Back
Home » ಇತ್ತೀಚಿನ
ವಿಶ್ವದಾದ್ಯಂತ ಹಾನರ್ 20 ಮತ್ತು ಹಾನರ್ 20 ಪ್ರೊ ರಿಲೀಸ್!..ಒನ್‌ಪ್ಲಸ್‌ಗೆ ಬ್ರೇಕ್?
Gizbot | 22nd May, 2019 04:06 PM
 • ಹಾನರ್ 20 ಮತ್ತು 20 ಪ್ರೊ ವಿನ್ಯಾಸ!

  ಹಾನರ್ 20 ಮತ್ತು ಹಾನರ್ 20 ಪ್ರೊ ಎರಡೂ ಸ್ಮಾರ್ಟ್‌ಫೋನ್‌ಗಳು ಗ್ಲಾಸ್ ಮತ್ತು ಮೆಟಲ್ ದೇಹವನ್ನು ಹೊಂದಿವೆ. ಕೆಲವು ಸ್ಯಾಮ್ಸಂಗ್ ಸ್ಮಾರ್ಟ್‌ಫೋನ್‌ಗಳಲ್ಲಿ ನೀವು ನೋಡಿರುವಂತೆ ಫೋನಿನ ಒಂದು ಬದಿಯಲ್ಲಿ ಫಿಂಗರ್ಪ್ರಿಂಟ್ ಸ್ಕ್ಯಾನರ್‌ ಅನ್ನು ಅಳವಡಿಸಲಾಗಿದೆ. ಇನ್ನು ಸೆಲ್ಫೀ ಕ್ಯಾಮೆರಾವು ವಿಶೇಷವಾಗಿ ಸ್ಮಾರ್ಟ್‌ಪೋನ್ ಡಿಸ್ಪ್ಲೇಯ ಮೇಲಿನ ಎಡ ಮೂಲೆಯಲ್ಲಿ ಇದೆ.


 • ಹಾನರ್ 20 ಮತ್ತು 20 ಪ್ರೊ ಡಿಸ್‌ಪ್ಲೇ!

  ಹಾನರ್ 20 ಮತ್ತು ಹಾನರ್ 20 ಪ್ರೊ ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ 6.26 ಇಂಚಿನ ಎಫ್‌ಎಚ್‌ಡಿ+ ಸ್ಪೋರ್ಟ್ ಡಿಸ್‌ಪ್ಲೇಯನ್ನು ಪರಿಚಯಿಸಲಾಗಿದೆ. 2340x1080p ರೆಸೋಲ್ಯೂಷನ್ ಸಾಮರ್ಥ್ಯದ ಡಿಸ್‌ಪ್ಲೇಯೂ ಆಲ್‌ ವ್ಯೂ ಪ್ರದರ್ಶನವನ್ನು ನೀಡಲಿದೆ. ಪ್ರೀಮಿಯಂ ಡಿಸ್‌ಪ್ಲೇ ಇದಾಗಿರುವುದರಿಂದ ಮಲ್ಟಿಟಿಮೀಡಿಯಾ ಹಾಗೂ ಗೇಮಿಂಗ್ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ.


 • ಹಾನರ್ 20 ಮತ್ತು 20 ಪ್ರೊ ಪ್ರೊಸೆಸರ್!

  ಹಾನರ್ 20 ಮತ್ತು ಹಾನರ್ 20 ಪ್ರೊ ಎರಡೂ ಸ್ಮಾರ್ಟ್‌ಫೋನ್‌ಗಳೂ ಕೂಡ ಕಿರಿನ್ 980 ಎಸ್‌ಒಸಿ ಪ್ರೊಸೆಸರ್ ಜೊತೆಗೆ ಆಂಡ್ರಾಯ್ಡ್ 9 ಪೈನಲ್ಲಿ ಮ್ಯಾಜಿಕ್ UI ಜೊತೆಗೆ ಬಂದಿವೆ. ಕಂಪೆನಿ ಹೇಳಿರುವಂತೆ, ಫೋನಿನಲ್ಲಿ ಶೇ 75 ಪ್ರತಿಶತದಷ್ಟು ವೇಗವರ್ಧಕ, ಶೇ.58 ಪ್ರತಿಶತ ವಿದ್ಯುತ್ ಸಾಮರ್ಥ್ಯ ಸುಧಾರಣೆ ಮತ್ತು ತಡೆರಹಿತ ಮತ್ತು ಪೂರ್ಣ ಫ್ರೇಮ್ ಗೇಮಿಂಗ್ ಅನುಭವ ಸಿಗಲಿದೆ.


 • ಹಾನರ್ 20 ಮತ್ತು 20 ಪ್ರೊ ಬ್ಯಾಟರಿ!

  ಹಾನರ್ 20 ಮತ್ತು ಹಾನರ್ 20 ಪ್ರೊ ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ ಬೇರೆ ಬೇರೆ ಬ್ಯಾಟರಿ ಸಾಮರ್ಥ್ಯವನ್ನು ತರಲಾಗಿದೆ. ಹಾನರ್ 20 3,750mAh ಶಕ್ತಿಯ ಬ್ಯಾಟರಿಯನ್ನು ಹೊಂದಿದ್ದರೆ ಹಾನರ್ ಪ್ರೊ ಮಾದರಿಯು 4,000mAh ಬ್ಯಾಟರಿ ಹೊಂದಿದೆ. ಎರಡೂ ಫೋನ್‌ಗಳು 22.5W ವೇಗದ ಚಾರ್ಜಿಂಗ್ಗೆ ಬೆಂಬಲ ಹೊಂದಿದ್ದು, 30 ನಿಮಿಷದಲ್ಲಿ 50% ಚಾರ್ಜ್‌ ಆಗುತ್ತವೆ ಎನ್ನಲಾಗಿದೆ.


 • ಹಾನರ್ 20 ಮತ್ತು 20 ಪ್ರೊ ಸೆಲ್ಫೀ ಕ್ಯಾಮೆರಾ!

  ಹಾನರ್ 20 ಮತ್ತು ಹಾನರ್ 20 ಪ್ರೊ ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ 32 ಎಂಪಿ ಸೆಲ್ಫಿ ಕ್ಯಾಮರಾವನ್ನು ನೀಡಲಾಗಿದೆ. ಸೆಲ್ಫೀ ಕ್ಯಾಮೆರಾವು ಫೋನ್ ಸ್ಕ್ರೀನ್ ಮೇಲೆ ಎಡಭಾಗದಲ್ಲಿರುವುದು ವಿಶೇಷತೆ. ಇನ್ನು ಸೆಲ್ಫೀ ಕ್ಯಾಮೆರಾದಲ್ಲಿ ಯಾವುದೇ ಬದಲಾವಣೆಯನ್ನು ಹೊಂದಿಲ್ಲದ ಈ ಸ್ಮಾರ್ಟ್‌ಪೋನ್‌ಗಳು ರಿಯರ್ ಕ್ಯಾಮೆರಾದಲ್ಲಿ ವ್ಯತ್ಯಾಸವನ್ನು ಹೊಂದಿರುವುದನ್ನು ನೋಡಬಹುದು.


 • ಹಾನರ್ 20 ಮತ್ತು 20 ಪ್ರೊ ರಿಯರ್ ಕ್ಯಾಮೆರಾ!

  ಹಾನರ್ 20 ಪ್ರೊ 48MP f / 1.4 ಪ್ರಾಥಮಿಕ ಸಂವೇದಕ, 16MP f / 2.2 ಅಲ್ಟ್ರಾ ವೈಡ್ ಸಂವೇದಕ, 8MP ಟೆಲಿಫೋಟೋ ಕ್ಯಾಮೆರಾ ಮತ್ತು 2MP ಮ್ಯಾಕ್ರೊ ಕ್ಯಾಮರಾಗಳನ್ನು ಹೊಂದಿದೆ. ಆದರೆ, ಹಾನರ್ 20 ಇದೇ 48MP f / 1.8ಮುಖ್ಯ ಕ್ಯಾಮೆರಾ ಪಡೆಯುತ್ತದೆಯಾದರೂ, ಪ್ರೊನಂತೆ 8MP ಟೆಲಿಫೋಟೋ ಕ್ಯಾಮೆರಾ ಇರದೇ, ಕೇವಲ 2MP ಕ್ಯಾಮೆರಾವನ್ನು ಬೆಂಬಲಿಸುತ್ತದೆ.


 • ಹಾನರ್ 20 ಮತ್ತು 20 ಪ್ರೊ ವ್ಯತ್ಯಾಸ!

  ಹಾನರ್‌ 20 ಪ್ರೊ ಸ್ಮಾರ್ಟ್‌ಫೋನ್ ಹಾನರ್ 20ಗಿಂತ ಸ್ಪಲ್ಪ ಹೆಚ್ಚು ವಿಶೇಷತೆ ಹೊಂದಿದೆ. ಬ್ಯಾಟರಿ ಗಾತ್ರ, ಸ್ಟೋರೇಜ್‌ ಮತ್ತು ನಾಲ್ಕನೇ ವಿಶೇಷ ಕ್ಯಾಮೆರಾದಲ್ಲಿ ಮಾತ್ರ ವ್ಯತ್ಯಾಸವನ್ನು ಗುರುತಿಸಬಹುದು. ಇನ್ನು ಹಾನರ್ 20 6ಜಿಬಿ RAM ಮತ್ತು 128ಜಿಬಿ ಮೆಮೊರಿ ಮಾದರಿಯಲ್ಲಿ ಬಂದಿದ್ದರೆ, 8ಜಿಬಿ RAM ಮತ್ತು 256 ಜಿಬಿ ಮೆಮೊರಿ ಮಾದರಿಯಲ್ಲಿ 20 ಪ್ರೊ ಬಂದಿದೆ.


 • ಹಾನರ್ 20 ಮತ್ತು 20 ಪ್ರೊ ಬೆಲೆಗಳು!

  ನಿರೀಕ್ಷಿಸಲ್ಪಟ್ಟಂತೆ ಪ್ರೀಮಿಯರ್ ಬೆಲೆಗಳೊಂದಿಗೆ ಹಾನರ್ 20 ಸರಣಿ ಫೋನ್‌ಗಳು ಬಿಡುಗಡೆಯಾಗಿವೆ. 6GB + 128GB ಹಾನರ್ ಬೆಲೆ 20 EUR 499 (ರೂ 38,780) ಗಳಾದರೆ, 8GB + 256GB ಶೇಖರಣಾ ಮಾದರಿಯ 20 ಪ್ರೊ EUR 599 (ಅಂದಾಜು ರೂ 46,500)ಗಳಿಗೆ ಬಿಡುಗಡೆಯಾಗಿದೆ. ಜೂನ್ 11 ರಂದು ಈ ಫೋನ್‌‌ಗಳು ಭಾರತದಲ್ಲಿ ಮಾರುಕಟ್ಟೆಗೆ ಕಾಲಿಡಲಿವೆ.
ಆಂಡ್ರಾಯ್ಡ್ ವಿಷಯದಲ್ಲಿ ಗೂಗಲ್ ಜೊತೆ ಹೋರಾಟ ನಡೆಸುತ್ತಿರುವ ಸಮಯದಲ್ಲೂ ಸಹ, ಚೀನಾದ ದೈತ್ಯ ತಂತ್ರಜ್ಞಾನ ಕಂಪೆನಿ ಹುವಾವೇ ಒಡೆತನದ 'ಹಾನರ್' ನೂತನ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳನ್ನು ವಿಶ್ವದಾದ್ಯಂತ ಬಿಡುಗಡೆ ಮಾಡಿದೆ. ಒನ್‌ಪ್ಲಸ್ ಕಂಪೆನಿಯ ಇತ್ತೀಚಿನ ಸ್ಮಾರ್ಟ್‌ಪೋನ್ ಒನ್‌ಪ್ಲಸ್ 7ಗೆ ಬ್ರೇಕ್ ಹಾಕುವ ಸಲುವಾಗಿ ಕ್ವಾಡ್ ಕ್ಯಾಮೆರಾ ಸೆಟ್‌ಅಪ್‌ ಇರುವ ಹಾನರ್ 20 ಮತ್ತು ಹಾನರ್ 20 ಪ್ರೊ ಸ್ಮಾರ್ಟ್‌ಫೋನ್‌ಗಳು ಇಂದು ಮೊಬೈಲ್ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ.

ಹೌದು, ಹುವಾವೇಯ ಪ್ರೀಮಿಯಂ ಫೋನ್ P30 ಪ್ರೊನಂತೆಯೇ ಕ್ವಾಡ್ ಕ್ಯಾಮೆರಾ ಸೆಟ್‌ಅಪ್‌, 6.26 ಇಂಚಿನ ಎಫ್‌ಎಚ್‌ಡಿ+ ಡಿಸ್‌ಪ್ಲೇ ಮತ್ತು ಕಿರಿನ್ 980 ಎಸ್‌ಒಸಿ ಪ್ರೊಸೆಸರ್‌ಗಳಂತಹ ಹೈ ಎಂಡ್ ಫೀಚರ್ಸ್ ಹೊತ್ತು ಹಾನರ್ 20 ಮತ್ತು ಹಾನರ್ 20 ಪ್ರೊ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬಿಡುಗಡೆಯಾಗಿವೆ. ಇನ್ನು ಈ ಎರಡೂ ಸ್ಮಾರ್ಟ್‌ಫೋನ್‌ಗಳಿಗೆ ಡೈನಾಮಿಕ್‌ ಹೋಲೋಗ್ರಾಫಿಕ್ ವಿನ್ಯಾಸವನ್ನು ಹೊಂದಿದ್ದರೂ ಸಹ, ಸ್ಕ್ರೀನ್‌ನಲ್ಲೇ ಸೆಲ್ಫೀ ಕ್ಯಾಮೆರಾವಿರುವುದನ್ನು ನಾವು ನೋಡಬಹುದು.

ಎರಡೂ ಸ್ಮಾರ್ಟ್‌ಪೋನ್‌ಗಳಲ್ಲಿ 7nm ಆಧಾರಿತ ಚಿಪ್‌ಸೆಟ್ ಸಿಪಿಯು ಕಾರ್ಯನಿರ್ವಹಣೆಗಳಲ್ಲಿ ಶೇ 75 ಪ್ರತಿಶತದಷ್ಟು ವೇಗವರ್ಧಕವ ಹಾಗೂ ವಿದ್ಯುತ್ ಸಾಮರ್ಥ್ಯದಲ್ಲಿ ಶೇ. 58 ಪ್ರತಿಶತದಷ್ಟು ಸುಧಾರಣೆ ಸೇರಿದಂತೆ ಜಿಪಿಯು ಟರ್ಬೊ 3.0 ತಡೆರಹಿತ ಮತ್ತು ಪೂರ್ಣ ಫ್ರೇಮ್ ಗೇಮಿಂಗ್ ಅನುಭವವನ್ನು ನೀಡಲಿವೆ ಎಂದು ಹಾನರ್ ಕಂಪೆನಿ ಹೇಳಿಕೊಂಡಿದೆ. ಹಾಗಾದರೆ, ಇಂದು ಮಾರುಕಟ್ಟೆಗೆ ಎಂಟ್ರಿ ನೀಡಿರುವ ಹಾನರ್ 20 ಮತ್ತು ಹಾನರ್ 20 ಪ್ರೊ ಸ್ಮಾರ್ಟ್‌ಫೋನ್‌ಗಳು ಹೇಗಿವೆ ಎಂಬುದನ್ನು ನೋಡೋಣ ಬನ್ನಿ.

 
ಹೆಲ್ತ್