ ಸೂಪರ್‌ ಪಿಕ್ಸಲ್ ತಂತ್ರಜ್ಞಾನ ಹೊಂದಿದೆ


  • ಸೆಲ್ಫೀ ಕ್ಯಾಮೆರಾ!

    ರೆಡ್ಮಿ ನೋಟ್ 7ಎಸ್ ಸ್ಮಾರ್ಟ್‌ಫೋನ್ 13 ಎಂಪಿ ಎಐ ಸೆಲ್ಫಿ ಕ್ಯಾಮರಾವನ್ನು ಹೊಂದಿದೆ. ಎಐ ಭಾವಚಿತ್ರ ಸೆಲ್ಫಿ, ಸ್ಟುಡಿಯೋ ಲೈಟಿಂಗ್ ಸೆಲ್ಫಿ, ಎಐ ಫೇಸ್ ಅನ್ಲಾಕ್, ಎಐ ಬ್ಯೂಟಿಗಳೊಂದಿಗೆ 13 ಎಂಪಿ ಎಐ ಸೆಲ್ಫ್ ಕ್ಯಾಮರಾ ಅದ್ಬುತವಾಗಿದೆ. ನಿರ್ದಿಷ್ಟ ಆಪ್ಟಿಮೈಸೇಶನ್ಗಳೊಂದಿಗೆ AI ದೃಶ್ಯ ಪತ್ತೆಹಚ್ಚುವಿಕೆ ತಂತ್ರಜ್ಞಾನ ಹೊಂದಿರುವುದು ಈ ಕ್ಯಾಮೆರಾದ ವಿಶೇಷತೆಯಾಗಿದೆ.

    'ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನ್ 13 ಎಂಪಿ ಎಐ ಸೆಲ್ಫಿ ಕ್ಯಾಮರಾವನ್ನು ಹೊಂದಿದೆ. ಎಐ ಭಾವಚಿತ್ರ ಸೆಲ್ಫಿ, ಸ್ಟುಡಿಯೋ ಲೈಟಿಂಗ್ ಸೆಲ್ಫಿ, ಎಐ ಫೇಸ್ ಅನ್ಲಾಕ್, ಎಐ ಬ್ಯೂಟಿಗಳೊಂದಿಗೆ 13 ಎಂಪಿ ಎಐ ಸೆಲ್ಫ್ ಕ್ಯಾಮರಾ ಅದ್ಬುತವಾಗಿದೆ. ಇದು ಕೂಡ ನಿರ್ದಿಷ್ಟ ಆಪ್ಟಿಮೈಸೇಶನ್ಗಳೊಂದಿಗೆ AI ದೃಶ್ಯ ಪತ್ತೆಹಚ್ಚುವಿಕೆಯ ತಂತ್ರಜ್ಞಾನವನ್ನು ಹೊಂದಿದೆ.


  • ಬ್ಯಾಟರಿ ಶಕ್ತಿ

    ರೆಡ್ಮಿ ನೋಟ್ 7ಎಸ್ ಸ್ಮಾರ್ಟ್‌ಫೋನಿನಲ್ಲಿ 4000mAh ಬ್ಯಾಟರಿಯನ್ನು ನೀಡಲಾಗಿದ್ದು, 2.0 ಕ್ವಾಲ್ಕಮ್ ಕ್ವಿಕ್‌ ಚಾರ್ಜರ್‌(10w) ಸೌಲಭ್ಯವನ್ನು ಪಡೆದಿದೆ. ನಿರಂತರ 13 ಗಂಟೆಗಳ ವಿಡಿಯೊ ಪ್ಲೇಬ್ಯಾಕ್‌ ಸಾಮರ್ಥ್ಯ ಪಡೆದಿದೆ ಹಾಗೂ 150 ಗಂಟೆಗಳ ಮ್ಯೂಸಿಕ್ ಪ್ಲೇಬ್ಯಾಕ್ ಶಕ್ತಿ ಇದ್ದು, ಒಟ್ಟು 250 ಗಂಟೆಗಳ ಸ್ಟ್ಯಾಂಡ್‌ಬೈ ಟೈಮ್‌ ಸಾಮರ್ಥ್ಯವನ್ನು ಹೊಂದಿದೆ.

    'ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಪೋನಿನಲ್ಲಿ ಎರಡು ದಿನಗಳ ಬ್ಯಾಟರಿ ಬಾಳಿಕೆ ಬರುವಂತಹ 4000mAh ಸಾಮರ್ಥ್ಯದ ಬಿಗ್ ಬ್ಯಾಟರಿಯನ್ನು ನೀಡಲಾಗಿದೆ. ಇದು ವೇಗವಾಗಿ ಚಾರ್ಜಿಂಗ್ ಆಗಲು ಕ್ವಾಲ್ಕಾಮ್ ಕ್ವಿಕ್ ಚಾರ್ಜ್ 4.0 ಅನ್ನು ಬೆಂಬಲಿಸುತ್ತದೆ ಎಂದು ಶಿಯೋಮಿ ತಿಳಿಸಿದೆ. ಶಿಯೋಮಿ ರೆಡ್‌ಮಿ ನೋಟ್ 6 ನಲ್ಲಿ ಕ್ವಿಕ್ ಚಾರ್ಜ್ 3.0 ತಂದಿದನ್ನು ನಾವಿಲ್ಲಿ ನೋಡಬಹುದು.


  • ಕ್ಯಾಮೆರಾ ತಂತ್ರಜ್ಞಾನ!

    ಶಿಯೋಮಿ ಸೂಪರ್‌ ಪಿಕ್ಸಲ್ ಟೆಕ್ನೊಲಜಿ ಪರಿಚಯಿಸಿದ್ದು, ಈ ತಂತ್ರಜ್ಞಾನದಲ್ಲಿ ಝೂಮ್‌ ಮಾಡಿದರು ಫೋಟೊ ಪಿಕ್ಸಲ್ ಒಡೆಯುವುದಿಲ್ಲ.ಈ ಫೋನ್‌ AI ತಂತ್ರಜ್ಞಾನ ನೆರವಿನಿಂದ ಮಂದಬೆಳಕಿನಲ್ಲೂ ಉತ್ತಮ ಬ್ರೈಟ್‌ನೆಸ್ ಕಂಡುಕೊಳ್ಳಲಿ ಎಂದು ಶಿಯೋಮಿ ತಿಳಿಸಿದೆ.ರಾತ್ರಿವೇಳೆಯಲ್ಲಿ ನೈಟ್‌ಮೋಡ್‌ ಆಯ್ಕೆಯು ಹೆಚ್ಚು ಪರಿಣಾಮಕಾರಿಯಾಗಿ ಚಿತ್ರಗಳನ್ನು ಸೆರೆಹಿಡಿಯಲಿದೆ.

    ರೆಡ್‌ಮಿ ನೋಟ್ 7 ಪ್ರೊ ಸಂವೇದಕವು 4 ಪಿಕ್ಸೆಲ್‌ಗಳನ್ನು 1 ಸೂಪರ್ ಪಿಕ್ಸೆಲ್‌ಗೆ ವಿಲೀನಗೊಳಿಸುವ ಮೂಲ ಕಡಿಮೆ ಬೆಳಕಿನಲ್ಲೂ ಅತ್ಯುತ್ತಮ ಚಿತ್ರಗಳನ್ನು ಚಿತ್ರಿಸಲಿದೆ. ಕೃತಕ ಬುದ್ದಿಮತ್ತೆ ಸಹಾಯದಿಂದ ರಾತ್ರಿ ಸಮಯದಲ್ಲೂ ಛಾಯಾಗ್ರಹಣಕ್ಕೆ ಶಕ್ತವಾಗಿದೆ. AI ಪೋರ್ಟ್ರೇಟ್ 2.0 ಹೊಂದಿರುವ ಕ್ಯಾಮೆರಾ ಬೊಕೆ ಚಿತ್ರಗಳು, 4K ವೀಡಿಯೋ ರೆಕಾರ್ಡಿಂಗ್ ಫೀಚರ್ಸ್ ಹೊಂದಿದೆ.


  • ಲಭ್ಯತೆ ಮತ್ತು ಬೆಲೆ

    ರೆಡ್ಮಿ ನೋಟ್ 7ಎಸ್ ಎರಡು ಮಾದರಿಗಳಲ್ಲಿ ಲಾಂಚ್‌ ಆಗಿದ್ದು, 3GB RAM ಮತ್ತು 32GB ವೇರಿಯಂಟ್ ಬೆಲೆಯು 10,999ರೂ.ಗಳು ಆಗಿದೆ ಹಾಗೂ 4GB RAM ಮತ್ತು 64 GB ಬೆಲೆಯು 12,999 ಆಗಿದೆ. ಇದೇ ಮೇ 23ರಂದು ಮೊದಲ ಸೇಲ್ ಆರಂಭವಾಗಲಿದ್ದು, ಫ್ಲಿಪ್‌ಕಾರ್ಟ್ ಮತ್ತು ಶಿಯೋಮಿ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ

    ರೆಡ್‌ಮಿ ನೋಟ್ 7 ಪ್ರೊ ಎರಡು ವೆರಿಯಂಟ್‌ಗಳಲ್ಲಿ ಮೊಬೈಲ್ ಮಾರುಕಟ್ಟೆಗೆ ಲಾಂಚ್ ಆಗಿದ್ದು, 4GB RAM ಮತ್ತು 64GB ಆಂತರಿಕ ಮೆಮೊರಿಯನ್ನು ಹೊಂದಿರುವ ' ಫೋನಿನ ಬೆಲೆ 13,999 ರೂ.ಗಳಾಗಿವೆ. ಹಾಗೆಯೇ, 6GB RAM ಮತ್ತು 128GB ಆಂತರಿಕ ಮೆಮೊರಿಯ ನೋಟ್ 7 ಪ್ರೊ ಫೋನ್ ಬೆಲೆ 16,999 ರೂ.ಗಳಾಗಿವೆ. ಇದು ಈಗಾಗಲೇ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದೆ.


  • ಯಾವುದು ಬೆಸ್ಟ್?

    ರೆಡ್ಮಿ ನೋಟ್ 7ಎಸ್ ಮತ್ತು ರೆಡ್‌ಮಿ ನೋಟ್ 7 ಪ್ರೊ ನಡುವಿನ ಫೀಚರ್ಸ್‌ಗಳನ್ನು ನೋಡಿದಾಗ ಕೆಲವೇ ಕೆಲವು ವ್ಯತ್ಯಾಸಗಳನ್ನು ಗುರುತಿಸಿಸಬಹುದು. ರೆಡ್‌ಮಿ ನೋಟ್ 7 ಪ್ರೊ ಪೋನ್ ಪ್ರೊಸೆಸರ್, ಕ್ವಿಕ್ ಚಾರ್ಜರ್, RAM ಮತ್ತು ಮೆಮೊರಿ ಆಯ್ಕೆಗಳಲ್ಲಿ ಸ್ವಲ್ಪ ಮುಂದಿರುವುದರಿಂದ, ಈ ಎರಡೂ ಸ್ಮಾರ್ಟ್‌ಪೋನ್‌ಗಳಲ್ಲಿ ರೆಡ್‌ಮಿ ನೋಟ್ 7 ಪ್ರೊ ಬೆಸ್ಟ್ ಎನ್ನಬಹುದು. ಆದರೆ, ನೀವು ಕಡಿಮೆ ಬೆಲೆಯಲ್ಲಿ 48 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ ಫೋನ್ ಖರೀದಿಸಬೇಕು ಎಂದರೆ ಮಾತ್ರ ರೆಡ್ಮಿ ನೋಟ್ 7ಎಸ್ ನಿಮ್ಮ ಆಯ್ಕೆಯಾಗಬಹುದು.
    ಏಕೆಂದರೆ, ರೆಡ್‌ಮಿ ನೋಟ್ 7 ಮತ್ತು ರೆಡ್‌ಮಿ ನೋಟ್ 7 ಪ್ರೊ ಎರಡು ಸ್ಮಾರ್ಟ್‌ಪೋನ್‌ಗಳನ್ನು ಮಿಕ್ಸ್ ಮಾಡಿರುವ ಶಿಯೋಮಿ ಕಂಪೆನಿ ಇಲ್ಲೊಂದು ಗೇಮ್ ಪ್ಲ್ಯಾನ್ ಮಾಡಿದೆ. 10 ಸಾವಿರ ರೂಪಾಯಿಗಳಲ್ಲಿ ರೆಡ್ಮಿ ನೋಟ್ 7ಎಸ್ ಅನ್ನು ಬಿಡುಗಡೆ ಮಾಡಿ ರೆಡ್‌ಮಿ ನೋಟ್ 7 ಗಿಂತ ಹೆಚ್ಚು. ಹಾಗೆಯೇ ರೆಡ್‌ಮಿ ನೋಟ್ 7 ಪ್ರೊಗಿಂತ ಕಡಿಮೆಯಾಗುವಂತೆ ನೋಡಿಕೊಂಡಿದೆ. ಅಂದರೆ, ರೆಡ್‌ಮಿ ನೋಟ್ 7 ಗಿಂತ ರೆಡ್‌ಮಿ ನೋಟ್ 7ಎಸ್ ಬೆಸ್ಟ್ ಆದರೆ ರೆಡ್‌ಮಿ ನೋಟ್ 7ಎಸ್ ಗಿಂತ ರೆಡ್‌ಮಿ ನೋಟ್ 7 ಪ್ರೊ ಬೆಸ್ಟ್ ಸ್ಮಾರ್ಟ್‌ಫೋನ್ ಆಗಿದೆ.! ಬೆಲೆಯ ವಿಷಯದಲ್ಲೂ ಅಷ್ಟೇ.!




ರೆಡ್ಮಿ ನೋಟ್ 7 ಮತ್ತು ರೆಡ್ಮಿ ನೋಟ್ 7 ಪ್ರೊ ಯಶಸ್ಸಿನ ನಂತರ ರೆಡ್ಮಿ ನೋಟ್ 7ಎಸ್ ಹೆಸರಿನ ಮತ್ತೊಂದು ಸ್ಮಾರ್ಟ್‌ಫೋನ್‌ ಒಂದನ್ನು ಶಿಯೋಮಿ ಕಂಪೆನಿ ನೆನ್ನೆಯಷ್ಟೇ ಲಾಂಚ್ ಮಾಡಿದೆ. 48ಎಂಪಿ ಕ್ಯಾಮೆರಾ ಸಾಮರ್ಥ್ಯದ ರೆಡ್ಮಿ ನೋಟ್ 7ಎಸ್ ಫೋನ್‌ ಬೆಲೆ ಕೇವಲ 10,999ರೂ.ಗಳಿಂದ ಆರಂಭವಾಗಿದ್ದು, ತನ್ನದೇ ಸರಣಿಯ ರೆಡ್ಮಿ ನೋಟ್ 7 ಪ್ರೊ ಹಾಗೂ ರೆಡ್ಮಿ ನೋಟ್ 7 ಎರಡೂ ಸ್ಮಾರ್ಟ್‌ಫೋನ್‌ಗಳಿಗೆ ಸೆಡ್ಡುಹೊಡೆಯುತ್ತಿದೆ. ಇದರಿಂದಾಗಿ ಶಿಯೋಮಿ ಗ್ರಾಹಕರಿಗೆ ಯಾವ ಸ್ಮಾರ್ಟ್‌ಫೋನ್ ಖರೀದಿಸಬೇಕು ಎಂಬ ಗೊಂದಲ ಮೂಡಿದೆ ಎನ್ನಬಹುದು.

ಹಾಗಾಗಿ, ಇಂದಿನ ಲೇಖನದಲ್ಲಿ ರೆಡ್ಮಿ ನೋಟ್ 7 ಪ್ರೊ ಮತ್ತು ರೆಡ್ಮಿ ನೋಟ್ 7ಎಸ್ ಸ್ಮಾರ್ಟ್‌ಫೋನ್‌ಗಳ ವ್ಯತ್ಯಾಸಗಳ ಬಗ್ಗೆ ನಾವು ತಿಳಿದುಕೊಳ್ಳೋಣ. 48ಎಂಪಿ ಕ್ಯಾಮೆರಾ ಸಾಮರ್ಥ್ಯದ ರೆಡ್ಮಿ ನೋಟ್ 7ಎಸ್ ಸ್ಮಾರ್ಟ್‌ಫೋನ್‌ 10,999ರೂ.ಗಳಿಂದ ಆರಂಭವಾಗಿದ್ದರೆ, ಇದೇ ಕ್ಯಾಮೆರಾ ಸಾಮರ್ಥ್ಯದ ರೆಡ್ಮಿ ನೋಟ್ 7 ಪ್ರೊ ಬೆಲೆ 13,999 ರೂ.ಗಳಿಂದ ಆರಂಭವಾಗಿದೆ. ಅಂದರೆ ಅತ್ಯಂತ ಕಡಿಮೆ ಬೆಲೆಯಲ್ಲಿ 48ಎಂಪಿ ಕ್ಯಾಮೆರಾ ಸಾಮರ್ಥ್ಯವನ್ನು ಹೊಂದಿದ್ದ ಮೊಬೈಲ್ ಎಂಬ ಪಟ್ಟವನ್ನು ನೋಟ್ 7 ಪ್ರೊ ನಿಂದ ಇದೀಗ 'ರೆಡ್ಮಿ ನೋಟ್ 7ಎಸ್' ಕಿತ್ತುಕೊಂಡಿದೆ.

ಚೀನಾದಲ್ಲಿ ರೆಡ್‌ಮಿ ನೋಟ್ 7 ಮಾದರಿಯಾಗಿ ಬಿಡುಗಡೆಯಾಗಿದ್ದ ಸ್ಮಾರ್ಟ್‌ಫೋನ್ ಭಾರತದಲ್ಲಿ ರೆಡ್ಮಿ ನೋಟ್ 7ಎಸ್ ಆಗಿ ಕಾಲಿಟ್ಟಿದ್ದು, ಬಹುತೇಕ ರೆಡ್ಮಿ ನೋಟ್ 7 ಪ್ರೊ ಹೊಂದಿರುವ ಫೀಚರ್ಸ್ ಅನ್ನು ಒಳಗೊಂಡಿದೆ. ಹಾಗಾದರೆ, ರೆಡ್‌ಮಿ ನೋಟ್ 7 ಪ್ರೊ ಮತ್ತು ರೆಡ್‌ಮಿ ನೋಟ್ 7 ಎಸ್ ಸ್ಮಾರ್ಟ್‌ಫೋನ್‌ಗಳ ನಡುವೆ ಇರುವ ವ್ಯತ್ಯಾಸಗಳು ಯಾವುವು?, ಶಿಯೋಮಿ ಆಡಿರುವ ಗೇಮ್ ಪ್ಲ್ಯಾನ್ ಏನು? ಎರಡು ಫೋನ್‌ಗಳಲ್ಲಿ ಯಾವ ಸ್ಮಾರ್ಟ್‌ಫೋನ್ ಖರೀದಿ ಒಳ್ಳೆಯದು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

   
 
ಹೆಲ್ತ್