Back
Home » ಆರೋಗ್ಯ
ಈ ಬೇಸಿಗೆಯಲ್ಲಿ ನಿಮ್ಮ ದೇಹ ತಂಪಾಗಿಸಲು ಕೆಲವೊಂದು ಆಯುರ್ವೇದ ಟಿಪ್ಸ್
Boldsky | 4th Jun, 2019 03:41 PM
 • ದೇಹದ ಪಿತ್ತದ ಅಂಶವನ್ನು ನಿಯಂತ್ರಣದಲ್ಲಿ ಇಡುವಂತಹ ಆಹಾರಗಳನ್ನೇ ಸೇವಿಸಿ

  ಮನುಷ್ಯನಿಗೆ ಪಿತ್ತ ಹೆಚ್ಚಾದಂತೆ ಅತಿಸಾರ, ಆಯಾಸ, ತಲೆತಿರುಗುವಿಕೆ, ವಾಕರಿಕೆ, ವಾಂತಿ ಇತ್ಯಾದಿ ಖಾಯಿಲೆಗಳು ಶುರುವಾಗುತ್ತವೆ . ಇವುಗಳನ್ನು ಕಡೆಗಣಿಸಿದ್ದೇ ಆದರೆ , ಮುಂದೆ ಆಸ್ಪತ್ರೆಯ ಬಾಗಿಲು ತಟ್ಟಬೇಕಾಗುತ್ತದೆ . ಹಾಗಾಗಿ ಬೇಸಿಗೆಯಲ್ಲಿ ಮೊದಲು ಪಿತ್ತದ ಅಂಶವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಎಲ್ಲದಕ್ಕೂ ಕ್ಷೇಮ . ಕಲ್ಲಂಗಡಿ ಹಣ್ಣು , ಸೇಬು ಹಣ್ಣು , ಬೆರ್ರಿ ಹಣ್ಣುಗಳು , ಪಿಯರ್ ( ಪೇರಳೆ ) ಹಣ್ಣುಗಳು , ಒಣದ್ರಾಕ್ಷಿ ಮತ್ತು ಎಲ್ಲಾ ಬಗೆಯ ಹಸಿರು ತರಕಾರಿಗಳು ಬೇಸಿಗೆಗೆ ಅತ್ಯಂತ ಸೂಕ್ತ .


 • ಆದಷ್ಟು ದೇಹಕ್ಕೆ ತಂಪನ್ನು ಧಾರೆಯೆರೆಯುವ ಆಹಾರಗಳನ್ನೇ ಉಪಯೋಗಿಸಿ

  ಬೇಸಿಗೆಯಲ್ಲಿ ನಮ್ಮ ದೇಹ ಹೊರಗಿನ ವಾತಾವರಣಕ್ಕೆ ತಕ್ಕಂತೆ ಸಮತೋಲನವನ್ನು ಕಾಪಾಡಿಕೊಳ್ಳಬೇಕಾಗಿರುತ್ತದೆ . ಇಲ್ಲವೆಂದರೆ ಅದೇ ನಮ್ಮ ದೇಹದ ತಾಪಮಾನದ ವ್ಯತ್ಯಾಸವಾಗಿ ರೋಗ ರುಜಿನಗಳು ಮೈ ಗಂಟಿಕೊಳ್ಳುತ್ತವೆ . ಯಾವುದೇ ಕಾರಣಕ್ಕೂ ದೇಹದ ಬಿಸಿ ಹೆಚ್ಚು ಮಾಡುವಂತಹ ಆಹಾರ ಬೇಡವೇ ಬೇಡ . ಉದಾಹರಣೆಗೆ ಬೀಟ್ ರೂಟ್ , ಕ್ಯಾರಟ್ , ಬೆಳ್ಳುಳ್ಳಿ , ಮೆಣಸಿನಕಾಯಿ , ಟೊಮೇಟೊ , ಉಪ್ಪಿನ ಅಂಶವಿರುವ ಚೀಸ್ , ಹುಳಿ ಅಂಶವಿರುವ ಕ್ರೀಮ್ ಮತ್ತು ಮಾಂಸಾಹಾರಗಳನ್ನು ಆದಷ್ಟು ಬೇಸಿಗೆ ಮುಗಿಯುವವರೆಗೂ ದೂರವಿಡಿ . ಸಲಾಡ್ ಗಳನ್ನು ಹೆಚ್ಚು ಸೇವಿಸಿ ದ್ರವಾಹಾರಗಳನ್ನು ಯಾವುದೇ ಕಾರಣಕ್ಕೂ ಬಿಡಬೇಡಿ.

  Most Read: ಆಯುರ್ವೇದದ ಮೂಲಕ 'ಬಾಡಿ ಹೀಟ್' ಕಡಿಮೆ ಮಾಡಲು ಸರಳ ಟಿಪ್ಸ್


 • ಸಮಯಕ್ಕೆ ಸರಿಯಾಗಿ ತಿನ್ನುವುದನ್ನು ರೂಡಿಸಿಕೊಳ್ಳಿ

  ಮನುಷ್ಯ ಎಂದ ಮೇಲೆ ಇಂತಿಷ್ಟೇ ಆಹಾರ ಇಷ್ಟೇ ಗಂಟೆಗೆ ಪ್ರತಿದಿನ ಸೇವಿಸಬೇಕು . ಇಷ್ಟೇ ಗಂಟೆಗಳ ಕಾಲ ನಿದ್ದೆ ಮಾಡಬೇಕು . ಹೀಗೆ ವ್ಯಾಯಾಮ ಮಾಡಬೇಕು ಎಂಬೆಲ್ಲ ನಿಯಮಗಳಿವೆ . ಅದರಂತೆ ನಡೆದರೆ ಖಂಡಿತ ಮನುಷ್ಯ ದೀರ್ಘಾಯುಷಿಯಾಗಿ ಬಾಳುವುದರಲ್ಲಿ ಯಾವುದೇ ಅನುಮಾನವಿಲ್ಲ . ಹಾಗಾಗಿ ಮಿತಾಹಾರಿಯೇ ಆದರೂ ಸರಿ , ಸಮಯಕ್ಕೆ ಸರಿಯಾಗಿ ತಿನ್ನುವುದನ್ನು ರೂಢಿ ಮಾಡಿಕೊಂಡರೆ ಮನುಷ್ಯನ ಜೀರ್ಣಾಂಗವೂ ಚೆನ್ನಾಗಿ ಕೆಲಸ ಮಾಡುತ್ತದೆ . ದೇಹದ ಪಿತ್ತದ ಅಂಶವೂ ನಿಯಂತ್ರಿಸಲ್ಪಡುತ್ತದೆ . ಪಚನ ಶಕ್ತಿಯೂ ಚೆನ್ನಾಗಿರುತ್ತದೆ . ಮನುಷ್ಯನ ಬದುಕು ಆರೋಗ್ಯದಿಂದ ಕೂಡಿರುತ್ತದೆ .


 • ಸ್ನಾನ ಮಾಡುವ ಮೊದಲು ತೆಂಗಿನ ಎಣ್ಣೆ ಉಪಯೋಗಿಸಿ

  ಯುಗಾದಿ ಹಬ್ಬದ ದಿನ ಮಾತ್ರ ನಾವು ಎಣ್ಣೆ ಸ್ನಾನ ಮಾಡುತ್ತೇವೆ . ಬೇರೆ ಸಮಯದಲ್ಲಿ ಅದರ ಪರಿವೇ ಇರುವುದಿಲ್ಲ . ಆದರೆ ಸ್ನಾನ ಮಾಡುವಾಗ ಎಣ್ಣೆ ಹಚ್ಚಿ ನಂತರ ಸ್ನಾನ ಮಾಡಿದರೆ ದೇಹಕ್ಕೆ ತುಂಬಾ ಉಪಯೋಗ . ಅದರಲ್ಲೂ ಸ್ನಾನಕ್ಕೆ ಮುಂಚೆ ತೆಂಗಿನ ಎಣ್ಣೆಯನ್ನು ನಿಮ್ಮ ಮೈ ಕೈ ಗೆ ಉಜ್ಜಿಕೊಂಡು ನಂತರ ಸ್ವಲ್ಪ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿದ್ದೇ ಆದರೆ , ನಿಮ್ಮ ದೇಹಕ್ಕೆ ತಂಪು . ಮನಸ್ಸಿಗೆ ಹಿತ . ನೀವು ಬೇಕಾದರೆ ತೆಂಗಿನ ಎಣ್ಣೆ ಲಭ್ಯವಿಲ್ಲದ ಪಕ್ಷದಲ್ಲಿ ಸೂರ್ಯಕಾಂತಿ ಎಣ್ಣೆಯನ್ನು ಬೇಕಾದರೂ ಉಪಯೋಗಿಸಬಹುದು .


 • ಬಿಸಿ ಬಿಸಿ ನೀರು / ಬಿಸಿ ಬಿಸಿ ಕಾಫಿ ಅಥವಾ ಸುಡುವಂತಹ ಚಹಾದಿಂದ ದೂರ ಇರಿ

  ಈ ಬಿಸಿಯ ಪದಾರ್ಥಗಳೇ ಹೀಗೆ ದೇಹದ ಉಷ್ಣಾಂಶ ಹೆಚ್ಚಿಸುವುದರ ಜೊತೆಗೆ ಪಿತ್ತ ದೋಷವನ್ನೂ ಜಾಸ್ತಿ ಮಾಡುತ್ತವೆ . ಬಿಸಿ ಟೀ ಕುಡಿದು ಪಿತ್ತ ಜಾಸ್ತಿ ಆಗಿ ತಲೆ ಸುತ್ತು ಬಂದು ಬಿದ್ದರು ಎಂದು ಯಾರ ಬಾಯಲ್ಲಾದರೂ ಕೇಳಿರುತ್ತೇವೆ . ಆದ್ದರಿಂದ ರೂಮ್ ಟೆಂಪರೇಚರ್ ಗೆ ತಕ್ಕಂತೆ ಕಾಫಿ ಅಥವಾ ಚಹಾ ಕುಡಿಯುವುದು ಒಳ್ಳೆಯದು .


 • ಬೆಳಗ್ಗೆಯ ವ್ಯಾಯಾಮ ಮರೆಯಬೇಡಿ

  ಮನುಷ್ಯನ ದೇಹಕ್ಕೆ ಆಹಾರ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಅದನ್ನು ಕರಗಿಸುವಂತಹ ವ್ಯಾಯಾಮ . ಮಿತ ಆಹಾರ ನಿಯಮಿತ ವ್ಯಾಯಾಮ ಮನುಷ್ಯನ ದೇಹಕ್ಕೆ ಆರೋಗ್ಯ ಕಾಪಾಡಲು ಅತ್ಯಗತ್ಯ ಎಂದು ಅನೇಕ ದೈಹಿಕ ಆರೋಗ್ಯ ಸಂಬಂಧಿತ ವರದಿಗಳಲ್ಲಿ ಪ್ರಕಟಗೊಂಡಿದೆ . ಬೇಸಿಗೆ ಬಂತು ಎಂದು ವ್ಯಾಯಾಮ ಮಾಡುವುದನ್ನು ಬಿಡುವ ಹಾಗಿಲ್ಲ . ಆದಷ್ಟು ವ್ಯಾಯಾಮದ ಸಮಯವನ್ನು ಬೆಳಗ್ಗೆಗೆ ಬದಲಾಯಿಸಿಕೊಂಡರೆ ಒಳ್ಳೆಯದು . ಏಕೆಂದರೆ ಬೆಳಗಿನ ಸಮಯ ತಂಪಾಗಿರುತ್ತದೆ ಮತ್ತು ವ್ಯಾಯಾಮ ಮಾಡಲು ಯಾವುದೇ ಆಯಾಸ ಆಗುವುದಿಲ್ಲ.

  Most Read: ಬಾಡಿ ಹೀಟ್ ಕಮ್ಮಿ ಮಾಡುವ 9 ಪಾನೀಯಗಳು


 • ಬೇಸಿಗೆಯಲ್ಲಿ ದೇಹಕ್ಕೆ ತಂಪು ಕೊಡುವ ಎಣ್ಣೆಗಳು ನಿಮ್ಮ ಬಳಿಯಿದ್ದರೆ ಕ್ಷೇಮ

  ಇದಕ್ಕಾಗಿ ನೀವು ಶ್ರೀ ಗಂಧದ ಎಣ್ಣೆ ಅಥವಾ ಮಲ್ಲಿಗೆ ಎಣ್ಣೆ ಉಪಯೋಗಿಸಿದರೆ ಉತ್ತಮ . ಏಕೆಂದರೆ ಇವು ದೇಹಕ್ಕೆ ತಂಪು ಕೊಡುವುದು ಮಾತ್ರವಲ್ಲದೆ ಬೆವರಿನ ದುರ್ಗಂಧದ ವಾಸನೆಯನ್ನು ದೂರ ಇಡುತ್ತವೆ .


 • ಐಸ್ ನಂತೆ ಕುಳಗರಿಯುವ ತಂಪಾದ ಪಾನೀಯಗಳನ್ನು ಮುಟ್ಟಲೇಬೇಡಿ

  ಬೇಸಿಗೆಯಲ್ಲಿ ತಂಪಾದ ಪಾನೀಯಗಳಿಗೆ ಎಲ್ಲರೂ ಆಸೆ ಪಡುತ್ತಾರೆ ನಿಜ . ಐಸ್ ಕ್ರೀಮ್ , ಕೋಲ್ಡ್ ಡ್ರಿಂಕ್ಸ್ , ತಾಜಾ ಹಣ್ಣಿನ ರಸ , ಕಬ್ಬಿನ ಹಾಲು , ಕೋಲ್ಡ್ ಬಾದಾಮಿ ಹಾಲು ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ . ಇವುಗಳು ಮಾಮೂಲಿನಂತೆ ತಂಪಾಗಿದ್ದರೆ ದೇಹಕ್ಕೂ ಆರೋಗ್ಯಕ್ಕೂ ಬಹಳ ಒಳ್ಳೆಯದು . ಅದು ಬಿಟ್ಟು ತೀರಾ ಕೋಲ್ಡ್ ಇರುವ ಅಂದರೆ ರೆಫ್ರಿಜಿರೇಟರ್ ನಲ್ಲಿ ಇಟ್ಟಿರುವಂತಹ ಐಸ್ ಗಡ್ಡೆಯಂತೆ ತಣ್ಣಗಿರುವ ಪಾನೀಯಗಳನ್ನು ಕುಡಿದದ್ದೇ ಆದರೆ ಖಂಡಿತ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ . ಏಕೆಂದರೆ ಇಷ್ಟು ತಂಪಾದ ಆಹಾರಗಳು ಜೀರ್ಣ ಪ್ರಕ್ರಿಯೆಗಳನ್ನು ಮಂದಗತಿಯಲ್ಲಿ ಸಾಗುವಂತೆ ಮಾಡಿ ದೇಹಕ್ಕೆ ಶಕ್ತಿ ಪೂರೈಕೆ ಆಗುವುದನ್ನೇ ತಡೆಯುತ್ತವೆ . ಜೊತೆಗೆ ದೇಹದಲ್ಲಿ ಹಲವಾರು ಕೀಟಾಣುಗಳ ಉತ್ಪತ್ತಿಗೂ ಕಾರಣವಾಗುತ್ತವೆ .
ಬೇಸಿಗೆ ಬಂತೆಂದರೆ ಒಂದು ರೀತಿಯ ಭಯ ಶುರು . ಎಲ್ಲೆಲ್ಲಿಯೂ ನೀರಿಗೆ ಹಾಹಾಕಾರ . ತರಕಾರಿ ಹಣ್ಣುಗಳ ಬೆಲೆಗಳು ಗಗನಚುಂಬಿ ಕಟ್ಟಡಗಳಂತೆ ಮೇಲೇರುತ್ತಲೇ ಇರುತ್ತವೆ . ಸಾಲದ್ದಕ್ಕೆ ಸಾಂಕ್ರಾಮಿಕ ರೋಗಗಳ ಹಾವಳಿ ಬೇರೆ . ಒಂದು ತಿಂದರೆ ಹೆಚ್ಚು ಒಂದು ತಿಂದರೆ ಕಮ್ಮಿ ಎಂಬಂತಾಗುತ್ತದೆ ಆರೋಗ್ಯ . ವಿಪರೀತ ಔಷಧಿಗಳ ಸೇವನೆಯೂ ನಿಷಿದ್ಧ . ಏಕೆಂದರೆ ದೇಹದ ಉಷ್ಣಾಂಶ ಹೆಚ್ಚಾಗುತ್ತದೆ ಎಂಬ ಭಯ . ಆಯುರ್ವೇದ ಪಂಡಿತರ ಪ್ರಕಾರ ಬಿರು ಬೇಸಿಗೆಯ ಕಾಲ ದೇಹದ ಪಿತ್ತದ ಕಾಲವಂತೆ !!! ಆದ್ದರಿಂದ ಆದಷ್ಟು ನಮ್ಮ ದೇಹದ ಪಿತ್ತವನ್ನು ನಿಯಂತ್ರಿಸಿದರೆ ಯಾವ ಖಾಯಿಲೆಯೂ ಹತ್ತಿರ ಸುಳಿಯದೆ ಎಂದಿನಂತೆ ಆರಾಮವಾಗಿ ಜೀವನ ನಡೆಸಬಹುದು .

ಕೆಲವು ಆಯುರ್ವೇದ ತಜ್ಞರು ಹೇಳುವ ಪ್ರಕಾರ ಆದಷ್ಟು ನಮ್ಮ ದೇಹದ ಉಷ್ಣಾಂಶವನ್ನು ತಗ್ಗಿಸಲು ಬೇಸಿಗೆಯಲ್ಲಿ ಅಲ್ಕಲೈನ್ ಅಂಶ ಹೊಂದಿರುವ ಆಹಾರಗಳನ್ನೇ ಸೇವಿಸಬೇಕಂತೆ . ಹಸಿರು ಎಲೆ ತರಕಾರಿಗಳು , ನೀರಿನಂಶ ಹೆಚ್ಚಿರುವ ತರಕಾರಿ ಹಣ್ಣುಗಳು ಮತ್ತು ಹಣ್ಣಿನ ರಸ ಹೀಗೆ ಇತ್ಯಾದಿ ಆಹಾರಗಳು ಬೇಸಿಗೆಯಲ್ಲಿ ಬೆವರಿನ ರೂಪದಲ್ಲಿ ಹಾವಿಯಾಗುತ್ತಿರುವ ನಮ್ಮ ದೇಹದ ನೀರಿನ ಅಂಶವನ್ನು ಮತ್ತೆ ಸಮತೋಲನಕ್ಕೆ ತರುತ್ತವೆ . ಅವರ ಸಲಹೆಗಳಂತೆ ಬೇಸಿಗೆಗೆ ಕೆಲವೊಂದು ಆಯುರ್ವೇದಿಕ ಟಿಪ್ಸ್ ಗಳನ್ನು ಇಲ್ಲಿ ಕೊಟ್ಟಿರುತ್ತೇವೆ .

   
 
ಹೆಲ್ತ್