Back
Home » ಇತ್ತೀಚಿನ
ಅಂತರ್ಜಾಲ ಸುರಕ್ಷತೆಗಾಗಿ ಗೂಗಲ್ ಹೇಳಿದ 6 ಸಲಹೆಗಳು!
Gizbot | 24th May, 2019 09:01 AM
 • ಮಾಹಿತಿ ಹಂಚಿಕೊಳ್ಳಬೇಡಿ

  ಅಂತರ್ಜಾಲ ಎಂಬುದು ಕಳ್ಳರಿಗೆ ಇರುವ ರಹದಾರಿಯೂ ಕೂಡ ಎಂದು ಮರೆಯಬೇಡಿ. ಮೋಸದ ಉದ್ದೇಶದ ಅನಾಮಧೇಯ ಇ-ಮೇಲ್‌, ಮೊಬೈಲ್‌ ಕರೆಗಳಿಗೆ ‍ ಪ್ರತಿಕ್ರಿಯಿಸಬೇಡಿ. ವೈಯಕ್ತಿಕ ಮಾಹಿತಿಯನ್ನು ಯಾರೊಬ್ಬರಿಗೂ ನೀಡಬೇಡಿ. ಅಧಿಕೃತ ಅಂತರ್ಜಾಲ ತಾಣಗಳಿಂದ ಯಾವತ್ತೂ ಇಂತಹ ಕರೆಗಳು ಬರುವುದಿಲ್ಲ ಎನ್ನುವುದನ್ನು ಯಾವಾಗಲೂ ನೆನಪಿನಲ್ಲಿ ಇಡಿ.


 • ಅನಗತ್ಯ ಅನುಮತಿಯನ್ನು ನಾಶಪಡಿಸಿ!

  ಡೌನ್‌ಲೋಡ್‌ ಮಾಡಿಕೊಂಡಿರುವ ಆಪ್‌ಗಳಿಗೆ, ವೈಯಕ್ತಿಕ ಸಂಪರ್ಕ ವಿವರ, ಕ್ಯಾಮೆರಾ, ಕ್ಯಾಲೆಂಡರ್‌ನ ಮಾಹಿತಿ ಪಡೆಯಲು ಅನುಮತಿ ನೀಡಿರುವುದರ ಬಗ್ಗೆ ನಿಗಾವಹಿಸಿ. ಅನಗತ್ಯವಾಗಿ ಅವುಗಳಿಗೆ ಅನುಮತಿ ಕೊಟ್ಟಿದ್ದರೆ ಅವುಗಳನ್ನು ತೆಗೆಯಿರಿ. ಸೆಟ್ಟಿಂಗ್ಸ್‌ನಲ್ಲಿ ಆಪ್ಸ್ ಆಯ್ಕೆಯನ್ನು ತೆರೆಯಿರಿ. ನಂತರ ಯಾವುದೇ ಆಪ್‌ ಮೇಲೆ ಕ್ಲಿಕ್ ಮಾಡಿದಾಗ ಈ ಬಗ್ಗೆ ನಿಮಗೆ ತಿಳಿಯುತ್ತದೆ.


 • ಮಾಹಿತಿಯನ್ನು ನಾಶಪಡಿಸಿ!

  ಮೊಬೈಲ್‌ ಅನ್ನು ಗೂಗಲ್‌ ಖಾತೆಗೆ ಸೇರ್ಪಡೆ ಮಾಡಿದ್ದರೆ ಮೊಬೈಲ್‌ ಕಳೆದು ಹೋದಾಗ ಇಲ್ಲವೆ ಕಳ್ಳತನ ನಡೆದಾಗ ಪತ್ತೆಹಚ್ಚಬಹುದು. ಅದರಲ್ಲಿನ ಮಾಹಿತಿಯನ್ನೂ ನಾಶಮಾಡಬಹುದು. ವಿಭಿನ್ನ ಮಾದರಿಯ ವಿನ್ಯಾಸಗಳ ಮೂಲಕ ( ಪಾಸ್‌ವರ್ಡ್, ಪ್ಯಾಟ್ರನ್, ಫಿಂಗರ್‌ಪ್ರಿಂಟ್) ಮೊಬೈಲ್‌ ಪರದೆಯನ್ನು ಇತರರು ಸುಲಭವಾಗಿ ವೀಕ್ಷಿಸದಂತೆ ನಿರ್ಬಂಧಿಸುವುದನ್ನು ಮರೆಯಬೇಡಿ.


 • ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿ!

  ಮೊಬೈಲ್‌ಗೆ ಆಪ್‌ಗಳನ್ನು ಗೂಗಲ್‌ ಪ್ಲೇ ಸ್ಟೋರ್‌ನಿಂದ ಮಾತ್ರ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಗೂಗಲ್‌ ಸಂಸ್ಥೆಯ ಪ್ಲೇ ಪ್ರೊಟೆಕ್ಟ್ ಮೊಬೈಲ್‌ಗೆ ದಿನದ 24 ಗಂಟೆಗಳ ಕಾಲ ಸುರಕ್ಷತೆ ಒದಗಿಸುತ್ತದೆ. ಇದು ಪ್ರತಿ ದಿನ ಕೋಟಿಗಳಷ್ಟು ಆಪ್‌ಗಳನ್ನು ಸ್ಕ್ಯಾನ್‌ ಮಾಡಿ, ಅಪಾಯಕಾರಿಯಾದ ಆಪ್‌ಗಳನ್ನು ಗುರುತಿಸಿ, ಮೊಬೈಲ್‌ನಿಂದ ಹೊರ ಹಾಕುತ್ತದೆ ಎಂಬುದು ತಿಳಿದಿರಲಿ.


 • ಅಂತರ್ಜಾಲದ ವಿಳಾಸ

  ಆನ್‌ಲೈನ್‌ ಚಟುವಟಿಕೆಗಳ ಸುರಕ್ಷತೆಗಾಗಿ ನೀವು ಬಳಸುವ ಡಿಜಿಟಲ್‌ ಸಾಧನಗಳಲ್ಲಿ ನವೀಕೃತ ಸಾಫ್ಟ್‌ವೇರ್‌ ಬಳಕೆ ಬಗ್ಗೆ ಮರೆಯದೇ ನಿಗಾ ಇರಿಸಿ. ಯಾವುದೇ ಅಂತರ್ಜಾಲದ ವಿಳಾಸವು https:// ದಿಂದ ಆರಂಭಗೊಂಡಿರುವುದನ್ನು ಖಾತರಿಪಡಿಸಿಕೊಳ್ಳಿ. ಅಂತರ್ಜಾಲದ ವಿಳಾಸವೇನಾದರೂ ಕತ್ತರಿ ಕೆಲಸಕ್ಕೆ ಕೈಹಾಕುವಂತಿದ್ದರೆ ಗೂಗಲ್ ನೀಡುವ ಸೂಚನೆಗಳನ್ನು ಪಾಲಿಸಿ.


 • ಗೂಗಲ್ ಖಾತೆಯನ್ನು ಚೆಕ್ ಮಾಡಿ!

  ನಿಮ್ಮೆಲ್ಲಾ ಅಂತರ್ಜಾಲ ಚಟುವಟಿಗಳು ಬಹುತೇಕ ಗೂಗಲ್‌ ಖಾತೆಯ ಮೂಲಕವೇ ನಡೆಯುತ್ತಿದೆ ಎಂಬುದನ್ನು ತಿಳಿಯಿರಿ. ನಿಮ್ಮ ದತ್ತಾಂಶಗಳ ಸುರಕ್ಷತೆಗಾಗಿ ತಮ್ಮ ಗೂಗಲ್ ಖಾತೆಯಯನ್ನು ಆಗಾಗ್ಗೆ ತಪಾಸಣೆ ನಡೆಸಲು ಮರೆಯಬೇಡಿ. ನಿಮ್ಮ ಖಾತೆಯನ್ನು ಬೇರೆ ಯಾರೋ ಕದ್ದು ಬಳಸುತ್ತಿದ್ದರೂ ಗೂಗಲ್ ಸೆಟ್ಟಿಂಗ್ಸ್ ಮೂಲಕ ನೀವು ತಿಳಿದುಕೊಳ್ಳಬಹುದು.
ಮನುಷ್ಯನ ಬಹುತೇಕ ಎಲ್ಲಾ ಕಾರ್ಯಗಳು ಕೂಡ ಈಗ ಅಂತರ್ಜಾಲ ಸಹಾಯದಿಂದಲೇ ನಡೆಯುತ್ತಿರುವುದರಿಂದ 'ಸುರಕ್ಷಿತ ಅಂತರ್ಜಾಲ' ಎಂಬುದು ಇಂದಿನ ಮೂಲಭೂತ ಕರ್ತವ್ಯಗಳಲ್ಲಿ ಒಂದು ಎನ್ನಬಹುದು. ಆದರೆ, ಈ ದೊಡ್ಡ ಅಂತರ್ಜಾಲ ಪ್ರಪಂಚದಲ್ಲಿ ಯಾವುದೋ ಒಂದು ಕಂಪೆನಿಯೋ ಅಥವಾ ಸರ್ಕಾರವೋ ನಮ್ಮ ಸುರಕ್ಷಿತೆಯನ್ನು ಸಂಪೂರ್ಣವಾಗಿ ನೋಡಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ, ಅಂತರ್ಜಾಲ ಸುರಕ್ಷತೆ ಎಂಬುದನ್ನು ಈಗ ವೈಯಕ್ತಿಕ ಕರ್ತವ್ಯ ಎಂದು ಕರೆಯಬಹುದು.

ಆದರೆ, ಈ ಅಂತರ್ಜಾಲ ಸುರಕ್ಷತೆಯನ್ನು ಈಗಲೂ ಅನೇಕರು ಗಣನೆಗೆ ತೆಗೆದುಕೊಂಡಂತೆ ಇಲ್ಲ. ಯಾರು ಎಷ್ಟೇ ಹೇಳಿದರೂ ಇದನ್ನು ನಿರ್ಲಕ್ಷಿಸುವವರೇ ಹೆಚ್ಚು. ಇದರಿಂದ ಬಹುತೇಕರು ಖಾಸಾಗಿ ಮಾಹಿತಿ ಮತ್ತು ಹಣವನ್ನು ಕಳೆದುಕೊಳ್ಳುತ್ತಿದ್ದರೆ, ಇನ್ನು ಕೆಲವರು ತಮ್ಮತನವನ್ನೇ ಕಳೆದುಕೊಳ್ಳುವಂತಹ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಾಗಾಗಿ, ಈ ಬಗ್ಗೆ ಅರಿವು ಮೂಡಿಸಲು 'ಸುರಕ್ಷಿತ ಅಂತರ್ಜಾಲ ದಿನ' ಎಂದು ಆಚರಿಸಲಾಗುತ್ತಿದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ.

ಪ್ರತಿವರ್ಷದ ಫೆಬ್ರವರಿ 5ನೇ ತಾರೀಖಿನಂದು 'ಸುರಕ್ಷಿತ ಅಂತರ್ಜಾಲ ದಿನ' ಎಂದು ಆಚರಿಸಲಾಗುತ್ತಿದ್ದು, ಈ ದಿನದಲ್ಲಿ ಸುರಕ್ಷಿತ ಅಂತರ್ಜಾಲದ ಮಹತ್ವವನ್ನು ಹೇಳಲಾಗುತ್ತಿದೆ. ಈ ಬಾರಿ 'ಗೂಗಲ್ ಇಂಡಿಯಾ' ಕಂಪೆನಿಯು ಸ್ಮಾರ್ಟ್‌ಫೋನ್‌ ಮತ್ತು ಇಂಟರ್‌ನೆಟ್‌ನ ಸುರಕ್ಷಿತ ಬಳಕೆ ಮತ್ತು ದತ್ತಾಂಶಗಳು ಸೋರಿಕೆಯಾಗದಂತೆ ನೋಡಿಕೊಳ್ಳಲು ಹತ್ತಾರು ಸಲಹೆಗಳನ್ನು ಜನರಿಗೆ ನೀಡಿದೆ. ಅವುಗಳು ಯಾವುವು ಎಂಬುದನ್ನು ನಾವು ಈ ಕೆಳಗೆ ಪಟ್ಟಿ ಮಾಡಿದ್ದೇವೆ.

 
ಹೆಲ್ತ್