Back
Home » ಇತ್ತೀಚಿನ
ಹಾನರ್‌ 20 ಲೈಟ್‌ ಬಿಡುಗಡೆ!..ಗಮನ ಸೆಳೆವ ಸ್ಪೆಷಲ್ ಫೀಚರ್ಸ್‌!
Gizbot | 23rd May, 2019 11:20 AM
 • ಡಿಸೈಸ್‌

  ಹಾನರ್‌ 20 ಲೈಟ್‌ ಸ್ಮಾರ್ಟ್‌ಫೋನ್‌ ಆಕರ್ಷಕ ಡಿಸೈನ್‌ ಹೊಂದಿದ್ದು, ವಾಟರ್‌ಡ್ರಾಪ್‌ ನಾಚ್‌ಸೈಲ್‌ ವಿನ್ಯಾಸವನ್ನು ಪಡೆದಿದೆ. ಫಿಂಗರ್‌ಪ್ರಿಂಟ್ ಸೆನ್ಸಾರ್‌ ಮತ್ತು ಪಂಚ್‌ಹೋಲ್‌ ಡಿಸ್‌ಪ್ಲೇ ಡಿಸೈನ್‌ ಆಕಾರದಲ್ಲಿದ್ದು, ಪ್ಯಾಂಟೊಮ್‌ ರೆಡ್ ಮತ್ತು ಬ್ಲೂ ಕಲರ್‌ನ ಎರಡು ಬಣ್ಣಗಳ ಆಯ್ಕೆಯನ್ನು ಹೊಂದಿದೆ.


 • ಡಿಸ್‌ಪ್ಲೇ

  1080 x 2340 ಪಿಕ್ಸಲ್ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 6.21 ಇಂಚಿನ ಪೂರ್ಣ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಬಾಡಿಯಿಂದ ಡಿಸ್‌ಪ್ಲೇ ನಡುವಿನ ಅಂತರ ಶೇ. 82.91 % ಆಗಿದೆ. ಹಾಗೆಯೇ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 415ppi ಆಗಿದ್ದು, ಡಿಸ್‌ಪ್ಲೇ ಅನುಪಾತವು 19.5:9 ಆಗಿದೆ. ಡಿಸ್‌ಪ್ಲೇ ಯು ವಾಟರ್‌ಡ್ರಾಪ್‌ ನಾಚ್‌ ರಚನೆಯನ್ನು ಹೊಂದಿದೆ.


 • ಪ್ರೊಸೆಸರ್

  ಹಾನರ್‌ 20 ಲೈಟ್‌ ಸ್ಮಾರ್ಟ್‌ಫೋನಿನಲ್ಲಿ ಆಕ್ಟಾಕೋರ್‌ ಹಿಲಿಸಿಲಿಕಾನ್ ಕಿರಿನ್ 710 ಪ್ರೊಸೆಸರ್ ಕಾರ್ಯನಿರ್ವಹಿಸಲಿದ್ದು, Mali-G51 MP4 ಸಾಮರ್ಥ್ಯ ಗ್ರಾಫಿಕ್ ಸೌಲಭ್ಯವನ್ನು ನೀಡಲಾಗಿದೆ. 4GB RAM ಶಕ್ತಿಯನ್ನು ಹೊಂದಿದ್ದು, ಆಂತರಿಕ ಸಂಗ್ರಹಕ್ಕಾಗಿ 128GB ಸ್ಥಳಾವಕಾಶವನ್ನು ಮಾಡಿಕೊಡಲಾಗಿದೆ.


 • ಕ್ಯಾಮೆರಾ

  ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ನೀಡಲಾಗಿದ್ದು, ಪ್ರಾಥಮಿಕ ಕ್ಯಾಮೆರಾವು 24ಎಂಪಿ, ಸೆಕೆಂಡರಿ ಕ್ಯಾಮೆರಾವು 8ಎಂಪಿ ಮತ್ತು ಮೂರನೇ ಕ್ಯಾಮೆರಾವು 2ಎಂಪಿ ಸಾಮರ್ಥ್ಯದಲ್ಲಿ ಇವೆ. ಇದರೊಂದಿಗೆ ಸೆಲ್ಫಿಗಾಗಿ 32ಎಂಪಿ ಸಾಮರ್ಥ್ಯದ ಕ್ಯಾಮೆರಾ ಆಯ್ಕೆಯನ್ನು ನೀಡಲಾಗಿದೆ.


 • ಬ್ಯಾಟರಿ

  ಹಾನರ್‌ 20 ಲೈಟ್‌ ಸ್ಮಾರ್ಟ್‌ಫೋನ್‌ 3,400mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, ದೀರ್ಘಕಾಲ ಬಾಳಿಕೆ ಬರುವ ಬಲವನ್ನು ಹೊಂದಿದೆ. ಇದರೊಂದಿಗೆ ಅತ್ಯುತ್ತಮ ಚಾರ್ಜರ್ ಸೌಲಭ್ಯವನ್ನು ಒದಗಿಸಲಾಗಿದೆ ಆದರೆ ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯದ ಬಗ್ಗೆ ನಿಖರ ಮಾಹಿತಿಯನ್ನು ಹೊರಹಾಕಿಲ್ಲ.


 • ಲಭ್ಯತೆ ಮತ್ತು ಬೆಲೆ

  ಹುವಾಯಿ ಕಂಪನಿಯು ವಿಶ್ವ ಮಾರುಕಟ್ಟೆಯಲ್ಲಿ ತನ್ನ ಹಾನರ್‌ 20 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡಿದ್ದು, ಅವುಗಳಲ್ಲಿ ಬಜೆಟ್‌ ಮಾದರಿಯಲ್ಲಿ ಗುರುತಿಸಿಕೊಂಡಿರುವ ಹಾನರ್‌ 20 ಲೈಟ್‌ ಸ್ಮಾರ್ಟ್‌ಫೋನ್‌ ಬೆಲೆಯು 23,000ರೂ.ಗಳ ಆಗಿದೆ.

  ಓದಿರಿ : 'ಬ್ಲೂಟೂತ್‌ ಸ್ಪೀಕರ್‌' ಖರೀದಿಸುವ ಮುನ್ನ ಈ ಅಂಶಗಳನ್ನು ಗಮನಿಸಿ!
ವಿಶ್ವದ ಎರಡನೇ ದೊಡ್ಡ ಸ್ಮಾರ್ಟ್‌ಪೋನ್‌ ತಯಾರಿಕಾ ಸಂಸ್ಥೆ ಆಗಿರುವ ಹುವಾಯಿ ಸಬ್‌ಬ್ರ್ಯಾಂಡ್‌ ಆಗಿರುವ ಹಾನರ್‌. ತನ್ನ ವಿವಿಧ ಶ್ರೇಣಿಯ ಸ್ಮಾರ್ಟ್‌ಪೋನ್‌ಗಳಿಂದ ಗ್ರಾಹಕರ ಮನಗೆದ್ದಿದೆ. ಕಂಪನಿಯು ತನ್ನ ಬಹುನಿರೀಕ್ಷಿತ ಹಾನರ್‌ 20 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಇದೀಗ ಬಿಡುಗಡೆ ಮಾಡಿದ್ದು, ಇಡೀ ಮೊಬೈಲ್‌ ಮಾರುಕಟ್ಟೆ ಹಾನರ್‌ನತ್ತ ತಿರುಗಿ ನೋಡುವಂತೆ ಮಾಡಿದೆ.

ಹೌದು, ಹುವಾಯಿ ಸಂಸ್ಥೆಯು ಇತ್ತೀಚಿಗೆ 'ಹಾನರ್‌ 20' ಸರಣಿಯಲ್ಲಿ ಹಾನರ್‌ 20 ಪ್ರೊ, ಹಾನರ್‌ 20 ಮತ್ತು ಹಾನರ್‌ 20 ಲೈಟ್‌ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಅವುಗಳಲ್ಲಿ 'ಹಾನರ್‌ 20 ಲೈಟ್‌' ಸ್ಮಾರ್ಟ್‌ಫೋನ್‌ ಬಜೆಟ್‌ ಶ್ರೇಣಿಯಲ್ಲಿ ಗುರುತಿಸಿಕೊಂಡಿದ್ದು, ತ್ರಿವಳಿ ಕ್ಯಾಮೆರಾ ಆಯ್ಕೆ, ಅತ್ಯುತ್ತಮ ಪ್ರೊಸೆಸರ್‌ಗಳಿಂದ ಸೇರಿದಂತೆ ಗಮನ ಸೆಳೆಯುವ ಫೀಚರ್ಸ್‌ಗಳಿಂದ ಗ್ರಾಹಕರನ್ನು ಆಕರ್ಷಿಸುತ್ತಿದೆ.

ಈ ಸ್ಮಾರ್ಟ್‌ಫೋನ್‌ ಪಂಚ್‌ಹೋಲ್‌ ಡಿಸ್‌ಪ್ಲೇ ಡಿಸೈನ್‌ ರಚನೆಯಲ್ಲಿದ್ದು, 4GB RAM ಜೊತೆಗೆ 128GB ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ ರೇರ್‌ ಮೌಂಟೆಡ್‌ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಆಯ್ಕೆಯನ್ನು ಸಹ ಒಳಗೊಂಡಿದೆ. ಹಾಗಾದರೇ ಹಾನರ್‌ 20 ಲೈಟ್‌ ಸ್ಮಾರ್ಟ್‌ಫೋನ್‌ ಇತರೆ ಯಾವೆಲ್ಲಾ ಆಕರ್ಷಕ ಫೀಚರ್ಸ್‌ಗಳೆನು ಹೊಂದಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಓದಿರಿ : ಟಿಕ್‌ಟಾಕ್‌ಗೆ ಪೈಪೋಟಿ ನೀಡಲು ಮುಂದಾದ 'ಇನ್‌ಸ್ಟಾಗ್ರಾಂ IGTV'.!

 
ಹೆಲ್ತ್