Back
Home » ಆರೋಗ್ಯ
ಆಕಸ್ಮಿಕವಾಗಿ ನಾಲಿಗೆ ಕಚ್ಚಿಕೊಂಡರೆ ತಕ್ಷಣ ಹೀಗೆ ಮಾಡಿ !!
Boldsky | 4th Jun, 2019 11:45 AM
 • ನಾಲಿಗೆ ಕಚ್ಚಿಕೊಂಡರೆ ತಕ್ಷಣ ನಿಮಗಿಷ್ಟವಾದ ಒಂದು ಐಸ್ ಕ್ರೀಮ್ ತಿನ್ನಿ ಅಥವಾ ಅದರ ಮೇಲೆ ಐಸ್ ಕ್ಯೂಬ್ ಇಡಿ

  ಇದೊಂದು ಬಹಳ ಬೇಗನೆ ಪರಿಣಾಮಕಾರಿ ಆಗುವಂತಹ ಉಪಾಯ . ನಮ್ಮ ದೇಹದ ಯಾವುದೇ ಭಾಗ ಉರಿಯುತ್ತಿದ್ದರೆ , ಅದು ತಣ್ಣಗಾಗಬೇಕಾದರೆ ನಾವು ಮೊರೆ ಹೋಗುವುದು ಐಸ್ ಕ್ಯೂಬ್ ಗೆ . ಅದರಂತೆಯೇ ನಾಲಿಗೆ ಕಚ್ಚಿಕೊಂಡು ಉರಿಯುತ್ತಿದ್ದರೆ ತಕ್ಷಣ ಒಂದು ಐಸ್ ಕ್ರೀಮ್ ತಿಂದರೆ ನಾಲಿಗೆ ತಂಪಾಗುತ್ತದೆ ಮತ್ತು ಉರಿ ಆಗಲೀ ಅಥವಾ ನಾಲಿಗೆ ಇನ್ನಷ್ಟು ಗಾಯ ಆಗುವುದಾಗಲೀ ಆಗುವುದಿಲ್ಲ . ಐಸ್ ಕ್ರೀಮ್ ನಿಂದ ಬಾಯಿಯಲ್ಲಿ ನೀರಿನಂಶ ಹೆಚ್ಚಾಗುತ್ತದೆ . ಒಂದು ವೇಳೆ ಐಸ್ ಕ್ರೀಮ್ ಸಿಗದೇ ಇದ್ದ ಪಕ್ಷದಲ್ಲಿ ನೀವು ಜ್ಯೂಸು ಅಥವಾ ತಣ್ಣನೆಯ ಮಿನರಲ್ ವಾಟರ್ ಅನ್ನೂ ಬೇಕಾದರೂ ಸೇವಿಸಬಹುದು.

  Most Read: ನಾಲಿಗೆಯ ಕ್ಯಾನ್ಸರ್-ನೀವು ತಿಳಿಯಲೇಬೇಕಾದ ಸಂಗತಿಗಳು


 • ಜೇನು ತುಪ್ಪದಲ್ಲಿದೆ ನಾಲಿಗೆ ಉರಿ ಶಮನ ಮಾಡುವ ಗುಣ

  ಜೇನು ತುಪ್ಪದಲ್ಲಿ ಆಂಟಿ ಬ್ಯಾಕ್ಟೇರಿಯಾಲ್ ಮತ್ತು ಆಂಟಿ ಇಂಪ್ಲಾ ಮ್ಯಾಟೋರಿ ಗುಣ ಲಕ್ಷಣ ಗಳಿದ್ದು , ಬಾಯಿಯೊಳಗಿನ ಸಣ್ಣ ಗುಳ್ಳೆಗಳಿದ್ದರೂ ಅಥವಾ ನಾಲಿಗೆ ಉಕ್ಕಿದ್ದರೂ ಇಲ್ಲವೆಂದರೆ ನಾಲಿಗೆ ಕಚ್ಚಿಕೊಂಡು ಗಾಯವಾಗಿದ್ದರೂ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ . ನಾಲಿಗೆ ಕಚ್ಚಿಕೊಂಡಿರುವ ಜಾಗಕ್ಕೆ ಸ್ವಲ್ಪ ಜೇನು ತುಪ್ಪ ಸವರಿ ಅಥವಾ ಒಂದು ಟೀ ಚಮಚ ಜೇನು ತುಪ್ಪ ಬಾಯಿಯಲ್ಲಿ ಹಾಕಿಕೊಂಡು ಗಾಯ ಆಗಿರುವ ಜಾಗದಲ್ಲಿ 10 ರಿಂದ 20 ಸೆಕೆಂಡ್ ಗಳಷ್ಟು ಕಾಲ ಇಟ್ಟುಕೊಳ್ಳಿ . ದಿನಕ್ಕೆ 2 ರಿಂದ 3 ಬಾರಿ ಈ ರೀತಿ ಮಾಡಿ ಕೇವಲ 2 ದಿನಗಳಲ್ಲಿ ಇದರ ಪ್ರಭಾವ ನಿಮಗೆ ತಿಳಿಯುತ್ತದೆ .ಆದರೆ ನೆನೆಪಿರಲಿ , ಯಾವುದೇ ಕಾರಣಕ್ಕೂ 12 ವರ್ಷದ ಒಳಗಿನ ಮಕ್ಕಳಿಗೆ ಅಪ್ಪಿ ತಪ್ಪಿಯೂ ನಾಲಿಗೆ ಕಚ್ಚಿಕೊಂಡರೆ ಇಲ್ಲವೇ ಯಾವುದೇ ಕಾರಣಕ್ಕೂ ಜೇನು ತುಪ್ಪ ವನ್ನು ತಿನ್ನಲು ಕೊಡಬೇಡಿ . ಅದು ಅವರ ಪ್ರಾಣಕ್ಕೆ ಅಪಾಯ .


 • ಗಟ್ಟಿ ಮೊಸರು

  ಈ ಹಾಲಿನ ಉತ್ಪನ್ನ ಕೇವಲ ತಿನ್ನಲು ರುಚಿ ಮತ್ತು ದೇಹಕ್ಕೆ ಶಕ್ತಿ ಕೊಡುವುದು ಮಾತ್ರವಲ್ಲದೆ , ಕೆಲವು ಔಷಧೀಯ ಗುಣಗಳನ್ನೂ ಹೊಂದಿದೆ ಜೊತೆಗೆ ದೇಹಕ್ಕೆ ತಂಪೂ ಕೂಡ . ನೀವು ನಾಲಿಗೆ ಕಚ್ಚಿಕೊಂಡ ತಕ್ಷಣ ಒಂದು ಚಮಚದಷ್ಟು ಗಟ್ಟಿ ಮೊಸರನ್ನು ನಿಮ್ಮ ನಾಲಿಗೆಯ ಮೇಲೆ ಇಟ್ಟುಕೊಳ್ಳಿ . ಸ್ವಲ್ಪ ಹೊತ್ತು ಬಿಟ್ಟು ಅದನ್ನು ತಿನ್ನಿ . ಈ ರೀತಿ ಮಾಡುವುದರಿಂದ ನಿಮ್ಮ ನಾಲಿಗೆಯಿಂದ ಉಂಟಾಗುವ ಬಾಧೆಯಿಂದ ತಪ್ಪಿಸಿಕೊಳ್ಳಬಹುದು .


 • ಸಕ್ಕರೆ

  ನೀವು ಕೇವಲ ಕಾಫಿ ಅಥವಾ ಟೀ ಮಾಡಲು ಉಪಯೋಗಿಸುವ ಸಕ್ಕರೆ ನಿಮ್ಮ ನಾಲಿಗೆಯ ಉರಿಗೂ ತಂಪೆರೆಯಬಲ್ಲುದು . ನಾಲಿಗೆ ಕಚ್ಚಿಕೊಂಡಿರುವ ಜಾಗಕ್ಕೆ ಒಂದು ಚಮಚದ ತುಂಬಾ ಸಕ್ಕರೆ ತೆಗೆದುಕೊಂಡು ಸುರಿದುಕೊಳ್ಳಿ . ಸಕ್ಕರೆ ಕರಗುತ್ತಾ ಹೋದಂತೆ ನಿಮ್ಮ ನಾಲಿಗೆಯ ಉರಿ ಅಥವಾ ನೋವು ಕೂಡ ಕಡಿಮೆ ಆಗುತ್ತಾ ಹೋಗುತ್ತದೆ . ಸಕ್ಕರೆಯ ಇನ್ನೊಂದು ಗುಣ ಅಂದರೆ ನಿಮ್ಮ ಬಾಯಿಯ ರುಚಿ ಒಮ್ಮೆ ಕೆಟ್ಟು ಹೋಗಿದ್ದರೆ, ಒಂದು ಚಮಚ ಸಕ್ಕರೆ ತಿಂದರೆ ಸಾಕು ಮತ್ತೆ ನಿಮ್ಮ ಬಾಯಿಯ ರುಚಿ ಮರುಕಳಿಸುತ್ತದೆ .


 • ಅಲೋವೆರಾ

  ಮನುಷ್ಯನ ದೇಹಕ್ಕೂ ಅಲೋವೆರಾ ಕ್ಕೂ ಒಂದು ರೀತಿಯ ಅವಿನಾಭಾವ ಸಂಬಂಧ . ಏಕೆಂದರೆ ಮನುಷ್ಯನ ತಲೆ ಕೂದಲಿನಿಂದ ಹಿಡಿದು ಕಾಲಿನ ಬೆರಳಿನವರೆಗೂ ಅಲೋವೆರಾ ಒಂದಲ್ಲಾ ಒಂದು ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ . ಅದರಲ್ಲೂ ದೇಹದ ಮೇಲಿನ ಸುಟ್ಟ ಗಾಯಗಳಿಗಂತೂ ಅಲೋವೆರಾ ಹೇಳಿ ಮಾಡಿಸಿದ ಔಷಧ . 2007 ನೇ ಇಸವಿಯಲ್ಲಿ ಬಿಡುಗಡೆಯಾದ ಒಂದು ವರದಿಯಲ್ಲಿ ಅಲೋವೆರಾ ಮೊದಲನೇ ದರ್ಜೆ ಮತ್ತು ಎರಡನೇ ದರ್ಜೆಯ ಸುಟ್ಟ ಗಾಯಗಳಿಗೂ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲುದು ಎಂದು ಉಲ್ಲೇಖಿಸಲಾಗಿದೆ . ನೀವು ನಾಲಿಗೆ ಕಚ್ಚಿಕೊಂಡ ತಕ್ಷಣ ಶುದ್ಧವಾದ ಅಲೋವೆರಾ ( ಅಲೋವೆರಾ ಗಿಡದ ಎಲೆಗಳಿಂದ ಆಗ ತಾನೆ ಸಂಗ್ರಹಿಸಿದ ) ವನ್ನು ನಿಮ್ಮ ನಾಲಿಗೆ ಗಾಯವಾಗಿರುವ ಜಾಗಕ್ಕೆ ಇಟ್ಟುಕೊಂಡರೆ ಸಾಕು , ಅದರಲ್ಲಿರುವ ಲೋಳೆ ರಸ ಗಾಯವನ್ನು ಬೇಗನೆ ಮಾಗುವಂತೆ ಮಾಡುತ್ತದೆ ನೋವನ್ನೂ ಕಡಿಮೆ ಮಾಡುತ್ತದೆ .

  Most Read: ಬಿಸಿ ಆಹಾರ ಸೇವಿಸಿ ನಾಲಗೆ ಸುಟ್ಟುಕೊಂಡ್ರಾ..? ಇಲ್ಲಿದೆ ಪರಿಹಾರ


 • ಪುದೀನಾ ಸೊಪ್ಪಿನ ಎಲೆಗಳು

  ಪುದೀನಾ ಸೊಪ್ಪಿನಲ್ಲಿ " ಮೆಂಥಾಲ್ " ಅಂಶವಿದೆ . ನಮಗೆ ನಿಮಗೆ ತಿಳಿದಿರುವ ಹಾಗೆ ಇದಕ್ಕೆ ಆಂಟಿ ಬ್ಯಾಕ್ಟೀರಿಯಲ್ ಗುಣವಿದ್ದು , ನಾಲಿಗೆಯ ಗಾಯ ಇನ್ನಷ್ಟು ಹರಡದಂತೆ ತಡೆಯುತ್ತದೆ . ನಾಲಿಗೆಯ ಉರಿ ಕಡಿಮೆ ಆಗಿ ಊತ ಬರುವುದನ್ನು ತಪ್ಪಿಸುತ್ತದೆ . ನಿಮ್ಮ ಬಳಿಯಲ್ಲಿ ಪುದೀನಾ ಟೂತ್ ಪೇಸ್ಟ್ ಅಥವಾ ಪುದೀನಾ ಟೀ ಅಥವಾ ಪುದೀನಾ ಚಾಕಲೇಟ್ ಲಭ್ಯವಿದ್ದರೆ ಯಾವುದೇ ಅನುಮಾನವಿಲ್ಲದೆ ನಾಲಿಗೆಯ ಉರಿ ಶಮನಕ್ಕೆ ಉಪಯೋಗಿಸಬಹುದು


 • ನಾಲಿಗೆ ಕಚ್ಚಿಕೊಂಡ ಸಮಯದಲ್ಲಿ ನಿಮಗೆ ಕೆಲವೊಂದು ಟಿಪ್ಸ್

  *ದಯಮಾಡಿ ಯಾವುದೇ ಬಿಸಿಯಾದ ಪಾನೀಯಗಳನ್ನು ಕುಡಿಯಬೇಡಿ .
  *ಆಮ್ಲದ ಅಂಶವಿರುವ ಮತ್ತು ಸಿಟ್ರಸ್ ಅಂಶವಿರುವ ಆಹಾರಗಳಿಂದ ಆದಷ್ಟು ದೂರವಿರಿ .
  *ಮಸಾಲೆಯುಕ್ತ ಆಹಾರಗಳನ್ನು ಸೇವಿಸಲೇಬೇಡಿ . ಇದು ಉರಿಯನ್ನು ಇನ್ನಷ್ಟು ಉಲ್ಬಣಗೊಳಿಸಬಹುದು .
  *ನಿಮ್ಮ ಬಾಯಿಯ ಸ್ವಸ್ತತೆಯನ್ನು ಮತ್ತು ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಿ .
  *ನಿಮಗೆ ಮೇಲಿನ ಯಾವುದೇ ಪದ್ಧತಿಗಳಿಂದ ಪರಿಹಾರ ಸಿಗದೇ ಇದ್ದ ಪಕ್ಷದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸುವುದನ್ನು ಮಾತ್ರ ಮರೆಯಬೇಡಿ
ಇಷ್ಟವಾದ ತಿಂಡಿ ಕಣ್ಣ ಮುಂದೆಯೇ ಇದೆ. ಹೊಟ್ಟೆ ಬೇರೆ ತುಂಬಾ ಹಸಿದಿದೆ . ಎಲ್ಲೋ ಹೋಗುವ ಆತುರ ಕೂಡ ಇದೆ . ಆದಷ್ಟು ಬೇಗನೆ ತಿಂಡಿ ತಿಂದು ಒಂದು ಕಪ್ ಕಾಫಿ ಕುಡಿದು ಹೊರಡೋಣ ಎಂದು ಮನಸ್ಸಿನಲ್ಲೇ ಲೆಕ್ಕಾ ಹಾಕುತ್ತ ಇರುವಾಗಲೇ ಯಾರ ಬಳಿಯೋ ಮಾತನಾಡಿಕೊಂಡು ಅಥವಾ ತುಂಬಾ ಬೇಗನೆ ಹೊರಡಬೇಕೆಂಬ ಆತುರದಿಂದ ತಿನ್ನುತ್ತಿರಬೇಕಾದರೆ ಹಠಾತ್ತನೆ ಬಾಯಿಯೊಳಗೆ ಸಿಡಿಲು ಬಡಿದಂತಹ ಅನುಭವ . ನೋಡಿದರೆ ತಿನ್ನುವ ಆತುರದಲ್ಲಿ ನಾಲಿಗೆ ಕಡಿದುಕೊಂಡಿರುತ್ತೀರಿ.

ಇಂತಹ ಸಂದರ್ಭ ಖಂಡಿತ ನಿಮಗೆ ಒಂದಲ್ಲ ಒಂದು ಕ್ಷಣ ಎದುರಾಗಿರುತ್ತದೆ ಅಲ್ಲವೇ ? ಹೊಟ್ಟೆಗೆ ಆಹಾರ ತನ್ನ ಪಾಡಿಗೆ ಹೋಗುತ್ತಿದ್ದರೆ , ಕಣ್ಣಂಚಿನಲ್ಲಿ ಸಣ್ಣ ಹನಿಗಳು ಅವುಗಳ ಪಾಡಿಗೆ ಅವು ಜಿನುಗುತ್ತಿರುತ್ತವೆ . ಏಕೆಂದರೆ ಅಷ್ಟು ನೋವು ಕೊಡುತ್ತದೆ ಈ ನಾಲಿಗೆ ಕಚ್ಚಿಕೊಂಡಿರುವುದು . ಹೇಳುವುದಕ್ಕೂ ಆಗುವುದಿಲ್ಲ , ಬಿಡುವುದಕ್ಕೂ ಆಗುವುದಿಲ್ಲ. ಇಂತಹ ಸಮಸ್ಯೆ ಎದುರಾದಾಗ ಏನು ಮಾಡಬೇಕು ಎಂಬುದನ್ನು ಇಲ್ಲಿ ನೀಡಿದ್ದೇವೆ, ಮುಂದೆ ಓದಿ

 
ಹೆಲ್ತ್