Back
Home » ಪ್ರವಾಸ
ಕಾಂಚನ ಜುಂಗಾ ರಾಷ್ಟ್ರೀಯ ಉದ್ಯಾನವನಕ್ಕೆ ಎಂಟ್ರಿ ಬೇಕಾದ್ರೆ ಪರವಾನಿಗೆ ಬೇಕು
Native Planet | 4th Jun, 2019 04:00 PM
 • ರಾಷ್ಟ್ರೀಯ ಉದ್ಯಾನವನ

  PC: Nadeemmushtaque
  ಕಾಂಚನ್ ಜುಂಗಾ ರಾಷ್ಟ್ರೀಯ ಉದ್ಯಾನವನವನ್ನು 1977ರಲ್ಲಿ ಸ್ಥಾಪನೆ ಮಾಡಲಾಯಿತು. ಇದು ಸಿಕ್ಕಿಂ ರಾಜ್ಯದಲ್ಲಿರುವ ಅತ್ಯಂತ ದೊಡ್ಡ ರಾಷ್ಟ್ರೀಯ ಉದ್ಯಾನವನವಾಗಿದೆ. 850 ಚ.ಕಿ.ಮೀ ನಷ್ಟು ವಿಸ್ತಾರವನ್ನು ಹೊಂದಿರುವ ಈ ಉದ್ಯಾನವನವು ಸಿಕ್ಕಿಂನ ಉತ್ತರ ಜಿಲ್ಲೆಯಲ್ಲಿ ನೆಲೆಗೊಂಡಿದೆ.


 • ಐದು ಎತ್ತರದ ಶಿಖರಗಳು

  PC:G Devadarshan Sharma
  ಕಾಂಚನ್ಜುಂಗಾ ಎಂಬ ಪದವು ಐದು ಖಜಾನೆ ಮನೆಗಳನ್ನು ಒಳಗೊಂಡಿರುವ ದೇವತೆಗಳ ವಾಸಸ್ಥಾನ ಎಂದರ್ಥ. ಮೌಂಟ್ ನರ್ಶಿಂಗ್, ಮೌಂಟ್ ಪಂಡಿಮ್, ಮೌಂಟ್ ಸಿನೊಲ್ಚು, ಮೌಂಟ್ ಸಿಮ್ವೊ ಮತ್ತು ಮೌಂಟ್ ಕಬ್ರೂ ಸೇರಿದಂತೆ ಮೌಂಟ್ ಕಾಂಚನ್ಜುಂಗಾದ ಐದು ಎತ್ತರದ ಶಿಖರಗಳು ಈ ಐದು ನಿಧಿಗಳ ಮನೆಗಳಾಗಿವೆ. ಮೊದಲ ಮೂರು ಶಿಖರಗಳು ಎಲ್ಲದಕ್ಕಿಂತಲೂ ಅತ್ಯಂತ ಸುಂದರವಾದವುಗಳಾಗಿವೆ.


 • ವಿವಿಧ ಪ್ರಭೇದದ ಪ್ರಾಣಿಗಳು

  PC:JHILIK
  ಈ ಉದ್ಯಾನವನವು ಜೈವಿಕವಾಗಿ ಪರಿಸರ ಮಾಲಿನ್ಯದಿಂದ ಮತ್ತು ಜನ ಸಂಪರ್ಕದಿಂದ ದೂರವಿರುವುದರಿಂದಾಗಿ ಇಲ್ಲಿನ ಪ್ರಾಣಿಗಳು ಅತ್ಯಂತ ಸುರಕ್ಷಿತವಾಗಿವೆ. ಇಲ್ಲಿ ಹಿಮ ಚಿರತೆ, ಹಿಮಾಲಯನ್ ಕಪ್ಪು ಕರಡಿ, ಕೆಂಪು ಪಾಂಡಾ ಮತ್ತು ಚುಕ್ಕೆ ಜಿಂಕೆಗಳಂತಹ ಪ್ರಾಣಿಗಳನ್ನು ನಾವು ನೋಡಬಹುದು. ಈ ಉದ್ಯಾನವನದ ಕೆಲವು ಭಾಗಗಳಿಗೆ ಪ್ರವಾಸಿಗರಿಗೆ ಪ್ರವೇಶಾವಕಾಶವಿರುವುದರಿಂದ ನೀವು ಇಲ್ಲಿ ಸುತ್ತಾಡಬಹುದು. ಆದರು ಈ ಉದ್ಯಾನವನದ ಕೆಲವು ಭಾಗಗಳಲ್ಲಿ ಹೊಸ ಪ್ರಭೇದಗಳು ಕಾಣ ಸಿಗುವ ಅವಕಾಶ ಈಗಲೂ ಇದೆ.


 • ಔಷಧೀಯ ಸಸ್ಯಗಳಿವೆ

  PC: Sherparinji

  ಈ ಉದ್ಯನವನದಲ್ಲಿ ಓಕ್, ದೇವದಾರು, ಬಿರ್ಚ್, ಮ್ಯಾಪಲ್ ಮತ್ತು ವಿಲ್ಲೋ ಮರಗಳನ್ನು ನಾವು ನೋಡಬಹುದು. ಇಲ್ಲಿನ ಎತ್ತರದ ಪ್ರದೇಶಗಳಲ್ಲಿ ಔಷಧೀಯ ಸಸ್ಯಗಳ ಜೊತೆಗೆ ಅಲ್ಪೈನ್ ಹುಲ್ಲುಗಳನ್ನು ಮತ್ತು ಪೊದೆಗಳನ್ನು ನಾವು ನೋಡಬಹುದು. ಇದರ ಜೊತೆಗೆ ಈ ಉದ್ಯಾನವನದಲ್ಲಿ ರಕ್ತ ವರ್ಣದ ಪೆಸಂಟ್ ( ನವಿಲು ಜಾತಿಯ ಹಕ್ಕಿ), ಸಟ್ಯೆ ಟ್ರಗೊಪನ್, ಒಸ್ಪ್ರೆ, ಹಿಮಾಲಯನ್ ಗ್ರಿಪ್ಫನ್, ಲಮ್ಮೆರ್ಜಿಯರ್ ಮತ್ತು ಟ್ರಗೊಪನ್ ಪೆಸೆಂಟ್‍ನಂತಹ ಹಕ್ಕಿಗಳನ್ನು ನಾವು ನೋಡಬಹುದು.


 • ಪರವಾನಗಿಯ ಅಗತ್ಯ

  PC:Indrajitdas
  ಉದ್ಯಾನವನದ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಪ್ರವಾಸಿಗರು ರಾಜ್ಯ ಗೃಹ ಇಲಾಖೆಯಿಂದ ಇನ್ನರ್-ಲೈನ್ ಪರವಾನಿಗೆ ಪಡೆಯ ಬೇಕು ಮತ್ತು ವಿದೇಶಿಯರು ಉದ್ಯಾನವನ ಮತ್ತು ಅದಕ್ಕೆ ಸಂಬಂಧಿಸಿದ ಪ್ರದೇಶವನ್ನು ಭೇಟಿ ಮಾಡಲು ಭಾರತ ಸರ್ಕಾರದ ಗೃಹ ಸಚಿವಾಲಯದ ಸೀಮಿತ ಪರವಾನಗಿಯ ಅಗತ್ಯವಿದೆ. ಉದ್ಯಾನವನಕ್ಕೆ ಭೇಟಿ ನೀಡುವ ಪ್ರತಿಯೊಬ್ಬರಿಗೂ ರಾಜ್ಯ ಮುಖ್ಯ ವನ್ಯಜೀವಿ ವಾರ್ಡನ್ ಅನುಮತಿ ಸಹ ಕಡ್ಡಾಯವಾಗಿದೆ.


 • ಸಮಯ ಹಾಗೂ ಪ್ರವೇಶ ಶುಲ್ಕ

  PC:Tomabarker

  ಕಾಂಚನಜುಂಗಾ ರಾಷ್ಟ್ರೀಯ ಉದ್ಯಾನವನವನ್ನು ಮಾರ್ಚ್ ನಿಂದ ಮೇ ಮತ್ತು ಸೆಪ್ಟಂಬರ್ ಮಧ್ಯದವರೆಗೆ ಡಿಸೆಂಬರ್ ತಿಂಗಳ ಮಧ್ಯಭಾಗದಲ್ಲಿ ಭೇಟಿ ಮಾಡಲು ಅತ್ಯುತ್ತಮ ಕಾಲವಾಗಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಪ್ರವೇಶಕ್ಕೆ ಅನುಮತಿ ಇದೆ.
  ಪ್ರವೇಶ ಶುಲ್ಕ: ಭಾರತೀಯರಿಗೆ 7 ದಿನಗಳಿಗೆ 200 ರೂ. ಪ್ರತಿ ಹೆಚ್ಚುವರಿ ದಿನಕ್ಕೆ 30 ರೂ. ಮತ್ತು ವಿದೇಶಿಯರಿಗೆ 7 ದಿನಗಳಿಗೆ 400 ರೂ. . ಪ್ರತಿ ಹೆಚ್ಚುವರಿ ದಿನಕ್ಕೆ 75 ರೂ.


 • ತಲುಪುವುದು ಹೇಗೆ?

  PC:Abhishek532
  ಹತ್ತಿರದ ವಿಮಾನ ನಿಲ್ದಾಣವೆಂದರೆ ಬಾಂಗ್ಡೋಗ್ರ ವಿಮಾನ ನಿಲ್ದಾಣ, ಇದು ಕಾಂಚನಜುಂಗಾ ರಾಷ್ಟ್ರೀಯ ಉದ್ಯಾನದಿಂದ ಸುಮಾರು 222 ಕಿ. ದೂರದಲ್ಲಿದೆ. ಬಾಗ್ಡೋಗ್ರ ವಿಮಾನ ನಿಲ್ದಾಣವು ರಸ್ತೆ ಜಾಲದಿಂದ ಕಾಂಚನಜುಂಗಾ ರಾಷ್ಟ್ರೀಯ ಉದ್ಯಾನವನಕ್ಕೆ ಉತ್ತಮ ಸಂಪರ್ಕವನ್ನು ಹೊಂದಿದೆ.
  ಹತ್ತಿರದ ರೈಲು ನಿಲ್ದಾಣ ಜಲ್ಪೈಗುರಿ ರೈಲು ನಿಲ್ದಾಣವಾಗಿದ್ದು, ಕಾಂಚನಜುಂಗಾ ರಾಷ್ಟ್ರೀಯ ಉದ್ಯಾನವನದಿಂದ ಸುಮಾರು 221 ಕಿ.ಮೀ ದೂರದಲ್ಲಿದೆ. ಕಾಂಚನಜುಂಗಾ ರಾಷ್ಟ್ರೀಯ ಉದ್ಯಾನವು ರಸ್ತೆ ಜಾಲದಿಂದ ಪ್ರಮುಖ ನಗರಗಳು ಮತ್ತು ಸ್ಥಳಗಳಿಗೆ ಸಂಪರ್ಕ ಹೊಂದಿದೆ. ಕಾಂಚನಜುಂಗಾ ರಾಷ್ಟ್ರೀಯ ಉದ್ಯಾನಕ್ಕೆ ಹೋಗುವ ಹಲವಾರು ಸರ್ಕಾರಿ ಮತ್ತು ಖಾಸಗಿ ವಾಹನಗಳಿವೆ.
ಗ್ಯಾಂಗ್ಟಾಕ್‌ನಿಂದ 122 ಕಿ.ಮೀ ದೂರದಲ್ಲಿ, ಕಾಂಗ್ಚೆಂಡ್ಜಾಂಗ್ ಅಥವಾ ಕಾಂಚನ ಜುಂಗಾ ರಾಷ್ಟ್ರೀಯ ಉದ್ಯಾನವನವು ಸಿಕ್ಕಿಂನಲ್ಲಿರುವ ರಾಷ್ಟ್ರೀಯ ಉದ್ಯಾನವನ ಮತ್ತು ಜೀವಗೋಳ ಮೀಸಲು ಪ್ರದೇಶವಾಗಿದೆ. ಕಾಂಗ್ಚೆಂಡ್ಜೋಂಗಾ ಜೀವಗೋಳ ಮೀಸಲು ಎಂದೂ ಕರೆಯಲ್ಪಡುವ ಇದು ಸಿಕ್ಕಿಂನ ಅತಿದೊಡ್ಡ ವನ್ಯಜೀವಿ ನಿಕ್ಷೇಪಗಳಲ್ಲಿ ಒಂದಾಗಿದೆ ಮತ್ತು ಭಾರತದ ಅತ್ಯುತ್ತಮ ರಾಷ್ಟ್ರೀಯ ಉದ್ಯಾನವನಗಳಲ್ಲಿ ಒಂದಾಗಿದೆ.

   
 
ಹೆಲ್ತ್