Back
Home » ಆರೋಗ್ಯ
ಈ ಮಸಾಲೆಗಳನ್ನು ಆಹಾರಕ್ರಮದಲ್ಲಿ ಸೇರಿಸಿದೆರೆ, ವೈದ್ಯರಿಂದ ದೂರವಿರಬಹುದು!
Boldsky | 22nd May, 2019 11:01 AM
 • ಅರಿಶಿನ

  ಅರಿಶಿನವು ಮಸಾಲೆಯಲ್ಲಿ ಬಂಗಾರವೆಂದೇ ಹೇಳಬಹುದಾಗಿದೆ. ಯಾಕೆಂದರೆ ಇದರಲ್ಲಿ ಅಷ್ಟು ಮಟ್ಟದ ಔಷಧೀಯ ಗುಣಗಳು ತುಂಬಿದೆ. ಹಿಂದಿನಿಂದಲೂ ಅರಶಿನವನ್ನು ಔಷಧೀಯಾಗಿ ಬಳಸಿಕೊಂಡು ಬರಲಾಗುತ್ತಿದೆ. ಅರಶಿನಹಾಲು ಶೀತದ ಸಮಯದಲ್ಲಿ ನಮ್ಮ ಅಜ್ಜಿ ಅಥವಾ ತಾಯಿ ನೀಡುವಂತಹ ಮೊದಲ ಮನೆಮದ್ದು ಆಗಿದೆ. ಅರಶಿನದಲ್ಲಿ ಇರುವಂತಹ ಕರ್ಕ್ಯುಮಿನ್ ಎನ್ನುವ ಅಂಶವು ಹಲವಾರು ರೀತಿಯ ಆರೋಗ್ಯ ಗುಣಗಳನ್ನು ಹೊಂದಿದೆ. ಇದು ಟೈಪ್ 2 ಮಧುಮೇಹ ಮತ್ತು ಕೆಲವೊಂದು ರೀತಿಯ ಕ್ಯಾನ್ಸರ್ ನ್ನು ಕೂಡ ತಡೆಯುವುದು. ವಿವಿಧ ಅಧ್ಯಯನಗಳ ಪ್ರಕಾರ ಅರಿಶಿನವು ಹೃದಯದ ಕಾಯಿಲೆಯನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದು ಉರಿಯೂತದ ವಿರುದ್ಧ ಅದ್ಭುತವಾಗಿ ಹೋರಾಡುವುದು. ಈ ಎಲ್ಲಾ ಆರೋಗ್ಯ ಗುಣಗಳನ್ನು ಹೊಂದಿರುವ ಅರಶಿನವು ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬೇಕು. ಇದು ಸಂಪೂರ್ಣ ಆರೋಗ್ಯವನ್ನು ಕಾಪಾಡುವುದು.

  Most Read: ಸರ್ವಗುಣ ಸಂಪನ್ನ ಅರಿಶಿನ ಎಂಬ ಸಂಜೀವಿನಿ


 • ಶುಂಠಿ

  ಶುಂಠಿಯಲ್ಲಿ ತುಂಬಾ ಗಾಢ ಸುವಾಸನೆ ಹಾಗೂ ರುಚಿ ಇದೆ. ಇದು ಹಲವಾರು ರೀತಿಯ ಆಹಾರಕ್ಕೆ ರುಚಿ ನೀಡುವುದು ಮತ್ತು ಚಾ ದ ರುಚಿಯನ್ನು ಕೂಡ ಇದು ವೃದ್ಧಿಸುವುದು. ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಇದನ್ನು ಚಿಕಿತ್ಸೆಗಾಗಿ ಬಳಸಬಹುದು. ಇದು ವಾಕರಿಕೆಯನ್ನು ನಿಲ್ಲಿಸುವುದು. ಸಣ್ಣ ತುಂಡು ಶುಂಠಿ ತೆಗೆದುಕೊಂಡು ಅದನ್ನು ಸೇವಿಸಬೇಕು. ಇದು ವಾಕರಿಕೆ ನಿವಾರಿಸುವುದು. ಶುಂಠಿ ಸೇವನೆ ಮಾಡಿದರೆ ಎದೆ ಉರಿ ಮತ್ತು ಹೊಟ್ಟೆ ಉಬ್ಬರ ತಡೆಯಬಹುದು.


 • ಜಾಯಿಕಾಯಿ

  ಆಹಾರದ ರುಚಿ ಹೆಚ್ಚಿಸುವ ಸಲುವಾಗಿ ಜಾಯಿಕಾಯಿಯನ್ನು ಬಳಸಲಾಗುತ್ತದೆ. ಇದು ಆಹಾರದ ರುಚಿಯನ್ನು ಮತ್ತಷ್ಟು ಹೆಚ್ಚು ಮಾಡುವುದು. ಜಾಯಿಕಾಯಿ ತಿನ್ನುವುದರಿಂದ ಸಿಗುವಂತಹ ಕೆಲವೊಂದು ಆಹಾರ ಲಾಭಗಳು ಈ ರೀತಿಯಾಗಿ ಇದೆ.
  ಇದು ಗಂಟು ಮತ್ತು ಸ್ನಾಯು ನೋವಿನ ನಿವಾರಣೆಗೆ ನೆರವಾಗುವುದು.
  ಮಧುಮೇಹ ನಿವಾರಣೆಗೆ ಇದು ಸಹಕಾರಿ.
  ಸರಿಯಾಗಿ ನಿದ್ರಿಸಲು ಇದು ನೆರವಾಗುವುದು.
  ಜಾಯಿಕಾಯಿ ಸೇವಿಸುವುದರಿಂದ ಮೆದುಳಿನ ಆರೋಗ್ಯವು ಸುಧಾರಣೆ ಆಗುವುದು.
  ಜಾಯಿಕಾಯಿಯಿಂದ ಬಾಯಿಯ ದುರ್ವಾಸನೆ ತಡೆಯಬಹುದು.
  ಜಾಯಿಕಾಯಿ ಸೇವನೆಯಿಂದ ರಕ್ತದೊತ್ತಡ ನಿವಾರಣೆ ಮಾಡಬಹುದು.
  ಇದರ ಲಾಭ ಪಡೆಯಲು ನಿಮ್ಮ ಆಹಾರ ಕ್ರಮದಲ್ಲಿ ಇದನ್ನು ಮಿತವಾಗಿ ಬಳಸಿಕೊಳ್ಳಬೇಕು.

  Most Read: ಈ ಮ್ಯಾಜಿಕ್ 'ಜಾಯಿಕಾಯಿ', ಕಣ್ತುಂಬ ನಿದ್ರೆಗೆ ಸಹಕಾರಿ!


 • ಜೀರಿಗೆ

  ಜೀರಿಗೆಯು ಪ್ರತಿಯೊಂದು ಅಡುಗೆಯಲ್ಲೂ ಬಳಸುವಂತಹ ಒಂದು ಮಸಾಲೆಯಾಗಿದೆ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಮತ್ತು ಉರಿಯೂತ ಶಮನಕಾರಿ ಗುಣಗಳು ಅದ್ಭುತವಾಗಿದೆ. ಅಧ್ಯಯನಗಳ ಪ್ರಕಾರ ಜೀರಿಗೆಯಿಂದ ಗಡ್ಡೆ ಬೆಳೆಯುವುದನ್ನು ತಡೆಯಬಹುದು. ಇದು ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು ಮತ್ತು ಪಿತ್ತರಸ, ಹೊಟ್ಟೆಯ ಆಮ್ಲ ಮತ್ತು ಇತರ ಜೀರ್ಣಕ್ರಿಯೆ ಕಿಣ್ವವನ್ನು ಇದು ಉತ್ಪತ್ತಿ ಮಾಡುವುದು. ಇದು ಚರ್ಮದ ಆರೋಗ್ಯವನ್ನು ಸುಧಾರಣೆ ಮಾಡುವುದು.


 • ದಾಲ್ಚಿನ್ನಿ

  ದಾಲ್ಚಿನ್ನಿಯು ತುಂಬಾ ಪ್ರಬಲ ಮಸಾಲೆ. ಇದು ಬಲವಾದ ಸುವಾಸನೆ ಹಾಗೂ ಅದ್ಭುತ ರುಚಿ ಹೊಂದಿದೆ. ದಾಲ್ಚಿನಿಯಲ್ಲಿ ಇರುವಂತಹ ಆರೋಗ್ಯ ಲಾಭಗಳು ಎಲ್ಲರಿಗೂ ತಿಳಿದಿದೆ. ಇತ್ತೀಚಿನ ಸಮಯದಲ್ಲಿ ಇದು ಹಲವಾರು ರೋಗಗಳನ್ನು ಶಮನ ಮಾಡಿದೆ. ಇದರಲ್ಲಿ ಆಂಟಿಆಕ್ಸಿಡೆಂಟ್ ಸಮೃದ್ಧವಾಗಿದ್ದು, ಫ್ರೀ ರ್ಯಾಡಿಕಲ್ ನಿಂದ ಆಗುವ ಹಾನಿಯಿಂದ ದೇಹವನ್ನು ರಕ್ಷಿಸುವುದು. ಹೃದಯದ ಕಾಯಿಲೆಯ ಅಪಾಯದಿಂದಲೂ ಇದು ತಪ್ಪಿಸುವುದು. ದಾಲ್ಚಿನಿಯು ಹಾರ್ಮೋನ್ ಗಳನ್ನು ನೈಸರ್ಗಿಕವಾಗಿ ಸಮತೋಲನದಲ್ಲಿ ಇಡುತ್ತದೆ. ಮಧುಮೇಹಿಗಳು ದಾಲ್ಚಿನ್ನಿಯನ್ನು ತಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಂಡು ನೈಸರ್ಗಿಕವಾಗಿ ಮಧುಮೇಹದ ವಿರುದ್ಧ ಹೋರಾಡುವಂತೆ ಮಾಡಬಹುದು. ಅರ್ಥದಿಂದ ಮುಕ್ಕಾಲು ಚಮಚ ದಾಲ್ಚಿನಿ ಹುಡಿಯು ಮಧುಮೇಹದ ವಿರುದ್ಧ ಹೋರಾಡಲು ಸಾಖು. ದಾಲ್ಚಿನ್ನಿಯಿಂದ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ಸೋಂಕಿನ ವಿರುದ್ಧ ಹೋರಾಡಬಹುದು. ದಾಲ್ಚಿನ್ನಿ ಸೇವನೆಯಿಂದ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಬಹುದು.


 • ಒಣಗಿಸಿದ ಮೆಣಸು

  ಒಣಗಿಸಿದ ಕೆಂಪು ಮೆಣಸಿನ ಸೇವನೆ ಮಾಡುವುದರಿಂದ ಚರ್ಮ ಮತ್ತು ಕರುಳಿನ ಕ್ಯಾನ್ಸರ್ ಅಪಾಯ ಕಡಿಮೆ ಮಾಡಬಹುದು. ಇದು ಚಯಾಪಚಾಯ ಕ್ರಿಯೆಯಲ್ಲಿ ನೆರವಾಗುವುದು. ಕೆಂಪು ಮೆಣಸು ಹಸಿವು ಕಡಿಮೆ ಮಾಡುವ ಕಾರಣದಿಂದಾಗಿ ಅದು ಪರಿಣಾಮಕಾರಿಯಾಗಿ ತೂಕ ಇಳಿಸಲು ನೆರವಾಗುವುದು. ಕೊಬ್ಬಿನ, ಉಪ್ಪಿನ ಮತ್ತು ಸಿಹಿ ಆಹಾರಕ್ಕೆ ಬಯಕೆ ಪಡೆದಂತೆ ಇದು ತಡೆಯುವುದು. ಇದರಲ್ಲಿ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್ ಗಳು ಇವೆ.
ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರ ಇರಬಹುದು ಎನ್ನುವ ಮಾತಿದೆ. ಅದೇ ರೀತಿಯಾಗಿ ಕೆಲವೊಂದು ಮಸಾಲೆಗಳನ್ನು ತಿಂದರೆ ಅದರಿಂದ ನಮ್ಮ ಆರೋಗ್ಯಕ್ಕೆ ತುಂಬಾ ನೆರವಾಗುವುದು. ಇದು ಹಲವಾರು ಕಾಯಿಲೆ ನಿವಾರಣೆ ಮಾಡಲು ನೆರವಾಗುವುದು ಎಂದು ನಿಮಗೆ ತಿಳಿದಿದೆಯಾ? ಅಡುಗೆ ಮನೆಯಲ್ಲಿ ಇರುವಂತಹ ಹಲವಾರು ರೀತಿಯ ಮಸಾಲೆಗಳಿಂದ ನಾವು ದೀರ್ಘಕಾಲೀನ ಕಾಯಿಲೆಗಳ ಅಪಾಯವನ್ನು ತಗ್ಗಿಸಬಹುದು. ಮಸಾಲೆ ಪದಾರ್ಥಗಳು ಭಾರತದ ಪ್ರತಿಯೊಂದು ಅಡುಗೆ ಮನೆಯಲ್ಲೂ ನಮಗೆ ಕಂಡುಬರುತ್ತದೆ.

ಮಸಾಲೆಯು ಆಹಾರದ ರುಚಿ ಹೆಚ್ಚಿಸುವುದು. ಕೆಲವೊಂದು ಮಸಾಲೆಗಳಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ ಮತ್ತು ಇದು ಆರೋಗ್ಯಕಾರಿಯಾಗಿ ಜೀವನ ಸಾಗಿಸಲು ನೆರವಾಗುವುದು. ಕೆಲವೊಂದು ಮಸಾಲೆಗಳು ಆರೋಗ್ಯಕ್ಕೆ ತುಂಬಾ ನೆರವಾಗುವುದು ಮತ್ತು ವೈದ್ಯರನ್ನು ಅದು ದೂರವಿಡುವುದು. ಇಂತಹ ಮಸಾಲೆಗಳು ಯಾವುದು ಎಂದು ನೀವು ಈ ಲೇಖನದಲ್ಲಿ ತಿಳಿಯಿರಿ.

 
ಹೆಲ್ತ್