Back
Home » ಆರೋಗ್ಯ
ನಿಮ್ಮ ಆಯಸ್ಸಿನ ಗುಟ್ಟನ್ನು ರಟ್ಟು ಮಾಡುವ 4 ಪರೀಕ್ಷೆಗಳು
Boldsky | 7th Jun, 2019 12:07 PM

ಮನುಷ್ಯನಾಗಿ ಹುಟ್ಟಿದ ಮೇಲೆ ಎಲ್ಲರೂ ಒಂದಲ್ಲ ಒಂದು ದಿನ ಸಾಯಲೇಬೇಕು . ಅದರಲ್ಲೂ ಮನುಷ್ಯನ ಜೀವನ ಮುಳ್ಳಿನ ಹಾಸಿಗೆಯ ಮೇಲೆ ನಡೆದಂತೆ . ಅವನ ಪ್ರತಿದಿನವೂ ಒಂದು ಹೋರಾಟವೇ . ಪ್ರತಿದಿನದ ಸುತ್ತಮುತ್ತಲಿನ ಸಂಧರ್ಭಗಳ ತಲೆನೋವಿನ ಜೊತೆಗೆ ಅವನಿಗಾಗೇ ಕೆಲವೊಂದು ಖಾಯಿಲೆಗಳು ಅವನ ಆಯಸ್ಸನ್ನು ಕಡಿಮೆ ಮಾಡಲು ಹೊಂಚು ಹಾಕುತ್ತಾ ಕುಳಿತಿರುತ್ತವೆ . ಇವೆಲ್ಲವನ್ನೂ ಮೀರಿ ಗೆದ್ದು ಅವನು ತನ್ನ ದೇಹವನ್ನು ಮತ್ತು ಜೀವವನ್ನು ಉಳಿಸಿಕೊಳ್ಳಬೇಕು.

ವೈದ್ಯರು ಮಗು ಯಾವಾಗ ಜನನವಾಗುತ್ತದೆ ಎಂಬುದನ್ನು ಬೇಕಾದರೆ ಹೇಳಬಹುದು . ಆದರೆ ಜನನವಾದ ಮಗು ಎಷ್ಟು ವರ್ಷ ಬದುಕುತ್ತದೆ ಎಂಬುದನ್ನು ಮಾತ್ರ ಹೇಳಲು ಅಸಾಧ್ಯ . ಇದು ಸ್ವತಃ ನಮ್ಮ ದೇಹದ ಬಗ್ಗೆ ನಮಗೇ ಚೆನ್ನಾಗಿ ಅರಿವಿದ್ದರೂ ಸಹ ಅದರ ಆಯಸ್ಸು ಅಳೆಯುವುದು ಮಾತ್ರ ಕಷ್ಟದ ಕೆಲಸ .ಆದರೆ ವಿಜ್ಞಾನಿಗಳು ಹೇಳುವ ಪ್ರಕಾರ ನಮ್ಮ ಆಯಸ್ಸನ್ನು ತಿಳಿಯಲು ಕಷ್ಟವಾದರೂ ನಮ್ಮ ದೇಹದ ಈಗಿನ ಆರೋಗ್ಯದ ಪರಿಸ್ಥಿತಿಯ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಬಹುದು. ಹೇಗೆಂದರೆ ಈ ಕೆಳಗೆ ಹೇಳಲಾಗಿರುವ ಕೆಲವೊಂದು ಚಟುವಟಿಕೆಗಳನ್ನು ನೀವು ಸರಾಗವಾಗಿ ಯಾವುದೇ ತೊಂದರೆ ಇಲ್ಲದೆ ಪ್ರತಿದಿನ ಮಾಡಿದ್ದೆ ಆದರೆ ನಿಮ್ಮ ಆರೋಗ್ಯ ಸದ್ಯದ ಕ್ಷಣದಲ್ಲಿ ಯಾವ ಮಟ್ಟದಲ್ಲಿದೆ ಎಂಬುದನ್ನು ನೀವೇ ಕಂಡುಕೊಳ್ಳಬಹುದು. ಈಗ ಆವು ಯಾವುವು ಎಂದು ಒಂದೊಂದಾಗಿ ನೋಡೋಣ .

ಒಂಟಿ ಕಾಲಿನ ಮೇಲೆ ನಿಲ್ಲುವುದು

ಇದು ಕೇಳಲು ಒಂದು ರೀತಿಯಲ್ಲಿ ವಿಚಿತ್ರವೆನಿಸಬಹುದು . ಇದೇನಪ್ಪಾ ಈ ವಯಸ್ಸಿನಲ್ಲಿ ಒಂಟಿ ಕಾಲಲ್ಲಿ ನಿಲ್ಲಲು ಹೇಳುತ್ತಿದ್ದಾರೆ ಎಂದು . ಆದರೆ ಈ ಪ್ರಯೋಗ ನಿಮ್ಮ ಮೆದುಳಿನ ಆರೋಗ್ಯವನ್ನು ಹೇಳುತ್ತದೆ . ಇದನ್ನು ಮಾಡುವುದು ತುಂಬಾ ಸುಲಭ . ನೀವು ನಿಮ್ಮ ಮೊಬೈಲ್ ನಲ್ಲಿ ಅಥವಾ ವಾಚ್ ನಲ್ಲಿ 60 ಸೆಕೆಂಡ್ ಗೆ ಟೈಮರ್ ಸೆಟ್ ಮಾಡಿಕೊಳ್ಳಿ . ಆ ಅವಧಿಯಲ್ಲಿ ಒಂಟಿ ಕಾಲಲ್ಲಿ ನಿಂತುಕೊಳ್ಳುವುದನ್ನು ಪ್ರಯತ್ನ ಮಾಡಿ ನೋಡಿ . ನೀವು 60 ಸೆಕೆಂಡ್ ಅಂದರೆ 1 ನಿಮಿಷ ಪೂರ್ತಿ ಅಲುಗಾಡದೆ ಒಂಟಿ ಕಾಲಲ್ಲಿ ನಿಂತರೆ ನಿಮ್ಮ ಮೆದುಳು ಯಾವ ಸಮಸ್ಯೆಯೂ ಇಲ್ಲದೆ ಇಂದಿಗೂ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂದರ್ಥ . ಒಂದು ವೇಳೆ ಅದೇ ನೀವು ಕೇವಲ 20 - 30 ಸೆಕೆಂಡ್ ಗೆ ಒಂಟಿ ಕಾಲಲ್ಲಿ ನಿಲ್ಲಲಾರದೆ ಬಿದ್ದು ಬಿಟ್ಟರೆ , ನಿಮ್ಮ ಮೆದುಳಿನಲ್ಲಿ ಸಣ್ಣ ಪ್ರಮಾಣದ ರಕ್ತ ಸೋರಿಕೆಯಾಗುತ್ತಿದೆ ಎಂದರ್ಥ !!! ಇದು ಜಪಾನ ದೇಶದಲ್ಲಿ ಅತ್ಯಂತ ಪ್ರಯೋಗಿಕವಾಗಿ ಸಾಬೀತಾದ ಪರೀಕ್ಷೆ . ಶೇಖಡಾ 30 ರಷ್ಟು ಮಂದಿ ಯಾರು ಈ ಚಟುವಟಿಕೆಗೆ ಒಳಗಾಗಿದ್ದರೋ ಅವರನ್ನು ನಂತರದಲ್ಲಿ ಪರೀಕ್ಷೆ ಮಾಡಿದಾಗ ಅವರಲ್ಲಿ ಈ ಸಮಸ್ಯೆ ಬಯಲಾಗಿದೆ . ಇದು ಮುಂದೆ ಅವರಿಗೆ ಬಹಳ ದೊಡ್ಡದಾದ ಮೆದುಳಿನ ಖಾಯಿಲೆಯನ್ನು ತರುವ ಮುನ್ಸೂಚನೆ ಎಂದೇ ಭಾವಿಸಬಹುದು.

Most Read: ವಯಸ್ಸು 50 ಕಳೆದ ಬಳಿಕ, ಪುರುಷರನ್ನು ಕಾಡುವ ಕೆಲವು ಕಾಯಿಲೆಗಳು

ಸೋಲೋ ಮ್ಯೂಸಿಕಲ್ ಚೇರ್

ಮ್ಯೂಸಿಕಲ್ ಚೇರ್ ಎಂದಾಕ್ಷಣ ನಮ್ಮ ಶಾಲಾ ದಿನಗಳಲ್ಲಿ ನಮ್ಮ ಶಿಕ್ಷಕರು ನಮಗೆ ಆಡಿಸುತ್ತಿದ್ದ ಆಟ ನೆನೆಪಿಗೆ ಬರುತ್ತದೆ . ಆದರೆ ಅಲ್ಲಿ ನಮ್ಮ ಜೊತೆ ನಮ್ಮ ಗೆಳೆಯರೂ ಇರುತ್ತಿದ್ದರು . ಇಲ್ಲಿ ನಾವೊಬ್ಬರೆ ಈ ಆಟ ಆಡಬೇಕು . ಹೇಗೆಂದರೆ 10 ಬಾರಿ ಚೇರ್ ಮೇಲೆ ಕುಳಿತು ಮೇಲೇಳಬೇಕು ಅದೂ ಸ್ವಲ್ಪವೂ ಸಮಯ ಕೊಡದೆ . ಈ ರೀತಿ ಮಾಡಿದಾಗ ನೀವು ಎಷ್ಟು ಸಮಯ ತೆಗೆದುಕೊಂಡಿದ್ದೀರಿ ಎಂದು ಗಡಿಯಾರದಲ್ಲಿ ನೋಡಿ ಖಾತ್ರಿ ಪಡಿಸಿಕೊಳ್ಳಿ . ಯುನೈಟೆಡ್ ಕಿಂಗ್ಡಮ್ ನಲ್ಲಿ ಪರೀಕ್ಷಿಸಲಾದ ವರದಿಯ ಪ್ರಕಾರ ಯಾರು ಈ ಚಟುವಟಿಕೆಯನ್ನು 21 ಸೆಕೆಂಡ್ ಅಥವಾ ಅದಕ್ಕೂ ಮುನ್ನ ಯಶಸ್ವಿಯಾಗಿ ಮುಗಿಸಿರುತ್ತಾರೋ ಅವರು ಈ ಚಟುವಟಿಕೆಯನ್ನು ಪೂರ್ಣಗೊಳಿಸಲು ಯಾರೆಲ್ಲ ಹೆಚ್ಚು ಸಮಯ ತೆಗೆದುಕೊಂಡಿರುತ್ತಾರೋ ಅವರಿಗೆ ಹೋಲಿಸಿದರೆ ಧೀರ್ಘಾಯಸ್ಸಿನಿಂದ ಬದುಕುವ ಸಂಭವ ಹೆಚ್ಚಿರುತ್ತದೆ . ಏಕೆಂದರೆ ಈ ಪರೀಕ್ಷೆಯನ್ನು ಯಶಸ್ವಿಯಾಗಿ ಯಾವುದೇ ತೊಂದರೆ ಇಲ್ಲದೆ ಪೂರ್ಣಗೊಳಿಸಬೇಕೆಂದರೆ ನಿಮ್ಮ ದೇಹದ ಕೆಳಭಾಗದ ಮಾಂಸಖಂಡಗಳು ಶಕ್ತಿಯುತವಾಗಿರಬೇಕು , ನಿಮ್ಮ ಸಮತೋಲನ ಮತ್ತು ಸಮನ್ವಯ ಕೇಂದ್ರೀಕೃತವಾಗಿರಬೇಕು ಮತ್ತು ನಿಮ್ಮ ಹೃದಯ ಚೆನ್ನಾಗಿ ಕೆಲಸ ಮಾಡುತ್ತಿರಬೇಕು .

ನಿಮ್ಮ ಕಾಲಿನ ಮುಂಬೆರಳುಗಳನ್ನು ಮುಟ್ಟಲು ಪ್ರಯತ್ನಿಸಿ

ಮೊದಲು ಎರಡೂ ಕಾಲುಗಳನ್ನು ನೀಡಿಕೊಂಡು ನೆಲದ ಮೇಲೆ ಕುಳಿತುಕೊಳ್ಳಿ . ನಂತರ ನಿಮ್ಮ ಹೆಬ್ಬೆರಳು ಮತ್ತು ಇತರೆ ಬೆರಳುಗಳನ್ನು ನಿಮ್ಮ ಕೈಗಳ ಸಹಾಯದಿಂದ ಮುಟ್ಟಲು ಬಾಗಿ . ನೀವು ಯಶಸ್ವಿಯಾಗಿ ಯಾವುದೇ ಏದುಸಿರು ಬಿಡದಂತೆ ಸರಾಗವಾಗಿ ಮುಟ್ಟಿದರೆ ನಿಮಗೆ ಹೃದಯ ರಕ್ತನಾಳದ ಯಾವುದೇ ಸಮಸ್ಯೆ ಇಲ್ಲ ಎಂದರ್ಥ . " ಯೂನಿವರ್ಸಿಟಿ ಒಫ್ ನಾರ್ತ್ ಟೆಕ್ಸಾಸ್ " ನ ಸಂಶೋಧಕರು ನಡೆಸಿದ ಪರೀಕ್ಷೆಯಲ್ಲಿ ಯಾರಿಗೆ ಈ ಚಟುವಟಿಕೆಯನ್ನು ಸರಾಗವಾಗಿ ಮಾಡಲು ಸಾಧ್ಯವಾಗಲಿಲ್ಲವೋ ಅವರಿಗೆ ಅವರ ಜೀವನ ಕ್ರಮದ ಅನುಸಾರವಾಗಿ ಅವರ ಹೃದಯ ರಕ್ತ ನಾಳಗಳು ಬಾಗದೆ ಗಟ್ಟಿಯಾದ ರೂಪದಲ್ಲಿ ಕಂಡು ಬಂತು . ಇದರಿಂದ ಅವರಲ್ಲಿ ರಕ್ತ ಸಂಚಾರ ಸರಾಗವಾಗಿ ಆಗಲು ಹೃದಯದ ಮೇಲೆ ಬಹಳ ಒತ್ತಡ ಬೀಳುತ್ತಿತ್ತು ಮತ್ತು ಅವರಲ್ಲಿ ಹೃದಯ ಸಂಬಂಧಿ ಖಾಯಿಲೆಯ ಲಕ್ಷಣಗಳು ಕಂಡು ಬಂದವು.

Most Read:ಓವರ್ ಟೈಮ್ ಕೆಲಸ ಮಾಡಿದರೆ, ಆರೋಗ್ಯದ ಮೇಲೆ ಹೀಗೆಲ್ಲಾ ಸಮಸ್ಯೆ ಬರಬಹುದು!

ಮಹಡಿಯ ಮೆಟ್ಟಿಲು ಹತ್ತಿ ನೋಡಿ

ಗಾಲೀಸಿಯಾ ದ ಕೊರುನ ಯೂನಿವರ್ಸಿಟಿ ಹಾಸ್ಪಿಟಲ್ ನ ಸಂಶೋಧನೆಯ ಪ್ರಕಾರ ಯಾರು ತಮ್ಮ ಮನೆಯ ಮಹಡಿ ಮೆಟ್ಟಿಲನ್ನು 1 ನಿಮಿಷದಲ್ಲಿ ಸರಾಗವಾಗಿ 4 ಬಾರಿ ಹತ್ತಿ ಇಳಿಯುತ್ತಾರೋ ಅವರಿಗೆ ಆಯಸ್ಸು ಗಟ್ಟಿಯಾಗಿದೆಯಂತೆ !!! ಅಂದರೆ ಅವರು ಯಾವುದೇ ಆರೋಗ್ಯ ಸಮಸ್ಯೆಯಿಂದ ಬೇಗನೆ ಸಾಯುವುದಿಲ್ಲ . ಇದನ್ನು ಯಾರು ಪೂರ್ಣಗೊಳಿಸಲಾಗುವುದಿಲ್ಲವೋ ಅವರು ಹೃದಯ ಸಂಬಂಧಿ ಖಾಯಿಲೆಯಿಂದ ಎರಡು ಪಟ್ಟು ಮತ್ತು ಕ್ಯಾನ್ಸರ್ ನಿಂದ ಮೂರು ಪಟ್ಟು ಬೇಗನೆ ಸಾಯುತ್ತಾರೆ ಎಂಬುದು ವೈದ್ಯಕೀಯ ವಾದ .

 
ಹೆಲ್ತ್