Back
Home » ಆರೋಗ್ಯ
ಆರೋಗ್ಯ ಟಿಪ್ಸ್: ಅಲರ್ಜಿ ಸಮಸ್ಯೆ ಇದ್ದರೆ, ಅರಿಶಿನ ಬಳಸಿ!
Boldsky | 22nd May, 2019 11:57 AM
 • ಅಲರ್ಜಿ ಗೆ ಅರಿಶಿನ ರಾಮಬಾಣ !!!

  ನಿಮಗೆ ಶೀತವಾಗಿದೆಯೇ ? ಸಣ್ಣ ಸಣ್ಣ ಧೂಳಿಗೂ ಸೀನು ಬರುತ್ತಿವೆಯೇ ? ಬೇರೆ ಯಾರೋ ಸೆಂಟ್ ಹಾಕಿಕೊಂಡಿದ್ದರೆ ಅದರ ವಾಸನೆ ನಿಮ್ಮ ಮೂಗಿಗೆ ಬಡಿದು ಅಲೆರ್ಜಿ ಉಂಟಾಗುತ್ತಿದೆಯೇ ? ಈ ತರಹದ ಸಮಸ್ಯೆಗಳಿಗೆ ಅನೇಕ ರೀತಿಯ ವೈದ್ಯಕೀಯ ಪ್ರಯೋಗಗಳು ಕೆಲಸಕ್ಕೆ ಬರದಿದ್ದಾಗ ನಿಮಗೆ ತಟ್ಟನೆ ನೆನಪಾಗುವುದು ನಿಮ್ಮ ಅಡುಗೆ ಮನೆಯ ಅರಿಶಿನ ಪುಡಿ. ಅಲರ್ಜಿ ಮನುಷ್ಯನಿಗೆ ಯಾವ ರೀತಿಯಲ್ಲಿ ಬೇಕಾದರೂ ಆಗಬಹುದು . ಅದಕ್ಕೆ ಹಲವು ಕಾರಣಗಳಿರಬಹುದು . ಸಿಗರೇಟಿನ ಹೊಗೆ , ರಸ್ತೆ ಬದಿಯಲ್ಲಿನ ಕೊಳಕು ವಾಸನೆ , ಇಷ್ಟವಿಲ್ಲದ ತಿಂಡಿಗಳು , ಕೆಲವು ಔಷಧಗಳು ಇತ್ಯಾದಿ . ಹೀಗೆ ಹಲವಾರು ವಸ್ತುಗಳಿಂದ ಕೂಡ ನಮಗೆ ಅಲರ್ಜಿ ಉಂಟಾಗಬಹುದು . ಇಂತಹ ವಸ್ತುಗಳು ವಾಸನೆಯ ಮೂಲಕ ಮನುಷ್ಯನ ದೇಹ ಸೇರಿದಾಗ ಹಿಸ್ಟಮಿನ್ ಅಂಶವನ್ನು ರಕ್ತ ಸಂಚಾರದ ನಡುವೆ ಬಿಡುಗಡೆ ಆಗಲು ಪ್ರೇರೇಪಿಸಿ ಲೋಳೆರಸವನ್ನು ( mucus)ಕೂಡ ಉತ್ಪತ್ತಿ ಮಾಡುತ್ತದೆ . ಇದರಿಂದ ದಮ್ಮು, ಅಸ್ತಮಾ, ಚರ್ಮದ ಮೇಲೆ ಮಚ್ಚೆಗಳು , ಗಂಟಲು ಕೆರೆತ ಮತ್ತು ಇನ್ನೂ ಹಲವು ರೀತಿಯ ಖಾಯಿಲೆಗಳು ಶುರುವಾಗುತ್ತವೆ . ಸಾವಿರಾರು ವರ್ಷಗಳ ಔಷಧೀಯ ಇತಿಹಾಸವಿರುವ ಅರಿಶಿನದಲ್ಲಿ " ಕರ್ಕ್ಯುಮಿನೋಯ್ಡ್ಸ್ " ಎಂಬ ಸಂಯುಕ್ತಗಳು ಕೂಡಿದ್ದು ಅದರಲ್ಲಿ "ಕರ್ಕ್ಯುಮಿನ್" ಅಂಶ ಬಹಳ ಉಪಯುಕ್ತವಾಗಿದೆ . ಇದರಲ್ಲಿ ಆಂಟಿ ಇಂಪ್ಲಾ ಮ್ಯಾಟೋರಿ , ಆಂಟಿ ಬ್ಯಾಕ್ಟೇರಿಯಾಲ್ ಮತ್ತು ಇನ್ನೂ ಅನೇಕ ವೈದ್ಯಕೀಯ ಗುಣಗಳಿವೆ . ಅಲರ್ಜಿ ಗುಣಮುಖವಾಗುವುದರಲ್ಲಿ ಯಾವ ರೀತಿಯಲ್ಲಿ ಅರಿಶಿನ ಬಳಸಿದರೆ ನಮಗೆ ಚೇತರಿಕೆ ಕಾಣಬಹುದು ಎಂಬುದನ್ನು ನೋಡೋಣ...


 • ಅರಿಶಿನದ ಹಾಲು

  ತಯಾರಿಸಲು ಬೇಕಿರುವ ಪದಾರ್ಥಗಳು :
  * 1 ಕಪ್ ಹಾಲು .
  * 1 ಟೀಸ್ಪೂನ್ ಜೇನು ತುಪ್ಪ .
  * 1 /2 ಟೀ ಸ್ಪೂನ್ ಅರಿಶಿನ ಪುಡಿ .
  * ಒಂದು ಚಿಟಿಕೆ ಕಾಳು ಮೆಣಸಿನ ಪುಡಿ.
  ತಯಾರು ಮಾಡುವ ವಿಧಾನ :
  ಹಾಲನ್ನು ಸ್ಟವ್ ಮೇಲೆ ಕುದಿಯಲು ಇಡಿ .ಅದಕ್ಕೆ ಅರಿಶಿನ ಪುಡಿ ಸೇರಿಸಿ ಚೆನ್ನಾಗಿ ಕುದಿಸಿ . ಒಲೆಯ ಮೇಲಿನಿಂದ ಕೆಳಗಿಳಿಸಿ ಆರಿದ ಮೇಲೆ ಅದಕ್ಕೆ ಜೇನು ತುಪ್ಪ ಮತ್ತು ಕಾಳು ಮೆಣಸಿನ ಪುಡಿಯನ್ನು ಸೇರಿಸಿ . ಉಗುರು ಬೆಚ್ಚಗಿನ ಹದಕ್ಕೆ ಆರಿದ ಮೇಲೆ ಮತ್ತೊಮ್ಮೆ ಚೆನ್ನಾಗಿ ಟಿಪಾಯಿಸಿ ಮಲಗುವ ಮುಂಚೆ ಕುಡಿಯಿರಿ. ಹಸುವಿನ ಹಾಲನ್ನು ಕುಡಿಯಲು ಅಲರ್ಜಿ ಇರುವವರು ಬಾದಾಮಿ ಹಾಲನ್ನು ಅಥವಾ ತೆಂಗಿನ ಹಾಲನ್ನು ಉಪಯೋಗಿಸಬಹುದು.
  Most Read: ಹಾಲಿಗೆ ಅರಿಶಿನ ಹಾಕಿ ಕುಡಿದರೆ ಹತ್ತಾರು ಲಾಭ


 • ಅರಿಶಿನದ ಟೀ

  ತಯಾರಿಸಲು ಬೇಕಿರುವ ಪದಾರ್ಥಗಳು :
  * 1 ಟೀಸ್ಪೂನ್ ಜೇನು ತುಪ್ಪ .
  * 1 /2 ಟೀ ಸ್ಪೂನ್ ಅರಿಶಿನ ಪುಡಿ .
  * 1 ಕಪ್ ನೀರು.
  ತಯಾರು ಮಾಡುವ ವಿಧಾನ
  *ನೀರನ್ನು ಒಲೆಯ ಮೇಲಿಟ್ಟು ಚೆನ್ನಾಗಿ ಕುದಿಸಿ . ಕುದಿಯುವ ನೀರಿಗೆ ಅರಿಶಿನ ಪುಡಿ ಸೇರಿಸಿ .
  *ಸ್ಟವ್ ನಿಂದ ಕೆಳಗಿಳಿಸಿ ಒಂದು ಗ್ಲಾಸ್ ಗೆ ಈ ಮಿಶ್ರಣವನ್ನು ಸುರಿಯಿರಿ .
  *ಸ್ವಲ್ಪ ಬಿಸಿ ಆರಿದ ಮೇಲೆ ಅದಕ್ಕೆ ಜೇನು ತುಪ್ಪ ಸೇರಿಸಿ ಚೆನ್ನಾಗಿ ಸ್ಪೂನ್ ನಲ್ಲಿ ಕಲಸಿ .
  *ದಿನಕ್ಕೆ ಎರಡು ಬಾರಿ ಅರಿಶಿನದ ಟೀ ಕುಡಿಯುವುದರಿಂದ ಅಲರ್ಜಿ ಕಡಿಮೆ ಆಗುತ್ತದೆ .


 • ಅರಿಶಿನದ ನೀರು

  ಅರಿಶಿನದ ನೀರು ಕೇವಲ ಮದುವೆಯಂತಹ ಶುಭ ಸಮಾರಂಭದಲ್ಲಿ ಮಾತ್ರ ಉಪಯೋಗಕ್ಕೆ ಬರದೇ ಅಲರ್ಜಿ ಕಡಿಮೆ ಮಾಡುವುದರಲ್ಲೂ ತನ್ನ ಪ್ರಾಬಲ್ಯ ಮೆರೆದಿದೆ .
  ತಯಾರಿಸಲು ಬೇಕಿರುವ ಪದಾರ್ಥಗಳು:
  *1 ಕಪ್ ನೀರು .
  *1 /2 ಟೀ ಸ್ಪೂನ್ ಅರಿಶಿನ ಪುಡಿ
  ತಯಾರು ಮಾಡುವ ವಿಧಾನ
  *ಸುಲಭವಾಗಿ ಅರಿಶಿನದ ಪುಡಿಯನ್ನು ನೀರಿಗೆ ಹಾಕಿ ಚೆನ್ನಾಗಿ ಕಲಸಿ ನಂತರ ಶೋಧಿಸಿ ದಿನಕ್ಕೆ ಒಂದು ಬಾರಿಯಂತೆ ಸೇವಿಸಿ .
  *ಆಪಲ್ ಸೈಡರ್ ವಿನೆಗರ್ ಜೊತೆ ಅರಿಶಿನ ಪುಡಿ :
  ತಯಾರಿಸಲು ಬೇಕಿರುವ ಪದಾರ್ಥಗಳು
  * 1 ಚಿಕ್ಕ ಅರಿಶಿನ ಕೊಂಬಿನ ಚೂರು .
  * 1 ಟೀ ಸ್ಪೂನ್ ಲೆಮನ್ ಝೆಸ್ಟ್ .
  * 2 ಟೀ ಸ್ಪೂನ್ ಆಪಲ್ ಸೈಡರ್ ವಿನೆಗರ್ .
  * 1/4 ಕಪ್ ಜೇನು ತುಪ್ಪ
  ತಯಾರು ಮಾಡುವ ವಿಧಾನ
  *ಅರಿಶಿನ ಕೊಂಬನ್ನು ಮಿಕ್ಸರ್ ನಲ್ಲಿ ಚೆನ್ನಾಗಿ ಪುಡಿ ಮಾಡಿ . ಅದಕ್ಕೆ ಜೇನು ತುಪ್ಪ , ಆಪಲ್ ಸೈಡರ್ ವಿನೆಗರ್ ಮತ್ತು ಲೆಮನ್ ಝೆಸ್ಟ್ ಅನ್ನು ಸೇರಿಸಿ ಚೆನ್ನಾಗಿ ಕಲಸಿ
  *ನಂತರ ಒಂದು ಏರ್ ಟೈಟ್ ಕಂಟೇನರ್ ನಲ್ಲಿ ಹಾಕಿ ಮುಚ್ಚಳ ಮುಚ್ಚಿಡಿ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಮಿಶ್ರಣವನ್ನು 1 ಟೀ ಸ್ಪೂನ್ ನಷ್ಟು ಸೇವಿಸಿ.
  Most Read:ಅರಿಶಿನ ಬೆರೆಸಿದ ನೀರು: ತಯಾರಿಸುವ ವಿಧಾನ ಹಾಗೂ ಆರೋಗ್ಯ ಪ್ರಯೋಜನಗಳು


 • ಕೆಲವು ವಿಶೇಷವಾದ ಗಮನಿಸುವಂತಹ ವಿಷಯಗಳು

  *ಯಾವಾಗಲೂ ಒಳ್ಳೆಯ ಫಲಿತಾಂಶಕ್ಕಾಗಿ ಆರ್ಗಾನಿಕ್ ಅರಿಶಿಣವನ್ನೇ ಬಳಸಿ .
  *ಅರಿಶಿನ ಔಷಧೀಯ ರೀತಿಯಲ್ಲಿ ಉಪಯೋಗಿಸಿದರೆ ಯಾವ ಸಮಸ್ಯೆಯೂ ಆಗುವುದಿಲ್ಲ . ಆದರೂ ಕೆಲವೊಮ್ಮೆ ಅತಿಯಾದ ಸೇವನೆಯಿಂದ ಹೊಟ್ಟೆ ಕೆಟ್ಟಂತಾಗುವುದು, ವಾಕರಿಕೆ , ತಲೆತಿರುಗುವುದು ಮತ್ತು ಭೇಧಿ ಯಂತಹ ಸಮಸ್ಯೆಗಳು ಎದುರಾಗಬಹುದು .
  *ಗರ್ಭಿಣಿಯರು ಈ ಪ್ರಯೋಗಗಳನ್ನು ಕೈಗೊಳ್ಳುವ ಮುಂಚೆ ಒಮ್ಮೆ ನುರಿತ ಆರೋಗ್ಯ ತಜ್ಞರನ್ನು ಸಂಪರ್ಕಿಸುವುದು ಒಳ್ಳೆಯದು
  *ಒಂದು ವೇಳೆ ನಿಮಗೆ ರಕ್ತ ಹೆಪ್ಪು ಗಟ್ಟುವ ಅಥವಾ ಗಾಲ್ ಬ್ಲಾಡರ್ ನ ಸಮಸ್ಯೆ ಇದ್ದರೆ ಖಂಡಿತ ಮೇಲೆ ಹೇಳಿದ ಎಲ್ಲ ಪ್ರಯೋಗಗಳಿಂದ ದೂರವಿರಿ .
ಅರಿಶಿನ ಶುಭ ಸಮಾರಂಭಗಳಿಗೂ ,ರುಚಿಯಾದ ಅಡುಗೆಗೂ ಮತ್ತು ಆರೋಗ್ಯದ ವಿಷಯದಲ್ಲೂ ತನ್ನದೇ ಆದ ಮೇಲುಗೈ ಸಾಧಿಸಿದೆ. ಅರಿಶಿಣದ ಗುಣಲಕ್ಷಣಗಳೇ ಅಂತಹುದು. ಎಲ್ಲವನ್ನೂ ತೂಗಿ ಅಳೆದರೆ ಅರಿಶಿನ ಒಂದು ಶುಭ ಸಂಕೇತವಾಗಿದೆ. ಹಳೆಯ ಕಾಲದಿಂದಲೂ ತನ್ನ ಸ್ವಭಾವದಿಂದ ಎಲ್ಲರ ತನು ಮನ ಗೆದ್ದಿರುವ ಅರಿಶಿನ ಪಂಡಿತೋತ್ತಮರಿಂದ ಔಷಧಿಗೆ ಬಹಳ ಉಪಯೋಗವಾಗುತ್ತಿತ್ತು.

ಜಗತ್ತು ವೈಜ್ಞಾನಿಕವಾಗಿ ಎಷ್ಟೇ ಮುಂದುವರಿದರೂ ಕೆಲವೊಂದು ಕಾಯಿಲೆಗಳಿಗೆ ಮನೆ ಔಷಧಿಯ ಮುಂದೆ ಯಾವುದು ಇಲ್ಲ . ಅರಿಶಿನ ಒಂದೇ ಆದರೂ ಅದರಿಂದ ಉಪಯೋಗಗಳು ಹಲವು . ಇಂತಹ ಅರಿಶಿನ ನಮ್ಮ ಜೀವನದಲ್ಲಿ ನಮಗೆ ಯಾವ ಯಾವ ರೀತಿಯಲ್ಲಿ ಉಪಯೋಗವಾಗಬಹುದು ಎಂದು ನೋಡೋಣ....

 
ಹೆಲ್ತ್