Back
Home » ಇತ್ತೀಚಿನ
'ವಾಟ್ಸ್ಆಪ್' ಎಷ್ಟು ಸೇಫ್?..ಆತಂಕಕಾರಿ ಸುದ್ದಿ ನೀಡಿದ ಟೆಕ್ ತಜ್ಞರು!!
Gizbot | 25th May, 2019 09:00 AM
 • ವಾಟ್ಸ್​​ಆಪ್‌ ಹ್ಯಾಕ್

  ಪ್ರಪಂಚದಾದ್ಯಂತ ಕೋಟ್ಯಾಂತರ ಜನರು ಯಾವುದೇ ಆತಂಕವಿಲ್ಲದೆ ಬಳಸುತ್ತಿರುವ ವಾಟ್ಸ್​​ಆಪ್‌ಗೆ​ ವಾಯ್ಸ್​ ಕಾಲ್ ಮೂಲಕ ಸ್ಪೈವೇರ್ (​​spyware) ಹರಡಿದೆ ಎಂಬ ಆತಂಕಕಾರಿ ಸುದ್ದಿ ಹೊರಬಿದ್ದಿತ್ತು ಹಲವಾರು ಜನರ ಫೋನ್​ಗಳಿಗೆ ವಾಟ್ಸ್​​ಆಪ್​​ ವಾಯ್ಸ್​ ಕಾಲ್ ಮುಖಾಂತರ ಸ್ಪೈವೇರ್ (​​spyware) ​ಹರಡಿರುವುದಾಗಿ ವಾಟ್ಸ್​ಆಪ್​​​ ಸಂಸ್ಥೆ ಇಂದು ಒಪ್ಪಿಕೊಂಡಿದ್ದು, ಐಫೋನ್​ ಹಾಗೂ ಆಂಡ್ರಾಯ್ಡ್​ ಬಳಕೆದಾರರೀರ್ವರಿಗೂ ಈ ಸ್ಪೈವೆರ್ ಪರಿಣಾಮ ಬೀರಿದೆ ಎಂದು ಮಾಧ್ಯಮ ವರದಿಗಳು ಹೇಳಿದ್ದವು.


 • ವಾಟ್ಸ್ಆಪ್‌ನಲ್ಲಿತ್ತು ಸ್ಪೈವೇರ್! ​

  ಇದೇ ತಿಂಗಳ ಆರಂಭದಲ್ಲಿ ವಾಟ್ಸ್​​ಆಪ್​ ವಾಯ್ಸ್​ ಕಾಲ್​​ಗೆ ಹೆಚ್ಚುವರಿ ಸೆಕ್ಯೂರಿಟಿ ಎನ್​​ಹ್ಯಾನ್ಸ್​ಮೆಂಟ್​​ಗಳನ್ನು ಸೇರಿಸುವಾಗ ವಾಟ್ಸ್ಆಪ್‌ನಲ್ಲಿ ಸ್ಪೈವೇರ್ ಇರುವ ಬಗ್ಗೆ ತಿಳಿದುಬಂದಿತ್ತು. ಇದರಲ್ಲಿ ಆಪ್​ ಬಳಕೆದಾರರ ಪಾತ್ರವೇನೂ ಇರುವುದಿಲ್ಲ. ಸ್ಪೈವೇರ್​ಗೆ ಟಾರ್ಗೆಟ್​ ಆದ ಬಳಕೆದಾರರಿಗೆ ಅಪರಿಚಿತ ನಂಬರ್​​ನಿಂದ ಫೋನ್​ ಕಾಲ್ ಬರುತ್ತದೆ. ಆ ಕರೆಯನ್ನ ಸ್ವೀಕರಿಸಿದ್ರೂ, ಸ್ವೀಕರಿಸದೇ ಇದ್ರೂ ಸ್ಪೈವೇರ್​ ಹರಡುತ್ತದೆ ಎಂದು ಹೇಳಲಾಗಿತ್ತು.


 • ಸ್ಪೈವೇರ್ ಅಂದ್ರೆ ಏನು?

  ಸ್ಪೈವೇರ್ ಒಂದು ಸಾಫ್ಟ್​ವೇರ್​ ಆಗಿದ್ದು, ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ಮಾಹಿತಿಯನ್ನು ಸಂಗ್ರಹಿಸಲು ಬಳಸಲಾಗುವ ಸಾಫ್ಟ್‌ವೇರ್ ಎಂದು ಹೇಳಬಹುದು. ಆನ್‌ಲೈನ್ ಮೂಲಕ ಮೊಬೈಲ್ ಅಥವಾ ಯಾವುದೋ ಒಂದು ಆಪ್ ಸಹಾಯದಿಂದ ಬಳಕೆದಾರರಿಗೆ ಅವರಿಗೆ ತಿಳಿಯದಂತೆಯೇ ಹ್ಯಾಕ್ ಮಾಡುವ ತಂತ್ರಾಂಶವನ್ನೇ ಸ್ಪೈವೇರ್ ಎಂದು ಕರೆಯಲಾಗುತ್ತದೆ. ಇವುಗಳು ಮೊಬೈಲ್ ಅಥವಾ ಆಪ್‌ಗಳಿಂದ ಬಳಕೆದಾರರ ಸಮ್ಮತಿ ಇಲ್ಲದೆ ಅವರ ಮಾಹಿತಿ, ಕುಕ್ಕೀಸ್​​ ಅಥವಾ ಇಥರ ಎಲ್ಲಾ ಮಾಹಿತಿಗಳನ್ನು ಕದ್ದು ತನ್ನ ಮಾಲಿಕನಿಗೆ ಕಳುಹಿಸುತ್ತವೆ.


 • ಸ್ಪೈವೇರ್​​ ಟಾರ್ಗೆಟ್ ಯಾರಿಂದ?

  ಈಗ ಕಂಡುಬಂದಿರುವ ಸ್ಪೈವೇರ್ ಟಾರ್ಗೆಟ್​ ಮಾಡಿರುವವರು ಯಾರು ಎನ್ನುವ ಬಗ್ಗೆ ವಾಟ್ಸ್​ಆಪ್ ಸಂಸ್ಥೆ​ ಸದ್ಯಕ್ಕೆ ಸ್ಪಷ್ಟಪಡಿಸಿಲ್ಲ. ಆದರೆ, ಇಸ್ರೇಲ್​​ನ ಸೈಬರ್​ ಇಂಟೆಲಿಜೆನ್ಸ್​ ಸಂಸ್ಥೆ ಎನ್​​ಎಸ್​ಓ ಗ್ರೂಪ್​ನಿಂದ ಈ ಸ್ಪೈವೆರ್ ಬಂದಿದೆ ಎಂದು ಶಂಕಿಸಲಾಗಿದೆ.​​ ಈ ವಿಷಯ ಬೆಳಕಿಗೆ ಬಂದ ಬೆನ್ನಲ್ಲೇ, ಇಸ್ರೇಲ್​​ ಕಂಪನಿಯ ಶಕ್ತಿಶಾಲಿ ಸ್ಪೈವೇರ್​ ಹರಡುವಿಕೆ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿವೆ. ಇದು ಕಳೆದ ಕೆಲ ತಿಂಗಳ ಹಿಂದೆಯೂ ಸುದ್ದಿಯಾಗಿದ್ದನ್ನು ನೀವು ನೋಡಬಹುದು.


 • ಸ್ಪೈವೇರ್ ಪರಿಣಾಮ ಏನು?

  ಕಂಡುಬಂದಿರುವ ಸ್ಪೈವೇರ್‌ನಿಂದ ಎಷ್ಟು ಬಳಕೆದಾರರ ಮೇಲೆ ಪರಿಣಾಮ ಬೀರಿದೆ ಎಂಬುದು ಈ ವರೆಗೂ ತಿಳಿದುಬಂದಿಲ್ಲ. ಆದರೆ, ಈ ಸ್ಪೈವೇರ್ ಮೂಲಕ ಸ್ಮಾರ್ಟ್​​ಫೋನ್​​ಗಳನ್ನು ಹ್ಯಾಕ್ ಮಾಡಿ, ಅವರ ಮೊಬೈಲ್ ಕ್ಯಾಮೆರಾಗಳನ್ನು ಕಂಟ್ರೋಲ್​ಗೆ ತೆಗೆದುಕೊಳ್ಳಬಹುದು ಎಂದು ಹೇಳಲಾಗಿದೆ. ಈ ಸ್ಪೈವೇರ್ ವಾಟ್ಸ್ಆಪ್ ಅನ್ನು ಒಂದು ರೀತಿಯಲ್ಲಿ ಬಳಕೆದಾರರ ಕಣ್ಗಾವಲಿಗೆ ಬಳಸೋ ಪುಟಾಣಿ ಸಾಧನಗಳನ್ನಾಗಿ ಮಾಡಿಬಿಡಬಹುದು ಎಂದು ಹೇಳಲಾಗುತ್ತಿದೆ.


 • ನೀವು ಮುನ್ನೆಚ್ಚರಿಕೆ ವಹಿಸಿ!

  ನಲ್ಲಿರುವ ಎನ್‌ಕ್ರಿಪ್ಷನ್ ಮುರಿಯಲು ಆಗಿಲ್ಲ. ಏಕೆಂದರೆ ಫೇಸ್‌ಬುಕ್‌ ತಕ್ಷಣವೇ ಪ್ರತಿಕ್ರಿಯಿಸಿ ಸಾಫ್ಟ್‌ವೇರ್‌ ಅಪ್‌ಡೇಟ್‌ ಮಾಡಿದೆ. ವಾಟ್ಸ್ಆಪ್‌ನಲ್ಲಿ ಸ್ಪೈವೇರ್ ಇರುವುದು ತಿಳಿದ ನಂತರ ಈ ದೋಷವನ್ನ ಸರಿಪಡಿಸಲು ವಾಟ್ಸ್​ಆಪ್​ ಎಂಜಿನಿಯರ್​​​​ಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ ವಾಟ್ಸ್​​ಆಪ್ ಸಂಸ್ಥೆ ನೂತನ​ ಅಪ್​ಡೇಟ್​​ ಬಿಡುಗಡೆ ಮಾಡಿದ್ದು, ಬಳಕೆದಾರರು ಸ್ಪೈವೇರ್​​ನಿಂದ ರಕ್ಷಣೆ ಪಡೆಯಲು ಕೂಡಲೇ ಲೇಟೆಸ್ಟ್​​ ವರ್ಷನ್​ಗೆ ​​ಆಪ್‌ಗೆ​​ ಅಪ್​ಡೇಟ್​ ಮಾಡುವಂತೆ ಸಂಸ್ಥೆ ಹೇಳಿದೆ.
ಇತ್ತೀಚಿಗಷ್ಟೇ ಹ್ಯಾಕ್ ಆಗಿದ್ದ ವಾಟ್ಸ್ಆಪ್ ಮೇಲೆ ಹಲವು ಅನುಮಾನಗಳು ಶುರುವಾದ ನಂತರ ತಜ್ಞರ ತಂಡವೊಂದು ವಾಟ್ಸ್ಆಪ್ ಬಳಕೆದಾರರಿಗೆ ಎಚ್ಚರಿಕೆ ಸುದ್ದಿಯನ್ನು ನೀಡಿದೆ. ವಾಟ್ಸ್ಆಪ್‌ನಲ್ಲಿ ಎನ್‌ಕ್ರಿಪ್ಷನ್ ಇರುವುದರಿಂದ ಒಬ್ಬರಿಗೆ ಕಳುಹಿಸುವ ಸಂದೇಶ ಅಥವಾ ಇನ್ಯಾವುದೇ ಮಾಹಿತಿಯನ್ನು ಇನ್ನೊಬ್ಬರು ಕದ್ದು ನೋಡಲು ಅಥವಾ ಕೇಳಲು ಸಾಧ್ಯವಿಲ್ಲ. ಆದರೆ, ಎನ್‌ಕ್ರಿಪ್ಷನ್‌ನಿಂದ ಹ್ಯಾಂಡ್‌ಸೆಟ್‌ ಮೇಲೆ ಆಗುವ ದಾಳಿಯನ್ನು ತಡೆಯಲು ಸಾಧ್ಯವಿಲ್ಲ ಎಂದು ಸಂಶೋಧಕರ ತಂಡವೊಂದು ಹೇಳಿದೆ.

ಹೌದು, ಯಾವುದೇ ಅಪ್ಲಿಕೇಷನ್ ಆದರೂ ಅದನ್ನು ಕುತಂತ್ರಾಂಶ ದಾಳಿಯಿಂದ ತಡೆಯುವುದು ಕಷ್ಟ. ಕುತಂತ್ರಾಂಶಗಳು ದಾಳಿ ಮಾಡದೆಯೇ ಇರುವಂತೆ ಸಾಫ್ಟ್‌ವೇರ್‌ ಬರೆಯಲು ಈವರೆಗೂ ಆಗಿಲ್ಲಎಂದು ಡಿಜಿಟಲ್‌ ರೈಟ್ಸ್‌ ಗ್ರೂಪ್‌ ಸೆಂಟರ್‌ ಫಾರ್‌ ಡೆಮಾಕ್ರಸಿ ಆಂಡ್ ಟೆಕ್ನಾಲಜಿಯ ಮುಖ್ಯ ತಂತ್ರಜ್ಞ ತಿಳಿಸಿದ್ದಾರೆ. ಹಾಗೆಯೇ, ಖಾಸಗಿತನದ ರಕ್ಷಣೆಗೆ ಎನ್‌ಕ್ರಿಪ್ಷನ್ ಒಂದೇ ಮುಖ್ಯವಲ್ಲ. ಆಪ್‌ ನಂಬಿಕೆಗೂ ಅರ್ಹವಾಗಿರುವುದು ಮುಖ್ಯವಾಗುತ್ತದೆ ಎಂದು ಇನ್ನೊಬ್ಬ ತಜ್ಞ ಅಭಿಪ್ರಾಯಪಟ್ಟಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ.

ಜಗತ್ತಿನ ಅತ್ಯಂತ ಜನಪ್ರಿಯೆ ಮೆಸೆಜಿಂಗ್ ಆಪ್‌ ಆಗಿರುವ ವಾಟ್ಸ್‌ಆಪ್‌ ಸುರಕ್ಷಿತವಾಗಿಲ್ಲ. ಅದರ ಮೇಲೆ ನಿಗಾ ಇಡುವ ಅಗತ್ಯ ಇದೆ ಎಂದು ಟೆಲಿಗ್ರಾಂ ಮೆಸೆಜಿಂಗ್ ಆಪ್‌ ಅಭಿವೃದ್ಧಿಕಾರ ಪಾವೆಲ್ ಡೊರೋವ್ ಕೂಡ ಹೇಳಿರುವುದು ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಹಾಗಾಗಿ, ಇಲ್ಲಿಯವರೆಗೂ ಎನ್‌ಕ್ರಿಪ್ಷನ್ ಇರುವುದರಿಂದ ವಾಟ್ಸ್ಆಪ್ ಸೇಫ್ ಆಗಿದೆ ಎಂದು ತಿಳಿದಿದ್ದರೆ ತಪ್ಪು ಎನ್ನುತ್ತಿವೆ ವರದಿಗಳು. ಹಾಗಾದರೆ, ಏನಿದು ವಾಟ್ಸ್ಆಪ್‌ನ ವಿವಾದಿತ ಸೈಬರ್ ಅಟ್ಯಾಕ್ ಎಂಬುದನ್ನು ಮುಂದೆ ಓದಿ ತಿಳಿಯಿರಿ.

 
ಹೆಲ್ತ್