Back
Home » ಇತ್ತೀಚಿನ
'ಗ್ಯಾಲ್ಯಾಕ್ಸಿ ಎ' ಸರಣಿ ಸೇರಲಿದೆ ಮತ್ತೊಂದು ಸ್ಮಾರ್ಟ್‌ಫೋನ್‌!..64ಎಂಪಿ ಕ್ಯಾಮೆರಾ!
Gizbot | 24th May, 2019 11:47 AM
 • ಗ್ಯಾಲ್ಯಾಕ್ಸಿ ಎ70 ಡಿಸ್‌ಪ್ಲೇ

  ಗ್ಯಾಲ್ಯಾಕ್ಸಿ ಎ70 ಸ್ಮಾರ್ಟ್‌ಫೋನ್ 2400 x 1080 ಪಿಕ್ಸಲ್ ರೆಸಲ್ಯೂಶನ್‌ನೊಂದಿಗೆ 6.7 ಇಂಚಿನ ಸೂಪರ್‌ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಅಂಚು ರಹಿತ ಡಿಸ್‌ಪ್ಲೇ ಇದ್ದು, ವಾಟರ್‌ ಡ್ರಾಪ್‌ ನಾಚ್‌ ಅನ್ನು ಹೊಂದಿದೆ.

  ಓದಿರಿ : ಶಿಯೋಮಿಯ 'ಮಿ 4' ಸ್ಮಾರ್ಟ್‌ಬ್ಯಾಂಡ್‌ ಬಿಡುಗಡೆಗೆ ಸಜ್ಜು!..ವಿಶೇಷತೆ ಏನು ಗೊತ್ತಾ?


 • ಗ್ಯಾಲ್ಯಾಕ್ಸಿ ಎ70 ಪ್ರೊಸೆಸರ್

  ಆಕ್ಟಾಕೋರ್‌ ಪ್ರೊಸೆಸರ್ ಮಾದರಿಯಿದ್ದು, ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 675 ಪ್ರೊಸೆಸರ್‌ ಅನ್ನು ಹೊಂದಿದೆ. 2GHz ವೇಗದಲ್ಲಿ ಪ್ರೊಸೆಸರ್‌ ಕಾರ್ಯನಿರ್ವಹಿಸಲಿದ್ದು, ಆಡ್ರಿನೊ 612 ಗ್ರಾಫಿಕ್ ಸಹ ಹೊಂದಿದೆ. 6GB ಸಾಮರ್ಥ್ಯದ RAM ಶಕ್ತಿಯನ್ನು ಪಡೆದಿದೆ.


 • ಗ್ಯಾಲ್ಯಾಕ್ಸಿ ಎ70 ಕ್ಯಾಮೆರಾ

  ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾವನ್ನು ಒಳಗೊಂಡಿದ್ದು, ಪ್ರಾಥಮಿಕ ರೇರ ಕ್ಯಾಮೆರಾವು 32ಮೆಗಾಪಿಕ್ಸಲ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 8 ಮೆಗಾಪಿಕ್ಸಲ್ ಮತ್ತು ಮೂರನೇ ಕ್ಯಾಮೆರಾವು 5 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಒಳಗೊಂಡಿವೆ. ಇನ್ನು ಸೆಲ್ಫಿ ಕ್ಯಾಮೆರಾ ಸಹ 32ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದೆ. ಆದರೆ ಗ್ಯಾಲ್ಯಾಕ್ಸಿ ಎ70ಎಸ್‌ ಸ್ಮಾರ್ಟ್‌ಫೋನ್‌ 64ಎಂಪಿ ಸೆನ್ಸಾರ್‌ ಸಾಮರ್ಥ್ಯದಲ್ಲಿರಲಿದೆ.


 • ಗ್ಯಾಲ್ಯಾಕ್ಸಿ ಎ70 ಬ್ಯಾಟರಿ

  ಗ್ಯಾಲ್ಯಾಕ್ಸಿ ಎ70 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು, ದೀರ್ಘಕಾಲ ಬಾಳಿಕೆ ಬರುವ ಶಕ್ತಿಯನ್ನು ಬ್ಯಾಟರಿ ಹೊಂದಿದೆ. ಇದರೊಂದಿಗೆ 25W ಸೂಪರ್‌ ಫಾಸ್ಟ್‌ ಚಾರ್ಜಿಂಗ್‌ ತಂತ್ರಜ್ಞಾನದ ಸೌಲಭ್ಯವನ್ನು ಪಡೆದಿದೆ. ಇದರ ನೆರವಿನಿಂದ ಸ್ಯಾರ್ಟ್‌ಫೋನ್‌ ವೇಗವಾಗಿ ಚಾರ್ಜ್‌ ಪಡೆದುಕೊಳ್ಳುತ್ತದೆ.


 • ಗ್ಯಾಲ್ಯಾಕ್ಸಿ ಎ70 ಇತರೆ ಸೌಲಭ್ಯಗಳು

  ಈ ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್‌ 9 ಪೈ ಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ ಜಿಪಿಎಸ್‌, ಫಿಂಗರ್‌ಪ್ರಿಂಟ್ ಸೆನ್ಸಾರ್‌, ಯುಎಸ್‌ಬಿ ಟೈಪ್‌ ಸಿ ಪೋರ್ಟ್‌ ಆಯ್ಕೆಗಳನ್ನು ಹೊಂದಿದ್ದು, ಇದರೊಂದಿಗೆ ಓಟಿಜಿ ಕನೆಕ್ಟ್‌ ಆಯ್ಕೆ ಸಹ ಒಳಗೊಂಡಿದೆ.

  ಓದಿರಿ : 'ಬ್ಲೂಟೂತ್‌ ಸ್ಪೀಕರ್‌' ಖರೀದಿಸುವ ಮುನ್ನ ಈ ಅಂಶಗಳನ್ನು ಗಮನಿಸಿ!
ದಕ್ಷಿಣ ಕೋರಿಯಾ ಮೂಲದ ಟೆಕ್‌ ಸಂಸ್ಥೆ ಸ್ಯಾಮ್‌ಸಂಗ್‌ ಇತ್ತೀಚಿಗಷ್ಟೆ ಗ್ಯಾಲ್ಯಾಕ್ಸಿ ಎ ಸರಣಿಯಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ಅವುಗಳಲ್ಲಿ ಗ್ಯಾಲ್ಯಾಕ್ಸಿ ಎ70 ಸ್ಮಾರ್ಟ್‌ಫೋನ್‌ ವಿಶೇಷ ಫೀಚರ್ಸ್‌ಗಳಿಂದ ಗಮನ ಸೆಳೆದಿದೆ. ಈ ನಿಟ್ಟಿನಲ್ಲಿ ಮುಂದುವರೆದಿರುವ ಕಂಪನಿಯು ಗ್ಯಾಲ್ಯಾಕ್ಸಿ ಎ ಸರಣಿಯಲ್ಲಿ ಮತ್ತೆ ಹೊಸದೊಂದು ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲು ಸಕಲ ತಯಾರಿ ಮಾಡಿಕೊಳ್ಳುತ್ತಿದೆ.

ಹೌದು, ಸ್ಯಾಮ್‌ಸಂಗ್‌ ಕಂಪನಿಯು ಗ್ಯಾಲ್ಯಾಕ್ಸಿ ಎ70ಎಸ್‌ ಹೆಸರಿನ ಸ್ಮಾರ್ಟ್‌ಫೋನ್‌ ಒಂದನ್ನು ಈ ವರ್ಷದ ಅಂತ್ಯದೊಳಗೆ ರಿಲೀಸ್‌ ಮಾಡಲು ಸಿದ್ಧವಾಗಿದ್ದು, ಈ ಸ್ಮಾರ್ಟ್‌ಫೋನ್‌ ಗ್ಯಾಲ್ಯಾಕ್ಸಿ ಎ70ಯ ಮುಂದುವರಿದ ಡಿವೈಸ್‌ ಆಗಿರಲಿದೆ. ಗ್ಯಾಲ್ಯಾಕ್ಸಿ ಎ70ಎಸ್‌ ಫೋನಿನ ಮೇನ್‌ ಹೈಲೈಟ್‌ ಎಂದರೇ ಕ್ಯಾಮೆರಾ ಫೀಚರ್‌ ಆಗಿದ್ದು, ಮೊದಲ ಬಾರಿಗೆ 64ಎಂಪಿ ಸೆನ್ಸಾರ್‌ ಸಾಮರ್ಥ್ಯದ ಕ್ಯಾಮೆರಾ ಪರಿಚಯಿಸಲಿದೆ.

ಸದ್ಯ ಮಾರುಕಟ್ಟೆಯಲ್ಲಿ ಪ್ರಮುಖ ಕಂಪನಿಗಳು ಸ್ಮಾರ್ಟ್‌ಫೋನ್‌ಗಳಲ್ಲಿ 48ಎಂಪಿ ಸ್ಯಾಮರ್ಥ್ಯದ ಕ್ಯಾಮೆರಾ ಫೀಚರ್‌ ನೀಡುತ್ತಿದ್ದು, ಆದರೆ ಸ್ಯಾಮ್‌ಸಂಗ್‌ ಗ್ಯಾಲ್ಯಾಕ್ಸಿ 70ಎಸ್‌ ಫೋನ್‌ ಮೂಲಕ 64ಎಂಪಿ ಸೆನ್ಸಾರ್‌ ಕ್ಯಾಮೆರಾ ನೀಡಲು ಮುಂದಾಗಿದೆ. ಹಾಗೆಯೇ ಉಳಿದಂತೆ ಗ್ಯಾಲ್ಯಾಕ್ಸಿ ಎ70 ಹೊಂದಿರುವ ಫೀಚರ್ಸ್‌ಗಳೆ ಇರಲಿವೆ. ಹಾಗಾದರೇ ಗ್ಯಾಲ್ಯಾಕ್ಸಿ ಎ70 ಸ್ಮಾರ್ಟ್‌ಫೋನ್‌ ಒಳಗೊಂಡಿರುವ ಫೀಚರ್ಸ್‌ಗಳೆನು ಎಂಬುದನ್ನು ನೋಡೋಣ ಬನ್ನಿರಿ.

ಓದಿರಿ : ಭಾರತೀಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಿಂದ ದೂರ ಸರಿದ ಸೋನಿ!.ಯಾಕೆ ಗೊತ್ತಾ?

 
ಹೆಲ್ತ್