Back
Home » ಆರೋಗ್ಯ
ದೇಹದ ಯಾವ ಅಂಗಕ್ಕೆ ಬೇಗನೆ ವಯಸ್ಸಾಗುವುದು ಗೊತ್ತೇ?
Boldsky | 21st May, 2019 05:05 PM
 • ಕುತ್ತಿಗೆ ಮತ್ತು ಕತ್ತು

  ಕುತ್ತಿಗೆ ಮತ್ತು ಕತ್ತು ಬಿಸಿಲಿಗೆ ಒಡ್ಡಲ್ಪಡುವಂತಹ ದೇಹದ ಅತೀ ಪ್ರಮುಖ ಭಾಗವಾಗಿದೆ. ಬಿಸಿಲಿನಲ್ಲಿ ವಿಕಿರಣಗಳು ಇರುವ ಕಾರಣದಿಂದಾಗಿ ಇದು ಕುತ್ತಿಗೆ ಮತ್ತು ಕತ್ತಿಗೆ ಹಾನಿ ಉಂಟು ಮಾಡುವುದು. ಮುಖದ ಮೇಲೆ ಇರುವಂತಹ ಚರ್ಮಕ್ಕಿಂತ ಕುತ್ತಿಗೆ ಬಳಿ ಇರುವಂತಹ ಚರ್ಮವು ತುಂಬಾ ತೆಳುವಾಗಿ ಇರುವುದು ಎಂದು ತಿಳಿಯಬೇಕು ಮತ್ತು ಇದರಿಂದಾಗಿ ವೇಗವಾಗಿ ಅದಕ್ಕೆ ವಯಸ್ಸಾಗುವುದು. ಈ ಭಾಗಕ್ಕೆ ದಿನಾಲೂ ಲೋಷನ್ ಮತ್ತು ಮೊಶ್ಚಿರೈಸರ್ ಹತ್ತಿಕೊಳ್ಳಿ. ಇನ್ನು ಕುತ್ತಿಗೆಯ ಸುತ್ತ ಕಪ್ಪಾಗಿದ್ದರೆ ಇಂತಹ ಮನೆಮದ್ದುಗಳನ್ನು ಒಮ್ಮೆ ಪ್ರಯತ್ನಿಸಿ ನೋಡಿ... *ಲಿಂಬೆ ಮತ್ತು ರೋಸ್ ವಾಟರ್ ಒಂದು ಚಮಚದಷ್ಟು ಲಿಂಬೆ ರಸ ಮತ್ತು ರೋಸ್ ವಾಟರ್ ಅನ್ನು ತೆಗೆದುಕೊಳ್ಳಿ. ಇದನ್ನು ಚೆನ್ನಾಗಿ ಮಿಶ್ರ ಮಾಡಿಕೊಂಡು ಹತ್ತಿಯ ಉಂಡೆಯಿಂದ ಕುತ್ತಿಗೆಯ ಕಪ್ಪು ವರ್ತುಲದ ಭಾಗಕ್ಕೆ ಹಚ್ಚಿಕೊಳ್ಳಿ. ರಾತ್ರಿ ಪೂರ್ತಿ ಹಾಗೆಯೇ ಬಿಡಿ ಮರುದಿನ ಇದನ್ನು ತೊಳೆದುಕೊಳ್ಳಿ.
  *ತಾಜಾ ಲಿಂಬೆ ರಸ ಮತ್ತು ನೈಸರ್ಗಿಕ ಜೇನು ನಿಮ್ಮ ಬಳಿ ಇದ್ದರೆ ಆಯಿತು. ಲಿಂಬೆ ರಸಕ್ಕೆ ಹನಿಗಳಷ್ಟು ಜೇನನ್ನು ಬೆರೆಸಿಕೊಳ್ಳಿ. ಇದನ್ನು ಚೆನ್ನಾಗಿ ಮಿಶ್ರ ಮಾಡಿಕೊಂಡು ಕುತ್ತಿಗೆಯ ಭಾಗಕ್ಕೆ ಹಚ್ಚಿಕೊಳ್ಳಿ. 20-25 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ತಣ್ಣೀರಿನಿಂದ ಈ ಭಾಗವನ್ನು ತೊಳೆದುಕೊಳ್ಳಿ. ಕುತ್ತಿಗೆಯ ಕಪ್ಪು ವರ್ತುಲವನ್ನು ಹೋಗಲಾಡಿಸಲು ಇದು ಸಹಕಾರಿ.
  *ಲಿಂಬೆ ರಸಕ್ಕೆ ಟೊಮೇಟೊ ರಸವನ್ನು ಸೇರಿಸಿಕೊಳ್ಳಿ. ಕಪ್ಪಾಗಿರು ಭಾಗಕ್ಕೆ ಇದನ್ನು ಹಚ್ಚಿಕೊಳ್ಳಿ ನಂತರ 30-35 ನಿಮಿಷಗಳ ಕಾಲ ಹಾಗೆಯೇ ಬಿಡಿ. ದಿನಕ್ಕೆ ಎರಡು ಬಾರಿ ಈ ವಿಧಾನವನ್ನು ಅನುಸರಿಸಿಕೊಂಡು ಉತ್ತಮ ಫಲಿತಾಂಶ ಪಡೆದುಕೊಳ್ಳಿ.


 • ಕೈಗಳು

  ವಯಸ್ಸಾದ ವ್ಯಕ್ತಿಯ ಕೈಗಳನ್ನು ಯಾವತ್ತಾದರೂ ನೀವು ನೋಡಿದ್ದೀರಾ? ಇದು ಕಾಗದದಂತೆ ಅಥವಾ ತುಂಬಾ ನಯವಾಗಿ ನೆರಿಗೆಯಿಂದ ಕೂಡಿರುವುದು. ಯಾಕೆಂದರೆ ಕೈಗಳು ತಮ್ಮ ಸ್ಥಿತಿಸ್ಥಾಪಕತ್ವ ಕಳೆದುಕೊಂಡಿರುವುದು. ಹದಿಹರೆಯದಲ್ಲಿ ಕೈಯ ಚರ್ಮದ ಕೆಳಭಾಗದಲ್ಲಿ ಇದ್ದ ಕೊಬ್ಬಿನ ಪದರವು ಮಾಯ ವಾಗಿರುವುದು ಮತ್ತು ಇದರಿಂದಾಗಿ ಕೈಗಳ ಚರ್ಮವು ಜೋತು ಬಿದ್ದಂತೆ ಆಗುವುದು. ಇದಕ್ಕಾಗಿ ನೀವು ಸನ್ ಸ್ಕ್ರೀನ್ ಮತ್ತು ಮೊಶ್ಚಿರೈಸರ್ ಹಚ್ಚಿಕೊಳ್ಳಬೇಕು.


 • ಮುಖ

  ವಯಸ್ಸಾಗುತ್ತಾ ಇರುವಂತೆ ಮುಖದಲ್ಲಿ ಸ್ಥಿತಿಸ್ಥಾಪಕತ್ವ ಇರುವುದಿಲ್ಲ. ಇದರಿಂದಾಗಿ ನೆರಿಗೆ ಹಾಗೂ ಚರ್ಮವು ಜೋತು ಬಿದ್ದಂತೆ ಆಗುವುದು. ಮುಖದಲ್ಲಿನ ಮಾಂಸವು ಕುಗ್ಗುವುದು ಮತ್ತು ಅದರಲ್ಲೂ ಕಣ್ಣುಗಳು ಮತ್ತು ಚರ್ಮವು ತಮ್ಮ ಬಿಗಿತ್ವ ಕಳೆದುಕೊಳ್ಳುವುದು. ಮುಖವು ಹೆಚ್ಚು ಬಿಸಿಲಿಗೆ ಒಡ್ಡಲ್ಪಡುವ ಕಾರಣದಿಂದಾಗಿ ಕಲೆಗಳು ಮತ್ತು ವಯಸ್ಸಾಗುವ ಲಕ್ಷಣಗಳು ಮುಡುವುದು. ವಯಸ್ಸಾಗುತ್ತಾ ಇರುವ ವ್ಯಕ್ತಿಗಳಲ್ಲಿ ಯಾವಾಗಲೂ ನೆರಿಗೆ ಮತ್ತು ಕಣ್ಣು ಹಾಗೂ ತುಟಿಗಳು ನಿಸ್ತೇಜವಾಗುವುದು. ಇದಕ್ಕಾಗಿ ನೀವು ಕೆಲವೊಂದು ವಯಸ್ಸಾಗುವ ಲಕ್ಷಣ ತಡೆಯುವಂತಹ ಕ್ರೀಮ್ ಗಳನ್ನು ಬಳಕೆ ಮಾಡಬೇಕು. ಪ್ರತಿನಿತ್ಯ ಸನ್ ಸ್ಕ್ರೀನ್ ಲೋಷನ್ ಬಳಸಿಕೊಳ್ಳಿ. ಪ್ರತಿನಿತ್ಯವು ಸನ್ ಸ್ಕ್ರೀನ್ ಮತ್ತು ಮೊಶ್ಚಿರೈಸರ್ ಹಚ್ಚಿಕೊಂಡರೆ ಆಗ ವಯಸ್ಸಾಗುವ ಲಕ್ಷಣಗಳನ್ನು ತಡೆಯಬಹುದು. ಇಂತಹ ನೈಸರ್ಗಿಕ ಟಿಪ್ಸ್ ಅನ್ನು ಪ್ರಯತ್ನಿಸಿ ನೋಡಿ...


 • ಮುಖ

  *ಕಡ್ಲೆಹಿಟ್ಟು ಮತ್ತು ಕೊಂಚ ಹಸಿಹಾಲನ್ನು ಬೆರೆಸಿ ಲೇಪನ ತಯಾರಿಸಿ ಮುಖದ ಮೇಲೆ ಹಚ್ಚಿಕೊಂಡು ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಸತ್ತಜೀವಕೋಶಗಳು ಸುಲಭವಾಗಿ ನಿವಾರಣೆಯಾಗಿ ಕಾಂತಿಯುಕ್ತ ಚರ್ಮ ನಿಮ್ಮದಾಗುತ್ತದೆ.
  *ಒಂದು ಟೀ ಬ್ಯಾಗ್ ಹಸಿರು ಟೀ ಅನ್ನು ಕೊಂಚ ನೀರಿನಲ್ಲಿ ಚೆನ್ನಾಗಿ ಕುದಿಸಿ ಇದಕ್ಕೆ ಕೆಲವು ಹನಿ ಜೇನನ್ನು ಬೆರೆಸಿ ಉಗುರುಬೆಚ್ಚಗಾಗುವಷ್ಟು ತಣಿಸಿ. ಈ ನೀರನ್ನು ಹತ್ತಿಯುಂಡೆಯಲ್ಲಿ ಅದ್ದಿ ಈಗತಾನೇ ತೊಳೆದುಕೊಂಡ ಮುಖವನ್ನು ಒರೆಸಿಕೊಳ್ಳಿ. ಬಿಸಿಲಿನಿಂದ ಚರ್ಮ ಕಪ್ಪಗಾಗಿದ್ದರೆ ಈ ವಿಧಾನ ಅತ್ಯುತ್ತಮವಾಗಿದೆ. ಲಿಂಬೆಯ ಬಿಳಿಚುಕಾರಕ ಗುಣ ಮತ್ತು ಜೇನಿನ ತಂಪೊಗೊಳಿಸುವ ಗುಣಗಳು ಒಟ್ಟಾಗಿ ಚರ್ಮದ ಬಣ್ಣವನ್ನು ಸಹಜವರ್ಣದತ್ತ ತರಲು ನೆರವಾಗುತ್ತವೆ. ಇದರಿಂದ ಕಳೆಗುಂದಿದ್ದ ಚರ್ಮ ಮತ್ತೆ ಕಾಂತಿ ಪಡೆಯುತ್ತದೆ. ಸಮಪ್ರಮಾಣದಲ್ಲಿ ಲಿಂಬೆಸರ ಮತ್ತು ಜೇನನ್ನು ಬೆರೆಸಿ ಕೊಂಚವೇ ಉಗುರುಬೆಚ್ಚನೆಯ ನೀರಿನಲ್ಲಿ ಬೆರೆಸಿ ಹತ್ತಿಯಿಂಡೆಯಿಂದ ಒರೆಸಿಕೊಳ್ಳುವ ಮೂಲಕ ಈ ಕಾಂತಿಯನ್ನು ಪಡೆಯಬಹುದು.
ವಯಸ್ಸು ಎನ್ನುವು ಮನುಷ್ಯನಿಗೆ ಒಂದು ಶಾಪ ಎಂದು ಹೇಳಬಹುದು. ದೇಹದಲ್ಲಿ ನೆರಿಗೆಗಳು ಕಾಣಿಸಿಕೊಳ್ಳುವ ತನಕ ಎಲ್ಲವೂ ಸರಿಯಾಗಿಯೇ ಇರುವುದು ಅಥವಾ ಕೂದಲು ಬಿಳಿಯಾಗಲು ಆರಂಭಿಸಿದ ವೇಳೆ ವಯಸ್ಸಾಗಲು ಆರಂಭವಾಗಿದೆ ಎಂದು ಹೇಳಬಹುದು. ದೇಹದ ಯಾವ ಭಾಗಕ್ಕೆ ಬೇಗನೆ ವಯಸ್ಸಾಗುವುದು ಎಂದು ನಿಮಗೆ ತಿಳಿದಿದೆಯಾ? ವಯಸ್ಸಾಗುವುದರೊಂದಿಗೆ ವ್ಯವಹರಿಸುವುದು ತುಂಬಾ ಕಠಿಣ. ಯಾಕೆಂದರೆ ಮನುಷ್ಯನಿಗೆ ವಯಸ್ಸಾಗುತ್ತಾ ಇದೆ ಎಂದು ತಿಳಿದ ಮೇಲೆ ಹಲವಾರು ರೀತಿಯ ಚಿಂತೆಗಳು ಮೂಡುವುದು.

ಹೀಗೆ ನಮ್ಮ ದೇಹದಲ್ಲಿ ಕೆಲವೊಂದು ಭಾಗಗಳಿಗೆ ಕೂಡ ಬೇಗನೆ ವಯಸ್ಸಾಗುವುದು. ನೀವು 25ರ ಹರೆಯಕ್ಕೆ ಬರುತ್ತಾ ಇರುವಂತೆ ನಿಮಗಿಂತ ಹತ್ತು ವರ್ಷ ಅಧಿಕ ವಯಸ್ಸಿನವರು ಖಿನ್ನತೆ ಹಾಗು ಬೇಸರ ವ್ಯಕ್ತಪಡಿಸುವುದನ್ನು ನೋಡಬಹುದು. ನಿಮ್ಮಲ್ಲಿ ಈಗ ಆ ರೀತಿಯ ಆಕರ್ಷಣೆ ಮತ್ತು ಯೌವನವು ಇಲ್ಲ ಎಂದು ಭಾವಿಸಬಹುದು. ನಿಮ್ಮ ಯೌವನ ಮರಳಿ ಪಡೆಯಲು ಸೂಪರ್ ಮಾರ್ಕೆಟ್ ಗಳಿಗೆ ಭೇಟಿ ನೀಡಿ ಮಾತ್ರೆ ಅಥವಾ ಕ್ರೀಮ್ ಖರೀದಿ ಮಾಡಬಹುದು. ನಿಮ್ಮ ದೇಹದ ಯಾವ ಭಾಗಕ್ಕೆ ಬೇಗನೆ ವಯಸ್ಸಾಗುವುದು ಎಂದು ನಾವು ಇಲ್ಲಿ ತಿಳಿಸಲಿದ್ದೇವೆ. ದೇಹದ ಬೇರೆ ಯಾವುದೇ ಭಾಗಕ್ಕಿಂತಲೂ ಚರ್ಮಕ್ಕೆ ತುಂಬಾ ವೇಗವಾಗಿ ವಯಸ್ಸಾಗುವುದು ಎಂದು ಹೇಳಬಹುದು....

 
ಹೆಲ್ತ್