Back
Home » ಆರೋಗ್ಯ
ಭುಜದಲ್ಲಿ ನೋವೇ? ಈ ಮನೆಮದ್ದುಗಳನ್ನು ಪ್ರಯತ್ನಿಸಿ, ಕೂಡಲೇ ನೋವು ಕಡಿಮೆಯಾಗುವುದು!
Boldsky | 24th May, 2019 12:19 PM
 • ಭುಜದಲ್ಲಿ ನೋವೇ?

  ಇನ್ನುಳಿದಂತೆ ಸಂಧಿವಾತ, ತಿರುಚಿಕೊಂಡ ನರಗಳು, ಅಸ್ಥಿಮಜ್ಜೆ ಜಖಂಗೊಂಡಿರುವುದು, ಕೈಗಳು ಹಲವು ದಿಕ್ಕಿನಲ್ಲಿ ತಿರುಗಲು ಸಾಧ್ಯವಾಗುವಂತೆ ನಿರ್ಮಿಸಲ್ಪಟ್ಟಿರುವ ಮೂಳೆ (rotatorcuff-ಭುಜದ ಮೂಳೆಗಳ ಪೈಕಿ ನಾಲ್ಕು ಮೂಳೆಗಳು ಎತ್ತರದಲ್ಲಿ ಸಂಧಿಸುವ ಭಾಗ) ಇರುವ ಭಾಗದಲ್ಲಿ ಕಾಣಿಸಿಕೊಳ್ಳುವ ಬಿರುಕು ಕಾರಣಗಳಾಗಿವೆ. ಕಾರಣ ಯಾವುದೇ ಆಗಿದ್ದರೂ ಭುಜದ ನೋವು ಎದುರಾದಾಗ ಇದು ಕೈಗಳ ಚಲನೆಗೆ ಅಡ್ಡಿಪಡಿಸಿ ನಿತ್ಯದ ಹತ್ತು ಹಲವು ಕೆಲಸಗಳನ್ನು ಮಾಡದಂತೆ ತಡೆಯುತ್ತದೆ. ಭುಜದ ನೋವು ಗಂಭೀರವಾಗಿರುವ ಸಂದರ್ಭಗಳಲ್ಲಿ ಕೈಗಳಿಂದ ತಲೆಬಾಚಿಕೊಳ್ಳುವಷ್ಟು ಚಿಕ್ಕ ಕೆಲಸವೂ ಆಗದಷ್ಟು ನೋವಿನಿಂದ ಕೂಡಿರುತ್ತದೆ. ಒಂದು ವೇಳೆ ಈ ನೋವಿಗೆ ಭುಜದ ಮೂಳೆಗಳ ಮೇಲ್ಭಾಗ ಅಥವಾ ಹಿಂಭಾಗದಲ್ಲಿ ಯಾವುದಾದರೂ ಬಿರುಕು ಕಾರಣವಾಗಿದ್ದರೆ ಇದಕ್ಕೆ ಶಸ್ತ್ರ ಚಿಕಿತ್ಸೆಯ ಅಗತ್ಯ ಬೀಳಬಹುದು. ಒಂದು ವೇಳೆ ಇದಕ್ಕೂ ಹೊರತಾಗಿ ಸ್ನಾಯುಗಳ ಅಥವಾ ಮೂಳೆ ಮತ್ತು ಸ್ನಾಯುಗಳನ್ನು ಬಂಧಿಸುವ ಅಂಗಾಂಶಗಳಲ್ಲಿ ಎದುರಾದ ತೊಂದರೆಯಿಂದಾಗಿ ನೋವು ಎದುರಾಗಿದ್ದರೆ ವೈದ್ಯರು ಉರಿಯೂತ ನಿವಾರಕ ಗುಳಿಗೆಗಳು ಹಾಗೂ ನೋವು ನಿವಾರಕ ಗುಳಿಗೆಗಳನ್ನು ಸೇವಿಸಲು ಸಲಹೆ ಮಾಡಬಹುದು. ಆದರೆ ಈ ನೋವಿಗೆಂದೇ ನಿರ್ದಿಷ್ಟವಾದ ಔಷಧಿ ಲಭ್ಯವಿಲ್ಲ. ಬನ್ನಿ, ಈ ನೋವನ್ನು ನಿವಾರಿಸಲು ಕೆಲವು ಉತ್ತಮ ಮನೆಮದ್ದುಗಳನ್ನು ನೋಡೋಣ:


 • ಐಸ್ ಥೆರಪಿ

  ನೋವಿಗೊಳಗಾದ ಭಾಗವನ್ನು ಕೊಂಚ ಹೊತ್ತು ಮಂಜುಗಡ್ಡೆಯ ತಂಪಿನಿಂದ ಮರಗಟ್ಟಿಸುವ ಮೂಲಕ ಈ ನೋವನ್ನು ತಾತ್ಕಾಲಿಕ ವಾಗಿ ಕಡಿಮೆಗೊಳಿಸಬಹುದು. ಈ ಭಾಗವನ್ನು ತಣಿಸುವ ಮೂಲಕ ಸ್ನಾಯುಗಳು ಮತ್ತು ಮೂಳೆಸಂಧುಗಳು ಸಡಿಲ ಗೊಳ್ಳುತ್ತವೆ. ಇದಕ್ಕಾಗಿ ಒಂದು ಮೃದುವಾದ ಟವೆಲ್ ನಲ್ಲಿ ಸಾಕಷ್ಟು ಮಂಜುಗಡ್ಡೆಯ ತುಂಡುಗಳನ್ನು ಇರಿಸಿ ಬಟ್ಟೆಯ ಭಾಗ ನೋವಿ ರುವ ಭಾಗಕ್ಕೆ ತಾಕುವಂತೆ ಸುಮಾರು ಇಪ್ಪತ್ತು ನಿಮಿಷ ಇರಿಸ ಬೇಕು. ದಿನದಲ್ಲಿ ಸುಮಾರು ಐದು ಬಾರಿ ಈ ವಿಧಾನವನ್ನು ಪುನರಾವರ್ತಿಸಬೇಕು .ಈ ನೋವು ಎದುರಾದ ಪ್ರಾರಂಭದಲ್ಲಿಯೇ ಈ ವಿಧಾನವನ್ನು ಅನುಸರಿಸಿದರೆ ನೋವು ಉಲ್ಬಣಗೊಳ್ಳದೇ ತಾನಾಗಿಯೇ ಇಲ್ಲವಾಗಲು ಸಾಧ್ಯವಾಗುತ್ತದೆ.


 • ಶಾಖದ ಒತ್ತಡ

  ಒಂದು ವೇಳೆ ನೋವು ಹಳೆಯದಾಗಿದ್ದರೆ ಈ ವಿಧಾನ ಹೆಚ್ಚು ಸೂಕ್ತವಾಗಿದೆ. ಹಳೆಯ ನೋವಿರುವ ಭಾಗಕ್ಕೆ ಸಾಕಷ್ಟು ಶಾಖ ಒದಗಿಸುವ ಮೂಲಕ ಪೆಡಸಾಗಿದ್ದ ಈ ಭಾಗದಲ್ಲಿ ರಕ್ತಪರಿಚಲನೆ ಹೆಚ್ಚುವ ಮೂಲಕ ಸ್ನಾಯುಗಳು ಸಡಿಲಗೊಳ್ಳಲು ಸಾಧ್ಯ ವಾಗುತ್ತದೆ. ಶಾಖವನ್ನು ಕೆಲವಾರು ವಿಧಾನಗಳಿಂದ ಒದಗಿಸಬಹುದು. ಈ ಕಾರ್ಯವನ್ನು ನಿರ್ವಹಿಸುವ ಉಪಕರಣ (Heating pad), ಬಿಸಿನೀರು ತುಂಬಿಸಿರುವ ರಬ್ಬರ್ ನ ಚೀಲ ಅಥವಾ ಬಿಸಿನೀರು ಗಾಜಿನ ಬಾಟಲಿ ಮೊದಲಾದವುಗಳನ್ನು ಬಳಸಬಹುದು. ಒಂದು ವೇಳೆ ವಿದ್ಯುತ್ ಚಾಲಿತ ಉಪಕರಣ ವಾಗಿದ್ದರೆ ಇದರ ಬಿಸಿ ಮಧ್ಯಮ ತೀವ್ರತೆಯಲ್ಲಿರುವಂತೆ ಎಚ್ಚರ ವಹಿಸಿ. ಎಕೆಂದರೆ ನಮ್ಮ ದೇಹ ಮಧ್ಯಮ ತೀವ್ರತೆಯ ಬಿಸಿಗೆ ಹೆಚ್ಚು ಸ್ಪಂದಿಸುತ್ತದೆ. ಇದರ ಜೊತೆಗೇ ಸ್ನಾನದ ಸಮಯದಲ್ಲಿ ಬೆಚ್ಚನೆಯ ನೀರು ನೋವಿರುವ ಭಾಗದ ಮೇಲೆ ಕೊಂಚ ಕಾಲ ಸುರಿಯುಂತೆ ಮಾಡುವ ಮೂಲಕವೂ ನೋವನ್ನು ಕಡಿಮೆಗೊಳಿಸಬಹುದು.. ಭುಜದ ನೋವಿಗೆ ಕಾರಣ ಯಾವುದೇ ಇರಲಿ, ಈ ವಿಧಾನದಿಂದ ಎಲ್ಲ ಬಗೆಯ ನೋವುಗಳೂ ಕಡಿಮೆಯಾಗುತ್ತವೆ.


 • ಲ್ಯಾವೆಂಡರ್ ಎಣ್ಣೆಯ ಸುವಾಸನೆಯ ಚಿಕಿತ್ಸಾ ವಿಧಾನ

  ಅರೋಮಾಥೆರಪಿ ಎಂದು ಕರೆಯಲ್ಪಡುವ ಈ ವಿಧಾನದಲ್ಲಿ ಲ್ಯಾವೆಂಡರ್ ಎಣ್ಣೆಯ ಉರಿಯೂತ ನಿವಾರಕ ಮತ್ತು ಗುಣಪಡಿಸುವ ಗುಣಗಳನ್ನು ಬಳಸಲಾಗುತ್ತದೆ. ಇದಕ್ಕಾಗಿ ಕೆಲವು ತೊಟ್ಟು ಲ್ಯಾವೆಂಡರ್ ಎಣ್ಣೆಯ ಕೆಲವು ತೊಟ್ಟುಗಳನ್ನು ಸ್ನಾನದ ತೊಟ್ಟಿಯ ನೀರಿಗೆ ಬೆರೆಸಿ ಈ ನೀರಿನಲ್ಲಿ ನೋವಿರುವ ಭಾಗ ಪೂರ್ಣವಾಗಿ ಮುಳುಗುವಂತೆ ಸುಮಾರು ಅರ್ಧಘಂಟೆಯಾದರೂ ಇರಬೇಕು. ಈ ಎಣ್ಣೆ ಸ್ನಾಯುಗಳ ನೋವನ್ನು ನಿವಾರಿಸುವ ಜೊತೆಗೇ ಇದರ ಪರಿಮಳ ಮನಸ್ಸನ್ನು ನಿರಾಳಗೊಳಿಸುತ್ತದೆ. ಅಲ್ಲದೇ ಭುಜದ ಹಾಗೂ ಕುತ್ತಿಗೆಯ ನೋವನ್ನೂ ಇಲ್ಲವಾಗಿಸುತ್ತದೆ.


 • ಅರಿಶಿನದ ಲೇಪ

  ಅರಿಶಿನದಲ್ಲಿರುವ ಕುರ್ಕುಮಿನ್ ಎಂಬ ಪೋಷಕಾಂಶದಲ್ಲಿ ಪ್ರಬಲ ಉರಿಯೂತ ನಿವಾರಕ ಗುಣವಿದೆ. ಹಾಗಾಗಿ ಉರಿಯೂತದ ಕಾರಣದಿಂದ ಊದಿಕೊಂಡು ನೋವು ಎದುರಾಗಿರುವ ಭುಜದ ನೋವಿಗೆ ಅರಿಶಿನದ ಲೇಪ ಹೆಚ್ಚಿನ ಪೋಷಣೆ ಒದಗಿಸುತ್ತದೆ. ಇದಕ್ಕಾಗಿ ಕೊಂಚ ಉಗುರುಬೆಚ್ಚಗಿನ ಕೊಬ್ಬರಿ ಎಣ್ಣೆಯಲ್ಲಿ ಅರಿಶಿನದ ಪುಡಿಯನ್ನು ಬೆರೆಸಿ ನೋವಿರುವ ಭಾಗಕ್ಕೆ ತೆಳುವಾಗಿ ಲೇಪಿಸಿಕೊಂಡು ಒಣಗಲು ಬಿಡಬೇಕು. ಕನಿಷ್ಟ ಅರ್ಧ ಘಂಟೆಯಾದರೂ ಹಾಗೇ ಬಿಟ್ಟು ಬಳಿಕ ತೊಳೆದುಕೊಳ್ಳಬೇಕು.


 • ಶುಂಠಿಯ ಟೀ

  ಬಿಸಿನೀರಿಗೆ ಒಡ್ಡಿದಾಗ ಶುಂಠಿಯಲ್ಲಿರುವ ಪೋಷಕಾಂಶಗಳು ಬಿಡುಗಡೆಗೊಂಡು ನಾಸಿಕಗಳ ಮೂಲಕ ಸೇವಿಸಲ್ಪಟ್ಟರೆ ಕೆಲವಾರು ಆರೋಗ್ಯಕರ ಪ್ರಯೋಜನಗಳನ್ನು ಒದಗಿಸುತ್ತವೆ. ಅರಿಶಿನ ದಂತೆಯೇ ಶುಂಠಿಯಲ್ಲಿಯೂ ಪ್ರಬಲ ಉರಿಯೂತ ನಿವಾರಕ ಗುಣಗಳಿವೆ. ಇವು ನೋವಿರುವ ಭಾಗದಲ್ಲಿ ಹೆಚ್ಚು ರಕ್ತಪರಿಚಲನೆ ಯಾಗುವಂತೆ ಮಾಡಿ ನೋವನ್ನು ಸ್ವಾಭಾವಿಕವಾಗಿ ಕಡಿಮೆ ಗೊಳಿಸಲು ನೆರವಾಗುತ್ತವೆ. ಶುಂಠಿಯ ಪೂರ್ಣ ಪ್ರಯೋಜನ ಪಡೆಯಲು ಶುಂಠಿಯನ್ನು ಕುದಿಸಿದ ಟೀ ಕುಡಿಯುವುದಾಗಿದೆ.


 • ಲಿಂಬೆ ರಸ

  ಲಿಂಬೆರಸದಲ್ಲಿರುವ ಸಿಟ್ರಿಕ್ ಆಮ್ಲವೂ ಉತ್ತಮ ಉರಿಯೂತ ನಿವಾರಕ ಮತ್ತು ಆಂಟಿ ಆಕ್ಸಿಡೆಂಟ್ ಗುಣ ಹೊಂದಿದ್ದು ನೋವನ್ನು ನಿವಾರಿಸಲು ನೆರವಾಗುತ್ತದೆ. ವಿಶೇಷವಾಗಿ ಸಂಧಿವಾತದ ಕಾರಣದಿಂದ ನೋವು ಎದುರಾಗಿದ್ದರೆ ಲಿಂಬೆರಸ ಅತ್ಯುತ್ತಮ ಪರಿಹಾರವಾಗಿದೆ. ಇದಕ್ಕಾಗಿ ಒಂದು ಲಿಂಬೆಹಣ್ಣನ್ನು ಹಿಂಡಿ ರಸ ಸಂಗ್ರಹಿಸಿ ಒಂದು ಲೋಟ ನೀರಿನಲ್ಲಿ ಕೊಂಚ ಜೇನಿನೊಂದಿಗೆ ಬೆರೆಸಿ ನಿಯಮಿತವಾಗಿ ಕುಡಿಯುತ್ತಿರಬೇಕು.


 • ಪುದಿನಾ ಎಲೆಗಳ ಲೇಪ

  ಪುದಿನಾ ಎಲೆಗಳಲ್ಲಿ ಪ್ರಬಲ ನರನೋವು ವಿರೋಧಿ(anti-neuralgic) ಗುಣಗಳಿವೆ. ಅಂದರೆ ನರಗಳ ಮೂಲಕ ದೇಹವೆಲ್ಲಾ ವ್ಯಾಪಿಸುವ ನೋವನ್ನು ನಿವಾರಿಸುವ ಗುಣ. ಭುಜದ ಭಾಗದಲ್ಲಿ ಹಲವಾರು ನರಗಳು ಹಾದುಹೋಗಿದ್ದು ಒಂದರ ಪಕ್ಕ ಇನ್ನೊಂದು ಬರುವಂತೆ ಗೋಜಲುಮಯವಾಗಿದೆ. ಇದೇ ಕಾರಣಕ್ಕೆ ಈ ಭಾಗದಲ್ಲಿ ಪುದಿನಾ ಲೇಪವನ್ನು ಹಚ್ಚಿದರೆ ಭುಜದ ಸ್ನಾಯುಗಳಿಗೆ ಎದುರಾಗಿರುವ ನೋವು ಇಲ್ಲವಾಗುತ್ತದೆ. ಕಲವೊಮ್ಮೆ ನೋವು ಈ ನರಗಳಿಂದಲೇ ಪ್ರಾರಂಭವಾಗಿದ್ದು ಪಕ್ಕದ ಸ್ನಾಯುಗಳಿಗೂ ಈ ನೋವು ಹರಡುತ್ತದೆ. ಪುದಿನಾ ಲೇಪ ಈ ಭಾಗವನ್ನು ಮರಗಟ್ಟಿಸಿ ಭುಜದ ನೋವು ಇಲ್ಲವಾಗುವಂತಾಗಿಸುತ್ತದೆ. ಇದಕ್ಕಾಗಿ ಕೆಲವು ಪುದಿನಾ ಎಲೆಗಳನ್ನು ಅರೆದು ನಯವಾದ ಲೇಪವನ್ನಾಗಿಸಿ ನೋವಿರುವ ಭಾಗದ ಮೇಲೆ ತೆಳುವಾಗಿ ಲೇಪಿಸಿಕೊಳ್ಳಬೇಕು. ಬಳಿಕ ಸುಮಾರು ಇಪ್ಪತ್ತು ನಿಮಿಷಗಳ ಕಾಲ ಹಾಗೇ ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಬೇಕು.


 • ಎಪ್ಸಂ ಉಪ್ಪಿನ ನೀರಿನ ಸ್ನಾನ

  ಎಪ್ಸಂ ಉಪ್ಪಿನಲ್ಲಿಯೇ ಕೆಲಗು ಗುಣಪಡಿಸುವ ಗುಣಗಳಿದ್ದು ನೋವನ್ನು ನಿವಾರಿಸಲೂ ನೆರವಾಗುತ್ತದೆ. ನೀರಿನಲ್ಲಿ ಬೆರೆತಾಗ ಈ ಉಪ್ಪು ಮೆಗ್ನೇಶಿಯಂ ಮತ್ತು ಸಲ್ಫೇಟ್ ಕಣಗಳಾಗಿ ಒಡೆಯುತ್ತದೆ. ಸ್ನಾನದ ತೊಟ್ಟೆಯಲ್ಲಿ ಉಗುರುಬೆಚ್ಚನೆಯ ನೀರನ್ನು ತುಂಬಿಸಿ ಇದರಲ್ಲಿ ಕೊಂಚ ಎಪ್ಸಂ ಉಪ್ಪನ್ನು ಬೆರೆಸಿ ಈ ನೀರಿನಲ್ಲಿ ದೇಹವನ್ನು ಸುಮಾರು ಅರ್ಧ ಘಂಟೆ ಕಾಲ ಮುಳುಗಿಸಿಡುವ ಮೂಲಕ ಈ ಕಣಗಳು ಚರ್ಮದ ಸೂಕ್ಷ್ಮರಂಧ್ರಗಳ ಮೂಲಕ ದೇಹವನ್ನು ಪ್ರವೇಸಿಸುತ್ತವೆ. ಬಳಿಕ ಇವು ಪೆಡಸಾಗಿದ್ದ ಸ್ನಾಯುಗಳನ್ನು ಸಡಿಲಿಸಿ ನೋವನ್ನು ನಿವಾರಿಸುತ್ತವೆ.


 • ಭುಜದ ಮಸಾಜ್

  ಇದಕ್ಕಾಗಿ ತರಬೇತಿ ಪಡೆದ ಮಸಾಜ್ ಬಲ್ಲವರ ಅಗತ್ಯವಿದೆ. ಸರಿಯಾದ ವಿಧಾನದಲ್ಲಿ ಮಾಡಲಾಗುವ ಮಸಾಜ್ ನಿಂದ ಹಲವಾರು ಪ್ರಯೋಜನಗಳಿವೆ. ಸಾಮಾನ್ಯವಾಗಿ ದೇಹಕ್ಕೆ ಎದುರಾಗುವ ಹೊರನೋವುಗಳೆಲ್ಲವನ್ನೂ ಮಸಾಜ್ ಮೂಲಕ ಗುಣಪಡಿಸಬಹುದು ಇದಕ್ಕೆ ಭುಜದ ನೋವು ಸಹಾ ಹೊರತಲ್ಲ. ತರತೇತಿ ಪಡೆದ ಮಸಾಜ್ ನೀಡುವ ವ್ಯಕ್ತಿ ಈ ಭಾಗದ ನೋವಿನ ತೀವ್ರತೆಯನ್ನು ಅನುಸರಿಸಿ ಅಗತ್ಯವಿದ್ದಷ್ಟು ಮಾತ್ರವೇ ಒತ್ತಡದಿಂದ ಉತ್ತಮ ಗುಣಮಟ್ಟದ ತೈಲವನ್ನು ತಿಕ್ಕುವ ಮೂಲಕ ಸ್ನಾಯುಗಳು ಸಡಿಲಗೊಂಡು ನೋವು ನಿವಾರಣೆಯಾಗುತ್ತದೆ. ಅಲ್ಲದೇ ಈ ಭಾಗದಲ್ಲಿ ರಕ್ತಪರಿಚಲನೆಯೂ ಹೆಚ್ಚುತ್ತದೆ. ಉತ್ತಮ ಪರಿಣಾಮಕ್ಕಾಗಿ ಮಸಾಜ್ ಮಾಡುವ ತೈಲದಲ್ಲಿ ಕೊಂಚ ಅವಶ್ಯಕ ತೈಲವನ್ನೂ ಬೆರೆಸಬಹುದು.


 • ಭುಜಗಳನ್ನು ಸೆಳೆಯುವ ವ್ಯಾಯಾಯ

  ಭುಜಗಳನ್ನು ಸೆಳೆಯಬಹುದಾದ ಯಾವುದೇ ಬಗೆಯ ಸರಳ ವ್ಯಾಯಾಮವನ್ನು ದಿನಕ್ಕೆ ಎರಡರಿಂದ ಮೂರು ಬಾರಿ, ಆದರೆ ತುಂಬಾ ನಿಧಾನವಾಗಿ ನಿರ್ವಹಿಸಬೇಕು. ಉದಾಹರಣೆಗೆ ನೋವಿರುವ ಭುಜದ ಕೈಯನ್ನು ನಿಧಾನವಾಗಿ ಕೆಳಗಿನಿಂದ ಕೈ ಮಡಚದೇ ಮೇಲಿತ್ತಿ ನಿಧಾನವಾಗಿಯೂ ಇಳಿಸಬೇಕು. ನಿಮ್ಮ ಮನೆಯ ಕಪಾಟಿನ ಎರಡೂ ಬಾಗಿಲುಗಳನ್ನು ತೆರೆದು ನಿಧಾನವಾಗಿ ಮುಚ್ಚುವುದು ಇನ್ನೊಂದು ವ್ಯಾಯಾಮವಾಗಿದೆ. ಆದರೆ ಇದಕ್ಕೂ ಮುನ್ನ ನೋವಿರುವ ಭಾಗಕ್ಕೆ ಶಾಖವನ್ನು ನೀಡುವ ಬಿಸಿನೀರಿನ ಬಾಟಲಿಯಿಂದ ಈ ಭಾಗಕ್ಕೆ ಕೊಂಚ ಶಾಖ ನೀಡಿದರೆ ಉತ್ತಮ ಪರಿಣಾಮ ದೊರಕುತ್ತದೆ. ಉಳಿದ ವ್ಯಾಯಾಮಗಳಲ್ಲಿ ಟವೆಲ್ಲೊಂದರ ಎರಡೂ ತುದಿಗಳನ್ನು ಕೈಗಳಲ್ಲಿ ಹಿಡಿದು ಟವೆಲ್ ಮುಂಭಾಗದಿಂದ ಬೆನ್ನಿನವರೆಗೆ ಬರುವಂತೆ ಕೈಗಳನ್ನು ಮಡಚದೇ ತರುವ ಮೂಲಕ ಭುಜದ ಸ್ನಾಯುಗಳಿಗೆ ಉತ್ತಮ ವ್ಯಾಯಾಮ ದೊರಕುತ್ತದೆ. ಅಲ್ಲದೇ ಕೈಗಳನ್ನು ಪಕ್ಕಕ್ಕೆ ಸೆಳೆಯುವ ಹಾಗೂ ಕ್ರಿಕೆಟ್ ಬೌಲಿಂಗ್ ಮಾಡುವ ಪರಿಯಲ್ಲಿ ಪ್ರದಕ್ಷಿಣ ಮತ್ತು ಅಪ್ರದಕ್ಷಿಣವಾಗಿ ಕೈಗಳನ್ನು ತಿರುಗಿಸುವ ಮೂಲಕವೂ ಉತ್ತಮ ವ್ಯಾಯಾಮ ಪಡೆಯಬಹುದು.
ಸಾಮಾನ್ಯವಾಗಿ ಎದುರಾಗುವ ಮೂಳೆಸಂಧುಗಳ ಮತ್ತು ಸ್ನಾಯುಗಳ ನೋವುಗಳಲ್ಲಿ ಭುಜದ ಸ್ನಾಯುಗಳ ನೋವು ಹೆಚ್ಚಿನ ಪ್ರಮಾಣದಲ್ಲಿದೆ. ಇದನ್ನು ನಿವಾರಿಸಲು ನೋವು ನಿವಾರಕ ಗುಳಿಗೆಗಳನ್ನು ಸೇವಿಸುವ ಬದಲು ಸುರಕ್ಷಿತವಾದ ಸುಲಭ ಮನೆಮದ್ದುಗಳ ಬಗ್ಗೆ ಇಂದಿನ ಲೇಖನದಲ್ಲಿ ವಿವರಗಳನ್ನು ನೀಡಲಾಗಿದೆ. ವೈದರಲ್ಲಿ ನೋವು ಎಂದು ಹೇಳಿಕೊಂಡು ಬರುವ ದೂರುಗಳಲ್ಲಿ ಭುಜದ ನೋವಿಗೆ ಎರಡನೇ ಸ್ಥಾನವಿದೆ. ದೇಹದ ಹಲವು ಪ್ರಮುಖ ಕೆಲಸಗಳನ್ನು ನಿರ್ವಹಿಸುವ ಸ್ನಾಯುಗಳಲ್ಲಿ ಭುಜದ ಸ್ನಾಯುಗಳೂ ಪ್ರಮುಖವಾಗಿದ್ದರೂ ನೋವಿನ ವಿಷಯ ಬಂದಾಗ ಮಾತ್ರ ಹೆಚ್ಚಿನವರು ಅಲಕ್ಷಿಸುತ್ತಾರೆ.

ಈ ಸ್ನಾಯುಗಳು ಹೆಚ್ಚು ಸಂಕೀರ್ಣವಾಗಿದ್ದು ಹೆಚ್ಚಿನ ಕಾಳಜಿಯ ಅಗತ್ಯವಿದ್ದರೂ ಹೆಚ್ಚಿನವರು ಅಷ್ಟಾಗಿ ಕಾಳಜಿ ವಹಿಸುವುದಿಲ್ಲ. ಆದರೆ ನೋವು ಎಂದು ವೈದ್ಯರಲ್ಲಿ ಚಿಕಿತ್ಸೆಗಾಗಿ ಬರುವ ಪ್ರಕರಣಗಳಿಗೆ ಬರುವ ಬೆನ್ನು ಪ್ರಥಮ ಸ್ಥಾನದಲ್ಲಿದೆ. ಭುಜದ ನೋವು ಎದುರಾಗಲು ಹಲವಾರು ಕಾರಣಗಳಿದೆ. ಪ್ರಮುಖವಾದ ಕಾರಣವೆಂದರೆ ಭುಜದ ಸ್ನಾಯುಗಳು ಪೆಡಸಾಗುವುದು. (ಪರಿಣಾಮವಾಗಿ ಕೈಗಳನ್ನು ಪೂರ್ಣವಾಗಿ ಅಗಲಿಸಲು ಸಾಧ್ಯವಾಗದೇ ಮರಗಟ್ಟಿದಂತಾಗುತ್ತದೆ ಇದಕ್ಕೆ frozenshoulder ಎಂದು ಕರೆಯುತ್ತಾರೆ).

 
ಹೆಲ್ತ್