Back
Home » ಗಾಸಿಪ್
'RRR'ನಲ್ಲಿ ಸಾಯಿ ಪಲ್ಲವಿ?, ಚಾನ್ಸ್ ಸಿಕ್ಕರೆ ಬಿಡುವುದುಂಟೆ
Oneindia | 1st Jun, 2019 03:47 PM
 • 'ಆರ್ ಆರ್ ಆರ್'ನಲ್ಲಿ ಸಾಯಿ ಪಲ್ಲವಿ

  ರಾಜಮೌಳಿ ರಂತಹ ಮಹಾ ನಿರ್ದೇಶಕರ ಸಿನಿಮಾದಲ್ಲಿ ನಟಿಸಬೇಕು ಎನ್ನುವುದು ಪ್ರತಿ ನಟಿಯರ ಕನಸಾಗಿರುತ್ತದೆ. ಸಾಯಿ ಪಲ್ಲವಿಗೆ ಕೂಡ ಆ ರೀತಿಯ ಆಸೆ ಇದೆಯೇ ಗೊತ್ತಿಲ್ಲ ಆದರೆ, ರಾಜಮೌಳಿ ರವರ ಮುಂದಿನ ಚಿತ್ರ 'ಆರ್ ಆರ್ ಆರ್' ನಲ್ಲಿ ಸಾಯಿ ಪಲ್ಲವಿ ನಾಯಕಿ ಎನ್ನುವ ಸುದ್ದಿ ಪ್ರಾರಂಭವಾಗಿ ಬಿಟ್ಟಿದೆ.

  ರಾಜಮೌಳಿ 'RRR' : ಕತೆ, ನಾಯಕಿ, ಬಿಡುಗಡೆ ದಿನಾಂಕ ಬಹಿರಂಗ!


 • ಜೂನಿಯರ್ ಎನ್ ಟಿ ಆರ್ ಜೋಡಿ

  'ಆರ್ ಆರ್ ಆರ್' ಸಿನಿಮಾದಲ್ಲಿ ಇಬ್ಬರು ನಾಯಕರು. ರಾಮ್ ಚರಣ್ ಹಾಗೂ ಜೂನಿಯರ್ ಎನ್ ಟಿ ಆರ್ ಇಬ್ಬರೂ ನಟರು ಇಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಪೈಕಿ ರಾಮ್ ಜೋಡಿಯಾಗಿ ಅಲಿಯಾ ಭಟ್ ಕಾಣಿಸಿಕೊಳ್ಳುವುದು ಪಕ್ಕಾ ಆಗಿದೆ. ಜೂನಿಯರ್ ಎನ್ ಟಿ ಆರ್ ಗೆ ನಾಯಕಿಯಾಗಿ ಸಾಯಿ ಪಲ್ಲವಿ ಸೆಲೆಕ್ಟ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.


 • ಬದಲಾಗುತ್ತಲೇ ಇದ್ದಾರೆ ನಾಯಕಿಯರು

  ಮೊದಲು ಜೂನಿಯರ್ ಎನ್ ಟಿ ಆರ್ ಗೆ ನಾಯಕಿ ಆಗಿದ್ದು, ಹಾಲಿವುಡ್ ಸ್ಟಾರ್ ಡೈಸಿ ಎಡ್ಗರ್. ಆದರೆ, ಆ ನಟಿ ಕಾರಣಾಂತರಗಳಿಂದ ಚಿತ್ರದಿಂದ ಔಟ್ ಆದರು. ಬಳಿಕ ಪರಿಣಿತಿ ಚೋಪ್ರಾ ಆ ಜಾಗಕ್ಕೆ ಬರುತ್ತಾರೆ ಎನ್ನುವ ಸುದ್ದಿ ಹಬ್ಬಿತ್ತು. ಆದರೆ, ಇದೀಗ ಸೌತ್ ಸುಂದರಿ ಸಾಯಿ ಪಲ್ಲವಿ ಹೆಸರು ಕೇಳಿ ಬರುತ್ತಿದೆ.


 • ಚಾನ್ಸ್ ಸಿಕ್ಕರೆ ಸುಮ್ಮನೆ ಬಿಡುವುದುಂಟೆ

  ಸಾಯಿ ಪಲ್ಲವಿ 'ಆರ್ ಆರ್ ಆರ್' ಸಿನಿಮಾದಲ್ಲಿ ನಟಿಸುವುದು ಫೈನಲ್ ಆಗಿಲ್ಲ. ಆದರೆ, ಹಾಗೆನಾದರೂ ಚಿತ್ರದಲ್ಲಿ ನಟಿಸುವ ಅವಕಾಶ ಅವರದ್ದಾದರೆ, ಸಾಯಿ ಪಲ್ಲವಿ ಮತ್ತಷ್ಟು ಮಿಂಚುತ್ತಾರೆ. ತಮ್ಮ ಎಲ್ಲ ಸಿನಿಮಾದಲ್ಲಿಯೂ ತನ್ನ ಕ್ಯೂಟ್ ನಟನೆಯ ಮೂಲಕ ಮೆಚ್ಚುಗೆ ಪಡೆದಿರುವ ಅವರಿಗೆ ರಾಜಮೌಳಿ ಚಿತ್ರದಲ್ಲಿ ಚಾನ್ಸ್ ಸಿಕ್ಕರೆ ಸುಮ್ಮನೆ ಬಿಡುವುದುಂಟೆ.
ಚಂದದ ನಗು.. ಚಂದದ ನೋಟ.. ಅದಕ್ಕಿಂತ ಚಂದದ ನಟನೆ ಸಾಯಿ ಪಲ್ಲವಿಯ ಆಸ್ತಿ. 'ಪ್ರೇಮಂ' ಸಿನಿಮಾ ಮಾಡಿದಾಗಲೇ ಆಕೆಯ ಮೇಲೆ ಮಾಲಿವುಡ್ ಪ್ರೇಕ್ಷಕರಿಗೆ ಪ್ರೇಮವಾಯ್ತು. 'ಫಿದಾ' ಸಿನಿಮಾ ನೋಡಿದಾಗ ಟಾಲಿವುಡ್ ಮಂದಿ ಫಿದಾ ಆದರು.

'ಮಾರಿ 2' ಸಿನಿಮಾದ ನಂತರ ಸದ್ಯ, ಸೂರ್ಯ ನಟನೆಯ 'ಎನ್ ಜಿ ಕೆ' ಚಿತ್ರದಲ್ಲಿಯೂ ಸಾಯಿ ಪಲ್ಲವಿ ನಟಿಸಿದ್ದಾರೆ. ಈ ಸಿನಿಮಾ ನಿನ್ನೆ (ಶುಕ್ರವಾರ) ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಸೂರ್ಯ ಪತ್ನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಲುಕ್ ಗಮನ ಸೆಳೆದಿದೆ.

'ಆರ್ ಆರ್ ಆರ್' ಸಿನಿಮಾದ ಎರಡನೇ ನಾಯಕಿಗೆ ಪೈಪೋಟಿ: ಶ್ರದ್ಧಾ-ಪರಿಣೀತಿ ಯಾರಿಗೆ ಅವಕಾಶ?

ಪ್ರತಿ ಸಿನಿಮಾದಲ್ಲಿಯೂ ಬೇರೆ ಬೇರೆ ರೀತಿಯ ಪಾತ್ರ ಮಾಡುತ್ತಿರುವ ಸಾಯಿ ಪಲ್ಲವಿಗೆ ಈಗ ಮೆಗಾ ಆಫರ್ ಬಂದಿದೆ ಎನ್ನುವ ಸುದ್ದಿ ಇದೆ. ನಿರ್ದೇಶಕ ರಾಜಮೌಳಿ ಚಿತ್ರದಲ್ಲಿ ಸಾಯಿ ಪಲ್ಲವಿ ನಾಯಕಿ ಎನ್ನುವ ಗುಸು ಗುಸು ಟಾಲಿವುಡ್ ನಲ್ಲಿ ಶುರುವಾಗಿದೆ....

   
 
ಹೆಲ್ತ್