Back
Home » ಇತ್ತೀಚಿನ
ತಿಂಗಳ ಟಿವಿ ಬಿಲ್ ಇಳಿಸಿಕೊಳ್ಳುವುದಕ್ಕೆ ಟ್ರಾಯ್ ನಿಂದ ಹೊಸ ಟೂಲ್
Gizbot | 22nd May, 2019 04:36 PM
 • ಟ್ರಾಯ್ ಚಾನಲ್ ಸೆಲೆಕ್ಟರ್ ಅಪ್ಲಿಕೇಷನ್: ಏನಿದು?

  ಹೊಸ ಚಾನಲ್ ಪ್ಯಾಕ್ ಗೆ ಮೈಗ್ರೇಟ್ ಆಗುವುದಕ್ಕೆ ಚಂದಾದಾರರಿಗೆ ಸಹಾಯ ಮಾಡುವ ದೃಷ್ಟಿಯಿಂದ ಟ್ರಾಯ್ ಚಾನಲ್ ಸೆಲೆಕ್ಟರ್ ಅಪ್ಲಿಕೇಷನ್ ನ್ನು ಬಿಡುಗಡೆಗೊಳಿಸಿದೆ. ಟ್ರಾಯ್ ನ ಅಧಿಕೃತ ವೆಬ್ ಸೈಟ್ ನಲ್ಲಿ ಇದು ಲಭ್ಯವಿದೆ. ಪ್ರೊಸೆಸ್ ನ ಬಗ್ಗೆ ತಿಳಿದುಕೊಳ್ಳುವುದಕ್ಕೆ ಚಂದಾದಾರರಿಗೆ ಇರುವ ಅತ್ಯುತ್ತಮ ಮಾರ್ಗ ಇದಾಗಿದೆ. ಪ್ರತಿ ತಿಂಗಳು ಅವರು ಎಷ್ಟು ಹಣವನ್ನು ಪಾವತಿ ಮಾಡಬೇಕಾಗುತ್ತದೆ ಎಂಬುದನ್ನು ಅಂದಾಜಿಸಿಕೊಳ್ಳುವುದಕ್ಕೆ ಇದು ಸಹಾಯ ಮಾಡುತ್ತದೆ. ಜೊತೆಗೆ ಯಾವೆಲ್ಲ ಚಾನಲ್ ಗಳಿಗೆ ಎಷ್ಟು ರುಪಾಯಿ, ಯಾವುದು ಅವರಿಗೆ ಬೇಕು ಅಥವಾ ಬೇಡ ಎಂಬುದನ್ನು ಅವರ ಬಜೆಟ್ ಗೆ ಅನುಗುಣವಾಗಿ ರೂಪಿಸಿಕೊಳ್ಳುವುದಕ್ಕೂ ಕೂಡ ಇದು ಸಹಾಯಕ.


 • ಟ್ರಾಯ್ ಚಾನಲ್ ಸೆಲೆಕ್ಟರ್ ಅಪ್ಲಿಕೇಷನ್ ನ್ನು ಬಳಕೆ ಮಾಡುವುದು ಹೇಗೆ?

  ಚಾನಲ್ ಸೆಲೆಕ್ಟರ್ ವೆಬ್ ಸೈಟ್ ನಲ್ಲಿ ನೀವು ಯಾವಾಗ ಗೆಟ್ ಸ್ಟಾರ್ಟೆಡ್ ಬಟನ್ ನ್ನು ಕ್ಲಿಕ್ಕಿಸುತ್ತೀರೋ ಆಗ ನಿಮ್ಮ ವಿವರಗಳನ್ನು ಭರ್ತಿ ಮಾಡಲು ಹೇಳಲಾಗುತ್ತದೆ. ಹೆಸರು, ಮೊಬೈಲ್ ನಂಬರ್, ಸರ್ವೀಸ್ ಪ್ರೊವೈಡರ್ ವಿವರಗಳು ಮತ್ತು ಈ ಹಿಂದಿನ ಬಿಲ್ ನ ಮೊತ್ತ ಇತ್ಯಾದಿ. ನೀವು ಈ ವಿವರಗಳನ್ನು ಭರ್ತಿ ಮಾಡಬಹುದು ಅಥವಾ ಆಪ್ಶನಲ್ ಆಗಿರುವ ಆಯ್ಕೆಯನ್ನು ಬಿಡಲೂ ಬಹುದು. ನೀವು ವಾಸಿಸುತ್ತಿರುವ ರಾಜ್ಯದ ವಿವರವನ್ನು ಕೇಳಲಾಗುತ್ತದೆ. ಒಂದು ವಿಚಾರ ನೀವು ನೆನಪಿಡಲೇ ಬೇಕು ನೀವು ಎಲ್ಲಿ ವಾಸಿಸುತ್ತಿದ್ದೀರಿ ಎಂಬುದರ ಆಧಾರದ ಮೇಲೆ ಚಾನಲ್ ಗಳ ವಿವರಗಳನ್ನು ನೀಡಲಾಗುತ್ತದೆ ಎಂಬುದು ನಿಮಗೆ ತಿಳಿದಿರಲಿ.

  ನೀವು ಆಯ್ಕೆ ಮಾಡಿದ ರಾಜ್ಯದಿಂದಾಗಿ ಪ್ರಾದೇಶಿಕ ಭಾಷೆಗಳ ಚಾನಲ್ ಗಳ ವಿವರಗಳು ಲಭ್ಯವಾಗುತ್ತದೆ. ಮುಂದಿನ ಪೇಜ್ ನಲ್ಲಿ ನಿಮಗೆ ಚಾನಲ್ ಗಳ ವಿಭಾಗಗಳಿರುತ್ತದೆ. ನ್ಯೂಸ್, ಮ್ಯೂಸಿಕ್, ಡಿವೋಷನಲ್, ಸ್ಪೋರ್ಟ್ಸ್ ಮತ್ತು ಇತ್ಯಾದಿ. ಕೊನೆಯದಾಗಿ ನಿಮಗೆ ಎಸ್ ಡಿ, ಹೆಚ್ ಡಿ ಅಥವಾ ಎರಡನ್ನೂ ಆಯ್ಕೆ ಮಾಡಿಕೊಳ್ಳುವ ಅವಕಾಶವಿರುತ್ತದೆ. ಈ ಆಯ್ಕೆಗಳಲ್ಲಿ ಎಲ್ಲವನ್ನೂ ಸೆಲೆಕ್ಟ್ ಮಾಡಬೇಕೆಂದೇನೂ ಇಲ್ಲ, ನಿಮಗೆ ಅನಗತ್ಯವಾಗಿರುವುದನ್ನು ಸ್ಕಿಪ್ ಮಾಡುವುದಕ್ಕೂ ಕೂಡ ಅವಕಾಶವಿರುತ್ತದೆ.

  ಎಲ್ಲಾ ಸೆಲೆಕ್ಷನ್ ನಂತರ ಒಂದು ಸ್ಕ್ರೀನ್ ನಲ್ಲಿ ಚಾನಲ್ ಸೆಲೆಕ್ಟರ್ ಅಪ್ಲಿಕೇಷನ್ ಲಭ್ಯವಾಗುತ್ತದೆ. ಚಾನಲ್ ಸೆಲೆಕ್ಟೆಡ್ ಏರಿಯಾದಲ್ಲಿ ನೀವು ಸೆಲೆಕ್ಟ್ ಮಾಡಿದ ಎಲ್ಲಾ ಚಾನಲ್ ಗಳ ಒಟ್ಟು ಮೊತ್ತ ಮತ್ತು ವಿವರಣೆಯನ್ನು ನೀವು ಗಮನಿಸಬಹುದಾಗಿರುತ್ತದೆ.ಭಾಷೆ, ಕ್ವಾಲಿಟಿ, ಬೆಲೆ, ಬ್ರಾಡ್ ಕಾಸ್ಟರ್ ಇತ್ಯಾದಿಗಳ ಅನುಸಾರ ನೀವು ಚಾನಲ್ ಗಳನ್ನು ಈ ಸೆಕ್ಷನ್ ನಲ್ಲಿ ಸಾರ್ಟ್ ಮಾಡುವುದಕ್ಕೂ ಕೂಡ ಸಾಧ್ಯವಾಗುತ್ತದೆ.


 • ಚಾನಲ್ ಸೆಲೆಕ್ಟರ್ ಅಪ್ಲಿಕೇಷನ್ ಮೂಲಕ ಮಾಸಿಕ ಬಿಲ್ ನಲ್ಲಿ ಇಳಿಕೆ ಮಾಡಿಕೊಳ್ಳಿ:

  ನೀವು ಯಾವಾಗ ಸೆಲೆಕ್ಷನ್ ಪ್ರೊಸೆಸ್ ಪೂರ್ಣಗೊಳಿಸಿ ರೆಡಿಯಾಗುತ್ತೀರೋ, ನಂತರ ಆಪ್ಟಿಮೈಸ್ ಬಟನ್ ನ್ನು ಟ್ಯಾಪ್ ಮಾಡಿ. ಇದು ಟ್ರಾಯ್ ಚಾನಲ್ ಸೆಲೆಕ್ಟರ್ ಅಪ್ಲಿಕೇಷನ್ ನಲ್ಲಿ ಹೈಲೆಟ್ ಮಾಡಲಾಗುತ್ತಿರುತ್ತದೆ. ಇದು ನಿಮ್ಮ ಕಾರ್ಟ್ ನಲ್ಲಿ ಪದೇ ಪದೇ ಸೇರಿಸಲಾಗಿರುವ ಚಾನಲ್ ಗಳನ್ನು ತೆಗೆಯುವುದಕ್ಕೂ ಕೂಡ ಸಹಾಯ ಮಾಡುತ್ತದೆ. ಅತೀ ಕಡಿಮೆ ಬೆಲೆಯಲ್ಲಿ ಹೇಗೆ ಚಾನಲ್ ಗಳನ್ನು ಪಡೆದು ಮಾಸಿಕ ಬಿಲ್ ನಲ್ಲಿ ಇಳಿಕೆ ಮಾಡಿಕೊಳ್ಳಬಹುದು ಎಂಬುದನ್ನು ಇದು ನಿಮಗೆ ತಿಳಿಸುತ್ತದೆ.


 • ಹೊಸ ಚಾನಲ್ ಪ್ಯಾಕ್ ಫೈನಲೈಜ್ ಮಾಡುವುದು ಮತ್ತು ಆಯ್ಕೆ ಅಂತಿಮಗೊಳಿಸುವುದು :

  ಒಮ್ಮೆ ನೀವು ಚಾನಲ್ ಸೆಲೆಕ್ಷನ್ ಪೂರ್ಣಗೊಳಿಸಿ ಬಿಲ್ ನ್ನು ಆಪ್ಟಿಮೈಸ್ ಮಾಡಿದ ನಂತರ ಅದನ್ನು ಪ್ರಿಂಟ್ ತೆಗೆಯಿರಿ ಅಥವಾ ನಿಮ್ಮ ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ನಲ್ಲಿ ಸೇವ್ ಮಾಡಿ ಇಟ್ಟುಕೊಳ್ಳಿ. ನಂತರ ನೀವು ನಿಮ್ಮ ಡಿಟಿಹೆಚ್ ಅಥವಾ ಕೇಬಲ್ ಟಿವಿ ಪ್ರೊವೈಡರ್ ವೆಬ್ ಸೈಟ್ ಗೆ ತೆರಳಿ ಅಂತಿಮ ಸೆಲೆಕ್ಷನ್ ನ್ನು ಪೂರ್ಣಗೊಳಿಸಿ. ನಿಮ್ಮ ಟ್ರಾಯ್ ಅಪ್ಲಿಕೇಷನ್ ನ ಲಿಸ್ಟ್ ನಲ್ಲಿ ಸೆಲೆಕ್ಟ್ ಮಾಡಿದ ಎಲ್ಲಾ ಆಯ್ಕೆಗಳನ್ನು ಕಾಪಿ ಮಾಡಿಕೊಳ್ಳಿ. ನಂತರ ಆರ್ಡರ್ ನ್ನು ಅಂತಿಮಗೊಳಿಸಿ. ಕೆಲವೇ ಘಂಟೆಗಳಲ್ಲಿ ಅಥವಾ ಅದಕ್ಕಿಂತಲೂ ಮುನ್ನ ನಿಮ್ಮ ಡಿಟಿಹೆಚ್ ಆಪರೇಟರ್ ಅಥವಾ ಕೇಬಲ್ ಆಪರೇಟರ್ ಟಿವಿಯಲ್ಲಿ ನೀವು ಆಯ್ಕೆ ಮಾಡಿದ ಚಾನಲ್ ಗಳು ಬರುವಂತೆ ಅಪ್ ಡೇಟ್ ಮಾಡುತ್ತಾರೆ.
ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಅಂದರೆ ಭಾರತದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ( ಟ್ರಾಯ್ ) ಹೊಸದಾಗಿ ಕೆಲವು ಬಿಲ್ಲಿಂಗ್ ಸ್ಟ್ರಕ್ಚರ್ ನ್ನು ಬಿಡುಗಡೆಗೊಳಿಸಿತು ಮತ್ತು ಇದು ಕೆಲವು ಬಳಕೆದಾರರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದಿದ್ದು ಪಾರದರ್ಶಕತೆಯನ್ನು ಈ ಹೊಸ ವಿಧಾನದಿಂದ ಸಾಧ್ಯವಾಗಿದೆ ಎಂದು ಹೇಳಿದ್ದಾರೆ. ಆದರೆ ಇನ್ನೂ ಕೆಲವು ಬಳಕೆದಾರರು ಮಾಸಿಕ ಬಿಲ್ ನಲ್ಲಿ ಭಾರೀ ಅಧಿಕವಾಗಿದೆ. ಹೊಸ ಸಿಸ್ಟಮ್ ನ ಅಗತ್ಯವೇ ಇರಲಿಲ್ಲ ಟ್ರಾಯ್ ನಮ್ಮ ಟಿವಿ ಬಿಲ್ ಮೇಲೆ ಬರೆ ಎಳೆಯುವ ಕೆಲಸ ಮಾಡಿದೆ ಎಂದು ದೂರಿದ್ದಾರೆ.

ನೀವು ಒಂದೇ ಚಾನಲ್ ಆಯ್ಕೆ ಮಾಡಿದರೂ ಕೂಡ ಕನಿಷ್ಟ ಶುಲ್ಕ 153 ನ್ನು ಪಾವತಿಸಲೇಬೇಕು ಮತ್ತು ಇದರ ಅಡಿಯಲ್ಲಿ ಕೆಲವು ಉಚಿತ ಚಾನಲ್ ಗಳು ಲಭ್ಯವಾಗುತ್ತದೆ. ಇದು ಗ್ರಾಹಕರಿಗೆ ಅಷ್ಟೇನು ತೃಪ್ತಿದಾಯಕವಾಗಿಲ್ಲ. ಈ ಪರಿಣಾಮವನ್ನು ಎದುರಿಸುವುದಕ್ಕಾಗಿ ಟ್ರಾಯ್ ಹೊಸದಾಗಿ ಚಾನಲ್ ಸೆಲೆಕ್ಟರ್ ವೆಬ್ ಟೂಲ್ ನ್ನು ಪರಿಚಯಿಸಿದೆ.

ಇದರಲ್ಲಿ ಎಲ್ಲಾ ಚಾನಲ್ ಗಳ ಬೆಲೆಯನ್ನು ನಮೂದಿಸಲಾಗಿದ್ದು ತಾವು ಸೆಲೆಕ್ಟ್ ಮಾಡಿದ ಚಾನಲ್ ಗಳ ಒಟ್ಟು ಬಿಲ್ ನ್ನು ಮಾಸಿಕವಾಗಿ ಪರೀಕ್ಷಿಸುವುದಕ್ಕೆ ಈ ಲಿಸ್ಟ್ ನಿಂದ ಸಾಧ್ಯವಾಗುತ್ತದೆ. ಯಾವುದೇ ಕೇಬಲ್ ಟಿವಿ ಅಥವಾ ಡಿಟಿಹೆಚ್ ಆಪರೇಟರ್ ಗಳಾಗಿದ್ದರೂ ಸರಿ ನಿಮ್ಮ ಮಾಸಿಕ ಬಿಲ್ ನ ಪಟ್ಟಿಯನ್ನು ಈ ಟೂಲ್ ಮೂಲಕ ಪರೀಕ್ಷಿಸಿಕೊಳ್ಳಬಹುದು.

 
ಹೆಲ್ತ್